Breaking News

ರಾಜ್ಯ

ನಂದಗಡದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕದ ಉದ್ಘಾಟನೆ ನೆರವೇರಿಸಿದ ಶಾಸಕ ವಿಠ್ಠಲ ಹಲಗೇಕರ

ನಂದಗಡದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕದ ಉದ್ಘಾಟನೆ ನೆರವೇರಿಸಿದ ಶಾಸಕ ವಿಠ್ಠಲ ಹಲಗೇಕರ  -ಖಾನಾಪೂರ ತಾಲೂಕಿನ ನಂದಗಡದ ಗ್ರಾಮ ಪಂಚಾಯಿತಿಯ ನೂತನ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣಾ ಘಟಕದ ಉದ್ಘಾಟನೆಯನ್ನು ಶಾಸಕ ಮಹಾಲಕ್ಷ್ಮಿ ಗ್ರುಪ್ ಸಂಸ್ಥಾಪಕ ಅಧ್ಯಕ್ಷ ವಿಠ್ಠಲ ಹಲಗೇಕರ ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಯವರ ಪೋಟೋ ಪೂಜೆ ಸಲ್ಲಿಸಿ ಗೌರವಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಗ್ರಾಮಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಲ್ಲಿ …

Read More »

ಮನೆ ದೇವರನ್ನು ಪೂಜಿಸಿ ಗ್ರಾಮ ದೇವರಿಗೆ ವಂದಿಸಿದರೆ ಮಾತ್ರ ಶಾಂತಿ ಲಭಿಸುವುದು – ಚಂದ್ರಶೇಖರ ಶ್ರೀಗಳು.

ಹುಕ್ಕೇರಿ : ಮನೆ ದೇವರನ್ನು ಪೂಜಿಸಿ ಗ್ರಾಮ ದೇವರಿಗೆ ವಂದಿಸಿದರೆ ಮಾತ್ರ ಶಾಂತಿ ಲಭಿಸುವುದು – ಚಂದ್ರಶೇಖರ ಶ್ರೀಗಳು. ನಮ್ಮ ನಮ್ಮ ಮನೆಯ ದೇವರನ್ನು, ಗುರು ಮಠಗಳನ್ನು ಊರಿನ ಪರಂಪರೆಯನ್ನು ಬೀಡಬೇಡಿ ಎಂದು ಹುಕ್ಕೇರಿ ಹಿರೇಮಠದ ಚಂದ್ರಶೇಖರ ಮಹಾಸ್ವಾಮಿಗಳು ದಸರಾ ಸಂದೇಶ ನೀಡಿದರು. ಹುಕ್ಕೇರಿ ನಗರದಲ್ಲಿ ಕಳೆದ ಹತ್ತು ದಿನಗಳಿಂದ ಹಿರೇಮಠದ ದಸರಾ ಉತ್ಸವದಲ್ಲಿ ಗುಡ್ಡಾಪೂರ ದಾನಮ್ಮಾ ದೇವಿ ಪುರಾಣ ಪ್ರವಚನ, ಚಂಡಿಕಾ ಹೋಮ, ಗುರುಶಾಂತೇಶ್ವರ ರಥೋತ್ಸವ ಹಾಗೂ ದೇವಿ …

Read More »

ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಜಿದ್ದಾಜಿದ್ದಿ ರಮೇಶ್ ವಿದೇಶ ಪ್ರವಾಸದಿಂದ ನೇರವಾಗಿ ಬೆಳಗಾವಿಗೆ ಬಂದು ವಿವಿಧ ನಾಯಕರೊಂದಿಗೆ ಸಮಾಲೋಚನೆ

ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ತೀವ್ರ ಜಿದ್ದಾಜಿದ್ದಿ ನಡೆದಿದ್ದು, ಶುಕ್ರವಾರ ಬೆಳಗಾವಿ ಪ್ರವಾಸಿ ಮಂದಿರದಲ್ಲಿ ಶಾಸಕ ರಮೇಶ್ ಜಾರಕಿಹೊಳಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಯ ಬಗ್ಗೆ ಚರ್ಚೆ ನಡೆಸಿದರು ಎನ್ನಲಾಗಿದೆ. ವಿದೇಶ ಪ್ರವಾಸದಲ್ಲಿದ್ದ ಶಾಸಕ ರಮೇಶ್ ಜಾರಕಿಹೊಳಿ ಹುಕ್ಕೇರಿ ವಿದ್ಯುತ್ ಸಹಕಾರ ಕ್ಷೇತ್ರದಲ್ಲಿ ಕತ್ತಿ ಬಣ ಗೆಲುವು ಸಾಧಿಸುತ್ತಿದ್ದಂತೆ ಎಚ್ಚೆತ್ತಕೊಂಡ ರಮೇಶ್ ವಿದೇಶ ಪ್ರವಾಸದಿಂದ ನೇರವಾಗಿ ಬೆಳಗಾವಿಗೆ ಬಂದು ವಿವಿಧ ನಾಯಕರೊಂದಿಗೆ ಸಮಾಲೋಚನೆ ನಡೆಸಿದರು.

Read More »

ದೇವರಗಟ್ಟು ಬನ್ನಿ ಉತ್ಸವದಲ್ಲಿ ಬಡಿಗೆಗಳಿಂದ ಕಾದಾಟ ಇಬ್ಬರು ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

ಬಳ್ಳಾರಿ/ಆಂಧ್ರ ಪ್ರದೇಶ: ಹಬ್ಬ ಒಂದೇ ಆದರೂ ಅವುಗಳ ಆಚರಣೆಯ ವಿಧಾನಗಳು ಪ್ರದೇಶದಿಂದ ಪ್ರದೇಶಕ್ಕೆ ವಿಭಿನ್ನವಾಗಿರುತ್ತವೆ. ಮೈಸೂರಿನಲ್ಲಿ ವಿಜಯದಶಮಿಯನ್ನು ಅಂಬಾರಿ ಮೇಲೆ ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನಿಟ್ಟು ವಿಜೃಂಭಣೆಯಿಂದ ಜಂಬೂ ಸವಾರಿ ಮೆರವಣಿಗೆ ನಡೆಸಿದರೆ, ರಾಜ್ಯದ ಗಡಿ ಭಾಗವಾದ ದೇವರ ಗಟ್ಟು ಎಂಬಲ್ಲಿ ಇದರ ಆಚರಣೆ ವಿಭಿನ್ನ ಅಷ್ಟೇ ಅಲ್ಲ, ವಿಚಿತ್ರವೂ ಕೂಡಾ. ಇಲ್ಲಿ ವಿಜಯ ದಶಮಿಯ ವೇಳೆ ದೇವರ ಉತ್ಸವ ಮೂರ್ತಿಗಾಗಿ ಗ್ರಾಮಸ್ಥರ ನಡುವೆ ಬಡಿಗೆಗಳಿಂದ ಹೊಡೆದಾಟವೇ ನಡೆಯುತ್ತದೆ. ಇದು ನಿಮಗೆ ಅಚ್ಚರಿ …

Read More »

GST ಸರಳೀಕರಣದಿಂದ ರಾಜ್ಯಕ್ಕೆ 15 ಸಾವಿರ ಕೋಟಿ ನಷ್ಟ: ಮುಖ್ಯಮಂತ್ರಿ

ಮೈಸೂರು: ಬಿಹಾರ ಚುನಾವಣೆ ಹಿನ್ನೆಲೆ ಜಿಎಸ್​​ಟಿ ಸರಳೀಕರಣಗೊಳಿಸಿರುವ ಕೇಂದ್ರ ಸರ್ಕಾರದ ಈ ನಿರ್ಧಾರದಿಂದ ರಾಜ್ಯಕ್ಕೆ ಅಂದಾಜು 15 ಸಾವಿರ ಕೋಟಿ ರೂ.ಗಳ ನಷ್ಟವಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ತಮ್ಮ ನಿವಾಸದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಜಿಎಸ್​​ಟಿ ಉತ್ಸವ ಆಚರಿಸುವಂತೆ ಕೇಂದ್ರ ಸರ್ಕಾರ ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. 2017 ರಲ್ಲಿ ಕೇಂದ್ರ ಸರ್ಕಾರವೇ ಜಿಎಸ್​ಟಿ ಜಾರಿಗೆ ತಂದು ಜಿಎಸ್​ಟಿ ದರ ನಿಗದಿಪಡಿಸಿತು. ಕಳೆದ ಎಂಟು ವರ್ಷದಿಂದ ಹೆಚ್ಚಿನ ದರ …

Read More »

ದೇಶದಲ್ಲಿಯೇ ಅತಿ ಹೆಚ್ಚು ಸೈಬರ್ ಅಪರಾಧ ಬೆಂಗಳೂರು ಅಗ್ರಸ್ಥಾನ ಪಡೆದುಕೊಂಡಿದೆ. ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ದಾಖ

ಬೆಂಗಳೂರು: ಭಾರತದ ಸಿಲಿಕಾನ್ ವ್ಯಾಲಿ, ಐಟಿ ನಗರಿ ಬೆಂಗಳೂರಿನಲ್ಲಿ 2023ರಲ್ಲಿ ದೇಶದಲ್ಲಿಯೇ ಅತಿ ಹೆಚ್ಚು ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಸೋಮವಾರ ಬಿಡುಗಡೆಗೊಳಿಸಿರುವ 2023ರ ದತ್ತಾಂಶದಲ್ಲಿ ಈ ಮಾಹಿತಿ ಬಹಿರಂಗಗೊಂಡಿದ್ದು, ಈ ಪಟ್ಟಿಯಲ್ಲಿ ಬೆಂಗಳೂರು ಅಗ್ರಸ್ಥಾನ ಪಡೆದುಕೊಂಡಿದೆ. ಎನ್‌ಸಿಆರ್‌ಬಿ (ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ) ಬಿಡುಗಡೆಗೊಳಿಸಿರುವ ಅಂಕಿ- ಅಂಶಗಳನ್ವಯ 2023ರಲ್ಲಿ ಬೆಂಗಳೂರಿನಲ್ಲಿ ಒಟ್ಟು 17,631 ಸೈಬರ್ ಅಪರಾಧ ಪ್ರಕರಣಗಳು ದಾಖಲಾಗಿವೆ. 2022ರಲ್ಲಿ ದಾಖಲಾದ (9,940) …

Read More »

ಗ್ಯಾರಂಟಿ ಕಾರ್ಯಕ್ರಮ ತರಲು ಹೋಗಿ ರಾಜ್ಯ ಬರಡಾಗಿದೆ: ಹಣಕಾಸು ಸ್ಥಿತಿ ಹದಗೆಟ್ಟಿದೆ: ಹೆಚ್. ಡಿ. ದೇವೇಗೌಡ

ಬೆಂಗಳೂರು : ಗ್ಯಾರಂಟಿ ಕಾರ್ಯಕ್ರಮವನ್ನು ಅನುಷ್ಠಾನಕ್ಕೆ ತರಲು ಹೋಗಿ ಇಂದು ರಾಜ್ಯ ಬರಡಾಗಿದೆ. ಹಣಕಾಸಿನ ಸ್ಥಿತಿ ಹದಗೆಟ್ಟಿದೆ ಎಂದು ಮಾಜಿ ಪ್ರಧಾನಿ ಹೆಚ್. ಡಿ. ದೇವೇಗೌಡ ಆರೋಪಿಸಿದ್ದಾರೆ. ಜೆ. ಪಿ. ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ಮಾತನ್ನು ನಾನು ಹೇಳುತ್ತಿಲ್ಲ. ಕಾಂಗ್ರೆಸ್ ಶಾಸಕರೇ ಹೇಳುತ್ತಿದ್ದಾರೆ. ಅವರಲ್ಲೇ ಗೊಂದಲ ಇದೆ. ದುಡ್ಡಿಲ್ಲ ದುಡ್ಡಿಲ್ಲ ಅಂತಿದ್ದಾರೆ. ಸರ್ಕಾರ ಇಂಥ ಅತಿವೃಷ್ಟಿ ಬಂದಾಗ ತನ್ನ ಸಂಪನ್ಮೂಲದಿಂದ ಸಂಕಷ್ಟಕ್ಕೀಡಾದ ಜನರಿಗೆ ಶಕ್ತಿ ಮೀರಿ ಸಹಾಯ …

Read More »

ಬೆಳಗಾವಿ ಜಿಲ್ಲಾ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಗೋಕಾಕ ನಗರದ ಗೃಹಕಚೇರಿಯಲ್ಲಿ ಬಿಡುಗಡೆ

ಜಿಲ್ಲಾ ಪಂಚಾಯತ್ ಕಾರ್ಯಾಲಯ ಬೆಳಗಾವಿ, ಶಾಲಾ ಶಿಕ್ಷಣ ಇಲಾಖೆ ಬೆಳಗಾವಿ ಮತ್ತು ಚಿಕ್ಕೋಡಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿರುವ “ಬೆಳಗಾವಿ ಜಿಲ್ಲಾ ಟ್ಯಾಲೆಂಟ್ ಸರ್ಚ್ ಪರೀಕ್ಷೆ – ಕನಸುಗಳಿಗೆ ಚಿನ್ನದ ದಾರಿ, ಪ್ರತಿಭೆಗೆ ಹೊಸ ವೇದಿಕೆ – 2025” ರ ಮಾಹಿತಿ ಪತ್ರವನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಇಂದು ಗೋಕಾಕ ನಗರದ ಗೃಹಕಚೇರಿಯಲ್ಲಿ ಬಿಡುಗಡೆ ಮಾಡಿದರು ಜಿಲ್ಲಾ ಪಂಚಾಯತ್ ಬೆಳಗಾವಿ ವತಿಯಿಂದ, ಜಿಲ್ಲೆಯ ಸರಕಾರಿ ಪ್ರೌಢಶಾಲೆಗಳ 9 ಮತ್ತು …

Read More »

ಮಂಗಳೂರು ಸೆಂಟ್ರಲ್‌ನಿಂದ ಬೆಂಗಳೂರು ಮಾರ್ಗವಾಗಿ ನವದೆಹಲಿಗೆ ಪ್ರಪ್ರಥಮ ವಿಶೇಷ ರೈಲು: ಅ.5ರಿಂದ ಸೇವೆ ಪ್ರಾರಂಭ

ಸುಬ್ರಹ್ಮಣ್ಯ(ದ.ಕನ್ನಡ): ದಕ್ಷಿಣ ರೈಲ್ವೆ ವಲಯವು ಇದೇ ಅ.5ರಂದು ಮಂಗಳೂರು ಸೆಂಟ್ರಲ್​​ನಿಂದ ಹಾಸನ, ಯಶವಂತಪುರ, ಕಾಚಿಗುಡ ಮಾರ್ಗವಾಗಿ ಪ್ರಪ್ರಥಮವಾಗಿ ದೆಹಲಿಯ ಹಜ್ರತ್ ನಿಜಾಮುದ್ದೀನ್ ರೈಲು ನಿಲ್ದಾಣಕ್ಕೆ ವಿಶೇಷ ರೈಲು ಘೋಷಿಸಿದೆ. ರೈಲು ಸಂಖ್ಯೆ 06008 ಮಂಗಳೂರು ಸೆಂಟ್ರಲ್ – ಹಜ್ರತ್ ನಿಜಾಮುದ್ದೀನ್ ವಿಶೇಷ ರೈಲು ಅ.5ರಂದು ಮಧ್ಯಾಹ್ನ 2:25ಕ್ಕೆ ಮಂಗಳೂರು ಸೆಂಟ್ರಲಿನಿಂದ ಹೊರಟು ಹಾಸನ ಮಾರ್ಗವಾಗಿ ರಾತ್ರಿ 11:30ಕ್ಕೆ ಯಶವಂತಪುರ ಜಂಕ್ಷನ್ ರೈಲು ನಿಲ್ದಾಣ ತಲುಪಲಿದೆ. ಅಲ್ಲಿಂದ ರಾತ್ರಿ 11:45ಕ್ಕೆ ಹೊರಡುವ ರೈಲು …

Read More »

ಪೇಸ್‌ಮೇಕರ್‌ ಚಿಕಿತ್ಸೆ ಯಶಸ್ವಿ, ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಯಿಂದ ಬಿಡುಗಡೆ

ಬೆಂಗಳೂರು: ಅನಾರೋಗ್ಯಕ್ಕೊಳಗಾಗಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಪೇಸ್​​ ಮೇಕರ್​ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಲಾಗಿದ್ದು, ಗುರುವಾರ ಸಂಜೆ ಬೆಂಗಳೂರಿನ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್​ ಮಾಡಿರುವ ಕಾಂಗ್ರೆಸ್​, ಮಲ್ಲಿಕಾರ್ಜುನ ಖರ್ಗೆ ಅವರು ಗುರುವಾರ ಸಂಜೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಶೀಘ್ರದಲ್ಲೇ ದೈನಂದಿನ ಕಾರ್ಯಕ್ಕೆ ಮರಳಲಿದ್ದಾರೆ ಎಂದು ತಿಳಿಸಿದೆ. ಖರ್ಗೆ ಚೇತರಿಕೆ ಕಾಣುತ್ತಿದ್ದಾರೆ. ಅವರಿಗೆ ಶುಭ ಹಾರೈಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ಶೀಘ್ರದಲ್ಲೇ ವೈದ್ಯರ ಸಲಹೆಯ ಬಳಿಕ ಅವರು ತಮ್ಮ ಚಟುವಟಿಕೆಗಳಿಗೆ …

Read More »