Breaking News

ರಾಜ್ಯ

ಪಂಜಾಬ್ ಮಾದರಿಯಲ್ಲಿ ಕರ್ನಾಟಕದಲ್ಲೂ ಆಪ್ ಗೆ ಅಧಿಕಾರ: ಭಾಸ್ಕರ ರಾವ್

ಹುಬ್ಬಳ್ಳಿ: ಹೊಂದಾಣಿಕೆ ರಾಜಕೀಯಕ್ಕೆ ಅವಕಾಶ ನೀಡದೆ, ವಿಷಯಾಧಾರಿತ ಚುನಾವಣೆಗೆ ಹೋಗುತ್ತೇವೆ. ಪಂಜಾಬ್ ಮಾದರಿಯಲ್ಲಿ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಆಪ್ ರಾಜ್ಯ ಉಪಾಧ್ಯಕ್ಷ ಭಾಸ್ಕರ ರಾವ್ ತಿಳಿಸಿದರು. ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಧಿಕಾರಕ್ಕೆ ಕಿತ್ತಾಟ, ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ಇರುವ ಪ್ರಮುಖ ಮೂರು ಪಕ್ಷಗಳು ಪರಸ್ಪರ ಆರೋಪ, ಹಗರಣಗಳ ಪ್ರಸ್ತಾಪಗಳ ಮೂಲಕ ಜನರ ಸಮಸ್ಯೆ, ನೈಜ ವಿಷಯಗಳನ್ನು ಮರೆಮಾಚಿಸಲಾಗುತ್ತಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಈಗಲೇ ಕಿತ್ತಾಟ ಶುರುವಾಗಿದೆ. ಮತದಾರರ ತೀರ್ಪು …

Read More »

ಬರ್ಬರವಾಗಿ ಹತ್ಯೆಗೈದು ಯುವತಿಯ ರುಂಡದೊಂದಿಗೆ ಠಾಣೆಗೆ ಆಗಮಿಸಿದ ಪಾಗಲ್ ಪ್ರೇಮಿ

ವಿಜಯನಗರ (ಹೊಸಪೇಟೆ): ಪಾಗಲ್‌ ಪ್ರೇಮಿಯೋರ್ವ ಯುವತಿಯ ಬರ್ಬರವಾಗಿ ಹತ್ಯೆ ಮಾಡಿ ಬಳಿಕ ಯುವತಿಯ ತಲೆಯೊಂದಿಗೆ ಠಾಣೆಗೆ ಆಗಮಿಸಿ ಪೊಲೀಸರಿಗೆ ಶರಣಾದ ಘಟನೆ ಕಾನಾಹೊಸಹಳ್ಳಿ ಕನ್ನಬೋರಯ್ಯನಹಟ್ಟಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ ನಡೆದಿದೆ. ನಿರ್ಮಲಾ (23) ಕೊಲೆಯಾದ ಯುವತಿ, ಭೋಜರಾಜ ಎಂಬಾತ ಕೊಲೆ ಮಾಡಿದ ವ್ಯಕ್ತಿ. ನಿರ್ಮಲಾ ಹಾಗೂ ಭೋಜರಾಜ ಇಬ್ಬರು ಪರಸ್ಪರ ಪ್ರೀತಿ ಮಾಡುತ್ತಿದ್ದರು. ಕಳೆದ ಮೂರು ತಿಂಗಳ ಹಿಂದೆ ಬೇರೆ ಯುವತಿಯೊಂದಿಗೆ ಬೋಜರಾಜ ಮದುವೆಯಾಗಿದ್ದ ಎಂದು ತಿಳಿದುಬಂದಿದೆ. ಯುವತಿ ಬಿಎಸ್ಸಿ ನರ್ಸಿಂಗ್ …

Read More »

ಇಂದು ಡಾ| ಹೆಗ್ಗಡೆ ಪ್ರಮಾಣ ವಚನ:

ಬೆಳ್ತಂಗಡಿ: ನಾಡಿನ ಪುಣ್ಯದ ನೆಲೆವೀಡಾಗಿ ಚತುರ್ದಾನ ಪರಂಪರೆಯೊಂದಿಗೆ ಸಮಾಜಮುಖೀ ಯೋಜನೆಗಳಿಂದ ಐತಿಹಾಸಿಕ ಗೌರವ ಗಳಿಗೆ ಸಾಕ್ಷಿಯಾ ಗಿರುವ ಧರ್ಮಸ್ಥಳ ಕ್ಷೇತ್ರವಿಂದು ಮಗದೊಂದು ಇತಿಹಾಸ ಬರೆಯುತ್ತಿದೆ. ಕ್ಷೇತ್ರದ ಧರ್ಮಾಧಿ ಕಾರಿಯವರಾದ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ರಾಜ್ಯ ಸಭೆಗೆ ಪ್ರವೇಶಿಸುವ ಮೂಲಕ ರಾಜಧರ್ಮ ಪರಿಪಾಲನೆಯ ಮತ್ತೊಂದು ಅಧ್ಯಾಯ ಬರೆಯಲಿದ್ದಾರೆ. ಜನಸಾಮಾನ್ಯರ ಏಳಿಗೆಗಾಗಿ ಹಲವು ಸೇವೆಗಳನ್ನು ಸಲ್ಲಿಸಿರುವ ಧರ್ಮಾಧಿಕಾರಿಗಳ ಅಗ್ರಮಾನ್ಯ ಸೇವೆ ಯನ್ನು ಗುರುತಿಸಿ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಸಭೆಗೆ ನಾಮ ನಿರ್ದೇಶನಗೊಳಿಸಿದ ಕ್ಷಣದಿಂದ …

Read More »

SSLC’ ಪೂರಕ ಪರೀಕ್ಷೆ ಫಲಿತಾಂಶ ಪ್ರಕಟ : ಇಂದು ಮಧ್ಯಾಹ್ನ 12 ಗಂಟೆಗೆ ‘ವೆಬ್ ಸೈಟ್’ನಲ್ಲಿ ಲಭ್ಯ |

ಬೆಂಗಳೂರು: ಕಳೆದ ಜೂನ್ ನಲ್ಲಿ ನಡೆದಿದ್ದಂತ ಎಸ್‌ಎಸ್‌ಎಲ್‌ಸಿ ಪೂರಕ ಪರೀಕ್ಷೆ ಫಲಿತಾಂಶ ( SSLC Supplementary Exam Result 2022 ) ಇಂದು ಪ್ರಕಟಗೊಳ್ಳಲಿದೆ. ವಿದ್ಯಾರ್ಥಿಗಳಿಗೆ ಇಂದು ಮಧ್ಯಾಹ್ನ 12 ಗಂಟೆಗೆ ಅಧಿಕೃತ ವೆಬ್ ಸೈಟ್ https://karresults.nic.in/ ನಲ್ಲಿ ಫಲಿತಾಂಶ ಲಭ್ಯ ವೀಕ್ಷಿಸಬಹುದಾಗಿದೆ. ಈ ಬಗ್ಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ ನಾಗೇಶ್ ( Minister BC Nagesh ) ಮಾಹಿತಿ ಬಿಡುಗಡೆ ಮಾಡಿದ್ದು, 2022ರ ಜೂನ್ …

Read More »

B.S.F.ಯೋಧನ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ

ಚಿಕ್ಕೋಡಿ: ಕರ್ತವ್ಯಕ್ಕೆ ತೆರಳುವ ಸಂದರ್ಭದಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದ ಬಿಎಸ್‌ಎಫ್ ಯೋಧನ ಅಂತ್ಯಕ್ರಿಯೆ ಸರ್ಕಾರಿ ಗೌರವದೊಂದಿಗೆ ನಡೆಯಿತು. ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಯಡೂರವಾಡಿ ಗ್ರಾಮದ ಬಿಎಸ್‌ಎಫ್ ಯೋಧ ಸೂರಜ್ ಧೋಂಡಿರಾಮ ಸುತಾರ(30) ಆಟೋದಿಂದ ಕೆಳಗಿಳಿಯುತ್ತಿದ್ದಾಗ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮವಾಗಿ ಯೋಧ ಪಶ್ಚಿಮ ಬಂಗಾಳ ರಾಜ್ಯದ ಪಂಜಿ ಪಾಡಾ ಎಂಬಲ್ಲಿ ಸೋಮವಾರ ನಿಧನರಾಗಿದ್ದರು.   ಅವರ ಪಾರ್ಥಿವ ಶರೀರ ಬುಧವಾರ ಬೆಳಗ್ಗೆ ದೆಹಲಿಯ ಮೂಲಕ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದು …

Read More »

ಕಾಂಗ್ರೆಸ್‌ಗೆ ಇನ್ಮುಂದೆ ಎಂದಿಗೂ ಅಧಿಕಾರ ಸಿಗುವುದಿಲ್ಲ: ಹಾಲಪ್ಪ ಆಚಾರ್

ಕೊಪ್ಪಳ: ಕಾಂಗ್ರೆಸ್ ಈ ದೇಶದಲ್ಲಿ ಬಹು ವರ್ಷಗಳ ಕಾಲ ಅಧಿಕಾರ ಅನುಭವಿಸಿದ್ದಾರೆ. ಈಗ ಅಧಿಕಾರ ಕಳೆದುಕೊಂಡು ಸಿಎಂ ರೇಸ್ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಎಂದಿಗೂ ಅಧಿಕಾರ ಸಿಗುವುದಿಲ್ಲ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಹಾಲಪ್ಪ ಆಚಾರ್ ಅವರು ಹೇಳಿದರು.   ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಈಚೆಗಿನ ಸಮೀಕ್ಷೆಯಲ್ಲಿ ಬಿಜೆಪಿಗೆ ಹಿನ್ನೆಡೆ ಎಂದೆನ್ನುತ್ತಿದ್ದಾರೆ. ಈ ಹಿಂದೆಯೂ ಉತ್ತರ ಪ್ರದೇಶದಲ್ಲಿ ಹಿನ್ನಡೆಯಾಗಲಿದೆ ಎಂದು ಹೇಳಿದ್ದರು. ಆದರೆ ಫಲಿತಾಂಶ ಏನಾಯ್ತು …

Read More »

ಅಪ್ಪ ಹಣ ಕೊಟ್ಟಿಲ್ಲ ಎಂದು ಮಗನನ್ನೇ ಕಿಡ್ನಾಪ್

ಬೆಂಗಳೂರು (ಜು.20): ತಂದೆಯ (Father) ಜೊತೆಗಿನ ವ್ಯವಹಾರ ವೈಷಮ್ಯಕ್ಕೆ ಮಗನನ್ನು ಅಪಹರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ ನಾಲ್ವರು ಆರೋಪಿಗಳನ್ನು (Accused) ಯಲಹಂಕ ಪೊಲೀಸರು 4 ಗಂಟೆಯಲ್ಲಿ ಬಂಧಿಸಿದ್ದಾರೆ‌. ಚಿತ್ರದುರ್ಗದಲ್ಲಿ (Chitradurga) ಟ್ರ್ಯಾಕ್​ ಮಾಡಿ ಬಂಧಿಸಿ ಕರೆತಂದಿದ್ದಾರೆ. ಕಲಬುರಗಿ ಮೂಲದ ರಮೇಶ್ ರಾಥೋಡ್ (Ramesh Rathod) (43), ರಿಜ್ವಾನ್ ಪಟೇಲ್ (23), ಇಂದ್ರಜಿತ್ ಪವಾರ್ (23) ಹಾಗೂ ಹರೀಶ್ ಕುಮಾರ್ (24) ಬಂಧಿತ ಆರೋಪಿಗಳು. 4 ಗಂಟೆಯಲ್ಲಿ ಆರೋಪಿಗಳ ಬಂಧನ ಪ್ರಕರಣದ …

Read More »

ಹುಬ್ಬಳ್ಳಿ-ಧಾರವಾಡದಲ್ಲಿ ಹೆಚ್ಚಳ ಕ್ರೈಂ ರೇಟ್​: ಕೇವಲ ಎರಡೂವರೆ ವರ್ಷದಲ್ಲೇ 38 ಕೊಲೆಗಳು!

ಹುಬ್ಬಳ್ಳಿ: ರಾಜ್ಯದ ವಾಣಿಜ್ಯ ನಗರಿ ಖ್ಯಾತಿ ಗಳಿಸಿರುವ ಹುಬ್ಬಳ್ಳಿ ಮತ್ತು ಧಾರವಾಡದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವಳಿ ನಗರದಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆ, ಚಾಕು ಇರಿತ ಹಾಗೂ ಸಣ್ಣ-ಪುಟ್ಟ ವಿಷಯಕ್ಕೆ ಗಲಾಟೆ ಹೀಗೆ ಒಂದಿಲ್ಲೊಂದು ರೀತಿಯಲ್ಲಿ ಅಪರಾಧ ಪ್ರಕರಣಗಳು ದಿನದಿಂದ ಹೆಚ್ಚುತ್ತಲೇ ಇವೆ. ಇದು ಇಲ್ಲಿನ ಜನರ ನಿದ್ದೆಗೆಡಿಸಿದೆ. ಅಪರಾಧ ಪ್ರಕರಣಗಳ ಕಡಿವಾಣಕ್ಕೆ ಪೊಲೀಸರು ಎಷ್ಟೋ ನಿಯಮಗಳನ್ನು ಜಾರಿಗೊಳಿಸಿದರೂ, ನಿಯಂತ್ರಣ ಮಾತ್ರ ಸಾಧ್ಯವಾಗುತ್ತಿಲ್ಲ. ಕೊಲೆ, ದರೋಡೆ, …

Read More »

ದಿಗಳ ದಿನಗೂಲಿ ಹೆಚ್ಚಳ ಮಾಡಿಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ

ಬೆಂಗಳೂರು: ಜೈಲಿನಲ್ಲಿರುವ ಕೈದಿಗಳಿಗೆ ದಿನಗೂಲಿ ಏರಿಕೆ ಮಾಡಿದ್ದಾರೆ ಎಂಬ ವಿಷಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಮನಬಂದಂತೆ ವ್ಯಂಗ್ಯ ಚಿತ್ರಣ, ಮೀಮ್ ಮಾಡುವುದು, ಬರಹಗಳನ್ನು ಹಾಕಿದ್ದಾರೆ. ಕೈದಿಗಳ ದಿನಗೂಲಿಯನ್ನ 525 ರೂ.ಗಳಿಗೆ ಏರಿಸಿದ್ದು ಬೇರೆ ಉದ್ಯೋಗಗಳಿಗಿಂತ ಜೈಲುವಾಸವೇ ಲಾಭದಾಯಕ ಎಂಬಂತೆ ಹಲವರು ಗೇಲಿ ಮಾಡಿ ಹರಿಬಿಟ್ಟಿರುವುದು ಕಂಡುಬಂದಿದೆ. ಈ ವಿಷಯದ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಸ್ಪಷ್ಟೀಕರಣ ನೀಡಿದ್ದು, ರಾಜ್ಯದಲ್ಲಿ ಸುಮಾರು ಹದಿನೈದು ಸಾವಿರ ಕೈದಿಗಳು ಜೈಲುವಾಸ ಅನುಭವಿಸುತ್ತಿದ್ದಾರೆ. …

Read More »

ಜನರು ತುಂಬಿದ್ದ ನೀರಿನ ಬಿಲ್ ಗುಳುಂ ಮಾಡಿತಾ ದಂಡು ಮಂಡಳಿ..?

ನೀರಿನ ಬಿಲ್‍ನ್ನು ಇಲ್ಲಿನ ಜನರು ತುಂಬಿದರೂ ಕೂಡ ಅಧಿಕಾರಿಗಳು ಮಾಡಿದ ಯಡವಟ್ಟಿನಿಂದಾಗಿ ಇಲ್ಲಿನ ಮನೆಗಳಿಗೆ ಕಳೆದ 20 ದಿನಗಳಿಂದ ನೀರನ್ನು ಬಿಟ್ಟಿಲ್ಲ. ಇದರಿಂದ ರೋಸಿ ಹೋದ ಇಲ್ಲಿನ ಮಹಿಳೆಯರು ಸಂಬಂಧಿಸಿದ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಹೌದು ಹೀಗೆ ಚಿಕ್ಕ ಮಕ್ಕಳನ್ನು ಹಿಡಿದುಕೊಂಡು ನಿಂತಿರುವ ಈ ನೂರಾರು ಮಹಿಳೆಯರು ಬೆಳಗಾವಿಯ ಕ್ಯಾಂಪ್ ಪ್ರದೇಶದವರು. ಕಳೆದ 20 ದಿನಗಳಿಂದ ಇವರ ಮನೆಗಳಿಗೆ ನೀರನ್ನು ಬಿಟ್ಟಿಲ್ಲ. ಇದರಿಂದ ಆಕ್ರೋಶಗೊಂಡಿರುವ …

Read More »