Breaking News

ರಾಜಕೀಯ

ಶಾಸಕ ಬಿ.ಆರ್.ಪಾಟೀಲ್ ಆರೋಪ ಸುಳ್ಳು: ಡಿಸಿಎಂ

ರಾಮನಗರ: ಹಣ ಪಡೆದು ಮನೆ ನೀಡಿದ್ದಾರೆ ಎಂಬ ಶಾಸಕ ಬಿ.ಆರ್.ಪಾಟೀಲ್ ಅವರ ಆರೋಪ ಸುಳ್ಳು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್​ ಹೇಳಿದರು. ಕನಕಪುರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೋ ಒಬ್ಬ ಹೇಳಿದರೆ ಇದೆಲ್ಲವೂ ಆಗುತ್ತದೆಯೇ?. ನಾನು ಅಥವಾ ನೀವು ಬಂದು ಗ್ರಾಮ ಸಭೆಯಲ್ಲಿ ಮನೆ ಕೇಳಿದ ತಕ್ಷಣ ಕೊಡಲು ಆಗುತ್ತದೆಯೇ? ಎಂದು ಪ್ರಶ್ನಿಸಿದರು. ಮನೆ ನೀಡಲು ತೀರ್ಮಾನ ಮಾಡುವವರು ಗ್ರಾಮ ಪಂಚಾಯಿತಿ, ಮುನಿಸಿಪಾಲಿಟಿ ಸೇರಿದಂತೆ ಎಲ್ಲೆಲ್ಲಿ ಮನೆ ನಿಡಬೇಕೋ ಆಯಾ ಸ್ಥಳೀಯ …

Read More »

ಗಾಯಕನಿಂದ 3 ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚಿಸಿದ ಮಹಿಳೆಯ​ ವಿರುದ್ಧ

ಮಂಗಳೂರು: ನ್ಯಾಯಾಲಯದಲ್ಲಿರುವ ಪ್ರಕರಣವನ್ನು ಹೈಕೋರ್ಟ್​ನಲ್ಲಿ ವಕೀಲರ ಮೂಲಕ ಕ್ವಾಷ್​ ಮಾಡಿ ಬಗೆಹರಿಸುತ್ತೇನೆ ಎಂದು ನಂಬಿಸಿ ಗಾಯಕರೊಬ್ಬರಿಂದ 3.20 ಲಕ್ಷ ರೂ ಪಡೆದು ವಂಚಿಸಿದ ಬೆಂಗಳೂರಿನ ಸಂಧ್ಯಾ ಪವಿತ್ರ ನಾಗರಾಜ್ ಎಂಬ ಮಹಿಳೆಯ ವಿರುದ್ಧ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಏನಿದು ಪ್ರಕರಣ?: ಬೆಳ್ತಂಗಡಿಯ ಮಡಂತ್ಯಾರ್​ ನಿವಾಸಿ, ಗಾಯಕ ರಾಜೇಶ್​​.ಕೆ. (43) ಎಂಬವರಿಗೆ 2024ರಲ್ಲಿ ಫೇಸ್‌ಬುಕ್ ಮೂಲಕ ಆರೋಪಿತೆ ಸಂಧ್ಯಾ ಪವಿತ್ರ ನಾಗರಾಜ್ ಎಂಬಾಕೆಯ ಪರಿಚಯವಾಗಿತ್ತು. ಆಕೆಯೊಂದಿಗೆ ಮೊಬೈಲ್ ಮೂಲಕ ಸಂಪರ್ಕದಲ್ಲಿದ್ದರು. ಆರೋಪಿತೆಯು ರಾಜೇಶ್ …

Read More »

ಮೂಡಲಗಿ – ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಾಗರಿಕರ ಅಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು

ಮೂಡಲಗಿ – ಪಟ್ಟಣದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ನಾಗರಿಕರ ಅಶೋತ್ತರಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆಂದು ಶಾಸಕ ಮತ್ತು ಬೆಮುಲ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿಯವರು ತಿಳಿಸಿದರು. ಶನಿವಾರದಂದು ಇಲ್ಲಿನ ಸಂಗಪ್ಪಣ್ಣ ವೃತ್ತದ ಬಳಿ ಪುರಸಭೆಯಿಂದ ನಿರ್ಮಿಸಲು ಉದ್ದೇಶಿಸಿರುವ ಒಟ್ಟು ೭.೬೮ ಕೋಟಿ ರೂಪಾಯಿ ವೆಚ್ಚದ ವಾಣಿಜ್ಯ ಮಳಿಗೆಗಳ ಗುದ್ದಲಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ಸರ್ವತೋಮುಖ ಏಳ್ಗೆಯೇ ನನ್ನ ಗುರಿಯಾಗಿದೆ ಎಂದು ಹೇಳಿದರು. ಮೂಡಲಗಿ ತಾಲ್ಲೂಕು …

Read More »

ಬಾಗಲಕೋಟೆ: ಹಳ್ಳಕ್ಕೆ ಬಿದ್ದ ಬಾಲಕ, ಕಾಪಾಡಲು ಹೋದ ಯುವಕ ನೀರುಪಾಲು

ಬಾಗಲಕೋಟೆ: ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಹಳ್ಳದಲ್ಲಿ ಮುಳುಗಿ ಇಬ್ಬರು ಮೃತಪಟ್ಟಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಇಳಕಲ್​ ತಾಲೂಕಿನ ಚಿಕನಾಳ ಗ್ರಾಮದಲ್ಲಿ ಇಂದು ನಡೆದಿದೆ. ಜಮೀನಿಗೆ ಹೋಗುತ್ತಿದ್ದಾಗ ಹಳ್ಳಕ್ಕೆ ಕಾಲು ಜಾರಿ ಬಿದ್ದ ಬಾಲಕ ಹಾಗೂ ಆತನನ್ನು ಕಾಪಾಡಲು ಹಳ್ಳಕ್ಕೆ ಇಳಿದ ಯುವಕ ಇಬ್ಬರೂ ನೀರು ಪಾಲಾಗಿದ್ದಾರೆ. ಮಂಜುನಾಥ ಬಾಲಪ್ಪ ಬಂಡಿ (13) ಹಾಗೂ ಷಣ್ಮುಖಪ್ಪ ನಿಲಪ್ಪ ತಿಪ್ಪಣ್ಣವರ (30) ಮೃತಪಟ್ಟವರು. ಮೃತಪಟ್ಟ ಯುವಕ ಚಿಕನಾಳ ಗ್ರಾಮದ ನಿವಾಸಿಯಾಗಿದ್ದು, ಬಾಲಕ ಕೊಪ್ಪಳ ಜಿಲ್ಲೆ …

Read More »

ಸಚಿವ ಹೆಚ್. ಕೆ. ಪಾಟೀಲ್ ಸಿಎಂಗೆ ತನಿಖೆ ಮಾಡಿ ಅಂತ ಪತ್ರ ಬರೆಯುವುದರಲ್ಲಿ ತಪ್ಪೇನಿದೆ? ಶಿವಾನಂದ ಪಾಟೀಲ್

ಹಾವೇರಿ : ಸಚಿವ ಹೆಚ್. ಕೆ. ಪಾಟೀಲ್ ಸಿಎಂಗೆ ತನಿಖೆ ಮಾಡಿ ಅಂತ ಪತ್ರ ಬರೆಯುವುದರಲ್ಲಿ ತಪ್ಪೇನಿದೆ? ಎಂದು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಪ್ರಶ್ನಿಸಿದ್ದಾರೆ. ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೂಲಿಹಳ್ಳಿಯಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿಶತ 7 ರಷ್ಟಾದರೂ ಆಗಿದೆಯಲ್ಲ. ಹೆಚ್. ಕೆ. ಪಾಟೀಲ್ ಇನ್ನಷ್ಟು ವೇಗ ಪಡೆಯಲಿ ಎಂದಿದ್ದಾರೆ. ತೃಪ್ತಿ ತಂದಿಲ್ಲ. ಆದರೆ ಅವರು ನೆನಪು ಮಾಡಿದ ನಂತರ ಮತ್ತಷ್ಟು ವೇಗ ಪಡೆಯುತ್ತೆ …

Read More »

ಒಂದು ಸಾವಿರ ಪಿಎಸ್ಐ ಹುದ್ದೆ ಖಾಲಿ, ಶೀಘ್ರವೇ ನೇಮಕಾತಿ: ಸಚಿವ ಪರಮೇಶ್ವರ್

ಕೊಪ್ಪಳ: ಪಿಎಸ್ಐ ನೇಮಕಾತಿ ಹಗರಣದ ಬಳಿಕ ಐದು ವರ್ಷಗಳ ಕಾಲ ಯಾವುದೇ ಪೊಲೀಸ್ ನೇಮಕಾತಿ ಆಗಿಲ್ಲ. ಒಂದು ಸಾವಿರ ಪಿಎಸ್ಐ ಹುದ್ದೆಗಳು ಖಾಲಿ ಇವೆ. ನಮ್ಮ ಸರ್ಕಾರದಿಂದ ಶೀಘ್ರವಾಗಿ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸುವುದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್​ ಹೇಳಿದರು. ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಇಂದು (ಭಾನುವಾರ) ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ 500 ಪಿಎಸ್ಐ ಹುದ್ದೆಗಳಿಗೆ ನೇಮಕಾತಿ ನಡೆದಿದ್ದು, ಅವರೆಲ್ಲ ತರಬೇತಿ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ …

Read More »

ಡಿಕೆಶಿ ಸಿಎಂ ಆಗುವ ಕನಸು ಮಾತ್ರ ಕಾಣಬೇಕು

ಮಂಡ್ಯ : ಡಿಕೆಶಿ ಏನಿದ್ರು ಸಿಎಂ ಆಗುವ ಕನಸು ಕಾಣಬೇಕು ಅಷ್ಟೇ. ಡಿಕೆಶಿಗೆ ಕಾಂಗ್ರೆಸ್‌ನಲ್ಲಿ ಯಾರು ಬಿಟ್ಟು ಕೊಡ್ತಾರೆ? ಎಂದು ಕೇಂದ್ರ ಸಚಿವ ಹೆಚ್.​ ಡಿ. ಕುಮಾರಸ್ವಾಮಿ ಅವರು ಪ್ರಶ್ನಿಸಿದ್ದಾರೆ. ಮಂಡ್ಯದಲ್ಲಿಂದು ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಆಟೋ ಸ್ಟಾಂಡ್ ನಿರ್ಮಾಣದ ಗುದ್ದಲಿ ಪೂಜೆಯನ್ನು ಅವರು ಭಾನುವಾರ ನೆರವೇರಿಸಿದರು. ಹಲವು ವರ್ಷಗಳಿಂದ ಆಟೋ ಸ್ಟಾಂಡ್‌ಗೆ ಬೇಡಿಕೆ ಇತ್ತು. ಇಂದು ಗುದ್ದಲಿ ಪೂಜೆ ಮಾಡುವ ಮೂಲಕ ಕಾಮಗಾರಿಗೆ ಚಾಲನೆ ನೀಡಿದರು. CSR ಅನುದಾನದಲ್ಲಿ ಗುದ್ದಲಿ …

Read More »

ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಬಿ.ಎಲ್.ಶಂಕರ್ ಅವಿರೋಧ ಆಯ್ಕೆ

ಬೆಂಗಳೂರು: ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾಗಿ ಬಿ.ಎಲ್.ಶಂಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಜೊತೆಗೆ, ಇತರ 14 ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸದಸ್ಯರು ಕೂಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಚಿತ್ರಕಲಾ ಪರಿಷತ್ತಿನ ಮೂರು ವರ್ಷಗಳ ಅವಧಿಯ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿಯ ಸದಸ್ಯರ ಹುದ್ದೆಗಳ ಚುನಾವಣೆ 29.06.2025ರ ಭಾನುವಾರದಂದು ನಿಗದಿಯಾಗಿತ್ತು. ಆದರೆ, ಪ್ರತಿಸ್ಪರ್ಧಿಗಳು ಸ್ಪರ್ಧೆಯಿಂದ ಹಿಂದೆ ಸರಿದರು. ಹೀಗಾಗಿ, ಆಯ್ಕೆಯಾಗಬೇಕಾದ ಸ್ಥಾನಗಳಿಗೆ ಸಮಾನವಾಗಿ ಅಭ್ಯರ್ಥಿಗಳು ಉಳಿದಿರುವುದರಿಂದ 15 ಮಂದಿ ಚಿತ್ರಕಲಾ ಪರಿಷತ್​​ಗೆ ಅವಿರೋಧವಾಗಿ ಆಯ್ಕೆಯಾದ …

Read More »

ರಾಜ್ಯದಲ್ಲಿ ನಿರಂತರ ಮಾವು ಬೆಲೆ ಕುಸಿತ:

ಬೆಂಗಳೂರು: ರಾಜ್ಯದಲ್ಲಿ ಮಾವಿನ ಬೆಲೆ ಕುಸಿತದಿರುವ ಹಿನ್ನೆಲೆಯಲ್ಲಿ ‘ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ’ಯಡಿ ನೆರವಾಗುವಂತೆ ರಾಜ್ಯ ಸರ್ಕಾರದ ಮನವಿಗೆ ಕೇಂದ್ರ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೆರೆಡೂ ಪ್ರತಿ ಕೆ.ಜಿ.ಗೆ ಎರಡೆರೆಡು ರೂ.ಗಳಂತೆ ಒಟ್ಟು 4 ರೂ. ವ್ಯತ್ಯಾಸ ಪಾವತಿಸಿ ಮಾರುಕಟ್ಟೆ ಚೈತನ್ಯಕ್ಕೆ ಕ್ರಮ ಕೈಗೊಳ್ಳಲು ಸಿದ್ಧತೆ ನಡೆಸಿವೆ. ಶನಿವಾರ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ವಿಡಿಯೋ‌ ಸಂವಾದದ ಮೂಲಕ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ …

Read More »

ಹೂತಿಟ್ಟ ಶವದ ಹಿಂದಿನ ಕಾರಣ ಬಯಲು

ಚಾಮರಾಜನಗರ: ಹೂತಿಟ್ಟ ಶವದಿಂದ ಮುಂಗೈ ಹೊರಬಂದ ಪ್ರಕರಣದಲ್ಲಿ ಮಹಿಳೆಯ ಗುರುತು ಪತ್ತೆಯಾಗಿದ್ದು, ಕೊಲೆಗೈದ ಪ್ರಿಯಕರ ಸಿಕ್ಕಿಬಿದ್ದಿದ್ದಾನೆ. ಕೊಳ್ಳೇಗಾಲ ತಾಲೂಕಿನ ಹಳೇ ಹಂಪಾಪುರದ ಸುವರ್ಣಾವತಿ ನದಿ ದಂಡೆಯಲ್ಲಿ ಗುರುವಾರ ರಾತ್ರಿ ಶವದ ಮುಂಗೈ ಕಾಣಿಸಿಕೊಂಡಿತ್ತು. ಮೋಳೆ ಗ್ರಾಮದ ಸೋನಾಕ್ಷಿ (29) ಎಂಬಾಕೆಯ ಶವ ಇದಾಗಿದೆ. ಈಕೆಯನ್ನು ಪ್ರಿಯಕರ ಮಾದೇಶ(35) ಕೊಲೆ ಮಾಡಿ, ಹೂತು ಹಾಕಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಸೋನಾಕ್ಷಿ ತನ್ನ ಸೋದರ ಮಾವ ವಿಜಯ್​ ಕುಮಾರ್​ ಎಂಬವರನ್ನು ಮದುವೆಯಾಗಿದ್ದರೂ ಸಂಬಂಧದಲ್ಲಿ …

Read More »