Breaking News

ರಾಜಕೀಯ

ಶೇಡಬಾಳ ಸ್ಟೇಶನ್ ಜನರ ಸಮಸ್ಯೆ ಆಲಿಸಿದ ತಹಶೀಲ್ದಾರ್

ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಲ್ಲಿ ಒಂದಾದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಈ ಯೋಜನೆ ಅಡಿಯಲ್ಲಿ ಎಲ್ಲಾ ತಾಲೂಕ ಅಧಿಕಾರಿಗಳು ಗ್ರಾಮ ವಾಸ್ತವದಲ್ಲಿ ಉಳಿದು ಸಾಮಾನ್ಯ ಜನರ ಸಮಸ್ಯೆಗಳಿಗೆ ಸ್ಪಂದಿಸಲೇಬೇಕು ಎಂದು ತಹಶೀಲ್ದಾರ್ ರಾಜೇಶ್ ಬುರ್ಲಿ ಅಧಿಕಾರಿಗಳಿಗೆ ಕರೆ ನೀಡಿದರು. ಶನಿವಾರ ಕಾಗವಾಡ ತಾಲೂಕಿನ ಶೇಡಬಾಳ ಸ್ಟೇಷನ್ ಗ್ರಾಮದಲ್ಲಿ ತಹಶೀಲ್ದಾರ್ ರಾಜೇಶ್ ಬುರ್ಲಿ ಮತ್ತು ತಾಲೂಕಿನ ಎಲ್ಲ ಇಲಾಖೆ ಅಧಿಕಾರಿಗಳು ಪಾಲ್ಗೊಂಡು ಇಲ್ಲಿಯ ಜನರ ಸಮಸ್ಯೆಗಳನ್ನು ಆಲಿಸಿದರು. ಸ್ಥಳದಲ್ಲಿ ಅನೇಕ …

Read More »

ನಮಗೆ ರಸ್ತೆ ಕೊಡಿ: ಮಂಗಾಯಿ ನಗರ ನಿವಾಸಿಗಳಿಂದ ಡಿಸಿಗೆ ಮನವಿ

ಬೆಳಗಾವಿಯ ಮಂಗಾಯಿ ದೇವಸ್ಥಾನ ಬಳಿ ಇದ್ದ ರಸ್ತೆಯನ್ನು ಬಂದ್ ಮಾಡಿ ತಡೆಗೋಡೆ ನಿರ್ಮಾಣ ಮಾಡಲಾಗಿದೆ. ಇದರಿಂದ ಜನ ಓಡಾಡಲು ಹರಸಾಹಸ ಪಡಬೇಕಾಗಿದೆ. ಹೌದು ವಡಗಾವಿಯ ಮಂಗಾಯಿ ದೇವಸ್ಥಾನ ಬಳಿ ಇದ್ದ ಖಾಸಗಿ ಜಾಗದಲ್ಲಿಯೇ ಅನೇಕ ವರ್ಷಗಳಿಂದ ಇಲ್ಲಿನ ನಿವಾಸಿಗಳು ಓಡಾಡುತ್ತಿದ್ದರು. ಆದರೆ ಏಕಾಏಕಿ ಆ ಜಾಗದ ಮಾಲೀಕರು ರಸ್ತೆ ಬಂದ್ ಮಾಡಿ ತಡೆಗೋಡೆ ನಿರ್ಮಾಣ ಮಾಡಿದ್ದಾರೆ. ಇದರಿಂದ ಜನ ದಿನನಿತ್ಯ ಓಡಾಡಲು ಬಹಳಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ. ಹೀಗಾಗಿ ತಮಗೆ ರಸ್ತೆ …

Read More »

ತಾವು ಸ್ಪರ್ಧೆಗಿಳಿಯುವ ಕ್ಷೇತ್ರ ಬಹಿರಂಗಪಡಿಸಿದ ಪ್ರಮೋದ್ ಮುತಾಲಿಕ್

ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವೂ ಸೇರಿದಂತೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಕಣಕ್ಕಿಳಿಯುವುದಾಗಿ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದು, ಆದರೆ ತಮ್ಮ ಸ್ಪರ್ಧೆ ಯಾವ ಕ್ಷೇತ್ರದಿಂದ ಎಂಬುದನ್ನು ಬಹಿರಂಗಪಡಿಸಿರಲಿಲ್ಲ. ಉಡುಪಿ ಅಥವಾ ದಕ್ಷಿಣ ಕನ್ನಡ ಜಿಲ್ಲೆಯ ಯಾವುದಾದರೂ ಒಂದು ಕ್ಷೇತ್ರದಲ್ಲಿ ಪ್ರಮೋದ್ ಮುತಾಲಿಕ್ ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗಿತ್ತಲ್ಲದೆ ಇದಕ್ಕಾಗಿ ಅವರು ಈ ಕ್ಷೇತ್ರಗಳ ಹಿಂದೂ ಕಾರ್ಯಕರ್ತರೊಂದಿಗೆ ಸಮಾಲೋಚನೆ ಸಹ ನಡೆಸಿದ್ದರು.   ಇದೀಗ ತಾವು ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ …

Read More »

ಪಿಎಸ್‌ಐ ಅಕ್ರಮ ನೇಮಕಾತಿ: 12 ಆರೋಪಿಗಳಿಗೆ ಜಾಮೀನು

ಬೆಂಗಳೂರು: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದಲ್ಲಿ ಬಂಧಿತರಾಗಿರುವ ಒಟ್ಟು 12 ಜನ ಆರೋಪಿಗಳಿಗೆ ನಗರದ 23ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಇಬ್ಬರು ಸರ್ಕಾರಿ ಅಧಿಕಾರಿಗಳಿಗೆ ಜಾಮೀನು ನಿರಾಕರಿಸಿದೆ.   ಜಾಗೃತ್‌, ಸೋಮನಾಥ, ರಘುವೀರ್, ಮಮತೇಶ್‌ ಗೌಡ, ಸಿ.ಎಂ.ನಾರಾಯಣ , ಆರ್. ಮಧು, ಸಿ.ಕೆ.ದಿಲೀಪ್‌ ಕುಮಾರ್, ರಚನಾ ಹಣಮಂತ, ಪ್ರವೀಣ್‌ ಕುಮಾರ್ ರಾಘವೇಂದ್ರ, ಮಧ್ಯವರ್ತಿಗಳಾದ ಕೇಶವಮೂರ್ತಿ ಮತ್ತು ಶರತ್‌ ಕುಮಾರ್ …

Read More »

ಬೈಕ್‌ಗೆ ಹಿಂಬದಿಯಿಂದ ಕ್ಯಾಂಟರ್ ವಾಹನ ಡಿಕ್ಕಿ, ಬೈಕ್ ಸವಾರ ಸಾವು

ಬೈಕ್‌ಗೆ ಹಿಂಬದಿಯಿಂದ ಕ್ಯಾಂಟರ್ ವಾಹನ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ ದುರ್ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಝಳಕಿ ಕ್ರಾಸ್ ಬಳಿ ನಡೆದಿದೆ. ಗುರುರಾಜ್ ಶಿರಶ್ಯಾಡ ಮೃತಪಟ್ಟಿರುವ ಬೈಕ್ ಸವಾರನಾಗಿದ್ದು ಬೈಕ್‌ನಲ್ಲಿ ಹೋಗುವಾಗ ಬೈಕ್‌ಗೆ ಹಿಂಬದಿಯಿಂದ ಕ್ಯಾಂಟರ್ ವಾಹನ ಡಿಕ್ಕಿಯಾಗಿದೆ. ವಾಹನ ಸಮೇತ ಚಾಲಕ ಪರಾರಿಯಾಗಿದ್ದಾನೆ. ಇನ್ನೂ ಡಿಕ್ಕಿ ವಿಡಿಯೋ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ.ಈ ಕುರಿತು ಝಳಕಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Read More »

ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಸೇರುವದಿಲ್ಲ.ಬಿಜೆಪಿ ಬಿಡೋಲ್ಲ,:. ರಮೇಶ್ ಜಾರಕಿಹೊಳಿ

ನಾನು ಯಾವುದೇ ಕಾರಣಕ್ಕೂ ಜೆಡಿಎಸ್ ಸೇರುವದಿಲ್ಲ.ನಾನು ಬಿಜೆಪಿ ಬಿಡೋಲ್ಲ,ಬಿಡೋಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದರು. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ಸಮೀಪದಲ್ಲಿ ರಮೇಶ್ ಜಾರಕಿಹೊಳಿ ಅವರ ಆಪ್ತ ನಾಗೇಶ್ ಮನ್ನೋಳಕರ ಮಾಲಿಕತ್ವದ ಸ್ಮಾರ್ಟ್ ಕ್ಯಾಶ್ಯು ಕಾರ್ಖಾನೆಯನ್ನು ಉದ್ಘಾಟಿಸುವ ಮುನ್ನ ಮಾದ್ಯಮಗಳ ಜೊತೆ ಮಾತನಾಡಿದ ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲಿ ನಾನು ಮಂತ್ರಿಯಾಗಿದ್ದೆ. ಆ ಮಂತ್ರಿ ಸ್ಥಾನ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗಿ ಸರ್ಕಾರ ರಚಿಸಿದ್ದೇವೆ.ಈಗ ನನ್ನನ್ನು ಮಂತ್ರಿ …

Read More »

ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯ

ಗೋಕಾಕ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಗೋಕಾಕ ತಾಲೂಕಿನ ದಂಡಾಪುರ ಗ್ರಾಮದಲ್ಲಿ ಬೀರಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಲಕ್ಷ್ಮಣ ಗನಾಪಾಗೋಲ್, ಮಾದೇವ್ ತುಕ್ಕಾನಟ್ಟಿ, ರಾಮಣ್ಣ ವಡೆರ್, …

Read More »

ಬಿಜೆಪಿಯಿಂದ ನೀವು ಇದ್ದೀರಿ ಬಿಜೆಪಿ ಇಲ್ಲದೆ ಇದ್ದರೆ ನೀವು ಜೀರೋ.ಯತ್ನಾಳ್ ಹೆಂಡ್ಯಾಗಿನ ಹುಳಾ

ವಿಜಯಪುರ ಮಹಾನಗರ ಪಾಲಿಕೆ ಚುನಾವಣೆ ಮುಗಿದು ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಪಕ್ಷದಿಂದ ಟಿಕೆಟ್ ಸಿಗದ ಕಾರಣ ಪಕ್ಷೇತರರಾಗಿ ಸ್ಪರ್ಧಿಸಿದ್ದ ಅಭ್ಯರ್ಥಿಗಳನ್ನು ಪಕ್ಷದಿಂದ ಉಚ್ಚಾಟಿಸಲಾಗಿತ್ತು.‌ ಇದೀಗ ಉಚ್ಚಾಟಿತ ಅಭ್ಯರ್ಥಿಗಳು ಸೇರಿಕೊಂಡು ಪತ್ರಿಕಾಗೋಷ್ಠಿ ನಡೆಸಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಹಾಗೂ ಬಿಜೆಪಿ ಅಧ್ಯಕ್ಷ ಆರ್.ಎಸ್.ಪಾಟೀಲ ಕುಚಬಾಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹಿಟ್ಲರ್ ಸಂಸ್ಕೃತಿ ಎಂದು ವಾಗ್ದಾಳಿ ನಡೆಸಿದ್ದಾರೆ.ಈ ಕುರಿತು ಇಲ್ಲಿದೆ ಡಿಟೇಲ್ಸ್. ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ …

Read More »

ಸಿಹಿ ಬೆಳೆದ ಅನ್ನದಾತರಿಗೆ ಕಹಿ ಅನುಭವ

ಕಬ್ಬು ಬೆಳೆಗಾರರ ಸಮಸ್ಯೆ ಪ್ರತೀವರ್ಷವೂ ಕಗ್ಗಂಟು. ಸಕ್ಕರೆ ಕಾರ್ಖಾನೆ ಮಾಲಕರು ಹಾಗೂ ಬೆಳೆಗಾರರ ನಡುವೆ ಬೆಲೆ ತಿಕ್ಕಾಟ ಸಾಮಾನ್ಯವಾಗಿ ಬಿಟ್ಟಿದೆ. ಕೃಷ್ಣಾ ತೀರದ ಬೆಳಗಾವಿ, ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಹೋರಾಟ ನಡೆಯುತ್ತಲೇ ಇರುತ್ತದೆ. ಸರಕಾರವೇ ಮಧ್ಯಸ್ಥಿಕೆ ವಹಿಸಿದರೂ ಪರಿಹಾರ ಎಂಬುದು ಮರೀಚಿಕೆಯಾಗಿದೆ. ಈ ವರ್ಷವೂ ಪ್ರತಿಭಟನೆ ಕಾವು ತುಸು ಹೆಚ್ಚೇ ನಡೆದಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಕಳೆದ 50 ದಿನಗಳಿಂದ ಹೋರಾಟದ ಕಿಚ್ಚು ಜೋರಾಗಿದೆ. ಈ ಹಿನ್ನೆಲೆಯಲ್ಲಿ ಸಂಘರ್ಷ, ಸಂಧಾನದ …

Read More »

ಖಾನಾಪುರ ಬಳಿ ಟೆಂಪೋ ಪಲ್ಟಿ: 30 ಜನರಿಗೆ ಗಾಯ

ಖಾನಾಪುರ ತಾಲೂಕಿನ ಗರ್ಲಗುಂಜಿ ಗ್ರಾಮದ ಬಳಿ ಟೆಂಪೋ ಪಲ್ಟಿಯಾಗಿ 30 ಪ್ರಯಾಣಿಕರಿಗೆ ಗಾಯವಾಗಿರುವ ಘಟನೆ ನಡೆದಿದೆ. ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಚಾಲಕನ ನಿಯಂತ್ರಣ ತಪ್ಪಿ ಟೆಂಪೋ ಪಲ್ಟಿಯಾಗಿದೆ. ಟೆಂಪೋದಲ್ಲಿ ಪ್ರಯಾಣಿಸುತ್ತಿದ್ದ 30 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಗಾಯಾಳುಗಳನ್ನು ಯಳ್ಳೂರ ಕೆಎಲ್ಇ ಚಾರಿಟೇಬಲ್ ಆಸ್ಪತ್ರೆ ಮತ್ತು ವಿಜಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳು ಎಲ್ಲರೂ ಹುದಲಿ ಗ್ರಾಮದವರಾಗಿದ್ದು, ಗರ್ಲಗುಂಜಿಗೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಆಗಮಿಸಿದ್ದರು.

Read More »