Breaking News

ರಾಜಕೀಯ

ರಾಜ್ಯದ ನಗರಗಳ ಹವಾಮಾನ ವರದಿ: 14-10-2020

ರಾಜ್ಯದಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಹಲವೆಡೆ ಮಳೆಯಾಗುವ ಸಾಧ್ಯತೆ ಇದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಲಿದೆ. ಇನ್ನುಳಿದಂತೆ ಹಲವೆಡೆ ಬಿಸಿಲಿನ ವಾತಾವರಣ ಮುಂದುವರಿಯಲಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರದಲ್ಲಿ ಗರಿಷ್ಠ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದೆ. …

Read More »

ಮುಖ್ಯಮಂತ್ರಿ ಜೊತೆ ಸಭೆ; ಔಷಧ ಕ್ಷೇತ್ರದಲ್ಲಿ ಭಾರೀ ಹೂಡಿಕೆಗೆ ಪಿರಮಲ್ ಗ್ರೂಪ್ ಆಸಕ್ತಿ..

ಬೆಂಗಳೂರು: ಕರ್ನಾಟಕದಲ್ಲಿ ಔಷಧೀಯ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಪಿರಮಲ್ ಗ್ರೂಪ್ ಆಸಕ್ತಿ ತೋರಿದ್ದು, ಸರ್ಕಾರ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದರು. ಮುಖ್ಯಮಂತ್ರಿ ಜೊತೆ ಇಂದು ಪಿರಮಲ್ ಗ್ರೂಪ್‍ ಅಧ್ಯಕ್ಷ ಆನಂದ್ ಪಿರಮಲ್ ಅವರು ವರ್ಚುಯಲ್ ಸಭೆ ಮುಖಾಂತರ ಈ ಬಗ್ಗೆ ಚರ್ಚಿಸಿದರು. ರಾಜ್ಯ ಸರ್ಕಾರ ಕಳೆದ ದಿನಗಳಲ್ಲಿ ಅನೇಕ ಸುಧಾರಣೆಗಳನ್ನು ತಂದು ಕೈಗಾರಿಕೆಗಳಿಂದ ಅತಿ ಹೆಚ್ಚು ಹೂಡಿಕೆಯನ್ನು ಆಕರ್ಷಿಸುತ್ತಿದೆ. ರಾಜ್ಯದಲ್ಲಿ ಹೂಡಿಕೆಗೆ ಅವಕಾಶಗಳನ್ನು ರಾಜ್ಯ …

Read More »

ಮೇಕೆದಾಟು ಯೋಜನೆ ; ಮತ್ತೆ ಕೇಂದ್ರ ಸಚಿವರನ್ನು ಭೇಟಿ ಮಾಡಲಿರುವ ಸಚಿವ ಜಾರಕಿಹೊಳಿ‌

ಮೇಕೆದಾಟು ಯೋಜನೆಯ‌ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ಪರಿಸರ‌ ಮತ್ತು ಅರಣ್ಯ ‌ಇಲಾಖೆಯ ಅನುಮತಿ ಪಡೆಯಲು ಒತ್ತಾಯಿಸಿ ರಾಜ್ಯದ ಜಲಸಂಪನ್ಮೂಲ ಸಚಿವರಾದ ಶ್ರೀ ರಮೇಶ್ ಜಾರಕಿಹೊಳಿ‌ ಅವರು ನವದೆಹಲಿಗೆ ತೆರಳಲಿದ್ದಾರೆ. ಜಲಸಂಪನ್ಮೂಲ ಇಲಾಖೆಯ ಹಲವಾರು ಯೋಜನೆಗಳಿಗೆ ಅರಣ್ಯ ತೀರುವಳಿ ನೀಡುವ ಉನ್ನತ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವರು, ಮೇಕೆದಾಟು ಸೇರಿದಂತೆ ಹಲವು ಯೋಜನೆಗಳ ಬಗ್ಗೆ ಅನುಮತಿ ಪಡೆಯಲು ಕೇಂದ್ರದ ಸಚಿವರನ್ನು ಒತ್ತಾಯಿಸಲಾಗುವುದು. ಅದಕ್ಕಾಗಿ ಶೀಘ್ರದಲ್ಲಿ ನವದೆಹಲಿಗೆ ತೆರಳಲು ಯೋಚಿಸಿರುವುದಾಗಿ …

Read More »

ನಾನಿದ್ದಾಗ ಸಾವಿರ ಕೇಸ್​ ಇತ್ತಷ್ಟೇ, ಸುಧಾಕರ ಬಂದ್ಮೇಲೆ 5000 ಆಯ್ತು -ರಾಮುಲು ನೇರ ಟಾಂಗ್

ಬೆಂಗಳೂರು: ಸಿಎಂ ಬಿಎಸ್‌ವೈ ನಿವಾಸದಲ್ಲಿ ಸಚಿವರಾದ ಕೆ.ಸುಧಾಕರ್ ಮತ್ತು ಶ್ರೀರಾಮುಲು ಮಧ್ಯೆ ನಡೆದ ಸಂಧಾನ ಸಭೆ ಬಳಿಕ ಇಬ್ಬರು ಸಚಿವರು ಸುದ್ದಿಗೋಷ್ಠಿ ನಡೆಸಿದರು.   ಸಚಿವ ಶ್ರೀರಾಮುಲು ಖಾತೆ ಬದಲಾವಣೆ ಮಾಡಿದ ವಿಚಾರವಾಗಿ ಒಳ್ಳೆಯ ಕೆಲಸ ಮಾಡಲು ಸಿಎಂ ಸಲಹೆ ಕೊಟ್ಟಿದ್ದಾರೆ. ನಮ್ಮಿಬ್ಬರನ್ನೂ ಕರೆಸಿ ಸಿಎಂ ಬಿಎಸ್‌ವೈ ಸೂಚನೆ ಕೊಟ್ಟಿದ್ದಾರೆ ಎಂದು ಶ್ರೀರಾಮುಲು ಹೇಳಿದರು. ಸಿಎಂ ಬಿಎಸ್‌ವೈ ಬಳಿ ಸಮಾಜ ಕಲ್ಯಾಣ ಖಾತೆ ಕೇಳಿದ್ದೆ. ಸಿಎಂ ನನಗೆ ಈಗ ಸಮಾಜ ಕಲ್ಯಾಣ …

Read More »

ಎಲ್ಲದಕ್ಕೂ ಸಿದ್ಧರಾಗಿ, ಖಾಸಗಿ ಕಾರಿನಲ್ಲಿ ಸಿಎಂ ಮನೆಗೆ ಬಂದ ರಾಮುಲು

ಬೆಂಗಳೂರು: ಸಚಿವ ಬಿ. ಶ್ರೀರಾಮುಲು ಖಾತೆ ಬದಲಾವಣೆ ವಿಚಾರಕ್ಕೆ ಸಂಬಂಧಿಸಿ ಸಿಎಂ ಬಿಎಸ್​ವೈ ಮತ್ತು ರಾಮುಲು ಮಹತ್ವದ ಭೇಟಿಗೆ ಕೌಂಟ್​ಡೌನ್ ಶುರುವಾಗಿದೆ. ಚಿಕ್ಕಜಾಲ ಬಳಿಯ ಫಾರ್ಮ್​ಹೌಸ್​ನಿಂದ ನೇರವಾಗಿ ಸಿಎಂ ನಿವಾಸಕ್ಕೆ ರಾಮುಲು ಹೊರಟುಬಂದಿದ್ದಾರೆ. ಇನ್ನೂ ಗರಂ ಆಗಿರೋ ಶ್ರೀರಾಮುಲು ಅವರನ್ನ ಮಾತುಕತೆ ನಡೆಸಿ ಮನವೊಲಿಕೆ ಮಾಡ್ತಾರಾ ಸಿಎಂ ಎಂದು ಕಾದು ನೋಡಬೇಕಿದೆ. ಇನ್ನು ಸಿಎಂ ಭೇಟಿ ವೇಳೆ 2 ಖಾತೆ ಬೇಕು ಅಂತಾ ರಾಮುಲು ಪಟ್ಟು ಹಿಡೀತಾರಾ? ಅಥವಾ ಸಿಎಂ …

Read More »

ಜಾರಕಿಹೊಳಿ ಕುಟುಂಬದ ಸಾಮ್ರಾಜ್ಯ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ.

ಬೆಳಗಾವಿ: ಕುಟುಂಬ ರಾಜಕಾರಣಕ್ಕೆ ಹೆಸರಾಗಿರುವ ಬೆಳಗಾವಿಯಲ್ಲಿ ಈಗ ಮತ್ತೆರಡು ಕುಡಿಗಳು ರಾಜಕೀಯ ಪ್ರವೇಶ ಮಾಡಲು ತಯಾರಾಗಿದ್ದು, ಜಾರಕಿಹೊಳಿ ಕುಟುಂಬದ ಸಾಮ್ರಾಜ್ಯ ಮತ್ತಷ್ಟು ವಿಸ್ತಾರಗೊಳ್ಳುತ್ತಿದೆ. ರಮೇಶ ಜಾರಕಿಹೊಳಿ ಪುತ್ರ ಅಮರನಾಥ ರಾಜಕೀಯ ಪ್ರವೇಶಿಸಿದ ಬೆನ್ನಲ್ಲೇ ಸತೀಶ್‌ ಜಾರಕಿಹೊಳಿಯ ಮಕ್ಕಳು ಇದೇ ಹಾದಿಯಲ್ಲಿದ್ದಾರೆ. 3 ದಶಕಗಳಿಂದ ರಾಜಕೀಯದಲ್ಲಿರುವ ಸತೀಶ್‌ ಈಗ ಮಕ್ಕಳಾದ ರಾಹುಲ್‌ ಹಾಗೂ ಪ್ರಿಯಂಕಾ ಅವರನ್ನು ರಾಜಕೀಯಕ್ಕೆ ಸಿದ್ಧಗೊಳಿಸುತ್ತಿದ್ದಾರೆ. ಇದೇ ಉದ್ದೇಶದಿಂದ ಅವರನ್ನು ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಲಾಗುತ್ತಿದೆ. ಕನಿಷ್ಠ ಐದು ವರ್ಷ ಅವರು …

Read More »

ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಭೂ ಕಬಳಿಕೆ ಆರೋಪ, ನ್ಯಾಯ ಒದಗಿಸಿ ಎಂದು ರೈತರ ಅಳಲು

ನೆಲಮಂಗಲ: ಮಾಗಡಿ ಮಾಜಿ ಶಾಸಕ ಬಾಲಕೃಷ್ಣ ವಿರುದ್ಧ ಪದೇಪದೆ ಭೂ ಕಬಳಿಕೆ ಆರೋಪ ಕೇಳಿಬರ್ತಿದೆ. 2007ರಲ್ಲಿ ಬಾಲಕೃಷ್ಣ ಅಧ್ಯಕ್ಷರಾಗಿದ್ದ ಜನತಾ ಎಜುಕೇಷನ್ ಸೊಸೈಟಿ ಹೆಸರಲ್ಲಿ ಕೋಟಿ ಕೋಟಿ ಬೆಲೆಬಾಳುವ ಗೋಮಾಳ‌ವನ್ನು ಹರಾಜಲ್ಲಿ ಖರೀದಿಸಿದ್ದು, ನಮಗೆ ಅನ್ಯಾಯ ಆಗಿದೆ ನ್ಯಾಯ ಒದಗಿಸಿ ಎಂದು ರೈತರು ಪೋಲಿಸರ ಮೊರೆ ಹೋಗಿದ್ದಾರೆ. ಬೆಂಗಳೂರಲ್ಲಿ ಭೂಮಿಯ ಬೆಲೆ ಗಗನ ಕುಸುಮವಾಗಿದೆ. ಇಂತಹ ಜಮೀನನ್ನು ಸ್ವಾಧೀನದಲ್ಲಿರುವ ರೈತರಿಗೆ ತಿಳಿಯದೇ ಹರಾಜು ಪ್ರಕ್ರಿಯಯಲ್ಲಿ ಅಕ್ರಮವಾಗಿ ಜನತಾ ಎಜುಕೇಷನ್ ಸೊಸೈಟಿಯವರು ಖರೀದಿಸಿದ್ದಾರೆ …

Read More »

ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ನಂದಿಬೆಟ್ಟ ಹಾಗೂ ಕೆಮ್ಮಣ್ಣುಗುಂಡಿಯನ್ನು ತೋಟಗಾರಿಕೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ…………….?

ಬೆಂಗಳೂರು, ಅ.12- ರಾಜ್ಯದ ಪ್ರಮುಖ ಪ್ರವಾಸಿ ತಾಣಗಳಾದ ನಂದಿಬೆಟ್ಟ ಹಾಗೂ ಕೆಮ್ಮಣ್ಣುಗುಂಡಿಯನ್ನು ತೋಟಗಾರಿಕೆಯಿಂದ ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡುವ ಸರ್ಕಾರದ ತೀರ್ಮಾನಕ್ಕೆ ಎರಡು ಇಲಾಖೆಗಳ ನಡುವೆ ಭಾರೀ ಸಂಘರ್ಷ ಏರ್ಪಟ್ಟಿದೆ. ಯಾವುದೇ ಕಾರಣಕ್ಕೂ ಈ ಎರಡೂ ತಾಣಗಳನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರ ಮಾಡಲು ಅವಕಾಶ ಕೊಡಬಾರದೆಂದು ತೋಟಗಾರಿಕೆ ಇಲಾಖೆಯ ಅಕಾರಿಗಳು ನಾರಾಯಣಗೌಡ ಅವರ ಮೇಲೆ ಒತ್ತಡ ಹಾಕಿದ್ದಾರೆ. ವಾರ್ಷಿಕವಾಗಿ ಇಲಾಖೆಗೆ ಕೋಟಿಗಳಷ್ಟು ಆದಾಯ ತರುವ ಈ ಪ್ರವಾಸಿತಾಣಗಳನ್ನು ಪ್ರವಾಸೋದ್ಯಮ ಇಲಾಖೆಗೆ …

Read More »

ಚಿತ್ರನಟಿ ಖುಷ್ಬೂ  ಸುಂದರ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ

ಹೊಸದಿಲ್ಲಿ:  ಚಿತ್ರನಟಿ ಖುಷ್ಬೂ  ಸುಂದರ್ ಅವರು ಕಾಂಗ್ರೆಸ್ ಪಕ್ಷಕ್ಕೆ ಇಂದು  ರಾಜೀನಾಮೆ ನೀಡಿದ್ದಾರೆ. ಖುಷ್ಬೂ ಬಿಜೆಪಿ ಸೇರಲಿದ್ದಾರೆ ಎಂಬ  ಮಾತು ಕೇಳಿ ಬಂದ ಹಿನ್ನೆಲೆಯಲ್ಲಿ ಕಾಂಗ್ರೆಸ್ ವಕ್ತಾರೆ ಸ್ಥಾನದಿಂದ ಕೈ ಬಿಡಲಾಗಿತ್ತು. 2014ರ ಲೋಕಸಭಾ ಚುನಾವಣೆ ವೇಳೆ ಕಾಂಗ್ರೆಸ್​ ಹೀನಾಯ ಸೋಲನುಭವಿಸಿದ ಹೊತ್ತಲ್ಲಿ ನಾನು ಕಾಂಗ್ರೆಸ್​ಗೆ ಸೇರ್ಪಡೆಯಾದೆ. ನಾನು ಯಾವುದೇ ಹಣಕಾಸಿನ ಲಾಭಕ್ಕಾಗಿ ಅಥವಾ ಖ್ಯಾತಿಗಾಗಿ ಪಕ್ಷಕ್ಕೆ ಬರಲಿಲ್ಲ. ಪಕ್ಷದೊಳಗೆ ಉನ್ನತ ಮಟ್ಟದಲ್ಲಿ ಕುಳಿತಿರುವ ಕೆಲವರು, ವಾಸ್ತವತೆ ಅಥವಾ ಸಾರ್ವಜನಿಕರೊಂದಿಗೆ …

Read More »

ಅಮರನಾಥ್ ಜಾರಕಿಹೊಳಿ ಅವರಿಗೆ ಬೆಳಗಾವಿ ಲೋಕಸಭೆ ಬೈ ಎಲೆಕ್ಷನ್ ಟಿಕೆಟ್ ಎಂಬ ಸುದ್ದಿ

ಬೆಳಗಾವಿ: ಕೇಂದ್ರ ಸಚಿವ ಸುರೇಶ್ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಟಿಕೆಟ್ ಗಾಗಿ ಲಾಬಿ ಆರಂಭವಾಗಿದ್ದು, ಯಾರಿಗೆ ಟಿಕೆಟ್ ನೀಡಬೇಕು ಎಂಬುದು ಸದ್ಯಕ್ಕೆ ಬಿಜೆಪಿ ಕಠಿಣ ಸವಾಲಾಗಿದೆ. ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಪುತ್ರ ಅಮರನಾಥ್ ಅವರಿಗೆ ಬೆಳಗಾವಿ ಲೋಕಸಭೆ ಬೈ ಎಲೆಕ್ಷನ್ ಟಿಕೆಟ್ ಎಂಬ ಸುದ್ದಿ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಬೆಳಗಾವಿ ಲೋಕಸಭೆ ವ್ಯಾಪ್ತಿಗೆ ಬರುವ ಹಲವು ವಿಧಾನಸಭೆ ಕ್ಷೇತ್ರಗಳಲ್ಲಿ ಜಾರಕಿ ಹೊಳಿ …

Read More »