Breaking News

ಜಿಲ್ಲೆ

ಚಿಕ್ಕೋಡಿಯಲ್ಲಿ ದೇವಿಯ ಮೂರ್ತಿಗೆ ಕಣ್ಣು ಅಂಟಿಸಿದ್ದ ಅರ್ಚಕ

ಚಿಕ್ಕೋಡಿ: ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಕೆಲ ದಿನಗಳಿಂದ ದೇವಿ ವಿಗ್ರಹ ಕಣ್ಣುಬಿಟ್ಟಿರುವುದೇ ಭಾರಿ ಸುದ್ದಿಯಾಗಿದೆ. ಸಂತೂಬಾಯಿ ದೇವಸ್ಥಾನದ ದೇವಿ ರಾತ್ರೋರಾತ್ರಿ ಕಣ್ಣುಬಿಟ್ಟಿದ್ದು ಅದೆಷ್ಟು ಶರವೇಗದಲ್ಲಿ ಹರಡಿತ್ತು ಎಂದರೆ ಗ್ರಾಮಸ್ಥರು ಮಾತ್ರವಲ್ಲದೇ ಅಕ್ಕಪಕ್ಕದ ಊರಿನವರೂ ಈ ಪವಾಡವನ್ನು ನೋಡಲು ತಂಡೋಪತಂಡವಾಗಿ ಬರತೊಡಗಿದರು. ಕರೊನಾ ತೊಲಗಿಸಲು ಈ ದೇವಿ ಕಣ್ಣು ಬಿಟ್ಟಿರುವುದಾಗಿ ಹೇಳಿದ್ದ ಅರ್ಚಕ, ಈ ದೇವಿಯನ್ನು ಪೂಜೆ ಮಾಡಿದರೆ ಕರೊನಾ ತೊಲಗುವುದಾಗಿ ಹೇಳಿದ್ದರು. ಆದ ಕಾರಣ …

Read More »

ಕಳ್ಳತನ ಮಾಡುವಾಗ ಮೊಬೈಲ್ ಬಳಸದ ಚಾಣಾಕ್ಷ

ಬೆಂಗಳೂರು: ಈತನ ಲವ್ವು ತನ್ನ ಲೈಫನ್ನೆ ಬದಲಿಸಿತ್ತು. ಪ್ರೀತಿಸೋದಳನ್ನ ರಾಯಲಾಗಿ ನೋಡಿಕೊಳ್ಳಬೇಕೆಂಬ ಆಸೆ ಮತ್ತು ನೆಪವೇ ಈತ ಅಫೆನ್ಸ್​ಗಳ ಮೇಲೆ ಅಫೆನ್ಸ್ ಮಾಡೋದಕ್ಕೆ ಕಾರಣವಾಯ್ತು. ಒಂದು ಬಾರಿ ಕಳ್ಳ ಎನಿಸಿಕೊಂಡವನು ಅದೇ ಚಟವಾಗಿದ್ದರಿಂದ ತನ್ನೀಡಿ ಜೀವನವನ್ನೇ ಕಳ್ಳತನಕ್ಕೆ ಮುಡಿಪಿಟ್ಟಿದ್ದ ಅಂತಹ ಕಳ್ಳನನ್ನ ಸಿಸಿಬಿ ಹೆಡೆಮುರಿ ಕಟ್ಟಿದೆ. ಬರೋಬ್ಬರಿ 80 ಲಕ್ಷ ಮೌಲ್ಯದ ಒಂದೂವರೆ ಕೆ.ಜಿ ಚಿನ್ನವನ್ನ ಈ ಕುಖ್ಯಾತ ಅಂತರ್ ರಾಜ್ಯ ಕಳ್ಳನಿಂದ ಸಿಸಿಬಿ ಅಧಿಕಾರಿಗಳು ರಿಕವರಿ ಮಾಡಿಕೊಂಡಿದ್ದಾರೆ. 2014 …

Read More »

ಬೆಸ್ಕಾಂನಲ್ಲಿ ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ

  ಬೆಂಗಳೂರು ವಿದ್ಯುತ್‌ ಸರಬರಾಜು ಕಂಪನಿ ನಿಯಮಿತ (ಬೆಸ್ಕಾ) ಖಾಲಿ ಇರುವ ಹುದ್ದೆಯ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆ: ಕಂಪನಿ ಸೆಕ್ರೆಟರಿ ಸ್ಥಳ: ಬೆಂಗಳೂರು ವಿದ್ಯಾರ್ಹತೆ: ಅರ್ಜಿ ಸಲ್ಲಿಸ ಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ವಯೋಮಿತಿ: ಗರಿಷ್ಠ 40 ವರ್ಷ. ಅರ್ಜಿ ಸಲ್ಲಿಕೆ ವಿಧಾನ: ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಜನರಲ್‌ ಮ್ಯಾನೇಜರ್‌, ಬೆಸ್ಕಾಂ ಕಾರ್ಪೊರೇಟ್ ಆಫೀಸ್‌, ಕೆಆರ್‌ ಸರ್ಕಲ್‌, ಬೆಂಗಳೂರು …

Read More »

ಯಾರಿಗೆ ಯಾರು ಮೋಸ ಮಾಡಿದ್ದಾರೆ ಎಂಬುದನ್ನು ರಮೇಶ್ ಜಾರಕಿಹೊಳಿಯವರೇ ಹೇಳಬೇಕು: ಸತೀಶ್ ಜಾರಕಿಹೊಳಿ

ಬೆಳಗಾವಿ: ಸ್ವಪಕ್ಷಿಯರೇ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾರೆ ಎಂಬ ರಮೇಶ ಜಾರಕಿಹೊಳಿ ಹೇಳಿಕೆಗೆ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದು ಯಾರಿಗೆ ಯಾರು ಮೋಸ ಮಾಡಿದ್ದಾರೆ ಎಂಬುದನ್ನು ರಮೇಶ್ ಜಾರಕಿಹೊಳಿಯವರೇ ಹೇಳಬೇಕು ಎಂದಿದ್ದಾರೆ. ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ನರೇಗಾ ಕಾಮಗಾರಿಗಳ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿದ ಸತೀಶ್ ಜಾರಕಿಹೊಳಿ, ಯಾರಿಗೆ ಯಾರು ಮೋಸ ಮಾಡಿದ್ದಾರೆ ಎಂಬುವುದನ್ನು ರಮೇಶ್ ಜಾರಕಿಹೊಳಿ ಅವರಿಗೆ ನೀವೇ ಕೇಳಬೇಕು ಎಂದರು. …

Read More »

ಬಟ್ಟೆ ತೊಳೆಯಲು ಹೋದ ನಾಲ್ವರು ಸಹೋದರರು ನೀರು ಪಾಲು

ಬೆಳಗಾವಿ: ಜಿಲ್ಲೆಯ ಅಥಣಿ ತಾಲ್ಲೂಕಿನ ಹಲ್ಯಾಳ ಗ್ರಾಮದ ಬಳಿ ಬಟ್ಟೆ, ಹೊದಿಕೆ ಮೊದಲಾದವುಗಳನ್ನು ತೊಳೆಯಲು ಕೃಷ್ಣಾ ನದಿಗೆ ಇಳಿದಿದ್ದಾಗ ಕೊಚ್ಚಿ ಹೋಗಿದ್ದ ನಾಲ್ವರು ಸಹೋದರರು ಶವವಾಗಿ ಪತ್ತೆಯಾಗಿದ್ದಾರೆ. ಸೋಮವಾರ ಘಟನೆ ನಡೆದಿತ್ತು. ಪರಶುರಾಮ ಗೋಪಾಲ ಬನಸೋಡೆ (36) ಶವ ಮಂಗಳವಾರ ಪತ್ತೆಯಾಗಿತ್ತು. ಧರೆಪ್ಪ ಗೋಪಾಲ ಬನಸೋಡೆ (24), ಸದಾಶಿವ ಬನಸೋಡೆ (29) ಹಗೂ ಶಂಕರ ಬನಸೋಡೆ (20) ಮೃಹದೇಹವನ್ನು ಬುಧವಾರ ಹೊರತೆಗೆಯಲಾಗಿದೆ. ಎನ್‌ಡಿಆರ್‌ಎಫ್, ಅಗ್ನಿಶಾಮಕ ದಳದವರು ಸ್ಥಳೀಯರು ಸಹಕಾರದೊಂದಿಗೆ ಸತತ …

Read More »

ತೆರವಾಗಿರುವ ಹಾನಗಲ್ ಕ್ಷೇತ್ರದ ಮೇಲೆ ಸಿಎಂ ಪುತ್ರ ವಿಜಯೇಂದ್ರ ಕಣ್ಣು?

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಅವರ ರಾಜಕೀಯ ಬದುಕಿಗೆ ಕ್ಷೇತ್ರದ ಸಮಸ್ಯೆ ಎದುರಾಗಿದೆ. ಅವರ ಮುಂದಿನ ರಾಜಕೀಯ ಜೀವನ ಯಾವ ಕ್ಷೇತ್ರದಿಂದ ಆರಂಭವಾಗಲಿದೆ ಎಂಬ ಗೊಂದಲ ಮೊದಲಿನಿಂದಲೂ ಇದೆ. ಇದೀಗ ಬಿಜೆಪಿ ಶಾಸಕ ಸಿಎಂ ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ಕ್ಷೇತ್ರದ ಮೇಲೆ ಸಿಎಂ ಪುತ್ರ ಬಿ ವೈ ವಿಜಯೇಂದ್ರ ಕಣ್ಣು ಹಾಕಿದ್ದಾರೆ ಎಂಬ ಮಾತು ಬಲವಾಗಿ ಕೇಳಿಬರುತ್ತಿದೆ. ಪಕ್ಕಾ ಲಿಂಗಾಯತ ಕ್ಷೇತ್ರವಾಗಿರುವ ಹಾನಗಲ್ …

Read More »

ದೂರು ನೀಡಲು ಠಾಣೆಗೆ ಬಂದವರ ಮೇಲೆ ಪಿಎಸ್‌ಐ ಹಲ್ಲೆ; ಎಸ್​ಪಿ ಮೊರೆ ಹೋದ ಕುಟುಂಬಸ್ಥರು

ಬಾಗಲಕೋಟೆ: ದೂರು ನೀಡಲು ಪೊಲೀಸ್ ಠಾಣೆಗೆ ಬಂದವರ ಮೇಲೆ ಪಿಎಸ್‌ಐ ಹಲ್ಲೆ ಮಾಡಿರುವ ಘಟನೆ ಬಾಗಲಕೋಟೆ ತಾಲೂಕಿನ ಕಲಾದಗಿ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಪಿಎಸ್‌ಐ ರವಿ ಪವಾರ್ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮೊದಲ ಪತ್ನಿಗೆ ಗೊತ್ತಾಗದಂತೆ ತುಳಸಿಗೇರಿ ಗ್ರಾಮದ ನಿವಾಸಿ ರಂಗಪ್ಪ ಎಂಬುವವನು ಎರಡನೇ ಮದುವೆಯಾಗಿದ್ದ. ರಂಗಪ್ಪನ ಮೊದಲ ಪತ್ನಿ ಲಕ್ಷ್ಮೀ ಸಹೋದರ ಸಚಿನ್ ಗಿಡ್ಡಿ, ಲಕ್ಷ್ಮೀ ಭಾವ ಶ್ರೀಕಾಂತ್ ರಂಗಪ್ಪನ ವಿರುದ್ಧ ದೂರು ನೀಡಲು ಠಾಣೆಗೆ …

Read More »

ಹಗೇದಾಳ ಗುಟಗುದ್ದಿ ರಾಮದ ಯುವಕರಿಂದ ರಾಹುಲ್ ಜಾರಕಿಹೊಳಿಗೆ ಸತ್ಕಾರ

ಹಗೇದಾಳ ಗ್ರಾಮದ ಯುವಕರಿಂದ ರಾಹುಲ್ ಜಾರಕಿಹೊಳಿಗೆ ಸತ್ಕಾರ ಹುಕ್ಕೇರಿ : ತಾಲ್ಲೂಕಿನ ಹಗೇದಾಳ ಗ್ರಾಮದ ಯುವಕರು ಕಾಂಗ್ರೆಸ್ ಯುವ ನಾಯಕ ರಾಹುಲ್ ಜಾರಕಿಹೊಳಿ ಅವರನ್ನು ಬುಧವಾರ ಸತ್ಕರಿಸಿ ಗೌರವಿಸಿದರು. ಗುಟಗುದ್ದಿ ಗ್ರಾಮದಲ್ಲಿ ಇಂದು ನಡೆಯಲಿರುವ ರಾಹುಲ್ ಜಾರಕಿಹೊಳಿ ಯುವಕ ಸಂಘದ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುವ ಸಂದರ್ಭದಲ್ಲಿ ದಾರಿ ಮಧ್ಯದಲ್ಲಿ ಹಗೇದಾಳ ಗ್ರಾಮದ ಯುವಕರು, ರಾಹುಲ್ ಅವರನ್ನು ಭೇಟಿ ಮಾಡಿ ಸನ್ಮಾನಿಸಿದರು.   ಸನ್ಮಾನ ಸ್ವೀಕರಿಸಿ ಯುವ ನಾಯಕ ರಾಹುಲ್ ಜಾರಕಿಹೊಳಿ …

Read More »

ಏಳು ಐಎಎಸ್ ಅಧಿಕಾರಿಗಳ ವರ್ಗಾವಣೆ : ರಾಜ್ಯ ಸರ್ಕಾರದ ಆದೇಶ

ಬೆಂಗಳೂರು: ರಾಜ್ಯ ಸರ್ಕಾರ ಏಳು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅಜಯ್ ನಾಗಭೂಷಣ್- ನಗರಾಭಿವೃದ್ದಿ ಇಲಾಖೆ ಕಾರ್ಯದರ್ಶಿ, ಸಿ.ಶಿಖಾ- ಆಯುಕ್ತರು, ವಾಣಿಜ್ಯ ತೆರಿಗೆ ಇಲಾಖೆ, ಸಲ್ಮಾ ಫಾಹಿಮಾ- ಹೆಚ್ಚುವರಿ ಕಾರ್ಯದರ್ಶಿ, ಮೂಲ ಸೌಕರ್ಯ ಇಲಾಖೆ, ಕಣಗವಲ್ಲಿ- ಪರೀಕ್ಷಾ ನಿಯಂತ್ರಕರು. ಕೆಪಿಎಸ್ ಸಿ, ರಘುನಂದನ ಮೂರ್ತಿ- ಆಯುಕ್ತರು( ಜಾರಿ) ವಾಣಿಜ್ಯ ತೆರಿಗೆ ಇಲಾಖೆ,ಅರ್ಚನಾ ಎಂ,ಎಸ್.- ಸದಸ್ಯರು. ಕೆ ಎ ಟಿ. ರಮ್ಯಾ ಎಸ್- ಕಾರ್ಯಕಾರಿ ನಿರ್ದೇಶಕರು, ಕರ್ನಾಟಕ ಪರೀಕ್ಷಾ …

Read More »

ಭಾರತೀಯ ಪುರಾತತ್ವ ಸರ್ವೇಕ್ಷಣಾ ಕಛೇರಿ ವಿಜಯಪುರಕ್ಕೆ ಸ್ಥಳಾಂತರವಾಗಲಿ : ಯತ್ನಾಳ್ ಆಗ್ರಹ

ವಿಜಯಪುರ : ಪಾರಂಪರಿಕ ಹಿನ್ನೆಲೆ ವಿಜಯಪುರ ನಗರ ವಿಶ್ವವಿಖ್ಯಾತ ಐತಿಹಾಸಿಕ ಸ್ಮಾರಕಗಳನ್ನು ಹೊಂದಿದೆ. ಜಗತ್ತಪ್ರಸಿದ್ಧ ಗೋಲಗುಮ್ಮಟ, ಇಬ್ರಾಹಿಂ ರೋಜಾ ಸೇರಿದಂತೆ ನೂರಕ್ಕೂ ಹೆಚ್ಚು ಸ್ಮಾರಕಗಳು ವಿಜಯಪುರ ನಗರದಲ್ಲಿವೆ. ಹೀಗಾಗಿ ವಿಶ್ವದರ್ಜೆಯ ಸ್ಮಾಕರಗಳೇ ಇಲ್ಲದ ಧಾರವಾಡ ನಗರದಲ್ಲಿರುವ ಭಾರತೀಯ ಪುರಾತತ್ವ ಸರ್ವೇಕ್ಷಣಾ ಕಛೇರಿಯನ್ನು ವಿಜಯಪುರ ಪಾರಂಪರಿಕ ನಗರಕ್ಕೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳುವಂತೆ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಗ್ರಹಿಸಿದರು. ಮಂಗಳವಾರ ನಗರದಲ್ಲಿ ಭೂತನಾಳ ಬಳಿ ಪ್ರವಾಸೋದ್ಯಮ ನಿಮಗದಿಂದ ನಿರ್ಮಿಸುತ್ತಿರುವ ತ್ರಿಸ್ಟಾರ್ …

Read More »