Breaking News

ಜಿಲ್ಲೆ

ರಾಜರಾಜೇಶ್ವರಿ ಕ್ಷೇತ್ರದಲ್ಲಿ ಈ ಬಾರಿ 45.25% ಮತದಾನ, ಶಿರಾದಲ್ಲಿ ಈ ಬಾರಿ 82.31% ರಷ್ಟು ಮತದಾನ

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಪ್ರತಿಷ್ಠೆಯ ಕಣಗಳಾದ ರಾಜರಾಜೇಶ್ವರಿ ನಗರ ಮತ್ತು ಶಿರಾ ಬೈಎಲೆಕ್ಷನ್ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಆರ್ ಆರ್ ನಗರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್‍ನ ಕುಸುಮಾ, ಜೆಡಿಎಸ್‍ನ ಕೃಷ್ಣಮೂರ್ತಿ ಸೇರಿ 16 ಹುರಿಯಾಳುಗಳ ಭವಿಷ್ಯ ಮತಯಂತ್ರ ಸೇರಿದೆ. ಶಿರಾದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ, ಕಾಂಗ್ರೆಸ್‍ನ ಜಯಚಂದ್ರ, ಜೆಡಿಎಸ್‍ನ ಅಮ್ಮಾಜಮ್ಮ ಸೇರಿ 15 ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಏಳು ದಿನಗಳ ಬಳಿಕ …

Read More »

ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ನಾಲ್ಕು ಜನ ಸಾವನ್ನಪ್ಪಿರುವ ಘಟನೆ

ಕಲಬುರಗಿ: ಎರಡು ಬೈಕ್‍ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು ನಾಲ್ಕು ಜನ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಗ್ರಾಮದ ಬಳಿ ನಡೆದಿದೆ. ಮೃತರನ್ನು ಲಾಡ್ಲಾಪುರ ಗ್ರಾಮದ ಮರೆಪ್ಪ (50), ಬಸ್ಸಪ್ಪ (32) ಮತ್ತು ಅಲ್ಲೂರು ಗ್ರಾಮದ ದೇವೇಂದ್ರ (50) ಹಾಗೂ ಮಲ್ಲಪ್ಪ ರಾಯಪ್ಪ (35) ಎಂದು ಗುರುತಿಸಲಾಗಿದೆ. ಎರಡು ಬೈಕುಗಳ ಮೇಲೆ ಮೂರು ಮೂರು ಜನ ಹೋಗುತ್ತಿದದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಆರು ಜನರಲ್ಲಿ ನಾಲ್ವರು …

Read More »

ಅವಿರೋಧವಾಗಿ ಬಿಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಗೊಂಡ ನೀಲಕಂಠ ಕಪ್ಪಲಗುದ್ದಿ

ಮೂಡಲಗಿ: ತಾಲೂಕಿನ ಕಲ್ಲೋಳಿ ಪಟ್ಟಣದ ನೀಲಕಂಠ ಬಸವರಾಜ ಕಪ್ಪಲಗುದ್ದಿ ಇವರು ದಿಬಿಡಿಸಿಸಿ ಬ್ಯಾಂಕಿಗೆ ಎರಡನೇಯ ಬಾರಿಗೆ ನಿರ್ದೇಶಕರಾಗಿ ಅವರೋಧವಾಗಿ ಆಯ್ಕೆಯಾಗಿ ಕಲ್ಲೋಳಿಗೆ ಆಗಮಿಸಿದ ಸಂದರ್ಭದಲ್ಲಿ ಪಟ್ಟಣದ ನಾಗರಿಕರು ಹಾಗೂ ರಾಜಕೀಯ ದುರೀಣರು ಹೂ ಮಾಲೆ ಹಾಕಿ ಬರಮಾಡಿಕೊಂಡರು.   ಅವಿರೋಧವಾಗಿ ಬಿಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆಗೊಂಡ ನೀಲಕಂಠ ಕಪ್ಪಲಗುದ್ದಿ ಪಟ್ಟಣದ ಜಾಗೃತ ದೇವರಾದ ಹನುಮಾನ ದೇವಸ್ಥಾನಕ್ಕೆ ತೇರಳಿ ಹನುಮಾನ ದರ್ಶನ ಪಡೆದುಕೊಂಡರು. ಈ ಸಂಧರ್ಭದಲ್ಲಿ ಈರಪ್ಪ ಹೆಬ್ಬಾಳ, ಸುಭಾಸ ಕುರಬೇಟ, …

Read More »

ಯಲ್ಲಮ್ಮನ ಭಕ್ತರು ಮಂಗಳವಾರ ಯಲ್ಲಮ್ಮನನ್ನು ನೆನೆದು ತಲ್ಲೂರಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ,  ಯಲ್ಲಮ್ಮನಿಗೆ ವಿಧಿ ವಿಧಾನಗಳನ್ನು ನೆರವೇರಿಸಿದರು.

ಯರಗಟ್ಟಿ: ತಾಲೂಕಿನ ತಲ್ಲೂರ ಗ್ರಾಮದ ಯಲ್ಲಮ್ಮನ ಭಕ್ತರು ಮಂಗಳವಾರ ಯಲ್ಲಮ್ಮನನ್ನು ನೆನೆದು ತಲ್ಲೂರಿನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ,  ಯಲ್ಲಮ್ಮನಿಗೆ ವಿಧಿ ವಿಧಾನಗಳನ್ನು ನೆರವೇರಿಸಿದರು. ಮಹಾರಾಷ್ಟ್ರದಲ್ಲಿ ಕೊರೊನಾ ಹೆಚ್ಚಿದ್ದು ಮಹಾರಾಷ್ಟ್ರದ ಯಲ್ಲಮ್ಮನ ಭಕ್ತರು ಯಲ್ಲಮ್ಮನಗುಡ್ಡಕ್ಕೆ ಆಗಮಿಸುತ್ತಿರುವುದರಿಂದ ಕೊರೊನಾ ವ್ಯಾಪಕವಾಗಿ ಹರಡಬಹುದು ಎಂಬ ಉದ್ದೇಶದಿಂದ ಈಗಾಗಲೇ ಜಿಲ್ಲಾಧಿಕಾರಿ ಯಲ್ಲಮ್ಮನ ದೇವಸ್ಥಾನಕ್ಕೆ ನವೆಂಬರ್ ತಿಂಗಳ ಅಂತ್ಯದ ವರೆಗೂ ನಿರ್ಬಂಧ ಹೇರಿದ್ದಾರೆ.   ಸಾಮೂಹಿಕವಾಗಿ ಯಲ್ಲಮ್ಮನಿಗೆ ಮಾಡುವ ವಿಧಿ ವಿಧಾನಗಳ ಬಗ್ಗೆ ಅಪಾರ ನಂಬಿಕೆ ಹೊಂದಿದ …

Read More »

ಕರ್ನಾಟಕ ಸರ್ಕಾರ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಚಿಂತನೆ

ಬೆಂಗಳೂರು,ನ.3- ಉತ್ತರ ಪ್ರದೇಶ, ಹರಿಯಾಣ, ಮಧ್ಯಪ್ರದೇಶ ನಂತರ ಇದೀಗ ಕರ್ನಾಟಕ ಸರ್ಕಾರ ಕೂಡ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿದೆ. ರಾಜ್ಯದಲ್ಲಿ ಮುಸ್ಲಿಂ ಪುರುಷರು ಹಿಂದೂ ಹುಡುಗಿಯರಿಗೆ ಆಮಿಷವೊಡ್ಡಿ ತಮ್ಮ ಜಾತಿಯ ವಿಚಾರವನ್ನು ರಹಸ್ಯವಾಗಿಟ್ಟು ಲವ್ ಜಿಹಾದ್ ಮಾಡಿಕೊಂಡಿರುವ ಘಟನೆಗಳು ಹೆಚ್ಚಾಗಿರುವ ಹಿನ್ನೆಲೆ ಕಠಿಣ ಕಾನೂನು ರಚಿಸುವುದಕ್ಕೆ ಸರ್ಕಾರ ತೀರ್ಮಾನಿಸಿದೆ. ಇದರಿಂದ ಲವ್ ಜಿಹಾದ್ ವಿರುದ್ಧ ಕಾನೂನು ಜಾರಿಗೆ ತರಲು ಮುಂದಾಗಿರುವ ಬಿಜೆಪಿ ಆಡಳಿತದ ನಾಲ್ಕನೇ …

Read More »

ಆರ್.ಆರ್.ನಗರದಲ್ಲಿ ಮತದಾನ ಮಾಡಿದ ತಾರೆಯರು

ಬೆಂಗಳೂರು,ನ.3- ಆರ್‍ಆರ್‍ನಗರ ಉಪಚುನಾವಣೆಯ ಮತದಾನದಲ್ಲಿ ನಟ ದರ್ಶನ ಸೇರಿದಂತೆ ಹಲವಾರು ನಟನಟಿಯರು ತಮ್ಮ ಹಕ್ಕು ಚಲಾಯಿಸಿದರು. ನೆನಪಿರಲಿ ಪ್ರೇಮ್ ಅವರು ಪತ್ನಿ ಸಮೇತ ಕ್ಲಾರೆಟ್ ಸ್ಕೂಲ್ ಮತಗಟ್ಟೆಯಲ್ಲಿ ವೋಟ್ ಮಾಡಿದರು. ತಮ್ಮ ಹಕ್ಕು ಚಲಾಯಿಸಿದ ನಂತರ ಸರ್ಕಾರ ಮತದಾನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಿದೆ. ಯಾರೂ ಆತಂಕ ಪಡುವುದು ಬೇಡ. ಎಲ್ಲರೂ ಮತದಾನ ಮಾಡಿ ಎಂದು ಮನವಿ ಮಾಡಿದರು. ಮತದಾನ ಮಾಡುವುದು ನಮ್ಮೆಲ್ಲರ ಹಕ್ಕು. ನಾವು ಮತದಾನ ಮಾಡಿಲ್ಲವೆಂದರೆ ನಮ್ಮ …

Read More »

ಬಕೆಟ್ ಹಿಡಿಯುವ ರಾಜಕಾರಣಿಯಾಗಿದ್ರೆ ಬಹಳ ಹಿಂದೆಯೇ ಮಂತ್ರಿಯಾಗ್ತಿದ್ದೆ : ಸಚಿವ ಸಿ.ಟಿ.ರವಿ

ಚಿಕ್ಕಮಗಳೂರು: ಹೊಗಳಿಕೊಂಡು, ಬಕೆಟ್ ಹಿಡಿಯುವ ರಾಜಕಾರಣಿಯಾಗಿದ್ದರೆ ನಾನು ಮಂತ್ರಿಯಾಗಲು 2012ರವರೆಗೆ ಕಾಯಬೇಕಿರಲಿಲ್ಲ. ಬಹಳ ಮುಂಚೆಯೇ ಮಂತ್ರಿ ಆಗುತ್ತಿದ್ದೆ. ನನಗೆ ಅಧಿಕಾರ ಮತ್ತು ಜವಾಬ್ದಾರಿ ಎಂದು ಬಂದಾಗ ಜವಾಬ್ದಾರಿ ತೆಗೆದುಕೊಳ್ಳಲು ಉತ್ಸುಕನಾಗಿರುತ್ತೇನೆ ಎಂದು ಸಚಿವ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಎಐಟಿ ಕಾಲೇಜು ಬಳಿ ಹಿಂದುಳಿದ ವರ್ಗಗಳ ಬಾಲಕರ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಬಳಿಕ ಮಾತನಾಡಿದ ಅವರು, ಅಧಿಕಾರಕ್ಕೆ ಅಂಟಿಕೊಳ್ಳುವ ಜಾಯಮಾನ ನನ್ನದ್ದಲ್ಲ. ಮಂತ್ರಿಸ್ಥಾನ ನನಗೆ ಸಿಕ್ಕಿರುವ ಅಧಿಕಾರ. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ …

Read More »

ತಾಯಿ ಮೂಕಾಂಬಿಕೆ ಕೊಟ್ಟ ಉಡುಗೊರೆ ನೀನು – ಮಗನ ಹುಟ್ಟುಹಬ್ಬಕ್ಕೆ ರಕ್ಷಿತಾ ವಿಶ್

ಬೆಂಗಳೂರು: ಸ್ಯಾಂಡಲ್‍ವುಡ್ ಸ್ಟಾರ್ ಗಳು ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸುವುದು ಕಾಮನ್. ಅದೇ ರೀತಿಯಾಗಿ ಸ್ಟಾರ್ ಮಕ್ಕಳು ಕೂಡ ಬರ್ತ್ ಡೇಯನ್ನು ಅಷ್ಟೇ ಸ್ಪೇಷಲ್ ಆಗಿ ಸೆಲೆಬ್ರೇಟ್ ಮಾಡೋದು ಟ್ರೇಂಡ್ ಆಗಿದೆ. ಕ್ರೇಜಿ ಕ್ವೀನ್ ರಕ್ಷಿತಾ ಮತ್ತು ಜೋಗಿ ಪ್ರೇಮ್ ದಂಪತಿಯ ಮುದ್ದಾದ ಮಗ ಸೂರ್ಯ 12ನೇ ವರ್ಷಕ್ಕೆ ಕಾಲಿಟ್ಟಿದ್ದಾನೆ. ಮಗನ ಹುಟ್ಟುಹಬ್ಬಕ್ಕೆ ತಾಯಿ ರಕ್ಷಿತಾ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯ ಮೂಲಕವಾಗಿ ವಿಶ್ ಮಾಡಿದ್ದಾರೆ. ಇನ್‍ಸ್ಟಾದಲ್ಲಿ ರಕ್ಷಿತಾ ಬರೆದುಕೊಂಡಿದ್ದೇನು?: ನೀನು …

Read More »

ಬಿಜೆಪಿ ಕಾರ್ಯಕರ್ತರು ಧರಿಸಿದ್ದ ಕೇಸರಿ ಮಾಸ್ಕ್​ಗಳನ್ನ​ ಪೊಲೀಸರು ತೆಗೆಸಿದರು

ಬೆಂಗಳೂರು: ಆರ್​.ಆರ್​ ನಗರ ಉಪಚುನಾವಣೆಗೆ ಇಂದು ಮತದಾನ ನಡೆಯುತ್ತಿದ್ದು, ಈ ವೇಳೆ ಕೆಲವರು ಕೇಸರಿ ಮಾಸ್ಕ್​ ಧಾರಣೆ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತವಾಗಿದೆ. ಕನ್ಯಾಕುಮಾರಿ ಶಾಲೆಯ ಮತಗಟ್ಟೆ ಬಳಿ ಪ್ಯಾರಾಮಿಲಿಟರಿ ಫೋರ್ಸ್​ ಸಿಬ್ಬಂದಿ ಕೇಸರಿ ಬಣ್ಣದ ಮಾಸ್ಕ್​ ಧರಿಸಿದ್ದಕ್ಕೆ ಕಾಂಗ್ರೆಸ್​ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ರು. ಪಟ್ಟು ಹಿಡಿದು ಮಾಸ್ಕ್ ಬದಲಿಸುವಂತೆ ಮಾಡಿದ್ರು. ಇದರ ಬೆನ್ನಲ್ಲೇ ಮತಗಟ್ಟೆ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಧರಿಸಿದ್ದ ಕೇಸರಿ ಮಾಸ್ಕ್​ಗಳನ್ನ​ ಕೂಡ ಪೊಲೀಸರು ತೆಗೆಸಿದ್ದಾರೆ.

Read More »

ಗೌರಮ್ಮ ತಮ್ಮ ಸೊಸೆ ಕುಸುಮ ಬೆಂಬಲಕ್ಕೆ ನಿಂತಿದ್ದಾರೆ

ಬೆಂಗಳೂರು: ಕೆಲವೇ ಕೆಲವು ದಿನಗಳ ಹಿಂದಕ್ಕೆ ಹೋದರೆ.. ಅಂದ್ರೆ ರಾಜರಾಜೇಶ್ವರಿ ನಗರದ ಉಪ ಚುನಾವಣೆ ಘೋಷಣೆಯಾದಾಗ, ಕಾಂಗ್ರೆಸ್ ಪಕ್ಷ ಇನ್ನೂ ಕುಸುಮಗೆ ಟಿಕೆಟ್ ಕೊಟ್ಟಿರಲಿಲ್ಲ. ರಾಜಕೀಯಕ್ಕೆ ಕುಸುಮ ಇಳಿಯುತ್ತಾರೆ ಎಂಬ ಸುದ್ದಿ ತಿಳಿದ ಕೂಡಲೆ ಮಾಧ್ಯಮದ ಮುಂದೆ ಡಿ.ಕೆ.ರವಿ ತಾಯಿ ಕಿಡಿಕಾರಿದ್ದರು.ಮಗ ಸಾವನ್ನಪ್ಪಿದಾಗ ಮಣ್ಣು ಬಿಸಾಕಿ ಹೋದವಳು ಇಂದಿನವರೆಗೂ ಬಂದಿಲ್ಲ. ನನ್ನ ಮಗನ ದುಡ್ಡೆಲ್ಲ ನುಂಗಿ ನೀರು ಕುಡಿದ್ಲು. ಚುನಾವಣೆಗೆ ನಿಂತುಕೊಂಡರೂ ನನ್ನ ಮಗನ ಹೆಸರು ಫೋಟೋ ಹಾಕಬಾರದು. ಒಂದು …

Read More »