Breaking News

ರಾಜ್ಯ

 ಜಾತ್ರೆ ಸಂದರ್ಭದಲ್ಲಿ ಅಕ್ರಮ ಸರಾಯಿ ಮಾರಾಟ 3 ಜನರ ಬಂಧನ

ಸವದತ್ತಿ: ಜಾತ್ರೆ ಸಂದರ್ಭದಲ್ಲಿ ಅಕ್ರಮ ಸರಾಯಿ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ ಎನ್ನುವ ದೂರಿನ ಹಿನ್ನೆಲೆಯಲ್ಲಿ ಸವದತ್ತಿ ಪೊಲೀಸರು ಸರಣಿ ದಾಳಿ ಮುಂದುವರಿಸಿದ್ದಾರೆ. ವಿವಿಧೆಡೆ ದಾಳಿ ನಡೆಸಿ ಈವರೆಗೆ 5 ಪ್ರಕರಣ ದಾಖಲಿಸಿರುವ ಪೊಲೀಸರು, ಮೂವರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ದಾಳಿ ಮುಂದುವರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದು, ಇನ್ನಷ್ಟು ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ. ಸವದತ್ತಿ ಯಲ್ಲಮ್ಮ ದೇವಸ್ಥಾನ ಸುತ್ತಮುತ್ತ ಮತ್ತು ತಾಲೂಕಿನ ಹಳ್ಳಿ ಹಳ್ಳಿಗಳಲ್ಲಿ ಅಕ್ರಮ ಸರಾಯಿ ಮಾರಾಟ …

Read More »

ಒಂದೂವರೆ ವರ್ಷದ ನಂತರ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರಿಗೆ ಅಧಿಕಾರಿ ಸಿಗುವ ಯೋಗ

ಬೆಳಗಾವಿ: ಒಂದೂವರೆ ವರ್ಷದ ನಂತರ ಬೆಳಗಾವಿ ಮಹಾನಗರ ಪಾಲಿಕೆ ಸದಸ್ಯರಿಗೆ ಅಧಿಕಾರಿ ಸಿಗುವ ಯೋಗ ಕೂಡಿ ಬಂದಿದೆ. ಫೆ. 6ರಂದು ಮೇಯರ್‌- ಉಪ ಮೇಯರ್‌ ಚುನಾವಣೆ ನಡೆಯಲಿದ್ದು, ಆಕಾಂಕ್ಷಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಆದರೆ ಸ್ಮಾರ್ಟ್‌ಟಿಸಿಯ ಪ್ರಥಮ ಪ್ರಜೆ ಯಾರಾಗಲಿದ್ದಾರೆ ಎಂಬುದು ಮಾತ್ರ ಇನ್ನೂ ನಿಗೂಢವಾಗಿದೆ.   ಚುನಾವಣಾ ಪ್ರಕ್ರಿಯೆಗೆ ಕೋರ್ಟ್‌ ಅನುಮತಿ ನೀಡಿ ಎರಡು ವಾರಗಳಾಗಿದ್ದು, ಅಂದಿನಿಂದಲೂ ತೆರೆಮರೆಯಲ್ಲಿ ಇನ್ನಿಲ್ಲದ ಕಸರತ್ತುಗಳು ನಡೆದಿವೆ. ಯಾರಿಗೆ ಕುರ್ಚಿ ಎಂಬುದನ್ನು ಈಗಲೇ ಘೋಷಣೆ …

Read More »

ಕರ್ತವ್ಯದಲ್ಲಿರುವಾಗಲೇ ಪೊಲೀಸ್ ಸಿಬ್ಬಂದಿಯಿಂದ ಭರ್ಜರಿ ಎಣ್ಣೆ ಪಾರ್ಟಿ!

ಹೈದರಬಾದ್​: ಕರ್ತವ್ಯನಿರತ ಇಬ್ಬರು ಪೊಲೀಸ್​ ಸಿಬ್ಬಂದಿ ಎಣ್ಣೆ ಪಾರ್ಟಿ ಮಾಡಿರುವ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.   ಇಬ್ಬರು ಸಹ ಗಸ್ತು ವಾಹನದ ಸಿಬ್ಬಂದಿ ಎಂದು ತಿಳಿದುಬಂದಿದೆ. ವಾಹನವನ್ನು ಪಕ್ಕದಲ್ಲಿ ಪಾರ್ಕ್​ ಮಾಡಿ ಮನೆಯ ಮುಂದಿನ ಸಣ್ಣದಾಗ ಗೋಡೆಯ ಮೇಲೆ ಕುಳಿತು ಇಬ್ಬರು ಮದ್ಯ ಸೇವನೆ ಮಾಡಿದ್ದಾರೆ. ಇಬ್ಬರು ಕೂಡ ಹೈದರಾಬಾದ್​ನ ಪಂಜಗುಟ್ಟ ಠಾಣಾ ಪೊಲೀಸರು ಎಂದು …

Read More »

ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ: ಕೋಡಿಮಠದ ಶ್ರೀ

ಜಮಖಂಡಿ ಫೆಬ್ರವರಿ 4: ಈ ಬಾರಿಯ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಒಂದೇ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೋಡಿಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ. ರಾಜ್ಯದಲ್ಲಿ ವಿಧಾನಸಭೆ ಚುನಾವಣೆಯ ತಯಾರಿ ಭರದಿಂದ ಸಾಗುತ್ತಿದೆ. ಇನ್ನೇನು ಚುನಾವಣಾ ಆಯೋಗದಿಂದ ದಿನಾಂಕ ಘೋಷಣೆಯಾಗುತ್ತಿದ್ದಂತೆ ಪ್ರಬಲ ಪಕ್ಷಗಳು ಪ್ರಚಾರ ಕಾರ್ಯಯವನ್ನು ಚುರುಕುಗೊಳಿಸಲಿವೆ. ಈ ನಡುವೆ ರಾಜಕೀಯ ಭವಿಷ್ಯ ನುಡಿಯುವುದರಲ್ಲಿ ಮುಂಚುಣಿಯಲ್ಲಿರುವ ಕೋಡಿಮಠದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಜಿಗಳು ಮತ್ತೊಂದು ರಾಜಕೀಯ ಭವಿಷ್ಯ …

Read More »

ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ವಾರಕ್ಕೆ 5 ದಿನ ಮೊಟ್ಟೆ..!

ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆಯ ತಂದಿರುವ ರಾಜ್ಯ ಸರ್ಕಾರ ವಾರಕ್ಕೆ ಒಂದು ದಿನ ಮೊಟ್ಟೆ, ಚಿಕ್ಕಿ, ಬಾಳೆಹಣ್ಣು ನೀಡಲು ಆದೇಶಿಸಿತ್ತು. ಮಕ್ಕಳು ಏನನ್ನು ಬಯಸುತ್ತಾರೋ ಅದನ್ನೇ ನೀಡಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿತ್ತು. ಅಲ್ಲದೆ ಸಮೀಕ್ಷೆ ಒಂದರಲ್ಲಿ ಶೇಕಡ 70ಕ್ಕೂ ಅಧಿಕ ಮಕ್ಕಳು ಮೊಟ್ಟೆ ನೀಡಲು ಬೇಡಿಕೆ ಇಟ್ಟಿದ್ದು, ಕಂಡುಬಂದಿತ್ತು. ಇದರ ಮಧ್ಯೆ ಆಡಳಿತ ಸುಧಾರಣಾ ಆಯೋಗ ಮತ್ತೊಂದು ಮಹತ್ವದ ಶಿಫಾರಸ್ಸು ಮಾಡಿದ್ದು ಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ವಾರಕ್ಕೆ 5 ದಿನ …

Read More »

ಗೋಕಾಕ್, ಮೂಡಲಗಿ ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ

ಇಂದು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ( ರಿ )ಸಂಯೋಜಕ ಸಂಘಟನೆ ವತಿಯಿಂದ ಭೇಟಿಯಾಗಿ ಗೋಕಾಕ್, ಮೂಡಲಗಿ ಪ್ರವಾಹ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸುವಂತೆ ಮನವಿ ಸಲ್ಲಿಸಲಾಯಿತು. ಹಾಗೂ ಖಾನಾಪುರ ತಾಲೂಕಿನ ದೇವರಾಯಿ ಗ್ರಾಮದಲ್ಲಿ ದಲಿತ ಕುಟುಂಬ ದೌರ್ಜನ್ಯ ಕೊಳಗಾಗಿದೆ ಅವರಿಗೆ ಸರ್ಕಾರದ ಪರಿಹಾರ ಹಾಗೂ ಸೂಕ್ತ ನ್ಯಾಯ ಹಾಗೂ ಭದ್ರತೆ ಒದಗಿಸುವಂತೆ ಜಿಲ್ಲಾಧಿಕಾರಿಯವರನ್ನು ಕೋರಲಾಯಿತು. ಈ ಸಂದರ್ಭದಲ್ಲಿ ವಿಠಲ ಡಿ ಸಗರಮ್ಮನವರ ಬಾಗಲಕೋಟ್ ಜಿಲ್ಲಾ …

Read More »

ಸುದೀಪ್ ಭೇಟಿಯಾದ ಡಿ.ಕೆ. ಶಿ. ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ದ?

ಬೆಂಗಳೂರು: ನಟ ಕಿಚ್ಚ ಸುದೀಪ್ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಿದ್ದು, ಕಿಚ್ಚನ ರಾಜಕೀಯ ಎಂಟ್ರಿಗೆ ವೇದಿಕೆ ಸಿದ್ದವಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿದೆ.   ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ಕಿಚ್ಚ ಸುದೀಪ್ ಅವರನ್ನು ಬೆಂಗಳೂರಿನ ಅವರ ಮನೆಯಲ್ಲಿ ಭೇಟಿ ಮಾಡಿದರು. ಈ ಭೇಟಿಯ ಫೋಟೋಗಳು ಇದೀಗ ವೈರಲ್ ಆಗುತ್ತಿದೆ. ಕಿಚ್ಚ ಸುದೀಪ್ ಅವರ ರಾಜಕೀಯ ಪದಾರ್ಪಣೆ ಕುರಿತು ಅವರು ಚರ್ಚಿಸಿದ್ದಾರೆಯೇ ಎಂಬುದನ್ನು ನಟ …

Read More »

ಕುರಿಗಳ ಮೇಲೆ ತೋಳಗಳಿಂದ ದಾಳಿ

ರಾತ್ರಿ ಹೊತ್ತಿನಲ್ಲಿ ತೋಟದಲ್ಲಿ ನಿಲ್ಲಿಸಲಾಗಿದ್ದ ಕುರಿಗಳ ಮೇಲೆ ತೋಳಗಳು ದಾಳಿ ಮಾಡಿದ್ದು ಈ ದಾಳಿಯಲ್ಲಿ ಸುಮಾರು 25 ಕುರಿಗಳು ದಾರುಣ ವಾಗಿ ಸಾವನ್ನೊಪ್ಪಿರುವ ಘಟನೆ ಜಿಲ್ಲೆಯ ರಾಯಬಾಗ ತಾಲೂಕಿನ ಬೊಮ್ಮನಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ನಡೆದಿದೆ. ಬೊಮ್ಮನಾಳ ಗ್ರಾಮದ ರಬಕವಿ ಅವರ ತೋಟದಲ್ಲಿ ನಿಲ್ಲಿಸಲಾಗಿದ್ದ ಮಲ್ಲಪ್ಪ ಹೀರೆಕೂಡಿ ಅವರಿಗೆ ಸೇರಿದ ಕುರಿಗಳು ಇವಾಗಿವೆ. ಅಲ್ಲದೆ ಕುರಿಗಳ ಮಾಲಿಕ ಮಲ್ಲಪ್ಪ ಅವರು ಊಟಕ್ಕೆ ಹೋದ ಸಮಯದಲ್ಲಿ ಈ ಘಟನೆ ನಡೆದಿದೆ.

Read More »

ನೀರಾವರಿ ಇಲಾಖೆಗೆ 400 ಎಂಜಿನಿಯರ್‌ ನೇಮಕಕ್ಕೆ ಅನುಮತಿ: ಸಚಿವ ಕಾರಜೋಳ

ಬೆಂಗಳೂರು: ರಾಜ್ಯದ ನೀರಾವರಿ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ನೀರಾವರಿ ಇಲಾಖೆಯಲ್ಲಿ 400 ಎಂಜಿನಿಯರ್‌ಗಳ ನೇಮಕಕ್ಕೆ ಅನುಮತಿ ನೀಡಲಾಗಿದೆ ಎಂದು ಸಚಿವ ಗೋವಿಂದ ಕಾರಜೋಳ ಹೇಳಿದ್ದಾರೆ. ಸುದ್ದಿಗಾರರ ಜತೆ ಮಾತನಾಡಿದ ಅವರು, ನೀರಾವರಿ ಇಲಾಖೆಯಲ್ಲಿ ಅನೇಕ ವರ್ಷಗಳಿಂದ ಅಸಿಸ್ಟೆಂಟ್‌ ಎಂಜಿನಿಯರ್‌, ಜೂನಿಯರ್‌ ಎಂಜಿನಿಯರ್‌ ನೇಮಕ ಆಗಿಲ್ಲ.   ಸಾವಿರ ಹುದ್ದೆ ನೇಮಕವಾಗಬೇಕಾಗಿದೆ. ಈ ಹಿನ್ನೆಲೆ ಯಲ್ಲಿ ಈಗ 300 ಅಸಿಸ್ಟೆಂಟ್‌ ಎಂಜಿನಿಯರ್‌ ಹಾಗೂ 100 ಜೂನಿಯರ್‌ ಎಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.

Read More »

ಹಾಲಿ ಶಾಸಕರಿಗೆ ಟಿಕೆಟ್‌ ಪಕ್ಕಾ: ಆಕಾಂಕ್ಷಿಗಳಲ್ಲಿ ತಳಮಳ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕರಿಗೆ ಟಿಕೆಟ್‌ ಬಹುತೇಕ ಪಕ್ಕಾ ಆಗಿರುವುದರಿಂದ ಆ ಕ್ಷೇತ್ರಗಳಲ್ಲಿ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದವರಲ್ಲಿ ತಳಮಳ ಶುರುವಾಗಿದೆ.   ತಮಗೇ ಟಿಕೆಟ್‌ ಸಿಗಬಹುದು ಎಂಬ ನಿರೀಕ್ಷೆಯಿಂದ ಅರ್ಜಿ ಸಲ್ಲಿಸಿರುವ ಆಕಾಂಕ್ಷಿಗಳಿಗೆ ನಿರಾಶೆಯಾಗಿದ್ದು, ಇದರ ಪರಿಣಾಮ ಕೆಲವು ಕ್ಷೇತ್ರಗಳಲ್ಲಿ ಬಂಡಾಯ ಅಥವಾ ಪಕ್ಷಾಂತರ ಕಾಣಿಸಬಹುದು. ಆದರೆ ಬಹುತೇಕ ಕ್ಷೇತ್ರಗಳಲ್ಲಿ ಪ್ರಭಾವಿ ಶಾಸಕರ ವಿರುದ್ಧ ‘ನಾಮಕಾವಸ್ಥೆ’ಗೆ ಅರ್ಜಿ ಸಲ್ಲಿಸಿರುವವರ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಎಂ.ಬಿ.ಪಾಟೀಲ್‌, ಡಿ.ಕೆ.ಶಿವಕುಮಾರ್‌, …

Read More »