Breaking News

ರಾಜಕೀಯ

ಎಟಿಎಂ ಬಳಸುವಾಗ ಎಚ್ಚರ! ವಿಶೇಷ ಸಾಧನ ಅಳವಡಿಸಿ ಹಣ ಲಾಕ್ ಮಾಡುತ್ತಿದ್ದ ಕಳ್ಳ ಸೆರೆ

ಚಿಕ್ಕಬಳ್ಳಾಪುರ: ನಗರದಲ್ಲಿ ಎಟಿಎಂ ಯಂತ್ರಕ್ಕೆ ವಿಶೇಷ ಸಾಧನ ಅಳವಡಿಸಿ, ಗ್ರಾಹಕರು ಡ್ರಾ ಮಾಡಿದ ಹಣವನ್ನು ದೋಚುತ್ತಿದ್ದ ಚಾಲಾಕಿ ಕಳ್ಳನನ್ನು ಚಿಕ್ಕಬಳ್ಳಾಪುರ ನಗರ ಪೊಲೀಸರು ಬಂಧಿಸಿದ್ದಾರೆ. ನಿಯಾಜುದ್ದೀನ್ (20) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಬಿ.ಬಿ.ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ಎಟಿಎಂನಲ್ಲಿ ಏಪ್ರಿಲ್ 11ರ ರಾತ್ರಿ ಸಿನಿಮೀಯ ರೀತಿಯ ಕಳ್ಳತನ ನಡೆದಿತ್ತು. ಕಳ್ಳರು ಎಟಿಎಂನಿಂದ ಹಣ ಹೊರಬರುವ ಜಾಗಕ್ಕೆ ಒಂದು ಸಾಧನವನ್ನು ಅಳವಡಿಸಿದ್ದರು. ಗ್ರಾಹಕರು ಹಣ ಡ್ರಾ ಮಾಡಿದಾಗ ನೋಟುಗಳು ಹೊರಬರುವ …

Read More »

ಅವಿರೋಧ ಆಯ್ಕೆಗೆ ಪ್ರಾಮಾಣಿಕ ಪ್ರಯತ್ನಬ್ಯಾಂಕಿನ ಅಭಿವೃದ್ಧಿ ಜತೆಗೆ ರೈತರ ಏಳ್ಗೆಯೇ ನಮಗೆ ಮುಖ್ಯ. ಯಾವುದೇ ಸ್ವಾರ್ಥವಿಲ್ಲ- ಶಾಸಕ ಬಾಲಚಂದ್ರ ಜಾರಕಿಹೊಳಿ

ಅವಿರೋಧ ಆಯ್ಕೆಗೆ ಪ್ರಾಮಾಣಿಕ ಪ್ರಯತ್ನಬ್ಯಾಂಕಿನ ಅಭಿವೃದ್ಧಿ ಜತೆಗೆ ರೈತರ ಏಳ್ಗೆಯೇ ನಮಗೆ ಮುಖ್ಯ. ಯಾವುದೇ ಸ್ವಾರ್ಥವಿಲ್ಲ- ಶಾಸಕ ಬಾಲಚಂದ್ರ ಜಾರಕಿಹೊಳಿ ಬೈಲಹೊಂಗಲ ಪ್ರಚಾರ ಕಾರ್ಯದಲ್ಲಿ ಭಾಗಿಯಾದ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಬೈಲಹೊಂಗಲ್: ಅಕ್ಟೋಬರ್ ೧೯ ರಂದು ನಡೆಯುವ ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಜಿಲ್ಲೆಯ ಎಲ್ಲ ನಾಯಕರ ಸಹಕಾರದೊಂದಿಗೆ ಅವಿರೋಧವಾಗಿ ಆಯ್ಕೆ ಮಾಡುವ ಉದ್ದೇಶ ಇದೇಯಾದರೂ ಕೆಲವು ಕಡೆಗಳಲ್ಲಿ ಒಮ್ಮತದ ಆಯ್ಕೆ ಮೂಡುತ್ತಿಲ್ಲ. ಆದರೂ ಅವಿರೋಧ …

Read More »

ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್​​ ಭೇಟಿ ಕೊಟ್ಟು ರೋಗಿಗಳು, ವೈದ್ಯರಿಂದ ಮಾಹಿತಿ ಪಡೆದ ಸಿಎಂ

ಬೆಂಗಳೂರು: ರಾಯಚೂರಿಗೆ ಹೋಗಬೇಕಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಇಂದು ದಿಢೀರನೇ ವಿಕ್ಟೋರಿಯಾ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಹವಾಮಾನ ವೈಪರೀತ್ಯದಿಂದಾಗಿ ರಾಯಚೂರು- ಕೊಪ್ಪಳ ಜಿಲ್ಲೆಗಳಲ್ಲಿ ಕೈಗೊಳ್ಳಬೇಕಾಗಿದ್ದ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ ಸಿಎಂ ಸಿದ್ದರಾಮಯ್ಯ ಅವರು, ಬುಧವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಅವರ ಜೊತೆ ವಿಕ್ಟೋರಿಯಾ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಒಂದೂವರೆ ಗಂಟೆಗಳ ಕಾಲ ಆಸ್ಪತ್ರೆಯ ವ್ಯವಸ್ಥೆಯನ್ನು ಪರಿಶೀಲಿಸಿದರು. ರೋಗಿಗಳ ಜತೆಯೂ …

Read More »

ಸೂಪರ್ ಹೀರೋ ತೇಜ್ ಸಜ್ಜಾ ನಟನೆಯ ಮಿರಾಯ್ ಸಿನಿಮಾದ ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್

ಸೂಪರ್ ಹೀರೋ ತೇಜ್ ಸಜ್ಜಾ ನಟನೆಯ ಮಿರಾಯ್ ಸಿನಿಮಾದ ಮೊದಲ ಹಾಡಿಗೆ ಭರ್ಜರಿ ರೆಸ್ಪಾನ್ಸ್ ‘ಹನುಮಾನ್’ ಖ್ಯಾತಿಯ ನಟ ತೇಜ್ ಸಜ್ಜಾ ನಟನೆಯ ‘ಮಿರಾಯ್’ ಚಿತ್ರ ಮೂಲಕ ಬರಲು ಸಜ್ಜಾಗಿದ್ದಾರೆ. ‘ಹನುಮಾನ್’ ಚಿತ್ರ ಆದ್ಮೇಲೆ ಮಾಡಿರೋ ಮತ್ತೊಂದು ಸೂಪರ್ ಹೀರೋ ಚಿತ್ರವೇ ಇದಾಗಿದೆ. ಬಹುಭಾಷೆಯಲ್ಲಿಯೇ ಬರುತ್ತಿರುವ ಈ ಸಿನಿಮಾದ ಮೊದಲ ಹಾಡು ಬಿಡುಗಡೆಯಾಗಿದ್ದು, ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದೆ. ವೈಬ್ ಐತೆ ಬೇಬಿ ಎಂದು ನಾಯಕ ತೇಜ್ ಸಜ್ಜಾ ಮತ್ತು ರಿತಿಕಾ …

Read More »

ಧರ್ಮಸ್ಥಳ ಅರಣ್ಯದಲ್ಲಿ ಸಮಾಧಿ: ತನಿಖೆ ಬಳಿಕ ಕ್ರಮ- ಈಶ್ವರ ಖಂಡ್ರೆ

ಬೀದರ್ : ಧರ್ಮಸ್ಥಳ ಸುತ್ತಮುತ್ತ ಮೀಸಲು ಅರಣ್ಯದೊಳಗೆ ಸಮಾಧಿ ಅಗೆಯುತ್ತಿರುವ ಎಸ್.ಐ.ಟಿ.ಗೆ ಕೆಲವೆಡೆ ಮಾನವರ ಅಸ್ಥಿ ಸಿಕ್ಕಿದ್ದು, ತನಿಖೆ ಮುಗಿದ ಬಳಿಕ ಅಕ್ರಮವಾಗಿ ಶವ ಹೂತಿರುವುದು ಸಾಬೀತಾದರೆ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಹೇಳಿದ್ದಾರೆ. ಬೀದರ್ ನಲ್ಲಿಂದು ಕರ್ನಾಟಕ ಮಾಧ್ಯಮ ಅಕಾಡಮಿ ಆಯೋಜಿಸಿದ್ದ ಕಾರ್ಯಕ್ರಮದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅರಣ್ಯದಲ್ಲಿ ಅಕ್ರಮವಾಗಿ ಶವ ಹೂತಿರುವುದು ದೃಢಪಟ್ಟರೆ, …

Read More »

ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ್ ಚುನಾವಣೆಯನ್ನು ಈ ವರ್ಷಾಂತ್ಯದಲ್ಲಿ ‌ಮಾಡುತ್ತೇವೆ. ಮೀಸಲಾತಿ ಪ್ರಕ್ರಿಯೇ ನಡೆಯುತ್ತಿದೆ

ಜಿಲ್ಲಾ ಪಂಚಾಯತ ತಾಲೂಕು ಪಂಚಾಯತ್ ಚುನಾವಣೆಯನ್ನು ಈ ವರ್ಷಾಂತ್ಯದಲ್ಲಿ ‌ಮಾಡುತ್ತೇವೆ. ಮೀಸಲಾತಿ ಪ್ರಕ್ರಿಯೇ ನಡೆಯುತ್ತಿದೆ ಎರಡ್ಮೂರು ತಿಂಗಳಲ್ಲಿ ನೋಟಿಫಿಕೇಶನ್ ಆಗುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಗರದ‌ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ‌ಅವರು, ಮೀಸಲಾತಿಯನ್ನು ‌ಮಾಡುತ್ತೇವೆ ಎಂದು ಹೈಕೋರ್ಟ್ ಮುಂದೆ ಒಪ್ಪಿದ್ದೇವೆ. ಅದರ ಆಂತರಿಕ ‌ಕೆಲಸ ನಡೆಯುತ್ತಿದೆ. ಈ ವರ್ಷದಲ್ಲಿಯೆ ನಾವು ಜಿಲ್ಲಾ ಪಂಚಾಯತ ಮತ್ತು ತಾಲೂಕು ಪಂಚಾಯತ್ ಚುನಾವಣೆಯನ್ನು ಮಾಡುತ್ತೇವೆ ಎಂದರು. ಸವದತ್ತಿ ಶಾಲೆಯ ನೀರಿನ …

Read More »

ಹೊಬ್ಬರ ಕೊರತೆಯ ಹಿನ್ನಲೆ, ನ್ಯಾನೋ ಯೂರಿಯಾ ಮೊರೆ ಹೋದ ರೈತ….ಮುಗದ ಗ್ರಾಮದ ಮಲ್ಲಪ್ಪ ತನ್ನ ಕಬ್ಬು ಬೆಳೆಗೆ ನ್ಯಾನೋ ಯೂರಿಯಾ ಸಿಂಪಡಣೆ.

ಹೊಬ್ಬರ ಕೊರತೆಯ ಹಿನ್ನಲೆ, ನ್ಯಾನೋ ಯೂರಿಯಾ ಮೊರೆ ಹೋದ ರೈತ….ಮುಗದ ಗ್ರಾಮದ ಮಲ್ಲಪ್ಪ ತನ್ನ ಕಬ್ಬು ಬೆಳೆಗೆ ನ್ಯಾನೋ ಯೂರಿಯಾ ಸಿಂಪಡಣೆ. – ರಾಜ್ಯದಲ್ಲಿ ಅನ್ನದಾತರಿಗೆ ಯೂರಿಯಾ ಗೊಬ್ಬರ ಕೊರತೆಯ ಉದ್ಭವುಸಿದ್ದು ರೈತರು ಪರದಾಡುತ್ತಿದ್ದಾರೆ. ಆದರೆ ಇಲ್ಲೊಬ್ಬರು ರೈತರು ನ್ಯಾನೋ ಯೂರಿಯಾ ಗೊಬ್ಬರ ಬಳಸಿ ಉತ್ತಮ ಬೆಳೆ ನಿರೀಕ್ಷೆಯಲ್ಲಿದ್ದಾರೆ.  ಹೌದು ಧಾರವಾಡ ತಾಲೂಕಿನ ಮುಗದ ಗ್ರಾಮದ ಮಲ್ಲಪ್ಪ ಸಿರಿಮಣ್ಣವರ ಇವರ ಹೊಲದಲ್ಲಿ ಯೂರಿಯಾ ಗೊಬ್ಬರ ಬದಲು, ನ್ಯಾನೋ ಯೂರಿಯಾ ಗೊಬ್ಬರವನ್ನು …

Read More »

ಧಾರವಾಡ: ಬಾಲಗರ್ಭಿಣಿ ಪ್ರಕರಣಗಳು ಹೆಚ್ಚಳ

ಧಾರವಾಡ: ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಬಾಲಕಿಯರು ಆಕರ್ಷಣೆಗೊಳಗಾಗಿ ಪ್ರೇಮ ಪ್ರಕರಣಗಳಲ್ಲಿ ಸಿಲುಕಿ ಗರ್ಭ ಧರಿಸುತ್ತಿರುವ ಪ್ರಕರಣಗಳು ಕೇಳಿ ಬರುತ್ತಿವೆ. ಇಂಥ ಅನೇಕ ಪ್ರಕರಣಗಳು ವರದಿಯಾಗುತ್ತಿವೆ. ಧಾರವಾಡದಲ್ಲಿ ಬಾಲಗರ್ಭಿಣಿಯರ ಪ್ರಕರಣಗಳು ಹೆಚ್ಚುತ್ತಿದ್ದು, ಇದರಲ್ಲಿ ಪ್ರೇಮ ಪ್ರಕರಣಗಳೇ ಅಧಿಕ. ಆರ್‌ಸಿಎಚ್ ದತ್ತಾಂಶದ ಪ್ರಕಾರ 2023-24ರಲ್ಲಿ 111 ಹಾಗೂ 2024-25ರಲ್ಲಿ 31 ಪ್ರಕರಣಗಳು ದಾಖಲಾಗಿವೆ. ಈ ಅಂಕಿ-ಅಂಶಗಳಿಂದ ಪಾಲಕರಲ್ಲಿ ಆತಂಕ ಹೆಚ್ಚಾಗಿದೆ. ಈ ಕುರಿತು ಮಾಹಿತಿ ನೀಡಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ದೀಪಾ ಜಾವೂರು, “ಸಾಕಷ್ಟು …

Read More »

ನಟಿ ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ ಪ್ರಕರಣದಲ್ಲಿ ಐದನೇ ಆರೋಪಿಯನ್ನು ಕೊಪ್ಪಳದಲ್ಲಿ ಬಂಧಿಸಲಾಗಿದೆ.

ಗಂಗಾವತಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್​ ಜಾಮೀನು ಅರ್ಜಿ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶರ ಹೇಳಿಕೆಯನ್ನು ಉಲ್ಲೇಖಿಸಿ ನಟಿ ರಮ್ಯಾ ಮಾಡಿದ್ದ ಪೋಸ್ಟ್​​ಗೆ ಅಶ್ಲೀಲವಾಗಿ ಕಮೆಂಟ್​ ಮಾಡಿದ್ದ ಮತ್ತೋರ್ವ ಆರೋಪಿಯನ್ನು ಪೊಲೀಸರು ಕೊಪ್ಪಳದಲ್ಲಿ ಬಂಧಿಸಿದ್ದಾರೆ. ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದ ಮಂಜುನಾಥ್​​ ಎಂಬಾತನನ್ನು ಬೆಂಗಳೂರಿನ ಸೈಬರ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಐದನೇ ಆರೋಪಿ ಬಂಧನವಾಗಿದೆ. 40 ಕ್ಕೂ ಹೆಚ್ಚು ಜನರ ಮೇಲೆ ದೂರು ದಾಖಲಾಗಿದ್ದು, ಪತ್ತೆಗಾಗಿ …

Read More »

ಮನೆಯ ಶೌಚಾಲಯದಲ್ಲಿ ಪ್ರತ್ಯಕ್ಷವಾದ ಚಿರತೆ

ಹಾವೇರಿ: ಜಿಲ್ಲೆಯ ರಾಣೆಬೆನ್ನೂರಿನ ನಾಡಿಗೇರ್ ಓಣಿಯ ಮನೆಯ ಶೌಚಾಲಯದೊಳಗೆ ಪ್ರತ್ಯಕ್ಷವಾಗಿದ್ದ ಚಿರತೆಯನ್ನು ಕೊನೆಗು ಸೆರೆಹಿಡಿಯಲಾಯಿತು. ಪಿ.ಟಿ.ಕಾಕಿ ಎಂಬವರ ಮನೆಯ ಶೌಚಾಲಯದಲ್ಲಿ ಚಿರತೆ ಅವಿತು ಕುಳಿತಿತ್ತು. ಡ್ರೋನ್​ ಕ್ಯಾಮೆರಾ ಮತ್ತು ಬಲೆ, ಅರವಳಿಕೆ ನೀಡಿ ಸೆರೆ ಹಿಡಿಯಲಾಗಿದೆ. ನಿರಂತರ ಎಂಟು ಗಂಟೆಗಳ ಕಾರ್ಯಾಚರಣೆ ಬಳಿಕ ಚಿರತೆಯನ್ನು ಸೆರೆಹಿಡಿಯಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಇತರರು ಅರಿವಳಿಕೆ ಚುಚ್ಚು ಮದ್ದು ನೀಡಿ ಚಿರತೆಯನ್ನು ಬೋನಿನಲ್ಲಿ ಹಾಕಿಕೊಂಡು ಸ್ಥಳದಿಂದ ರವಾನಿಸಿದ್ದಾರೆ. ಕಾರ್ಯಾಚರಣೆ ಬಗ್ಗೆ ಮಾತನಾಡಿದ ಅರಿವಳಿಕೆ …

Read More »