Breaking News

ಜಿಲ್ಲೆ

ಚೆಕ್‍ಬೌನ್ಸ್ ಪ್ರಕರಣದಲ್ಲಿ ಕಾಫಿ ಡೇಯ ನಿರ್ದೇಶಕರಾಗಿರುವ ಮಾಳವಿಕಾ ಹೆಗ್ಡೆ ಅವರಿಗೆ ಮೂಡಿಗೆರೆಯ ಜೆಎಂಎಫ್‍ಸಿ ನ್ಯಾಯಾಲಯ ಜಾಮೀನು

ಚಿಕ್ಕಮಗಳೂರು, ನ.7- ಚೆಕ್‍ಬೌನ್ಸ್ ಪ್ರಕರಣದಲ್ಲಿ ಕಾಫಿ ಡೇಯ ನಿರ್ದೇಶಕರಾಗಿರುವ ಮಾಳವಿಕಾ ಹೆಗ್ಡೆ ಅವರಿಗೆ ಮೂಡಿಗೆರೆಯ ಜೆಎಂಎಫ್‍ಸಿ ನ್ಯಾಯಾಲಯ ಜಾಮೀನು ನೀಡಿದೆ. ಕಾಫಿ ಡೇ ಮೂಡಿಗೆರೆ ಹಾಗೂ ಸುತ್ತಮುತ್ತಲ ಹಲವಾರು ಬೆಳೆಗಾರರಿಂದ ಕಾಫಿ ಖರೀದಿ ಮಾಡಿತ್ತು. ಅವರ ಪೈಕಿ ಚಿಕ್ಕಮಗಳೂರು ತಾಲ್ಲೂಕಿನ ಮಲ್ಲಂದೂರು ಗ್ರಾಮದ ಶಿವಪ್ರಕಾಶ್ ಎಸ್ಟೇಟ್ ಮಾಲೀಕ ಕೆ.ನಂದೀಶ್ ಅವರು ಬಾಕಿ ಹಣಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಕಾಫಿ ಮಾರಾಟ ಮಾಡಿದ್ದ ಬಾಪ್ತು 45 ಲಕ್ಷದ ಪೈಕಿ 4 ಲಕ್ಷ ರೂ.ಗಳನ್ನು …

Read More »

ಆಸ್ಪತ್ರೆಯಲ್ಲಿ ಅಸುನೀಗಿದ ಮಗು ಅದಲು, ಬದಲು

ಶಿವಮೊಗ್ಗ: ಆಸ್ಪತ್ರೆಯಲ್ಲಿ ಮೃತಪಟ್ಟ ನವಜಾತ ಶಿಶುವನ್ನು ಪೋಷಕರಿಗೆ ನೀಡದೇ, ಬದುಕಿರುವ ಮಗುವಿನ ಪೋಷಕರಿಗೆ ಸಿಬ್ಬಂದಿ ನೀಡಿರುವ ಆಘಾತಕಾರಿ ಘಟನೆ ನಗರದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಣೆಬೆಳಕೆರೆ ನಿವಾಸಿಗಳಾದ ಸುಮಾ, ಅಂಜನಪ್ಪ ದಂಪತಿಗೆ ಕಳೆದ ಸೋಮವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಗಂಡು ಮಗು ಜನನವಾಗಿದೆ. ಅದೇ ದಿನ ಶಿವಮೊಗ್ಗ ಜಿಲ್ಲೆಯ ಸೊರಬದ ಸುಮಾ, ಗೋಪಾಲಪ್ಪ ದಂಪತಿಗೂ ಹೆಣ್ಣು ಮಗು ಜನಿಸಿದೆ. ಇಬ್ಬರ ಮಕ್ಕಳನ್ನು ಆರೋಗ್ಯದ ದೃಷ್ಟಿಯಿಂದ ಆಸ್ಪತ್ರೆಯ …

Read More »

ಭೀಮಾತೀರದ ಶೂಟೌಟ್ ಪ್ರಕರಣದಲ್ಲಿ ಭಾಗಿಯಾಗಿದ್ದ ಐವರು ಅರೆಸ್ಟ್ ; ಬಂಧಿತರಿಂದ ಎರಡು ಕಂಟ್ರಿ ಪಿಸ್ತೂಲ್ ವಶಕ್ಕೆ..!

    ವಿಜಯಪುರ : ನವೆಂಬರ್ 2 ರಂದು ಭೀಮಾತೀರದ ಕುಖ್ಯಾತಿಯ ಮಹಾದೇವ ಭೈರಗೊಂಡ ಮೇಲೆ ನಡೆದಿದ್ದ ಶೂಟೌಟ್  ಪ್ರಕರಣಕ್ಕೆ ಸಂಭಂದಿಸಿದಂತೆ ವಿಜಯಪುರ. ಪೋಲೀಸರು ಮತ್ತೆ ಐವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.   ಹೌದು ನವೆಂಬರ್ 2 ರಂದು ನಡೆದಿದ್ದ ಗುಂಡಿನ ದಾಳಿಯಲ್ಲಿ ಭಾಗಿಯಾಗಿದ್ದ ಯಾಶೀನ್ ರಮಜಾನಸಾಬ್ ದಂದರಗಿ,  ಕರೆಪ್ಪ ಸೊನ್ನದ ,  ಸಿದ್ದರಾಯ ಬೊಮ್ಮನಜೋಗಿ ,  ಸಚೀನ ಮಾನವರ್ , ಚಡಚಣ. ಮೂಲದ ರವಿ ಬಂಡಿ ಬಂಧಿತ ಆರೋಪಿಗಳು, ಬಂಧಿತ ಆರೋಪಿಗಳಿಂದ  ಐದು …

Read More »

ಖಾನಾಪುರ ಸ್ಥಾನ ಕೊನೆ ಗಳಿಗೆಯಲ್ಲಿ ಸೋಲು : ಶಾಸಕ ಸತೀಶ್ ಜಾರಕಿಹೊಳಿ

  ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆ ವ್ಯಕ್ತಿಗತ ಅವರ ಗೌರವ, ಸ್ಥಾನದ ಮೇಲೆ ನಡೆಯುತ್ತದೆ. ಖಾನಾಪುರ ನಿರ್ದೇಶಕರ ಸ್ಥಾನ ಗೆಲ್ಲುವ ಎಲ್ಲ ಅವಕಾಶಗಳು ಇತ್ತು. ಆದರೆ ಕೊನೆ ಗಳಿಗೆಯಲ್ಲಿ ಸಮಸ್ಯೆಯಾಗಿ, ಸೋತಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ನಗರದ ನಿವಾಸದಲ್ಲಿ ಶನಿವಾರ ಮಾತನಾಡಿ, ಡಿಸಿಸಿ ಬ್ಯಾಂಕ್ ರೈತರು ಇರುವಂತಹ ಬ್ಯಾಂಕ್ ಆಗಿದೆ. ಇಲ್ಲಿ ಬಿಜೆಪಿ, ಜೆಡಿಎಸ್, ಕಾಂಗ್ರೆಸ್ ಅಂತ ಬರುವುದಿಲ್ಲ. ಇಡೀ ರಾಜ್ಯದಲ್ಲಿ ಡಿಸಿಸಿ ಬ್ಯಾಂಕ್, …

Read More »

ಡಿಸಿಎಂ ಲಕ್ಷ್ಮಣ ಸವದಿಗೆ ತಿರುಗೇಟು ನೀಡಿದ ಸತೀಶ್ ಜಾರಕಿಹೊಳಿ

ಬೆಳಗಾವಿ : ಇತ್ತಿಚೇಗೆ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ಮನೆಯೊಂದು ಮೂರು ಬಾಗಿಲು ಆಗಿದ್ದು, ಅವನತಿಯ ಅಂಚಿನಲ್ಲಿದೆ ಎಂಬ ಹೇಳಿಕೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ನಗರದ ನಿವಾಸದಲ್ಲಿ ಶನಿವಾರ ಮಾತನಾಡಿದ ಅವರು, ಎಲ್ಲ ಪಕ್ಷದಲ್ಲಿ ಗುಂಪುಗಾರಿಕೆ ಇದ್ದೇ ಇರುತ್ತದೆ. ಅದೇನು ಹೊಸದಲ್ಲ. ಬಿಜೆಪಿ ಪಕ್ಷದಲ್ಲಿಯೂ ಸಹ ಮೂರು ಗುಂಪುಗಳು ಇವೆ. ದೆಹಲಿ ಅಲ್ಲಿ ಒಂದು ಗುಂಪು, ಕರ್ನಾಟಕದಲ್ಲಿ ಎರಡು ಇದಾವೆ ಎಂದು …

Read More »

ಬಿಜೆಪಿ ಪ್ರಶಿಕ್ಷಣ ವರ್ಗ ಉದ್ಘಾಟಿಸಿದ ಸಚಿವ ಜಾರಕಿಹೊಳಿ‌

  ಗೋಕಾಕ್ ಗ್ರಾಮೀಣ ಮಂಡಲ ಬಿಜೆಪಿ ಕಾರ್ಯಕರ್ತರ ಪ್ರಶಿಕ್ಷಣ ವರ್ಗವನ್ನು ಜಲಸಂಪನ್ಮೂಲ ಸಚಿವರಾದ  ಶ್ರೀ ರಮೇಶ್ ಜಾರಕಿಹೊಳಿ ಅವರು ಇಂದು ಉದ್ಘಾಟಿಸಿದರು. ಗೋಕಾಕ್ ನಗರದ ಸಮುದಾಯ ಭವನದಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ್ ಗ್ರಾಮೀಣ ಮಂಡಲ ವತಿಯಿಂದ ಎರಡು ದಿನಗಳ ಕಾರ್ಯಕರ್ತರ ಪ್ರಶಿಕ್ಷಣ ವರ್ಗವನ್ನು ಹಮ್ಮಿಕೊಳ್ಳಲಾಗಿದೆ ಈ ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಮತ್ತಿತರ ಬಿಜೆಪಿ ನಾಯಕರು ಉಪಸ್ಥಿತರಿದ್ದರು.

Read More »

ಹಿರಿಯರ ಆಶೀರ್ವಾದವೇ ನನಗೆ ಶ್ರೀರಕ್ಷೇ: ಲಕ್ಷ್ಮಿ ಹೆಬ್ಬಾಳಕರ್

ಬೆಳಗಾವಿ – ಕ್ಷೇತ್ರದ ಜನರ ಆಶಿರ್ವಾದ ಎಲ್ಲಕ್ಕಿಂತ ದೊಡ್ಡದು. ನನಗೆ ಗ್ರಾಮೀಣ ಕ್ಷೇತ್ರದ ಜನರ ಆಶಿರ್ವಾದ ಸಿಕ್ಕಿದೆ. ಜನರು ನನ್ನ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಆಶಿರ್ವದಿಸಿದ್ದಾರೆ. ಇದಕ್ಕಿಂತ ಸುದೈವ ಬೇರೆ ಇಲ್ಲ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಹೇಳಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಂಬೇವಾಡಿ ಗ್ರಾಮದಲ್ಲಿ ಶ್ರೀ ಮಸ​ಣಾ​ಯಿ ದೇವಸ್ಥಾನ ಕಟ್ಟಡ ನಿರ್ಮಾಣದ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ​ಅವರು ಮಾತನಾಡುತ್ತಿದ್ದರು. ನನ್ನನ್ನು ಕಳೆದ ಚುನಾವಣೆಯಲ್ಲಿ …

Read More »

ಕೊರೊನಾ ಹೊತ್ತಲ್ಲೇ ಕೊಪ್ಪಳದಲ್ಲಿ ಇಲಿ ಜ್ವರ ಕಾಟ!

ಕೊಪ್ಪಳ: ಒಂದೇಡೆ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ಜನರು ನಿರಾಳವಾಗುತ್ತಿದ್ದರು. ಆದರೆ ಇಲ್ಲೊಂದು ಜಿಲ್ಲೆಯಲ್ಲಿ ಇಲಿ ಜ್ವರ ಆರಂಭವಾಗಿದ್ದು, ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದಾರೆ ಹೌದು. ಕೊಪ್ಪಳ ಜಿಲ್ಲೆಯಲ್ಲಿ ಇಲಿ ಜ್ವರದ್ದೇ ಮಾತಾಗಿದೆ. ಕಳೆದ ಒಂದು ವಾರದಲ್ಲಿ ಜಿಲ್ಲೆಯಲ್ಲಿ 6 ಜನರಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ಜಿಲ್ಲೆಯಲ್ಲಿ ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಇಳಿ ಮುಖವಾಗುತ್ತಿರುವುದು ನೆಮ್ಮದಿ ತಂದಿರುವ ಮಧ್ಯೆಯೇ ಇದೀಗ …

Read More »

ಕೊರೊನಾ ವೇಳೆ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗೆ ಭರ್ಜರಿ ಆಫರ್ ನೀಡಿದ ಬಿಎಂಟಿಸಿ

ಬೆಂಗಳೂರು: ಕೊರೊನಾ ವೇಳೆಯಲ್ಲೂ ಕಾರ್ಯನಿರ್ವಹಿಸಿದ್ದ ಸಿಬ್ಬಂದಿಗೆ ಬಿಎಂಟಿಸಿ ಭರ್ಜರಿ ಆಫರ್ ನೀಡಿದೆ. ಕೊರೊನಾ ಲಾಕ್‍ಡೌನ್ ಬಳಿಕ ಕೊರೊನಾದ ಜೊತೆಗೆ ಬಿಎಂಟಿಸಿ ಬಸ್‍ಗಳನ್ನು ಸರ್ಕಾರ ರಸ್ತೆಗಿಳಿಸಿತ್ತು. ಸಾರ್ವಜನಿರ ಹಿತ ದೃಷ್ಟಿಯಿಂದ ಅಂದು ಬಿಎಂಟಿಸಿ ನೌಕಕರು ಕೊರೊನಾ ನಡುವೆಯೂ ಎದರದೇ ಕಾರ್ಯನಿರ್ವಹಿಸಿದ್ದರು. ಕೊರೊನಾ ವೇಳೆಯೂ ಕೆಲಸ ಮಾಡಿದ್ದ ಸಿಬ್ಬಂದಿಗೆ ಬಿಎಂಟಿಸಿ ಒಂದು ದಿನ ವಂಡರ್ ಲಾಗೆ ಹೋಗುವ ಆಫರ್ ನೀಡಿದೆ. ಬಿಎಂಟಿಸಿ ಸಿಬ್ಬಂದಿಗಳಿಗೆ ಒಟ್ಟು 200 ವಂಡರ್ ಲಾ ಉಚಿತ ಪಾಸ್‍ಗಳನ್ನು ವಿತರಿಸಿದ್ದು, …

Read More »

ಮಕ್ಕಳಿಗೆ ಕೊರೊನಾ ಸೋಂಕು ಆವರಿಸಿರುವ ಕಾರಣ ರಾಜ್ಯ ಸರ್ಕಾರ ಸದ್ಯದ ಮಟ್ಟಿಗೆ ಶಾಲೆಗಳನ್ನು ತೆರೆಯದಿರಲು ತೀರ್ಮಾನಿಸಿದೆ.

ಬೆಂಗಳೂರು,ನ.6-ನೆರೆಯ ಆಂಧ್ರಪ್ರದೇಶ ಸೇರಿದಂತೆ ಮತ್ತಿತರ ಕಡೆ ಶಿಕ್ಷಕರು ಮತ್ತು ಮಕ್ಕಳಿಗೆ ಕೊರೊನಾ ಸೋಂಕು ಆವರಿಸಿರುವ ಕಾರಣ ರಾಜ್ಯ ಸರ್ಕಾರ ಸದ್ಯದ ಮಟ್ಟಿಗೆ ಶಾಲೆಗಳನ್ನು ತೆರೆಯದಿರಲು ತೀರ್ಮಾನಿಸಿದೆ. ಈಗಾಗಲೇ ತೀರ್ಮಾನವಾಗಿರುವಂತೆ ಇದೇ 17ರಿಂದ ಪದವಿ ಕಾಲೇಜುಗಳು ಪ್ರಾರಂಭವಾಗಲಿದ್ದು, ಅಲ್ಲಿನ ಪರಿಸ್ಥಿತಿ ಅವಲೋಕಿಸಿದ ಬಳಿಕವಷ್ಟೇ ಸರ್ಕಾರ ಶಾಲೆಗಳನ್ನು ಆರಂಭಿಸುವ ಬಗ್ಗೆ ಸೂಕ್ತವಾದ ತೀರ್ಮಾನವನ್ನು ಕೈಗೊವೈದ್ಯಕೀಯ, ಎಂಜಿನಿಯರಿಂಗ್, ಡಿಪ್ಲೊಮಾ ಸೇರಿದಂತೆ 17ರಿಂದ ಪದವಿ ಕಾಲೇಜುಗಳಲ್ಲಿ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ(ಯುಜಿಸಿ)ದ ಮಾರ್ಗಸೂಚಿ ಪ್ರಕಾರ ಪಾಠಪ್ರವಚನಗಳನ್ನು ನಡೆಸಬೇಕೆಂದು …

Read More »