Breaking News

ರಾಜ್ಯ

‘ಕೈ’ ಟಿಕೆಟ್‌: ಡಿಕೆಶಿ ಇಂದು ದೆಹಲಿಗೆ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸುಮಾರು 150 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಹೆಸರನ್ನು ಸಂಕ್ರಾಂತಿ (ಜ.14) ಕಳೆಯುತ್ತಿದ್ದಂತೆ ಘೋಷಿಸಲು ತಯಾರಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ರಾಹುಲ್‌ ಗಾಂಧಿ ಸೇರಿದಂತೆ ಪಕ್ಷದ ವರಿಷ್ಠರ ಜೊತೆ ಸಮಾಲೋಚಿಸಲು ಬುಧವಾರ ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.   ‘ಬುಧವಾರ ಬೆಳಿಗ್ಗೆ ತುರುವೇಕೆರೆಯಲ್ಲಿ ಪಕ್ಷದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಬಳಿಕ ದೆಹಲಿಗೆ ತೆರಳಲಿದ್ದಾರೆ. ರಾಹುಲ್‌ ಗಾಂಧಿ, ಕೆ.ಸಿ.ವೇಣುಗೋಪಾಲ್‌ ಮತ್ತು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್‌ ಸುರ್ಜೇವಾಲ ಅವರನ್ನು …

Read More »

ಶಾಲಾ ಪಠ್ಯದಲ್ಲಿ ಸಿದ್ಧೇಶ್ವರ ಸ್ವಾಮೀಜಿ ಜೀವನಗಾಥೆ: ಸಿ.ಎಂ ಬೊಮ್ಮಾಯಿ

ಬೆಂಗಳೂರು: ವಿಜಯಪುರದ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯವರ ಜೀವನಗಾಥೆಯನ್ನು ಶಾಲಾ ಪಠ್ಯದಲ್ಲಿ ಸೇರಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ‘ಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಜೀವನಗಾಥೆಯನ್ನು ಶಾಲಾ ಪಠ್ಯದಲ್ಲಿ ಸೇರಿಸುವ ಬಗ್ಗೆ ಅವರ ಉಯಿಲಿನಲ್ಲಿರುವ ಆಶಯದಂತೆ ಕ್ರಮ ಕೈಗೊಳ್ಳಲಾಗುವುದು’ ಎಂದು ಟ್ವೀಟ್ ಮಾಡಿದ್ದಾರೆ.

Read More »

ನನ್ನಂತೆ ರಾಜಕೀಯಕ್ಕೆ ಕುಟುಂಬದವರನ್ನು ಕರೆತರದಿರಲು ನಿಮ್ಮಿಂದ ಸಾಧ್ಯವೇ?: ಎಚ್​ಡಿಕೆಗೆ ಪ್ರಹ್ಲಾದ್​ ಜೋಶಿ ಸವಾಲು

ಗದಗ, ಜ.3: ‘ನಾನು ರಾಜಕೀಯಕ್ಕೆ ಬಂದು 25 ವರ್ಷವಾಯಿತು. ನಾನು ನನ್ನ ಕುಟುಂಬದಿಂದ ಯಾರನ್ನೂ ರಾಜಕೀಯಕ್ಕೆ ಕರೆ ತರುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತೇನೆ. ಅದರಂತೆಯೇ ಕುಮಾರಸ್ವಾಮಿ ಅವರು ಹೇಳಲಿ’ ಎಂದು ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ ಸವಾಲು ಹಾಕಿದ್ದಾರೆ.   ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲಿ ಯಾರ ಗುಂಡಿ ಯಾರು ತೋಡಿದ್ದಾರೆ ಎಂಬುವುದು ಎಲ್ಲರಿಗೂ ಗೊತ್ತಿದೆ. ಜೆಡಿಎಸ್ ಅಂತ ಬಂದಾಗ ಕುಮಾರಸ್ವಾಮಿ, ದೇವೇಗೌಡ್ರು, ರೇವಣ್ಣ, …

Read More »

ಬೆಳಗಾವಿ ಜಿಲ್ಲೆಯ ಭಕ್ತರೊಂದಿಗೆ ಸಿದ್ಧೇಶ್ವರ ಸ್ವಾಮೀಜಿ ದಶಕಗಳ ಆಪ್ತತೆ

ಬೆಳಗಾವಿ: ವಿಶ್ವಸಂತ, ನಡೆದಾಡುವ ದೇವರು ಎಂದೇ ಹೆಸರಾದ ವಿಜಯಪುರದ ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಅವರಿಗೂ ಬೆಳಗಾವಿ ಜಿಲ್ಲೆಗೂ ಎರಡು ದಶಕಗಳ ನಂಟಿದೆ. ಅವರ ಅತಿ ಹೆಚ್ಚು ಪ್ರವಚನಗಳು ಬೆಳಗಾವಿ ಜಿಲ್ಲೆಯಲ್ಲೇ ನಡೆದಿವೆ. ಇಂದೋ ನಿನ್ನೆಯೋ ಶ್ರೀಗಳು ಕಣ್ಣ ಮುಂದೆ ತಮ್ಮ ಜ್ಞಾನ ಬಿತ್ತಿದ್ದಾರೆ ಎನ್ನುವಷ್ಟು ಆಪ್ತತೆ ಜಿಲ್ಲೆಯ ಜನರಲ್ಲಿದೆ. ಶ್ರೀಗಳು ಇನ್ನಿಲ್ಲ ಎನ್ನುವ ಸುದ್ದಿ ತಿಳಿದು ಜಿಲ್ಲೆಯ ಭಕ್ತರೂ ದಿಗಿಲುಗೊಂಡಿದ್ದಾರೆ. ಕಳೆದೊಂದು ವಾರದಿಂದ ಅಪಾರ ಸಂಖ್ಯೆಯ ಜನ ಶ್ರೀಗಳನ್ನು ನೋಡಲು …

Read More »

ದಶಕ ಕಾದರೂ ಸಿಗದ ಸಮರ್ಪಕ ನೀರು

ನಾಗರಮುನ್ನೋಳಿ: ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆ ಸಲುವಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೂರ್ಣಗೊಂಡು ದಶಕ ಕಳೆದಿದೆ. ಆದರೆ, ಕಳೆದ ಏಳು ತಿಂಗಳಿಂದ ಸರಿಯಾಗಿ ನೀರು ಪೂರೈಕೆ ಮಾಡುತ್ತಿಲ್ಲ. ಇದರಿಂದ ಜನರ ಕೊಡ ನೀರಿಗೂ ಮೈಲುದ್ದ ಅಲೆಯಬೇಕಾದ ಸ್ಥಿತಿ ಬಂದಿದೆ.   ನಾಗರಮುನ್ನೋಳಿ ಹೋಬಳಿ ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಕೊಡಬೇಕು ಎಂಬ ಉದ್ದೇಶದಿಂದ ಘಟಪ್ರಭಾ ನದಿಯಿಂದ ಬಹುಗ್ರಾಮ ಯೋಜನೆ 2012-13ರಲ್ಲಿ ಮಂಜೂರಾಗಿತ್ತು. ₹15.88 ಕೋಟಿ ಅನುದಾನ ಬಳಕೆಯಾಗಿದೆ. …

Read More »

ಶ್ರದ್ಧೆ, ಭಕ್ತಿ ಇದ್ದಲ್ಲಿ ದೇವರಿದ್ದಾನೆ: ಮುರಘೇಂದ್ರ ಸ್ವಾಮೀಜಿ

ತಲ್ಲೂರ: ಎಲ್ಲಿ ಭಕ್ತಿ, ಶ್ರದ್ಧೆ ಇರುತ್ತದೆಯೋ ಅಲ್ಲಿ ಭಗವಂತ ನೆಲೆಸುತ್ತಾನೆ ಎಂದು ಮುನವಳ್ಳಿ ಸೋಮಶೇಖರ ಮಠದ ಮುರಘೇಂದ್ರ ಸ್ವಾಮೀಜಿ ಹೇಳಿದರು. ಗ್ರಾಮದ ಲಕ್ಷ್ಮೀದೇವಿ ದೇವಸ್ಥಾನದ ಆವರಣದಲ್ಲಿ ಭಾನುವಾರ ನಡೆದ 16ನೇ ಅಯ್ಯಪ್ಪ ಸ್ವಾಮಿ ಮಹಾಪೂಜೆ, ಜ್ಯೋತಿ ಮೆರವಣಿಗೆ ಹಾಗೂ ಪಲ್ಲಕ್ಕಿ ಉತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ‘ಭಗವಂತನ ಒಲುಮೆ ಆಗಬೇಕಾದರೆ ನಿರ್ಮಲವಾದ ಭಕ್ತಿ ಬೇಕು. ಅಂತಹ ಶ್ರದ್ಧಾಭಕ್ತಿ ಹಾಗೂ ಪರಿಶ್ರಮವನ್ನು ನಾನು ತಲ್ಲೂರಿನ ಅಯ್ಯಪ್ಪ ಭಕ್ತರಲ್ಲಿ ಕಂಡಿದ್ದೇನೆ. …

Read More »

ಕುಡಿದ ಅಮಲಿನಲ್ಲಿ ಜಗಳ: ವ್ಯಕ್ತಿ ಕೊಲೆ

ಬೈಲಹೊಂಗಲ: ತಾಲ್ಲೂಕಿನ ಆನಿಗೋಳ ಗ್ರಾಮದಲ್ಲಿ ಭಾನುವಾರ ರಾತ್ರಿ ಮದ್ಯ ಕುಡಿದ ಮತ್ತಿನಲ್ಲಿ ಯುವಕನೊಬ್ಬ ವ್ಯಕ್ತಿಯನ್ನು ಕಲ್ಲು ಎತ್ತಿಹಾಕಿ ಕೊಲೆ ಮಾಡಿದ್ದಾನೆ. ಮಂಜುನಾಥ ರುದ್ರಪ್ಪ ಸುಣಗಾರ (45) ಕೊಲೆಯಾದವರು. ಅಜಯ ಗುರುಸಯ್ಯ ಹಿರೇಮಠ (26) ಆರೋಪಿ.   ಇಬ್ಬರೂ ಮದ್ಯ ಕುಡಿಯಲು ಕುಳಿತಿದ್ದರು. ಅಮಲಿನಲ್ಲಿ ಮಾತಿಗೆ ಮಾತು ಬೆಳೆದು ಜಗಳವಾಡಿದರು. ಈ ವೇಳೆ ಹತ್ತಿರದಲ್ಲಿದ್ದ ದೊಡ್ಡ ಕಲ್ಲು ಎತ್ತಿಕೊಂಡ ಅಜಯ ಮಂಜುನಾಥ ಅವರ ತಲೆ ಮೇಲೆ ಎಸೆದು, ಅಲ್ಲಿಂದ ತಲೆಮರೆಸಿಕೊಂಡಿದ್ದಾನೆ. ತೀವ್ರ …

Read More »

ಕಳಸಾ-ಭಂಡೂರಿ ಯೋಜನೆಯಿಂದ ಖಾನಾಪುರ, ಮಲಪ್ರಭಾ ದಡದ ಗ್ರಾಮಗಳಿಗೆ ಪ್ರವಾಹದ ಭೀತಿ

ಪಣಜಿ: ಕಳಸಾ-ಭಂಡೂರಿ ನಾಲೆಯಿಂದ ನೀರು ಹರಿಸುವ ಕರ್ನಾಟಕದ ಪರಿಷ್ಕೃತ ಯೋಜನೆಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದೆ. ಇದಕ್ಕೆ ಅಡ್ಡಿತರುವ ನಿಟ್ಟಿನಲ್ಲಿ ಗೋವಾ ಸರ್ಕಾರ ಮತ್ತೆ ತನ್ನ ಪ್ರಯತ್ನ ಆರಂಭಿಸಲು ಮುಂದಾಗಿದೆ. ಇಷ್ಟೇ ಅಲ್ಲದೆಯೇ ಗೋವಾದಲ್ಲಿ ಪರಿಸರ ಹೋರಾಟಗಾರರೂ ಕೂಡ ತಮ್ಮ ಹೋರಾಟ ಆರಂಭಿಸುವ ಮೂಲಕ ಕರ್ನಾಟಕದ ಈ ಜನ ಯೋಜನೆಗೆ ಅಡ್ಡಗಾಲು ಹಾಕಲು ಪ್ರಯತ್ನಿಸುತ್ತಿರುವುದು ಕಂಡುಬರುತ್ತಿದೆ.   ಪರಿಸರ ಹೋರಾಟಗಾರ ರಾಜೇಂದ್ರ ಕೇರಕರ್ ಆಕ್ರೋಶ: ನೈಸರ್ಗಿಕ ಸಂಪತ್ತನ್ನು ಒತ್ತುವರಿ ಮಾಡಿಕೊಂಡು …

Read More »

ಮಹದಾಯಿ ನೀರನ್ನು ತಿರುಗಿಸಲು ಯಾರಿಂದಲೂ ಸಾಧ್ಯವಿಲ್ಲ: ಅಡ್ವೊಕೇಟ್ ಜನರಲ್ ದೇವಿದಾಸ್ ಪಾಂಗಮ್ ಅಭಿಪ್ರಾಯ

ಪಣಜಿ: ಕೇಂದ್ರ ಸರ್ಕಾರವೇ ಏನು… ಮಹದಾಯಿ ನೀರನ್ನು ತಿರುಗಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಗೋವಾ ರಾಜ್ಯದ ಅಡ್ವೊಕೇಟ್ ಜನರಲ್ ದೇವಿದಾಸ್ ಪಾಂಗಮ್ ಬಲವಾಗಿ ಅಭಿಪ್ರಾಯಪಟ್ಟಿದ್ದಾರೆ. ಕಳಸಾ-ಭಂಡೂರ ನೀರಿನ ಯೋಜನೆಗೆ ಕರ್ನಾಟಕ ಸರ್ಕಾರದ ಪರಿಷ್ಕೃತ ವಿಸ್ತೃತ ಯೋಜನಾ ಯೋಜನೆಗೆ ಕೇಂದ್ರ ಜಲ ಆಯೋಗ ಅನುಮೋದನೆ ನೀಡಿದ ನಂತರ ರಾಜ್ಯದಲ್ಲಿ ಅಸಮಾಧಾನ ಹರಡಿದೆ. ಈ ಹಿನ್ನೆಲೆಯಲ್ಲಿ ಅಡ್ವಕೇಟ್ ಜನರಲ್ ಪಾಂಗಮ ಅವರ ಹೇಳಿಕೆಗೆ ಹೆಚ್ಚಿನ ಮಹತ್ವ ಬಂದಿದೆ. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರವು …

Read More »

ಪ್ರೇಕ್ಷಕರು ತರುವ ಹೊರಗಿನ ಆಹಾರಕ್ಕೆ ಕಡಿವಾಣ ಹಾಕುವ ಹಕ್ಕು ಥಿಯೇಟರ್ ಮಾಲೀಕರಿಗಿದೆ: ಸುಪ್ರೀಂ

ನವದೆಹಲಿ: ಸಿನಿಮಾ ಹಾಲ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳಿಗೆ ಸಿನಿಮಾ ಪ್ರೇಕ್ಷಕರು ಆಹಾರ ಮತ್ತು ಪಾನೀಯವನ್ನು ಹೊರಗಿನಿಂದ ಕೊಂಡೊಯ್ಯುವುದನ್ನು ನಿಯಂತ್ರಿಸುವ ಹಕ್ಕನ್ನು ಥಿಯೇಟರ್ ಮಾಲೀಕರು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.   ಪ್ರೇಕ್ಷಕರು ಸಿನಿಮಾ ಹಾಲ್‌ಗಳಿಗೆ ಆಹಾರವನ್ನು ತೆಗೆದುಕೊಂಡು ಹೋಗಬಹುದೇ ಎಂಬ ಕುರಿತು ಇಂದು ಸುಪ್ರೀಂ ಕೋರ್ಟ್‌ನಲ್ಲಿ ವಾದ ವಿವಾದಗಳು ನಡೆದ ಬಳಿಕ ಕೋರ್ಟ್ ತನ್ನ ವರದಿಯನ್ನು ನೀಡಿದ್ದು ನೀವು ಹೊರಗಿನಿಂದ ಆಹಾರ, ಪಾನೀಯಗಳನ್ನು ಥಿಯೇಟರ್ ಒಳಗೆ ನಿಮ್ಮಿಚ್ಛೆಯಂತೆ ತರಲು ಸಿನಿಮಾ …

Read More »