Breaking News

ರಾಜಕೀಯ

ಸಮಗ್ರ ಲಿಂಗಾಯತ ಸಮಾಜ ಒಂದಾಗಲಿ: C.M. ಬೊಮ್ಮಾಯಿ

ಧಾರವಾಡ: ಸಮಗ್ರ ವೀರಶೈವ ಲಿಂಗಾಯತ ಸಮುದಾಯ ಒಳ ಪಂಗಡಗಳನ್ನು ಮರೆತು ಒಗ್ಗೂಡಿ ಕೆಲಸ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸಲಹೆ ನೀಡಿದರು. ಶ್ರಿ ಲಿಂಗರಾಜ್ ವಿವಿದುದ್ದೇಶ ಸಂಸ್ಥೆ ವತಿಯಿಂದ ನಡೆದ ಶಿರಸಂಗಿ ಲಿಂಗರಾಜರ 162 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.   ಲಿಂಗರಾಜ್ ಸರದೇಸಾಯಿ ಅವರ ಆದರ್ಶಗಳು ಲಿಂಗಾಯತ ಸಮಗ್ರ ಸಮುದಾಯಕ್ಕೆ ಮಾದರಿಯಾಗಬೇಕಿದೆ. ಲಿಂಗಾಯತ ಸಮುದಾಯದ ಶ್ರೇಷ್ಠರನ್ನು ಒಂದು ಪಂಗಡ ಅಥವಾ ಒಳ ಪಂಗಡಕ್ಕೆ ಸೀಮಿತಗೊಳಿಸುವುದು …

Read More »

ಭ್ರಷ್ಟ ಬಿಜೆಪಿ ಸರ್ಕಾರ ತೊಲಗಿಸಲು ಪ್ರಜಾಧ್ವನಿ ಯಾತ್ರೆ: ಡಿಕೆ ಶಿವಕುಮಾರ್

ಬೆಂಗಳೂರು: ಹೊಸ ವರ್ಷ, ಹೊಸ ಪರ್ವ. ಬದಲಾವಣೆ ಹಾಗೂ ಕಾಂಗ್ರೆಸ್ ಪಕ್ಷದ ವಿಜಯ ಪರ್ವ ಆರಂಭವಾಗಿದೆ. ಈ ಪವಿತ್ರವಾದ ಗಳಿಗೆಯಲ್ಲಿ ಜನರಿಗಾಗಿ ಪ್ರಜಾಧ್ವನಿ ಯಾತ್ರೆ ವಿಚಾರ ತಿಳಿಸುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.   ವಿಪಕ್ಷ ನಾಯಕ ಸಿದ್ದರಾಮಯ್ಯ ಜತೆಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಜನರ ಭಾವನೆ ತಿಳಿಸಲು ಕಳೆದ ಎರಡು ಮೂರು ವರ್ಷಗಳಿಂದ ಕಾಂಗ್ರೆಸ್ ಪಕ್ಷ ಸತತವಾಗಿ ಪ್ರಯತ್ನಿಸಿದೆ. ಈ ಪ್ರಜಾಧ್ವನಿ ಯಾತ್ರೆ ಪ್ರಜೆಗಳ ಧ್ವನಿ, …

Read More »

ಜಲಜೀವನ್ ಮೀಷನ್ ಕಾಮಗಾರಿ ಆರಂಭವಾಗುವುದು ಯಾವಾಗ..? ರಸ್ತೆ ಅಗೆದು ವರ್ಷವಾದರೂ ಕಾಮಗಾರಿ ಆರಂಭವಿಲ್ಲ

ದೋಟಿಹಾಳ: ಕಳೆದ ವರ್ಷ ಜಾತ್ರೆಗಳು ಆರಂಭಕ್ಕೆ ಒಂದು ತಿಂಗಳ ಇರುವಾಗ ಜೆಜೆಎಂ ಕಾಮಗಾರಿಯ ಕುಡಿಯುವ ನೀರಿ ಪೈಪ್ಲೆöÊನ್ ಹಾಕಲು ಗ್ರಾಮದ ಬಹುತ್ತೇಕ ರಸ್ತೆಗಳು ಸಿಸಿ ರಸ್ತೆಯನ್ನು ಅಗೆದು ಪೈಪುಗಳನ್ನು ಹಾಕದೆ ವರ್ಷವಾದರೂ ಆಗೆ ಬಿಟ್ಟಿದ್ದಾರೆ. ಇದರಿಂದ ರಸ್ತೆಯಲ್ಲಿ ಬೈಕ್ ಸವಾರರು ಮತ್ತು ಸಾರ್ವಜನಿಕರು ಎಡವಿ ಬಿದ್ದಿರುವ ಘಟನೆ ನಡೆದಿದ್ದರೂ ಇದನ್ನು ಸರಿಪಡಿಸಬೇಕಾದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಮಾತ್ರ ಮೂಕಪೆಕ್ಷಕರಾಗಿದ್ದಾರೆ ಎಂಬುವುದು ಸಾರ್ವಜನಿಕರ ಆರೋಪವಾಗಿದೆ. ಗ್ರಾಮದಲ್ಲಿ ಕಳೆದ ಒಂದು ವರ್ಷದ ಹಿಂದೇ ಜಲಜೀವನ್ …

Read More »

ರಾಜ್ಯದಲ್ಲಿ ದಿಢೀರ್ ತಾಪಮಾನ ಕುಸಿತ: ಹಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ

ಬೆಂಗಳೂರು: ರಾಜ್ಯದಲ್ಲಿ ದಿಢೀರ್ ಆಗಿ ತಾಪಮಾನ ಕುಸಿದಿದ್ದು, ಕೆಲವು ಜಿಲ್ಲೆಗಳಲ್ಲಿ ಮೈಕೊರೆಯುವ ಚಳಿ ಅನುಭವ ಉಂಟಾಗುತ್ತಿದೆ. ‘ಮುಂದಿನ 48 ಗಂಟೆಯಲ್ಲಿ ಉತ್ತರ ಒಳನಾಡಿನ ಕೆಲವು ಸ್ಥಳಗಳಲ್ಲಿ ಶೀತಗಾಳಿ ಬೀಸುವ ಸಾಧ್ಯತೆಯಿದೆ. ಉತ್ತರ ಹಾಗೂ ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಉಷ್ಣಾಂಶ ಸಾಮಾನ್ಯಕ್ಕಿಂತ 5ರಿಂದ 6 ಡಿಗ್ರಿ ಸೆಲ್ಸಿಯಸ್‌ ಕಡಿಮೆ ಆಗಲಿದೆ’ ಎಂದು ಹವಾಮಾನ ಇಲಾಖೆ ತಿಳಿಸಿದೆ. ಸೋಮವಾರ ರಾಜಧಾನಿ ಬೆಂಗ ಳೂರಿನಲ್ಲೂ ತಾಪಮಾನ ಕುಸಿದಿತ್ತು. ಹೊರವಲಯದ ಜನರಿಗೆ ಚಳಿಯ ತೀವ್ರತೆ ಹೆಚ್ಚೇ …

Read More »

ವಿಷನ್ 2047: ಅಯೋಧ್ಯೆಗೆ ಹೊಸ ಸ್ಪರ್ಶ; ಇಲ್ಲಿದೆ ಮಾಹಿತಿ.

ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷ ಜ. 1ರಂದು ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ಸಾರ್ವಜನಿಕರ ದರ್ಶನಕ್ಕೆ ಮುಕ್ತವಾಗಲಿದೆ. ನಂತರದಲ್ಲಿ ದಿನಕ್ಕೆ ಕನಿಷ್ಠ 1 ಲಕ್ಷ ಮಂದಿಯಾ ದರೂ ಶ್ರೀರಾಮನ ದರ್ಶನ ಪಡೆಯಲಿದ್ದಾರೆ. ಇದನ್ನು ಗಮನದಲ್ಲಿಟ್ಟು ಕೊಂಡು, ಅಯೋಧ್ಯೆಯನ್ನು ಜಾಗತಿಕ ಪ್ರವಾಸೋದ್ಯಮ ಮತ್ತು ಆಧ್ಯಾತ್ಮಿಕ ಕೇಂದ್ರವನ್ನಾಗಿ ಮಾರ್ಪಾಡು ಮಾಡುವ ಉದ್ದೇಶದಿಂದ ಉತ್ತರಪ್ರದೇಶ ಸರಕಾರವು ಬರೊಬ್ಬರಿ 32 ಸಾವಿರ ಕೋಟಿ ರೂ.ಗಳ ಮೆಗಾ ಯೋಜನೆಯನ್ನು ರೂಪಿಸಿದೆ. ಆ ಯೋಜನೆ ಕುರಿತು ಒಂದಿಷ್ಟು ಮಾಹಿತಿ …

Read More »

ಸ್ಯಾಂಟ್ರೋ ರವಿ ಹಣ ಲೆಕ್ಕ ಮಾಡಿದ್ದು ಆರಗ ಮನೆಯಲ್ಲೇ: H.D.K.

ಆಳಂದ: ಸ್ಯಾಂಟ್ರೋ ರವಿ ಜತೆಗೆ ಸಚಿವರು, ಬಿಜೆಪಿ ನಾಯಕರು ಇರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿವೆ. ಅದರಲ್ಲೂ ಮುಖ್ಯವಾಗಿ ಕಂತೆಕಂತೆ ನೋಟುಗಳ ಜತೆ ಸ್ಯಾಂಟ್ರೋ ರವಿ ಫೋಟೋ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ್ದು, ಆರಗ ಮನೆಯಲ್ಲಿ ಹಣ ಲೆಕ್ಕ ಮಾಡುತ್ತಿರುವ ಫೋಟೋ ವೈರಲ್‌ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹೇಳಿದರು. ಖಜೂರಿಯಲ್ಲಿ ಸೋಮವಾರ ಜರಗಿದ ಜೆಡಿಎಸ್‌ ಪಂಚರತ್ನ ರಥಯಾತ್ರೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ …

Read More »

ಬಿಜೆಪಿಯವರದ್ದು ಬೆನ್ನು ಮೂಳೆ ಇಲ್ಲದ ರಾಜಕೀಯ: ಹಿಂದಿ ದಿವಸ್ ವಿರುದ್ಧ ಜೆಡಿಎಸ್ ಆಕ್ರೋಶ

ಬೆಂಗಳೂರು: ರಾಜ್ಯ ಸರ್ಕಾರದ ಹಿಂದಿ ದಿವಸ ಆಚರಣೆಯ ವಿರುದ್ಧ ಜೆಡಿಎಸ್ ಕಿಡಿಕಾರಿದ್ದು, ಒಕ್ಕೂಟ ಸರ್ಕಾರದ ಅಣತಿಯಂತೆ, ವಿಶ್ವ ಹಿಂದಿ ದಿವಸದ ಬಗ್ಗೆ ಉತ್ಸುಕರಾಗಿರುವ ರಾಜ್ಯ ಬಿಜೆಪಿಯವರೆ, ನಿಮ್ಮ ಗುಲಾಮಗಿರಿಗೆ ಕನ್ನಡಿಗರ ಒಕ್ಕೊರಲ ಧಿಕ್ಕಾರ. ಹಿಂದಿ ಹೇರಿಕೆಯ ಹುನ್ನಾರಕ್ಕೆ ನಮ್ಮ ಭಾಷೆಯನ್ನು ಬಲಿ ಕೊಡುವ ನಿಮ್ಮ ‘ಬೆನ್ನು ಮೂಳೆ’ ಇಲ್ಲದ ರಾಜಕೀಯವನ್ನು ಬಲವಾಗಿ ಖಂಡಿಸುತ್ತೇವೆ ಎಂದು ಟ್ವೀಟ್ ಮಾಡಿದೆ. ಬಹು ಭಾಷೆಯ, ಬಹುಸಂಸ್ಕ್ರತಿಯ ದೇಶ ನಮ್ಮ ಭಾರತ. ಕೇವಲ‌ ಒಂದು ಭಾಷೆಯನ್ನು …

Read More »

ಕಾಂತಾರʼ ಸಿನಿಮಾ ಆಸ್ಕರ್‌ ರೇಸ್‌ ನಲ್ಲಿ ಸ್ಥಾನ

ಬೆಂಗಳೂರು: ರಿಷಬ್‌ ಶೆಟ್ಟಿ ನಿರ್ದೇಶನ ʼಕಾಂತಾರʼ ಸಿನಿಮಾ ಆಸ್ಕರ್‌ ರೇಸ್‌ ನಲ್ಲಿ ಸ್ಥಾನ ಪಡೆದುಕೊಂಡಿದೆ. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್‌ ಅಧಿಕೃತವಾಗಿ ಟ್ವಿಟರ್‌ ನಲ್ಲಿ ಮಾಹಿತಿಯನ್ನು ಕೊಟ್ಟಿದೆ. ಇತ್ತೀಚೆಗೆ ʼಕಾಂತಾರʼ ಸಿನಿಮಾವನ್ನು ಆಸ್ಕರ್‌ ಗೆ ಕಳುಹಿಸಲು ಅರ್ಜಿ ಸಲ್ಲಿಸಿದ್ದೇವೆ ಎಂದು ನಿರ್ಮಾಪಕ ವಿಜಯ್‌ ಕಿರಂದೂರು ಅವರು ಹೇಳಿದ್ದರು. ಟ್ವಟರ್‌ ನಲ್ಲಿ ಕಾಂತಾರಕ್ಕೆ ಆಸ್ಕರ್‌ ಸಿಗಬೇಕೆಂದು ಹಲವು ಮಂದಿ ಆಗ್ರಹಿಸಿದ್ದರು. ಪ್ರೇಕ್ಷಕರ ಮನವಿಯಂತೆ ಚಿತ್ರ ತಂಡ ಆಸ್ಕರ್‌ ಗಾಗಿ ಕಾಂತಾರವನ್ನು ಪರಿಗಣಿಸುವಂತೆ ಅರ್ಜಿ …

Read More »

ಡಿ.ಕೆ ಶಿವಕುಮಾರ್ ಭೇಟಿಯಾದ ಶಾಸಕ H.ನಾಗೇಶ್ : ಕಾಂಗ್ರೆಸ್ ಸೇರ್ಪಡೆ ಫಿಕ್ಸ್..?

ಬೆಂಗಳೂರು : ಪಕ್ಷೇತರ ಶಾಸಕ ಹೆಚ್. ನಾಗೇಶ್ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರನ್ನು ಭೇಟಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಪಕ್ಷೇತರ ಶಾಸಕನಾಗಿದ್ದರೂ ಬಿಜೆಪಿ ಬೆಂಬಲಿಸಿರುವ ನಾಗೇಶ್ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರಾಗಿದ್ದಾರೆ. ಇದೀಗ ಡಿಕೆ ಶಿವಕುಮಾರ್ ರನ್ನು ಭೇಟಿಯಾಗಿದ್ದು, ಮತ್ತೆ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರಾ ಎಂಬ ಕುತೂಹಲ ಮೂಡಿದೆ. ಕೆಲವು ತಿಂಗಳುಗಳ ಹಿಂದೆಯೇ ನಾಗೇಶ್ ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ಗುಸುಗುಸು ಕೇಳಿಬಂದಿತ್ತು, ಆದರೆ ಕಾಂಗ್ರೆಸ್ ಸೇರ್ಪಡೆಯಾಗಿರಲಿಲ್ಲ. ಮಹತ್ತರದ …

Read More »

ಮತಾಂತರ ಗಂಭೀರ ಸಮಸ್ಯೆ, ರಾಜಕೀಯ ಮಾಡಬೇಡಿ: ಸುಪ್ರೀಂ

ನವದೆಹಲಿ, ಜನವರಿ 9: ಧಾರ್ಮಿಕ ಮತಾಂತರಕ್ಕೆ ರಾಜಕೀಯ ಬಣ್ಣ ನೀಡಬಾರದು ಎಂದಿರುದ ಸುಪ್ರೀಂ ಕೋರ್ಟ್, ಮೋಸದ ಧಾರ್ಮಿಕ ಮತಾಂತರಗಳನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವಂತೆ ಕೇಂದ್ರ ಮತ್ತು ರಾಜ್ಯಗಳಿಗೆ ನಿರ್ದೇಶನ ಕೋರಿ ಸಲ್ಲಿಸಿರುವ ಮನವಿಯ ಕುರಿತು ಸೋಮವಾರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರ ನೆರವು ಕೋರಿದೆ.   ಬೆದರಿಕೆ, ಉಡುಗೊರೆಗಳು ಮತ್ತು ಹಣದ ಪ್ರಯೋಜನಗಳ ಮೂಲಕ ವಂಚನೆಯಿಂದ ಆಮಿಷ ಒಡ್ಡಿ ಸಹಾಯ ಮಾಡುವ ಮೂಲಕ ಧಾರ್ಮಿಕ ಮತಾಂತರವನ್ನು ಪರಿಶೀಲಿಸುವಂತೆ …

Read More »