Breaking News

ರಾಜಕೀಯ

‘ಬಂದ ಪುಟ್ಟಾ.. ಹೋದ ಪುಟ್ಟಾ’ ಎಂಬಂತಾಗಿದೆ ಅರುಣ್​ ಸಿಂಗ್ ಬೆಂಗಳೂರು ಭೇಟಿ: HDK ಟ್ವೀಟ್

ಬೆಂಗಳೂರು: ಕರ್ನಾಟಕ ಬಿಜೆಪಿ ಉಸ್ತುವಾರಿ ನಾಯಕ ಅರುಣ್​ ಸಿಂಗ್ ಬೆಂಗಳೂರು ಭೇಟಿ ಬಗ್ಗೆ ಹೆಚ್​ ಡಿ ಕುಮಾರಸ್ವಾಮಿ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ. ಟ್ವಿಟರ್​ನಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ರಾಜ್ಯ ಬಿಜೆಪಿ ಸರ್ಕಾರದ ಭಿನ್ನಮತ ಶಮನಕ್ಕೆ ಬಂದಿದ್ದ ಹೈಕಮಾಂಡ್‌ನ ಬಡಪಾಯಿ ಪ್ರತಿನಿಧಿಯ ಕೆಲಸ ‘ಬಂದ ಪುಟ್ಟಾ.. ಹೋದ ಪುಟ್ಟಾ’ ಎಂಬಂತಾಗಿದೆ ಎಂದಿದ್ದಾರೆ. ಇವರು ಜಗಳ ಬಿಡಿಸಲು ಬಂದಿದ್ದಾ? ಜಗಳ ಹಚ್ಚಲು ಬಂದಿದ್ದಾ?ಪ್ರಧಾನಿ ಮೋದಿ ಪೌರುಷವೇನಿದ್ದರೂ ಪಾಕ್​ …

Read More »

ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ L& T ಕಂಪನಿಯ ಆಕ್ಸೀಜನ್ ಘಟಕ ಇಂದಿನಿಂದ ಸೇವೆಗೆ ಸಮರ್ಪಣೆ

ಬೆಳಗಾವಿ- ಇನ್ನು ಮುಂದೆ ಬೆಳಗಾವಿಯಲ್ಲಿ ಎಂದಿಗೂ ಆಕ್ಸೀಜನ್ ಸಮಸ್ಯೆ ಎದುರಾಗುವದಿಲ್ಲ,ಯಾಕಂದ್ರೆ ಶಾಸಕ ಅಭಯ ಪಾಟೀಲ ಅವರ ಪ್ರಯತ್ನಕ್ಕೆ ಫಲ ಸಿಕ್ಕಿದೆ.ಬೆಳಗಾವಿಯ ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿ L& T ಕಂಪನಿಯ ಆಕ್ಸೀಜನ್ ಘಟಕ ಇಂದಿನಿಂದ ಸೇವೆಗೆ ಸಮರ್ಪಣೆಯಾಗಿದೆ. ಬೆಳಗಾವಿಯಲ್ಲಿ ಆಮ್ಲಜನಕ ಕೊರತೆನ್ನು ಗಮನಿಸಿದ ಶಾಸಕ, ಅಭಯ ಪಾಟೀಲ ರವರು ಆಮ್ಲಜನಕ ತಯಾರಿಕಾ ಘಟವನ್ನು ಸ್ಥಾಪಿಸುವಂತೆ ಎಲ್&ಟಿ ಕಂಪನಿಯ ಅವರಿಗೆ ವೈಯಕ್ತಿಕವಾಗಿ ವಿನಂತಿಸಿದ್ದರು. ಅದಕ್ಕೆ ಸ್ಪಂದಿಸಿರುವ L&T ಕಂಪನಿ ನಿಗದಿತ ಅವಧಿಯಲ್ಲಿ ಆಮ್ಲಜನಕ. …

Read More »

ಕಳೆದ ಮೂರು ದಿನಗಳಿಂದ ಸತತವಾಗಿ ಮಳೆ- ಗೋಕಾಕ್ ಜಲಪಾತಕ್ಕೆ ಜೀವ ಕಳೆ

ಬೆಳಗಾವಿ: ಘಟ್ಟ ಪ್ರದೇಶ ಸೇರಿ ಜಿಲ್ಲೆಯ ಹಲವೆಡೆ ಕಳೆದ ಮೂರು ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ನದಿ, ಹಳ್ಳ, ಕೆರೆಗಳು ಮೈದು0ಬಿವೆ. ಮೂರು ದಿನಗಳ ಮಳೆಗೆ ಗೋಕಾಕ್ ಜಲಪಾತಕ್ಕೆ ಸಹ ಜೀವ ಕಳೆ ಬಂದಿದ್ದು, ಧುಮ್ಮಿಕ್ಕಿ ಹರಿಯುತ್ತಿದೆ. ಕರ್ನಾಟಕದ ನಯಾಗರ ಎಂದೇ ಕರೆಯಲಾಗುವ ಗೋಕಾಕ್ ಜಲಪಾತ ಈಗ ಧುಮ್ಮಿಕ್ಕುತ್ತಿದ್ದು, ಕಣ್ಮನ ಸೆಳೆಯುತಿದ್ದೆ. ಘಟಪ್ರಭಾ ನದಿಯ ಸೌಂದರ್ಯ ಗೋಕಾಕ್ ಜಲಪಾತದಲ್ಲಿ ಗರಿಬಿಚ್ಚಿದೆ. ಸುತ್ತಲೂ ಹಚ್ಚ ಹಸಿರು ನಡುವೆ ನೀರ ಧಾರೆಯ ಸೊಬಗು, …

Read More »

ಸಿಎಂ ಸ್ಥಾನದ ರೇಸ್ ನಲ್ಲಿ ನಮ್ಮ ಮೂರು ಹುಲಿಗಳಿವೆ ಎಂದ ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಸ್ವಾಮೀ

ದಾವಣಗೆರೆ: ಸಿಎಂ ಸ್ಥಾನದ ರೇಸ್ ನಲ್ಲಿ ನಮ್ಮ ಮೂರು ಹುಲಿಗಳಿವೆ ಎಂದು ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರನ್ನು ಭೇಟಿ ಮಾಡಿದ್ದ ಕೂಡಲಸಂಗಮ ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ದಾವಣಗೆರೆಯಲ್ಲಿ ಮಾತನಾಡಿ, ರಾಜ್ಯದಲ್ಲಿ ಒಂದು ವೇಳೆ ನಾಯಕತ್ವ ಬದಲಾವಣೆ ಮಾಡಿದರೆ ಉತ್ತರ ಕರ್ನಾಟಕದ ಲಿಂಗಾಯತ ನಾಯಕರಿಗೆ ಮಾನ್ಯತೆ ನೀಡಲು ಕೇಳಿದ್ದೇನೆ. ಉತ್ತರ ಕರ್ನಾಟಕದ ಅಭಿವೃದ್ಧಿಗೆ ಉತ್ತರ ಕರ್ನಾಟಕದವರೇ ಸಿಎಂ ಆದ್ರೆ ಸೂಕ್ತ ಎಂದು ತಿಳಿಸಿದರು. …

Read More »

ಕೊರೊನಾ ಮೂರನೇ ಅಪ್ಪಳಿಸುವುದು ಖಚಿತ ಎಂದು ಎಚ್ಚರಿಸಿರುವ ತಜ್ನರು, ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಮಾರ್ಗಸೂಚಿ ಬಿಡುಗಡೆ

ನವದೆಹಲಿ: ದೇಶದಲ್ಲಿ ಕೊರೊನಾ ಮೂರನೇ ಅಪ್ಪಳಿಸುವುದು ಖಚಿತ ಎಂದು ಎಚ್ಚರಿಸಿರುವ ತಜ್ನರು ಅಕ್ಟೋಬರ್ ಅಥವಾ ನವೆಂಬರ್ ವೇಳೆಗೆ ಮೂರನೇ ಅಲೆ ಆರಮ್ಭವಾಗಲಿದ್ದು, ಮಕ್ಕಳ ಮೇಲೆ ಹೆಚ್ಚು ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮಕ್ಕಳಿಗಾಗಿಯೇ ಪ್ರತ್ಯೇಕವಾಗಿ ಮಾರ್ಗಸೂಚಿ ಬಿಡುಗಡೆ ಮಾಡಿದೆ. * 5 ವರ್ಷದೊಳಗಿನ ಮಕ್ಕಳಿಗೆ ಕೊರೊನಾ ಪರಿಣಾಮಗಳು ಕಡಿಮೆ. ಆದರೆ 6-11 ವರ್ಷದ ಮಕ್ಕಳು ಮಾಸ್ಕ್ ಧರಿಸುವುದು ಉತ್ತಮ * 12 ವರ್ಷ ಮೇಲ್ಪಟ್ಟ …

Read More »

ಲಾಕ್‍ಡೌನ್ ನಿಯಮ ಉಲ್ಲಂಘನೆ: ಸಿಎಂ ಪುತ್ರ ವಿಜಯೇಂದ್ರ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಆದೇಶ

ಬೆಂಗಳೂರು, ಜೂ.18: ಲಾಕ್‍ಡೌನ್ ನಿಯಮಗಳನ್ನು ಉಲ್ಲಂಘಿಸಿ ಮೈಸೂರು ಜಿಲ್ಲೆಯ ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದು ಖಚಿತವಾದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರಕಾರಕ್ಕೆ ಆದೇಶಿಸಿದೆ. ಕೋವಿಡ್ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಕೋರಿ ಸಲ್ಲಿಸಿರುವ ಪಿಐಎಲ್ ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ, ಸಾರ್ವಜನಿಕರಿಗೆ ದೇವಾಲಯಕ್ಕೆ ಪ್ರವೇಶವಿಲ್ಲ ಎಂದರೆ ಯಾರಿಗೂ …

Read More »

ಕೋವಿಡ್ 3ನೇ ಅಲೆ ಅಪಾಯ: ಲಾಕ್ ಡೌನ್ ಸಡಿಲಿಕೆ ಮುನ್ನ ಎಚ್ಚರವಹಿಸಿ: ರಾಜ್ಯಗಳಿಗೆ ಕೇಂದ್ರ

ನವದೆಹಲಿ: ಕೋವಿಡ್ 19 ಸೋಂಕು ಹಾಗೂ ಸಕ್ರಿಯ ಪ್ರಕರಣಗಳ ಇಳಿಕೆಯ ಆಧಾರದ ಮೇಲೆ ಕೋವಿಡ್ ಲಾಕ್ ಡೌನ್ ನಿರ್ಬಂಧಗಳನ್ನು ಐದು ಹಂತಗಳಲ್ಲಿ ಸಡಿಲಿಕೆ ಮಾಡಬೇಕು ಎಂದು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಶನಿವಾರ(ಜೂನ್ 19) ಸಲಹೆ ನೀಡಿದೆ.   ರಾಜ್ಯ ಸರ್ಕಾರಗಳು ಕೋವಿಡ್ ಲಾಕ್ ಡೌನ್ ನಿರ್ಬಂಧ ಸಡಿಲಿಕೆ ಮಾಡುವ ಜತೆಗೆ ಕೋವಿಡ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಪರೀಕ್ಷೆ, ಸಂಪರ್ಕಿತರ ಪತ್ತೆ, ಚಿಕಿತ್ಸೆ, ಲಸಿಕೆ …

Read More »

ರಾಹುಲ್​ ಗಾಂಧಿ ಜನ್ಮದಿನಕ್ಕೆ ಒಂದೇ ವಾಕ್ಯದಲ್ಲಿ ರಮ್ಯಾ ವಿಶ್​; ಆ ಮಾತು ನೀವು ಒಪ್ಪುತ್ತೀರಾ?

ನಟಿ ರಮ್ಯಾ ಈಗ ಸ್ಯಾಂಡಲ್​ವುಡ್​ನಲ್ಲೂ ಇಲ್ಲ, ರಾಜಕೀಯದಲ್ಲೂ ಇಲ್ಲ. ಹಾಗಿದ್ದರೂ ಕೂಡ ಅವರು ಅಭಿಮಾನಿಗಳ ಜೊತೆ ಸಂಪರ್ಕದಲ್ಲಿ ಇದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಸದಾ ಕಾಲ ಆಯಕ್ಟೀವ್​ ಆಗಿರುತ್ತಾರೆ. ರಾಜಕೀಯ ಮತ್ತು ಸಿನಿಮಾ ಕ್ಷೇತ್ರದಲ್ಲಿನ ತಮ್ಮ ಆತ್ಮೀಯರ ಹುಟ್ಟುಹಬ್ಬಕ್ಕೆ ವಿಶ್​ ಮಾಡುತ್ತಾರೆ. ಇಂದು (ಜೂ.19) ರಾಹುಲ್​ ಗಾಂಧಿ ಜನ್ಮದಿನಕ್ಕೆ ರಮ್ಯಾ ಶುಭ ಕೋರಿದ್ದಾರೆ. ಅದು ಅನೇಕರ ಗಮನ ಸೆಳೆಯುತ್ತಿದೆ. ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ರಾಹುಲ್​ ಗಾಂಧಿಗೆ ರಮ್ಯಾ ವಿಶ್​ ಮಾಡಿದ್ದಾರೆ. …

Read More »

ನೀವು ಸದಾ ಜೀವಂತವಾಗಿರುತ್ತೀರಿ’; ಮಿಲ್ಖಾ ಸಿಂಗ್​ ನಿಧನಕ್ಕೆ ಫರ್ಹಾನ್​ ಅಖ್ತರ್​ ಸಂತಾಪ

ಕೊರೊನಾ ವೈರಸ್​ ಸೋಂಕಿನಿಂದ ಬಳಲುತ್ತಿದ್ದ ಫ್ಲೈಯಿಂಗ್ ಸಿಖ್ ಎಂದೇ ಖ್ಯಾತರಾಗಿದ್ದ ಅಥ್ಲೀಟ್ ಮಿಲ್ಖಾ ಸಿಂಗ್ ಅವರು ಶುಕ್ರವಾರ (ಜೂ.18) ಮಧ್ಯರಾತ್ರಿ ನಿಧನರಾದರು. ಅವರ ಅಗಲಿಕೆಗೆ ಲಕ್ಷಾಂತರ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಮಿಲ್ಖಾ ಸಿಂಗ್​ ಜೀವನವನ್ನು ಆಧರಿಸಿ ‘ಭಾಗ್​ ಮಿಲ್ಖಾ ಭಾಗ್​’ ಸಿನಿಮಾ ತಯಾರಾಗಿತ್ತು. 2013ರಲ್ಲಿ ಬಂದ ಆ ಸಿನಿಮಾದಲ್ಲಿ ಮಿಲ್ಖಾ ಸಿಂಗ್​ ಪಾತ್ರವನ್ನು ಫರ್ಹಾನ್​ ಅಖ್ತರ್​ ಮಾಡಿದ್ದರು. ಆ ಚಿತ್ರಕ್ಕೆ ರಾಕೇಶ್​ ಓಂಪ್ರಕಾಶ್​ ಮೆಹ್ರಾ ನಿರ್ದೇಶನ ಮಾಡಿದ್ದರು. ಬಾಕ್ಸ್​ ಆಫೀಸ್​ನಲ್ಲಿ …

Read More »

2ನೇ ಹಂತದ ಲಾಕ್​ಡೌನ್ ಸಡಿಲಿಕೆ ವಿಚಾರವಾಗಿ ಇಂದು ಸಿಎಂ ಸಭೆ

ಬೆಂಗಳೂರು: ಕಟ್ಟುನಿಟ್ಟಿನ ಕ್ರಮಗಳ ಜಾರಿಯಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ. ಪಾಸಿಟಿವಿಟಿ ರೇಟ್ ಮತ್ತು ಡೆತ್​​ ರೇಟ್​ ಎರಡೂ ಕೂಡ ಇಳಿಕೆ ಕಂಡಿದೆ. ಇದೇ ಕಾರಣಕ್ಕೆ ಈಗಾಗಲೇ ಹಲವು ಲಾಕ್​ಡೌನ್ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಸಡಿಲಗೊಳಿಸಿದ್ದು, ಸೋಮವಾರದಿಂದ ಜನರಿಗೆ ಮತ್ತಷ್ಟು ರಿಲೀಫ್ ನೀಡೋಕೆ ಮುಂದಾಗಿದೆ. ಅನ್ಲಾಕ್- 2 ರ ವಿಚಾರವಾಗಿ ಇಂದು ಸಂಜೆ ಸಿಎಂ ಬಿಎಸ್​ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಯಾವ ಸೇವೆಗಳಿಗೆಲ್ಲ ವಿನಾಯತಿ ನೀಡಬಹುದೆಂಬ ಬಗ್ಗೆ …

Read More »