Breaking News

ರಾಜಕೀಯ

ಮನೆಯಲ್ಲೇ ಹೈಟೆಕ್ ವೇಶ್ಯವಾಟಿಕೆ ದಂಧೆ

ಮೈಸೂರು, (ಜುಲೈ 07): ಮೈಸೂರು (Mysuru) ತಾಲ್ಲೂಕಿನ ದಾಸನಕೊಪ್ಪಲಿನಲ್ಲಿ (Dasanakoppalu Village) ಅಕ್ರಮವಾಗಿ ನಡೆಯುತ್ತಿದ್ದ ಹೈಟೆಕ್ ವೇಶ್ಯಾವಾಟಿಕೆ (Prostitution) ದಂಧೆಯ ಮೇಲೆ ಪೊಲೀಸರು ದಾಳಿ ಮಾಡಿದ್ದು, ಆರು ಜನರನ್ನು ಬಂಧಿಸಿದ್ದಾರೆ. ಓಡನಾಡಿ ಸಂಸ್ಥೆ ನೀಡಿದ ಖಚಿತ ಮಾಹಿತಿಯ ಮೇರೆಗ ಪೊಲೀಸರು ದಾಳಿ ಮಾಡಿದ್ದು, ಆರೋಪಿಗಳನ್ನು ರೆಡ್‌ ಹ್ಯಾಂಡ್ ಆಗಿ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ದಾಳಿಯ ವೇಳೆ ಆ ಮನೆಯಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ ಬೆಳಕಿಗೆ ಬಂದಿದ್ದು, 6 ಪುರುಷರು ಮತ್ತು ಇಬ್ಬರು ಮಹಿಳೆಯರು ಸಿಕ್ಕಿಬಿದ್ದಿದ್ದಾರೆ.ಮಹಿಳಾ ಮತ್ತು ಮಕ್ಕಳ ಸುರಕ್ಷತೆಯ ಹೆಸರಿನಲ್ಲಿ …

Read More »

ಸಿಎಂ ಸಿದ್ದರಾಮಯ್ಯ ಬಗ್ಗೆ ಆಡಳಿತ ಪಕ್ಷದವರೇ ವಿಶ್ವಾಸ ಕಳೆದುಕೊಂಡಿದ್ದಾರೆ: ಬಿ ವೈ ವಿಜಯೇಂದ್ರ

ಶಿವಮೊಗ್ಗ: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗ್ಗೆ ಆಡಳಿತ ಪಕ್ಷದ ಶಾಸಕರುಗಳೇ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಗಂಭೀರ ಆರೋಪ‌ ಮಾಡಿದ್ದಾರೆ. ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಅನಿಶ್ಚಿತತೆ ಕಾಡುತ್ತಿದೆ. ರಣದೀಪ್ ಸಿಂಗ್ ಸುರ್ಜೆವಾಲ ಅವರು ಪದೇ ಪದೆ ಬೆಂಗಳೂರಿಗೆ ಬರ್ತಾ ಇದ್ದಾರೆ. ಬಂದಾಗಲೆಲ್ಲಾ ಶಾಸಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅವರು ಬೆಂಗಳೂರಿನಲ್ಲಿ ಮೂರು ದಿನಗಳ‌ವರೆಗೆ ಇರ್ತಾರೆ. ಇದರ ಹಿನ್ನೆಲೆ ಏನಂದ್ರೆ, ಡಿ. ಕೆ. …

Read More »

ಶಾಸಕರ ಮನೆಯ ಹಿಂಭಾಗದ ರಸ್ತೆಯಲ್ಲಿ ನಿಲ್ಲಿಸಿದ್ದ 20 ವಾಹನಗಳ ಮೇಲೆ ದುಷ್ಕರ್ಮಿಗಳಿಂದ ದಾಳಿ

ಆನೇಕಲ್​, ಜುಲೈ 07: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ (Satish Reddy) ಮನೆಯ ಹಿಂಭಾಗದ ರಸ್ತೆಯಲ್ಲಿ ನಿಲ್ಲಿಸಲಾಗಿದ್ದ ಕಾರು ಮತ್ತು ಆಟೋಗಳ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದಾರೆ. ದಾಳಿಯಲ್ಲಿ 12 ಕಾರುಗಳು 8 ಆಟೋಗಳ ಗಾಜುಗಳು ಪುಡಿ ಪುಡಿಯಾಗಿವೆ. ಬೊಮ್ಮನಹಳ್ಳಿಯ (Bommanahalli) ಹೊಂಗಸಂದ್ರದಲ್ಲಿ ಘಟನೆ ನಡೆದಿದೆ. ಹೊಂಗಸಂದ್ರದ ರಾಜಕುಮಾರ್ ರಸ್ತೆ ಬದಿ ನಿಲ್ಲಿಸಿದ್ದ 12 ಕಾರುಗಳು 8 ಆಟೋಗಳ ಮೇಲೆ ದುಷ್ಕರ್ಮಿಗಳು ನಸುಕಿನ ಜಾವ 3 ಗಂಟೆ ಸುಮಾರಿಗೆ ಕಲ್ಲು, ದೊಣ್ಣೆ, ರಾಡ್​ನಿಂದ ಕಾರು …

Read More »

ತುಮಕೂರು: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಮದುವೆ; ಪತ್ನಿಗೆ ಚಾಕು ಇರಿದು ಕೊಂದ ಪತಿ

ತುಮಕೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪತಿಯೇ ತನ್ನ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತುಮಕೂರು ಹೊರವಲಯದ ಅಂತರಸನಹಳ್ಳಿ ಬಳಿ ನಡೆದಿದೆ. ಮಂಡ್ಯ ಜಿಲ್ಲೆಯ ಗಣನೂರು ಗ್ರಾಮದ ಗೀತಾ (20) ಕೊಲೆಯಾದ ಪತ್ನಿಯಾಗಿದ್ದಾರೆ. ಪತಿ ನವೀನ್ ಕೊಲೆ ಮಾಡಿರುವ ಆರೋಪಿ. ಮಹಿಳೆಯ ಕುತ್ತಿಗೆ, ಮುಖ ಹಾಗೂ ಇತರ ಭಾಗಗಳಿಗೆ ಮನಬಂದಂತೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ನವೀನ್ ತುಮಕೂರು ತಾಲೂಕಿನ ಅಮೃತಗಿರಿಯ ವಾಸಿಯಾಗಿದ್ದು, ಅಂತರಸನಹಳ್ಳಿಯಲ್ಲಿ ಬಾಡಿಗೆ ಮನೆ ಮಾಡಿಕೊಂಡು ಇಬ್ಬರೂ ವಾಸವಿದ್ದರು. …

Read More »

ಪತಿಯನ್ನು ಕೊಲೆ ಮಾಡಲು ಸುಪಾರಿ ಕೊಟ್ಟಿದ್ದ ಪತ್ನಿ ಹಾಗೂ ಕೊಲೆ ಮಾಡಲು ಯತ್ನಿಸಿದ್ದ ಆರೋಪಿಗೆ ತಲಾ ಹತ್ತು ವರ್ಷ ಜೈಲು ಶಿಕ್ಷೆ

ಕಾರವಾರ: ದಾಂಡೇಲಿ ಸಮೀಪದ ಅಂಬೇವಾಡಿ ಗಾಂವಠಾಣ ನಿವಾಸಿ ಅಂಕುಶ್​ ಸುತಾರ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದ ಪ್ರಕರಣದಲ್ಲಿ ಅಂಕುಶ್​ ಅವರ ಪತ್ನಿ ತೇಜಸ್ವಿನಿ ಹಾಗೂ ಕೊಲೆಗೆ ಯತ್ನಿಸಿದ ಗಣೇಶ್ ಪಾಟೀಲ್​ಗೆ ತಲಾ 10 ವರ್ಷಗಳವರೆಗೆ ಸಾದಾ ಕಾರಾಗೃಹ ಶಿಕ್ಷೆ ವಿಧಿಸಿ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ಪ್ರಕಟಿಸಿದೆ. ಪ್ರಕರಣ ಹಿನ್ನೆಲೆ: 11 ಜೂನ್ 2021 ರಂದು ರಾತ್ರಿ ಅಂಕುಶ್​ ಕೊಲೆಗೆ ಯತ್ನ ನಡೆದಿತ್ತು‌. ಅಂಕುಶ್​ ಪತ್ನಿ ಗಣೇಶ್ ಎಂಬಾತನಿಗೆ 30 …

Read More »

ಡಿಜಿಟಲ್ ಅರೆಸ್ಟ್ ಮೂಲಕ ಮಂಗಳೂರಿನ ಮಹಿಳೆಗೆ 3.15 ಕೋಟಿ ರೂಪಾಯಿ ವಂಚನೆ

ಮಂಗಳೂರು: ಮಂಗಳೂರಿನ ಮಹಿಳೆಯೊಬ್ಬರು ಡಿಜಿಟಲ್ ಅರೆಸ್ಟ್ ಎಂಬ ಹೆಸರಿನಲ್ಲಿ ನಡೆದ ಆನ್‌ಲೈನ್ ವಂಚನೆಯಲ್ಲಿ 3 ಕೋಟಿ 15 ಲಕ್ಷ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ಕಳೆದುಕೊಂಡಿದ್ದಾರೆ. ಜೂನ್ 6ರಂದು ಬೆಳಗ್ಗೆ 10:25ರ ಸುಮಾರಿಗೆ ಮಹಿಳೆಗೆ 8260865038 ಸಂಖ್ಯೆಯಿಂದ ಕರೆ ಬಂದಿದೆ. ಕರೆ ಮಾಡಿದವರು ತಾವು ಇನ್ಸ್‌ಪೆಕ್ಟರ್ ಅನು ಶರ್ಮಾ ಎಂದು ಪರಿಚಯಿಸಿಕೊಂಡು, NCRP (ನ್ಯಾಷನಲ್ ಕ್ರೈಮ್ ರಿಪೋರ್ಟಿಂಗ್ ಪೋರ್ಟಲ್)ನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ಮಹಿಳೆಯ ಗಂಡನ ಹೆಸರಿನಲ್ಲಿ ಹೊಸ ಸಿಮ್ (9867485463) ಖರೀದಿಸಲಾಗಿದೆ. …

Read More »

ರಾಜ್ಯದಲ್ಲಿ ಬಾಲ್ಯ ವಿವಾಹ ಕಡಿವಾಣಕ್ಕೆ ಕಠಿಣ ಮಸೂದೆ: ಬಾಲ್ಯ ವಿವಾಹಕ್ಕೆ ಪ್ರಯತ್ನ, ನಿಶ್ಚಿತಾರ್ಥವೂ ಅಪರಾಧ; ಏನೆಲ್ಲಾ ಶಿಕ್ಷೆ, ದಂಡ?

ಬೆಂಗಳೂರು: ರಾಜ್ಯದಲ್ಲಿ ಬಾಲ್ಯ ವಿವಾಹದ ಪ್ರಮಾಣ ವರ್ಷಂಪ್ರತಿ ಹೆಚ್ಚುತ್ತಲೇ ಇದೆ.‌ ಅಧಿಕಾರಿಗಳು ಎಷ್ಟೇ ಜಾಗೃತಿ ಮೂಡಿಸಿದರೂ ಬಾಲ್ಯ ವಿವಾಹಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.‌ ಇದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ಇದೀಗ ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ), 2025 ಕರಡು ಮಸೂದೆ ಸಿದ್ಧಪಡಿಸಿದೆ.‌ ಆಧುನಿಕ ಕಾಲಮಾನದಲ್ಲೂ ಬಾಲ್ಯ ವಿವಾಹದಂತಹ ಸಾಮಾಜಿಕ ಪಿಡುಗು ಅವ್ಯಾಹತವಾಗಿ ಮುಂದುವರೆದಿದೆ. ಅದರಲ್ಲೂ ಕರ್ನಾಟಕದಂತಹ ಪ್ರಗತಿಪರ ರಾಜ್ಯದಲ್ಲೂ ಅನಿಷ್ಟ ಪದ್ಧತಿ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ.‌ ನಾಗರಿಕ …

Read More »

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

ಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು ಸೇರಿದಂತೆ ಹಲವು ಮಹಾನ್ ವ್ಯಕ್ತಿಗಳು ಜನಿಸಿದ್ದಾರೆ. ಅಂಬಿಗರ ಚೌಡಯ್ಯ 12 ಶತಮಾನದ ವೀರಶೈವ ಲಿಂಗಾಯತ ಬಸವೇಶ್ವರರ ಸಮಕಾಲೀನರು. ಅವರ ಜೊತೆ ಅನುಭವ ಮಂಟಪದಲ್ಲಿ ಭಾಗವಹಿಸಿದ್ದ ಶರಣರಲ್ಲಿ ನಿಜಶರಣ ಅಂಬಿಗರ ಚೌಡಯ್ಯ ಸಹ ಒಬ್ಬರು. ತಮ್ಮ ನೇರ, ದಿಟ್ಟ ವಚನಗಳಿಂದ ಸಮಾಜದ ಅಂಕುಡೊಂಕು ತಿದ್ದಿದ್ದ ಚೌಡಯ್ಯ ತಮ್ಮ ಕೊನೆಯ ದಿನಗಳನ್ನು ಕಳೆದಿದ್ದು ರಾಣೆಬೆನ್ನೂರು …

Read More »

ಖಾಸಗಿ ಲಾಡ್ಜ್​​ನಲ್ಲಿ ಪಿಎಸ್​ಐ ಆತ್ಮಹತ್ಯೆ

ತುಮಕೂರು: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಪೊಲೀಸ್​​ ಸಬ್ ಇನ್ಸ್​ಪೆಕ್ಟರ್​​ವೊಬ್ಬರು ನಗರದ ಖಾಸಗಿ ಲಾಡ್ಜ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ದಾವಣಗೆರೆ ನಗರದ ಬಡಾವಣೆ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನಾಗರಾಜಪ್ಪ ಆತ್ಮಹತ್ಯೆ ಮಾಡಿಕೊಂಡವರು. ಪಿಎಸ್​ಐ​​ ನಾಗರಾಜಪ್ಪ ಜುಲೈ 1ರಂದು ತುಮಕೂರು ನಗರದ ದ್ವಾರಕಾ ಲಾಡ್ಜ್​​ನ 4ನೇ ಮಹಡಿಯಲ್ಲಿ ರೂಮ್​ ಬಾಡಿಗೆ ಪಡೆದಿದ್ದರು. ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಇಂದು (ಭಾನುವಾರ) ಬೆಳಗ್ಗೆ ಬೆಳಕಿಗೆ ಬಂದಿದೆ. ಕೊಠಡಿಯಲ್ಲಿ ಬಾಂಡ್ ಪೇಪರ್​​ನಲ್ಲಿ ವಿಲ್ ಬರೆದಿಟ್ಟಿದ್ದಾರೆ. ಮೊಬೈಲ್ …

Read More »

ವಿಪತ್ತುಗಳ ನಡುವೆ ಸತ್ಯ ಎತ್ತಿಹಿಡಿಯುವಂತೆ ಪ್ರೇರೇಪಿಸುವ ಇಮಾಮ್ ಹುಸೇನ್ –

ಹೈದರಾಬಾದ್: ದೇಶಾದ್ಯಂತ ಮುಸ್ಲಿಮರು ಇಂದು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾದ, ಮೊಹರಂನ 10ನೇ ದಿನವಾದ ಅಶುರಾವನ್ನು ಆಚರಿಸಿದರು. ಅಶುರಾ ಎಂಬುದು ಅರೇಬಿಕ್ ಪದ ‘ಆಶ್ರಾ’ದಿಂದ ಬಂದಿದೆ. ಇದರರ್ಥ ಹತ್ತು. ಈ ದಿನ ಶಿಯಾ ಮತ್ತು ಸುನ್ನಿ ಎರಡೂ ಸಮುದಾಯಗಳಿಗೂ ಅತ್ಯಂತ ಮಹತ್ವದ್ದಾಗಿದೆ. ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಮತ್ತು ಇಸ್ಲಾಂ ಧರ್ಮದ ಕೇಂದ್ರ ವ್ಯಕ್ತಿಯಾಗಿದ್ದ ಇಮಾಮ್ ಹುಸೇನ್ ಅವರು ಕರ್ಬಲಾ ಯುದ್ಧದಲ್ಲಿ ಕೊಲ್ಲಲ್ಪಟ್ಟ ದಿನದ ಸ್ಮರಣಾರ್ಥವಾಗಿ ಅಶುರಾ ಆಚರಿಸಲಾಗುತ್ತದೆ. ಈ ಕುರಿತು …

Read More »