Breaking News

ರಾಜಕೀಯ

ಕಂದಾಯ ಭವನದ ಮೇಲೆ ಉಪಲೋಕಾಯುಕ್ತರ ದಿಢೀರ್ ದಾಳಿ

ಬೆಂಗಳೂರು: ಸಾರ್ವಜನಿಕರ ದೂರು ಹಿನ್ನೆಲೆಯಲ್ಲಿ ಕಂದಾಯ ಭವನದ ಮೇಲೆ ಉಪಲೋಕಾಯುಕ್ತರು ದಿಢೀರ್ ದಾಳಿ ನಡೆಸಿರುವ ಘಟನೆ ನಡೆದಿದೆ. ಉಪಲೋಕಾಯುಕ್ತ ನ್ಯಾ.ಫಣೀಂದ್ರ ನೇತೃತ್ವದಲ್ಲಿ ಅಧಿಕಾರಿಗಳು ಕಂದಾಯ ಭವನದ ಮೇಲೆ ಏಕಾಏಕಿ ದಾಳಿ ನಡೆಸಿದ್ದಾರೆ. ಸಾರ್ವಜನಿಕರಿಂದ ವ್ಯಾಪಕವಾಗಿ ದೂರು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆಸಲಾಗಿದೆ. ಕಂದಾಯ ಭವನದ ವಿರುದ್ಧ ಹಲವಾರು ದೂರುಗಳು ಬಂದಿದ್ದವು. ಈ ನಿಟ್ಟಿನಲ್ಲಿ ದಾಳಿ ನಡೆಸಿ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ

Read More »

ರೈತರೇ ಗಮನಿಸಿ : ಜಾನುವಾರುಗಳಿಗೆ ಚರ್ಮಗಂಟು ರೋಗ ಉಲ್ಬಣ : ಪಶುಪಾಲನಾ ಇಲಾಖೆ ಎಚ್ಚರಿಕೆ

ಬೆಳಗಾವಿ : ಜಾನುವಾರುಗಳಲ್ಲಿ ಚರ್ಮಗಂಟು ರೋಗ (ಲಂಪಿ ಸ್ಕನ್ ಡಿಸೀಜ್)ಸಾಂಕ್ರಾಮಿಕ ಕಾಯಿಲೆ ಕಂಡು ಬಂದಿದ್ದು, ಇದು ಕ್ಯಾಪ್ರಿಸಾಕ್ಸ್ ಎಂಬ ವೈರಾಣುವಿನಿಂದ ಬರುತ್ತದೆ. ದನ, ಎಮ್ಮೆಗಳಲ್ಲಿ ಅದರಲ್ಲೂ ಮಿಶ್ರತಳಿ ರಾಸುಗಳಲ್ಲಿ, ಕರುಗಳಲ್ಲಿ ಅತಿ ಹೆಚ್ಚಾಗಿ ಹಾಗೂ ತೀಕ್ಷಣವಾಗಿ ಕಾಣಿಸಿಕೊಳ್ಳುತ್ತದೆ. ಈ ರೋಗವು ಮುಖ್ಯವಾಗಿ ದನಗಳಿಗೆ ಕಚ್ಚುವ ಕೀಟಗಳಿಂದ(ಸೊಳ್ಳೆ,ನೊಣ,ಉಣ್ಣೆ ಇತ್ತಯಾದಿ) ಬಹುಬೇಗ ಹರಡುತ್ತದೆ. ಮಳೆಗಾಲದಲ್ಲಿ ಮತ್ತು ನಂತರದ ದಿನಗಳಲ್ಲಿ ಹೆಚ್ಚಾಗಿ ಈ ರೋಗವು ಪಸರಿಸುತ್ತದೆ. ಚರ್ಮಗಂಟು ರೋಗದ ಲಕ್ಷಣಗಳು: ಅತಿಯಾದ ಜ್ವರ (೧೦೫-೧೮೦ಈ)ಕಣ್ಣುಗಳಿಂದ …

Read More »

ಮುರುಘಾಶ್ರೀಗಳಿಗೆ ಮತ್ತೊಂದು ಶಾಕ್ : ಸೆ.29 ಕ್ಕೆ ಮಠದ ಪೀಠತ್ಯಾಗ ಚರ್ಚೆಗೆ ಮಹತ್ವದ ಸಭೆ

ಚಿತ್ರದುರ್ಗ : ಪೋಕ್ಸೋ ಪ್ರಕರಣದಲ್ಲಿ ಜೈಲು ಪಾಲಾಗಿರುವ ಮುರುಘಾ ಮಠದ ಡಾ. ಶಿವಮೂರ್ತಿ ಮುರುಘಾಶ್ರೀಳಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಸೆ. 29 ರಂದು ಮುರುಘಾ ಶರಣರ ಪೀಠತ್ಯಾಗದ ಚರ್ಚೆಗೆ ವೀರಶೈವ ಸಮಾಜದ ಮುಖಂಡರು ಸಭೆ ಕರೆಯಲಾಗಿದೆ.     ಮುರುಘಾ ಶ್ರೀಗಳು ಪೀಠತ್ಯಾಗ ಮಾಡದೇ ಇರುವುದರಿಂದ ಶ್ರೀಮಠದ ದೈನಂದಿನ ಧಾರ್ಮಿಕ ಮತ್ತು ಆಡಳಿತಾತ್ಮಕ ಚಟುವಟಿಕೆಗಳ ನಿರ್ವಹಣೆ ಸವಾಲು ಎದುರಾಗಿದ್ದು, ಈ ಕುರಿತು ಚರ್ಚಿಸಲು ಸೆ.29 ರಂದು ವೀರಶೈವ ಸಮಾಜದ ಮುಖಂಡರ …

Read More »

ಕದ್ದ ಕಾರನ್ನೇ ಮನೆ ಮಾಡಿಕೊಂಡಿದ್ದ ದಂಪತಿ!

ಬೆಂಗಳೂರು: ಬಾಡಿಗೆಗೆ ಕಾರು ಬುಕ್‌ ಮಾಡಿ ಚಾಲಕನಿಗೆ ಕಂಠಮಟ್ಟ ಮದ್ಯಪಾನ ಮಾಡಿಸಿ ಕಾರಿನೊಂದಿಗೆ ಪರಾರಿಯಾಗಿದ್ದ ದಂಪತಿಯನ್ನು ಯಲಹಂಕ ಉಪನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಯಲಹಂಕ ನಿವಾಸಿ ಮಂಜುನಾಥ್‌ (27), ಆತನ ಪತ್ನಿ ವೇದಾವತಿ (25) ಬಂಧಿತರು. ಬಂಧಿತರಿಂದ ಇಟಿಯೋಸ್‌ ಕಾರು, 2 ಮೊಬೈಲ್‌ಗ‌ಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿ ದಂಪತಿ ಕದ್ದ ಕಾರನ್ನೇ ಮನೆಯನ್ನಾಗಿ ಮಾಡಿಕೊಂಡಿದ್ದರು. ಇವರು ಇತ್ತೀಚೆಗೆ ಬಾಡಿಗೆ ಮನೆಯಲ್ಲಿ ತೊರೆದಿದ್ದರು. ಉಳಿದುಕೊಳ್ಳಲು ಮನೆ ಇರಲಿಲ್ಲ. ಹೀಗಾಗಿ ಕದ್ದ ಕಾರಿನಲ್ಲಿ ನಗರಾದ್ಯಂತ ಸುತ್ತಾಡುತಾ. …

Read More »

ಯುವ ದಸರಾದಲ್ಲಿ ಅಪ್ಪು ನಮನ.. ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ರಾಜರತ್ನನ ಪತ್ನಿ ಅಶ್ವಿನಿ

ಮೈಸೂರು: ಮೈಸೂರು ದಸರಾ 2022 ಹಿನ್ನೆಲೆ ನಾಳೆಯಿಂದ ನಡೆಯಲಿರುವ ಯುವ ದಸರಾ ಅಂಗವಾಗಿ ನಾಳೆ ಅಪ್ಪು ನಮನ ಕಾರ್ಯಕ್ರಮ ಅನ್ನು ದಿವಂಗತ ಪುನೀತ್ ರಾಜ್​ಕುಮಾರ ಅವರ ಪತ್ನಿ ಅಶ್ವಿನಿ ಪುನೀತ್ ರಾಜ್​​​ಕುಮಾರ್ ಅವರು ಉದ್ಘಾಟನೆ ಮಾಡಲಿದ್ದಾರೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ತಿಳಿಸಿದರು. ಇಂದು ಯುವ ದಸರಾ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಸಚಿವರು, ಸೆ.28ಕ್ಕೆ (ನಾಳೆ) “ಅಪ್ಪು ನಮನ” ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಸರಾಗೆ ಸಾಕಷ್ಟು …

Read More »

ಬಿಜೆಪಿಗೆ 2024ರವರೆಗೂ ಜೆ.ಪಿ.ನಡ್ಡಾ ಅಧ್ಯಕ್ಷ?

ನವದೆಹಲಿ: 2020ರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಿರುವ ಜೆ.ಪಿ.ನಡ್ಡಾ ಅವರು ಇನ್ನೂ 2 ವರ್ಷಗಳ ಕಾಲ ಅದೇ ಹುದ್ದೆಯಲ್ಲಿ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ. ನಿಗದಿಯಂತೆ 2023ರ ಜ.20ರಂದು ನಡ್ಡಾ ಅವರ 3 ವರ್ಷಗಳ ಅಧಿಕಾರಾವಧಿ ಪೂರ್ಣಗೊಳ್ಳಲಿದೆ. ಆದರೆ, ಮುಂದಿನ ಲೋಕಸಭೆ ಚುನಾವಣೆಗೆ ಇನ್ನು ಎರಡೇ ವರ್ಷಗಳು ಬಾಕಿ ಇವೆ. ಅಲ್ಲದೇ, ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಗಳೂ ನಡೆಯಲಿವೆ. ಹೀಗಾಗಿ, ನಡ್ಡಾ ಅವರ ಅಧಿಕಾರಾವಧಿಯನ್ನು 2024ರ ಲೋಕಸಭೆ ಚುನಾವಣೆಯವರೆಗೆ ವಿಸ್ತರಿಸಲು ಬಿಜೆಪಿ …

Read More »

ವಿಜಯಪುರ ಪಿಎಫ್‌ಐ ಜಿಲ್ಲಾಧ್ಯಕ್ಷ ಅಶ್ಫಾಕ್ ಪೊಲೀಶ ವಶಕ್ಕೆ

ವಿಜಯಪುರ: ವಿಜಯಪುರ ಪಿಎಫ್‌ಐ ಸಂಘಟನೆ ಜಿಲ್ಲಾಧ್ಯಕ್ಷ ಅಶ್ಫಾಕ್ ಜಮಖಂಡಿ ಎಂಬವನನ್ನು ಪೊಲೀಸರು ಮಂಗಳವಾರ ಬೆಳಂಬೆಳಿಗ್ಗೆ ವಶಕ್ಕೆ ಪಡೆದು, ವಿಚಾರಣೆ ಆರಂಭಿಸಿದ್ದಾರೆ. ನಗರದ ಜಾಮಿಯಾ ಮಜೀದ್ ರಸ್ತೆಯಲ್ಲಿರೋ ಅಶ್ಪಾಕ್ ಜಮಖಂಡಿ ಮನೆಯಲ್ಲಿದ್ದ ವೇಳೆ ದಾಳಿ ನಡೆಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.   ಪಿಎಫ್‌ಐ ಸಂಘಟನೆ ಹೋರಾಟ, ಹಣಕಾಸಿನ ವ್ಯವಹಾರ ಸೇರಿದಂತೆ ಇತರೆ ವಿಷಯಗಳ ವಿಚಾರಣೆ ನಡೆಸುತ್ತಿರುವ ಪೊಲೀಸರು, ಸ್ಥಳೀಯ ವಿಚಾರಣೆ ಬಳಿಕ, ಅಗತ್ಯ ಎನಿಸಿದರೆ ಅಶ್ಫಾಕ್ ನನ್ನು ಬೆಂಗಳೂರಿಗೆ ಕರೆದೊಯ್ಯುವ ಸಾಧ್ಯತೆ …

Read More »

ಕಳೆದ ಐದೂವರೆ ತಿಂಗಳಿನಿಂದ ಜೈಲಿನಲ್ಲಿದ್ದ ರಾಜೇಶ್ ಹಾಗರಗಿಗೆ ಜಾಮೀನು

ಕಲಬುರಗಿ: ಇದೇ ಮೊದಲ ಬಾರಿಗೆ ಪಿಎಸ್‌ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ರಾಜೇಶ ಹಾಗರಗಿಗೆ ಜಾಮೀನು ಮಂಜೂರಾಗಿದೆ. ಕಲಬುರಗಿ ಹೈ ಕೋರ್ಟ್ ನಿಂದ ರಾಜೇಶ್ ಹಾಗರಗಿಗೆ ಜಾಮೀನು ಮಂಜೂರಾಗಿದೆ. ರಾಜೇಶ್ ಹಾಗರಗಿ ಅವರು ಪ್ರಕರಣದ ಪ್ರಮುಖ ಆರೋಪಿ ದಿವ್ಯಾ ಹಾಗರಗಿಯ ಪತಿ ಮತ್ತು ಜ್ಞಾನ ಜ್ಯೋತಿ ಆಂಗ್ಲ ಮಾಧ್ಯಮ ಅಧ್ಯಕ್ಷರಾಗಿದ್ದಾರೆ.   ಕಳೆದ ಐದೂವರೆ ತಿಂಗಳಿನಿಂದ ಜೈಲಿನಲ್ಲಿದ್ದ ರಾಜೇಶ್ ಹಾಗರಗಿಗೆ ಜಾಮೀನು ದೊರೆತಿದೆ.

Read More »

ತನ್ನ ಸ್ವಂತ ಕ್ಷೇತ್ರದ ಕಾರ್ಯಕ್ರಮದಲ್ಲೇ ಜಾಗ ಸಿಗದೆ ಅನಾಥರಾದ ಶೆಟ್ಟರ್ ಅವರ ಸ್ಥಿತಿ ಯಾರಿಗೂ ಬರಬಾರದು: ಕಾಂಗ್ರೆಸ್

ಬೆಂಗಳೂರು : ರಾಷ್ಟ್ರಪತಿ ಕಾರ್ಯಕ್ರಮದಲ್ಲಿ ಜಗದೀಶ್ ಶೆಟ್ಟರ್ ಹೆಸರು ಕೈಬಿಟ್ಟಿದ್ದರು ಎನ್ನಲಾದ ವಿಚಾರ ಮತ್ತು ಬಿಡಿಎ ಭ್ರಷ್ಟಾಚಾರ ಪ್ರಕರಣದಲ್ಲಿ ಯಡಿಯೂರಪ್ಪ ಮತ್ತಿತರರ ವಿರುದ್ಧದ ಎಫ್‌ಐಆರ್ ಕುರಿತಂತೆ ವಿಜಯೇಂದ್ರ ಹೇಳಿಕೆ ವಿಚಾರವನ್ನು ಪ್ರಸ್ತಾಪಿಸಿರುವ ರಾಜ್ಯ ಕಾಂಗ್ರೆಸ್, ಬಿಜೆಪಿಯಲ್ಲಿ ಲಿಂಗಾಯತ ನಾಯಕರನ್ನು ತುಳಿಯುವ ಯತ್ನ ನಡೆದಿದೆ ಎಂದು ಆರೋಪಿಸಿ ಸರಣಿ ಟ್ವೀಟ್ ಮಾಡಿದೆ. ಸಿಎಂ ಹುದ್ದೆಯೂ ಕೊಡಲಿಲ್ಲ, ಸಚಿವ ಸ್ಥಾನವೂ ಸಿಗಲಿಲ್ಲ. ಈಗ ರಾಷ್ಟ್ರಪತಿ ಕಾರ್ಯಕ್ರಮದಲ್ಲೂ ಹೆಸರಿಲ್ಲ. ಬಿಎಸ್‌ವೈ ನಂತರ ಮತ್ತೊಬ್ಬ ಲಿಂಗಾಯತ ನಾಯಕನನ್ನು …

Read More »

ಗುಂಪು ಘರ್ಷಣೆ; ಬಾಲಕನಿಗೆ ಚೂರಿ ಇರಿತ

ಬೆಳಗಾವಿ: ಇಲ್ಲಿನ ಅನಂತಶಯನ ಗಲ್ಲಿಯಲ್ಲಿ ಸೋಮವಾರ ರಾತ್ರಿ ಯುವಕರ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದ್ದು, ಚೂರಿ ಇರಿತದಿಂದ ಒಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದಾನೆ. ಕ್ಯಾಂಪ್‌ ಪ್ರದೇಶದ ನಿವಾಸಿ ಫರಾನ್‌ ಧಾರವಾಡಕರ (15) ಚೂರಿ ಇರಿತಕ್ಕೆ ಒಳಗಾದವ. ಈತ ಇಸ್ಲಾಮಿಯಾ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದಾನೆ. ‌ಗಾಯಗೊಂಡ ಬಾಲಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಫರಾನ್‌ ಹಾಗೂ ಇಬ್ಬರು ಸ್ನೇಹಿತರು ಬೈಕ್‌ ಮೇಲೆ ಹೊರಟಿದ್ದರು. ನಗರದ ಅಂಬಾ ಭವಾನಿ ಮಂದಿರದ ಹತ್ತಿರ 10 ಯುವಕರ …

Read More »