Breaking News

ರಾಜಕೀಯ

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

ರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. ತಕ್ಷಣವೇ ರೈಲು ನಿಲ್ಲಿಸಿದ ಪೈಲಟ್​ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಬೆಂಗಳೂರು ದಕ್ಷಿಣ ಜಿಲ್ಲೆಯ (ಹಿಂದಿನ ರಾಮನಗರ) ಚನ್ನಪಟ್ಟಣ ತಾಲೂಕಿನ ವಂದಾರಗುಪ್ಪೆ ಬಳಿ ಮೈಸೂರಿನಿಂದ ರಾಜಸ್ಥಾನದ ಉದಯಪುರಕ್ಕೆ ರೈಲು ತೆರಳುತ್ತಿತ್ತು. ಈ ವೇಳೆ ರೈಲಿನ ಇಂಜಿನ್​​ನಲ್ಲಿ ಹಠಾತ್​ ಬೆಂಕಿ ಕಾಣಿಸಿದೆ. ಮುಂದಿನ ಭಾಗದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ತಕ್ಷಣವೇ ಸಮಯಪ್ರಜ್ಞೆ ಮೆರೆದ ಚಾಲಕ …

Read More »

ಬಂಡಾರದ ಜಾತ್ರೆ; ತಂದೆ ಚಿಕ್ಕಪ್ಪ, ಸ್ನೇಹಿತರೊಂದಿಗೆ ಯುವ ನಾಯಕ ಸಂತೋಷ್ ಜಾರಕಿಹೊಳಿ ಅವರು ಜಾತ್ರೆಯಲ್ಲಿ ಭಾಗಿ

ಬಂಡಾರದ ಜಾತ್ರೆ; ತಂದೆ ಚಿಕ್ಕಪ್ಪ, ಸ್ನೇಹಿತರೊಂದಿಗೆ ಯುವ ನಾಯಕ ಸಂತೋಷ್ ಜಾರಕಿಹೊಳಿ ಅವರು ಜಾತ್ರೆಯಲ್ಲಿ ಭಾಗಿ ಜುಲೈ ಒಂದರಿಂದ ಆರಂಭಗೊಂಡಿರುವ ಗೋಕಾಕ್ ಗ್ರಾಮದೇವಿಯರ ಜಾತ್ರೆ ಗುರುವಾರವೂ ವಿಜ್ರಂಭಣೆಯಿಂದ ಮುಂದುವರೆದಿದ್ದು ಹೊನ್ನಾಟದಲ್ಲಿ ಭಕ್ತರು ಭಕ್ತಿ ಭಾವದಿಂದ ಮೈಮರೆತಿದ್ದರು ಜುಲೈ 1ರಿಂದ ಆರಂಭಗೊಂಡಿರುವ ಗೋಕಾಕ್ ದೇವಿಯರ ಜಾತ್ರೆಯಲ್ಲಿ ಪೂಜೆ, ಅಭಿಷೇಕ, ನೈವೇದ್ಯ, ಪಾಲಿಕೆ ಉತ್ಸವ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ಮುಂದುವರೆದಿದ್ದು, ಇಂದು ದೇವಿಯರ ಉಭಯ ರಥಗಳು ಹಳೆಯ ಮುನ್ಸಿಪಲ್ ಕಚೇರಿ, …

Read More »

ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ

ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ ಖಾನಾಪೂರ ತಾಲೂಕಿನ ಗುಂಜಿ ಬಳಿಯಿರುವ ಕಿರಾವಾಳೆಯ ಪ್ರಸಿದ್ಧ ಗೋರಕ್ಷನಾಥ ಮಠದಲ್ಲಿ ಕಳ್ಳತನ ನಡೆದಿರುವ ಘಟನೆ ಬೆಳಕಿಗೆ ಬಂದಿದ್ದು. ಮಠದ ಭಕ್ತರಲ್ಲಿ ಕೋಪದ ವಾತಾವರಣ ಸೃಷ್ಟಿಸಿದೆ. ಮಠಾಧೀಶರು ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಗೋರಕ್ಷನಾಥ ಮಠದ ಮಠಾಧೀಶರಾದ ಶ್ರೀ ಪೀರ್ ಯೋಗಿ ಮಂಗಲನಾಥ್‌ಜಿ ಮಹಾರಾಜ್ ಮತ್ತು ಅವರ ಶಿಷ್ಯ ರಾಹುಲ್ ಲಕ್ಷ್ಮಣ್ ಪಾಟೀಲ್, ಅವರು ಜೂನ್ 26 ರಂದು ಬೆಳಗಾವಿ ದೇವಸ್ಥಾನಕ್ಕೆ ಹೋಗಿದ್ದರು. ನಂತರ, …

Read More »

ಬಾಲಕೋಟೆಯ ಜಿಲ್ಲಾಸ್ಪತ್ರೆಯಿಂದ 8 ಜನ ವೈಧ್ಯರನ್ನು ವರ್ಗಾವಣೆ

ಡಾಕ್ಟರ್ ಎಲ್ಲಿದ್ದೀರಾ…ವರ್ಗಾವಣೆಯಾಗಿ ಹೋದರಾ ಸರ್ಕಾರಿ ವೈಧ್ಯರ ವರ್ಗಾವಣೆ ಬಡರೋಗಿ ಖಾಸಗಿ ಆಸ್ಪತ್ರೆಗೆ ರವಾಣೆ ಎನ್ನುವಂತೆ ಒಂದೇ ಭಾರಿಗೆ ಜಿಲ್ಲಾಸ್ಪತ್ರೆಯಿಂದ 8 ಜನ ವೈಧ್ಯರನ್ನು ವರ್ಗಾವಣೆ ಮಾಡಿದಕ್ಕೆ ಸಾರ್ವಜನಿಕರು ಸಂಕಷ್ಟಕ್ಕಿಡಾಗಿ ಸರ್ಕಾರ ಹಾಗೂ ಆರೋಗ್ಯ ಇಲಾಖೆಯ ವಿರುದ್ಧ ಸಿಡಿಮಿಡಿಗೊಂಡಿದ್ದಾರೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ. ಹೌದು ಇದು ಬಾಲಕೋಟೆಯ ಜಿಲ್ಲಾಸ್ಪತ್ರೆಯಲ್ಲಿ ಕಣ್ಣಿಗೆ ಕಾಣಿಸುವ ದೃಶ್ಯ… ಆರೋಗ್ಯ ಇಲಾಖೆಯ ಸಾಮೋಹಿಕ ವರ್ಗಾವಣೆಯಿಂದ 8 ಜನ ವೈಧ್ಯರು ಬೇರೆಡೆಗೆ ವರ್ಗಾವಣೆಯಾಗಿರುವುದ್ದರಿಂದ ಚಿಕಿತ್ಸೆಗೆ …

Read More »

ಶ್ವಾಸನಾಳದಲ್ಲಿ ಸಿಲುಕಿದ್ದ ಕಡಲೆ ತುಣಕು

ಮಂಗಳೂರು: ಹಲವು ತಿಂಗಳಿನಿಂದ ಅಸ್ತಮಾ ಎಂದುಕೊಂಡು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರಿಗೆ ಮಂಗಳೂರಿನ ಕೆಎಂಸಿ ಆಸ್ಪತ್ರೆ ವೈದ್ಯರು ಯಶಸ್ವಿ ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಅಸ್ತಮಾ ಅಥವಾ ಯಾವುದೇ ಅಲರ್ಜಿಯ ಲಕ್ಷಣ ಹೊಂದಿರದ 50 ವರ್ಷದ ವ್ಯಕ್ತಿಯೊಬ್ಬರು ಕಳೆದ 6 ತಿಂಗಳಿನಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದರು. ಉಬ್ಬಸ ಸಮಸ್ಯೆಯನ್ನು ಅಸ್ತಮಾ ಎಂದು ತಿಳಿದು ಸಾಕಷ್ಟು ಕಡೆ ಚಿಕಿತ್ಸೆ, ಬ್ರೊಂಕೊಡೈಲೇಟರ್ ಥೆರಪಿ ಪಡೆದರೂ ಸಮಸ್ಯೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿರಲಿಲ್ಲ. ಆದರೆ ಈಗ ಕೆಎಂಸಿ ಆಸ್ಪತ್ರೆಯ …

Read More »

ಉದ್ಯಮಿಯಿಂದ 2 ಕೋಟಿ ರೂ. ದರೋಡೆ ಪ್ರಕರಣ: ನಾಲ್ವರು ಆರೋಪಿಗಳ ಬಂಧ‌ನ

ಬೆಂಗಳೂರು: ನಗದು ಹಣವನ್ನು ಯುಎಸ್‌ಡಿಟಿ ಕರೆನ್ಸಿಯಾಗಿ ಬದಲಾವಣೆ ಮಾಡಿಕೊಡುವುದಾಗಿ ನಂಬಿಸಿ ಉದ್ಯಮಿಯೊಬ್ಬರನ್ನು ಕರೆಸಿಕೊಂಡು, ಮಾರಕಾಸ್ತ್ರ ತೋರಿಸಿ 2 ಕೋಟಿ ರೂ. ನಗದು ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ವಿದ್ಯಾರಣ್ಯಪುರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬೆಂಜಮಿನ್ ಹರ್ಷ, ರಕ್ಷಿತ್, ಪ್ರಕಾಶ್ ಹಾಗೂ ಭರತ್ ಎಂಬುವರನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸುಲಿಗೆ ಸಂಬಂಧ ಉದ್ಯಮಿ ವಿ. ಶ್ರೀಹರ್ಷ ಪೊಲೀಸರಿಗೆ ದೂರು ನೀಡಿದ್ದರು. …

Read More »

ಬೆಳಗಾವಿ ಜಿಲ್ಲೆ ವಿಭಜನೆಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯ

ಬೆಳಗಾವಿ: 2025ರ ಡಿಸೆಂಬರ್‌ 31ರೊಳಗೆ ಕ್ರಮವಹಿಸಿ ಹೊಸ ಜಿಲ್ಲೆಗಳನ್ನು ಘೋಷಣೆ ಮಾಡದೇ ಹೋದರೆ ಈ ಸರ್ಕಾರದ ಅವಧಿಯಲ್ಲಿ ಜಿಲ್ಲಾ ರಚನೆ ಮರೀಚಿಕೆ ಆಗುತ್ತದೆ. ಮುಖ್ಯಮಂತ್ರಿಗಳು, ಕಂದಾಯ ಸಚಿವರು ಹಾಗೂ ಜಿಲ್ಲೆಯ ಇಬ್ಬರು ಸಚಿವರು ಜನರ ಮೂಗಿಗೆ ತುಪ್ಪ ಹಚ್ಚುವುದನ್ನು ಬಿಟ್ಟು ಬೆಳಗಾವಿ ಜಿಲ್ಲೆಯನ್ನು ವಿಭಜಿಸುವಂತೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಒತ್ತಾಯಿಸಿದರು. ಬೆಳಗಾವಿಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೇಂದ್ರದ ಜನಗಣತಿ ಇಲಾಖೆ ಒಂದು ಆದೇಶ ಹೊರಡಿಸಿದ್ದು, ಎಲ್ಲಾ ರಾಜ್ಯಗಳ …

Read More »

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ

ಕಾಗವಾಡ ತಾ.ಶೇಡಬಾಳದ ಬಿಎಸ್ಎಫ್ ಯೋಧ ಅನಾರೋಗ್ಯದಿಂದ ನಿಧನ ಬಿಎಸ್ಎಫ್ ಯೋಧ ದಗಡು ಪೂಜಾರಿ ರಜೆಯ ಮೇಲೆ ಗ್ರಾಮಕ್ಕೆ ಮರಳಿದ್ದಾಗ ಆರೋಗ್ಯ ಸಮಸ್ಯೆಯಿಂದ ಬೆಳಗಾವಿ ಆಸ್ಪತ್ರೆಗೆ ದಾಖಲಾಗಿದ್ದರು.ಚಿಕಿತ್ಸೆ ಫಲಿಸದೆ ನಿಧನರಾಗಿದ್ದಾರೆ. ಮೃತ ಯೋಧರು ತಾಯಿ, ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ. ಯೋಧನು ಅಸ್ಸಾಂ ರಾಜ್ಯದ ಗುವಾಹಟಿಯ170 ಬಟಾಲಿಯನ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಯೋಧನ ಸ್ವಗ್ರಾಮದ ತೋಟದಲ್ಲಿ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲಾಯಿತು. ಅಂತ್ಯಕ್ರಿಯೆಯಲ್ಲಿ ಸರ್ಕಾರಿ ಅಧಿಕಾರಿಗಳು ಗ್ರಾಮದ ಮುಖಂಡರು ಭಾಗಿಯಾಗಿದ್ದರು

Read More »

ಗಮನ ಸೆಳೆದ ಕೇರಳದ ಕೊಟ್ಟಿಯೂರು ಕ್ಷೇತ್ರ

ಬಂಟ್ವಾಳ(ದಕ್ಷಿಣ ಕನ್ನಡ): ಈ ವರ್ಷ ಇದ್ದಕ್ಕಿದ್ದಂತೆ ಕೇರಳದ ಪುಣ್ಯಕ್ಷೇತ್ರವೊಂದು ಗಮನ ಸೆಳೆಯುತ್ತಿದೆ. ಸೋಶಿಯಲ್​​ ಮೀಡಿಯಾದಲ್ಲಂತೂ ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಕೊಟ್ಟಿಯೂರು ಕ್ರೇಜ್​ ಸೃಷ್ಟಿಸಿದೆ. ಕಣ್ಣೂರು ಜಿಲ್ಲೆಯಲ್ಲಿರುವ ಕೊಟ್ಟಿಯೂರು ಶಿವ ಕ್ಷೇತ್ರದಲ್ಲಿ ವರ್ಷಕ್ಕೊಂದು ಬಾರಿ 27 ದಿನಗಳ ವೈಶಾಖ ಮಹೋತ್ಸವ ನಡೆಯುತ್ತದೆ. ಈ ವರ್ಷ ಕೊಟ್ಟಿಯೂರಿನ ವೈಶಾಖ ಮಹೋತ್ಸವ ಭಾರೀ ಸಂಚಲನ ಮೂಡಿಸಿದೆ. ದಕ್ಷಯಜ್ಞದ ಪುರಾಣ ಕಥೆಯೊಂದಿಗೆ ಸಂಬಂಧ ಇರುವ ಕೊಟ್ಟಿಯೂರು ಸನ್ನಿಧಿಯಲ್ಲಿ ಸ್ಥಾವರ ರೂಪದ ಶಾಶ್ವತ ದೇವಸ್ಥಾನಗಳಿಲ್ಲ. ವೈಶಾಖ ಮಹೋತ್ಸವಕ್ಕಾಗಿ ಪ್ರಕೃತಿದತ್ತವಾದ …

Read More »

‘ಪಡಿತರ ಅಕ್ರಮ ತಡೆಗೆ ಅಂಗಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಿ’: ಗ್ಯಾರಂಟಿ ಅನುಷ್ಠಾನ ಸಮಿತಿ ಸೂಚನೆ

ಗಂಗಾವತಿ: “ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಅನ್ನಭಾಗ್ಯ’ ಪಡಿತರ ಫಲಾನುಭವಿಗಳಿಗೆ ತಲುಪದೇ ಬಹುತೇಕ ಧಾನ್ಯ ಕಳ್ಳರ ಪಾಲಾಗುತ್ತಿದ್ದು, ಇದನ್ನು ತಡೆಯಲು ನ್ಯಾಯಬೆಲೆ ಅಂಗಡಿಗಳಲ್ಲಿ ಸಿಸಿ ಕ್ಯಾಮರಾ ಅಳವಡಿಸಬೇಕು” ಎಂದು ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಡಾ. ವೆಂಕಟೇಶ್​ ಬಾಬು ಹೇಳಿದರು. ತಾಲೂಕು ಪಂಚಾಯಿತಿ ಆವರಣದಲ್ಲಿರುವ ಮಂಥನ ಸಭಾಂಗಣದಲ್ಲಿ ಬುಧವಾರ ನಡೆದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ತಾಲೂಕು ಹಂತದ ಪಂಚ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. …

Read More »