Breaking News

ಜಿಲ್ಲೆ

ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬದ ಶಿಲ್ಪಾ ರಾಜು ಪರ್ನಾಕರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614 ಅಂಕ ಪಡೆದು ಸಾಧನೆ ತೋರಿದ್ದಾರೆ.

ತೆಲಸಂಗ (ಬೆಳಗಾವಿ ಜಿಲ್ಲೆ): ಇಲ್ಲಿನ ಕೃಷಿ ಜಮೀನುಗಳಲ್ಲಿ ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬದ ಶಿಲ್ಪಾ ರಾಜು ಪರ್ನಾಕರ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 614 ಅಂಕ ಪಡೆದು ಸಾಧನೆ ತೋರಿದ್ದಾರೆ. ಓದು-ಬರಹ ಬಾರದ ತಂದೆ-ತಾಯಿಗೆ ಹೆಮ್ಮೆಯ ಭಾವ ನೀಡಿದ್ದಾರೆ. ಪತ್ರಾಸಿನ ಮನೆ, ಮನೆಯ ಅಂಗಳದಲ್ಲಿ ಜಾನವಾರು, ನಿತ್ಯ ಹೊಲದ ಕೆಲಸ ಮತ್ತು ಕೂಲಿ ಮಾಡಿಕೊಂಡೆ ಬದುಕಿನ ಬಂಡಿ ಜಗ್ಗುವ ಅವಿಭಕ್ತ ಕುಂಟುಂಬವಿದು. ಕೊರತೆಗಳ ನೆಪವನ್ನು ಬದಿಗಿಟ್ಟು ಸಾಧನೆ ತೋರಿದ್ದಾರೆ. ಗ್ರಾಮದ ಅಂಬೇಡ್ಕರ್ …

Read More »

KGF2 ಸಿನಿಮಾ ವೀಕ್ಷಣೆ ವೇಳೆ ಶೂಟೌಟ್ ಮಾಡಿ ಪರಾರಿಯಾಗಿದ್ದವನನ್ನು ಹಾವೇರಿ ಜಿಲ್ಲಾ ಪೊಲೀಸರು ಹೆಡೆಮುರಿಕಟ್ಟಿದ್ದಾರೆ.

ಹಾವೇರಿ: ಕಳೆದ ಏಪ್ರಿಲ್ 19 ರಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಯುವಕನೊಬ್ಬನ ಮೇಲೆ ಶೂಟೌಟ್ ಮಾಡಿ ಪರಾರಿಯಾಗಿದ್ದವನನ್ನು ಹಾವೇರಿ ಜಿಲ್ಲಾ ಪೊಲೀಸರು ಅಂತೂ ಹೆಡೆಮುರಿಕಟ್ಟಿದ್ದಾರೆ. ಬಂಧಿತನನ್ನು ಶಿಗ್ಗಾವಿ ಧಖನಿ ಓಣಿಯ ಮಂಜುನಾಥ್ ಶಾಂತಪ್ಪ ಪಾಟೀಲ ಎಂದು ಗುರುತಿಸಲಾಗಿದೆ. ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಎಸ್‌ಪಿ ಹನುಮಂತರಾಯ ಈ ಮಾಹಿತಿ ತಿಳಿಸಿದರು. ಶಿಗ್ಗಾವಿ ತಾಲೂಕಿನ ಮುಗಳಿ ಗ್ರಾಮದ ವಸಂತಕುಮಾರ ಶಿವಪುರ ಹಾಗೂ ಆತನ ನಾಲ್ವರು ಸ್ನೇಹಿತರು ಏ.19 ರಂದು …

Read More »

PSI ಹುದ್ದೆ ಅಕ್ರಮ: ಮೊದಲ ರಾತ್ರಿಯ ಮೂಡ್​ನಲ್ಲಿದ್ದವನಿಗೆ ಸಿಐಡಿ ಶಾಕ್

ಬಾಗಲಕೋಟೆ: ಪಿಎಸ್​ಐ ಹುದ್ದೆ ನೇಮಕಾತಿಯಲ್ಲಿನ ಅಕ್ರಮ ಉರುಳು ನವ ವಿವಾಹಿತನಿಗೂ ಸುತ್ತಿಕೊಂಡಿದ್ದು, ಮೊದಲ ರಾತ್ರಿಯ ಮೂಡ್​ನಲ್ಲಿದ್ದವನಿಗೆ ಸಿಐಡಿ ಶಾಕ್​ ಕೊಟ್ಟಿದೆ. ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲೂಕಿನ ಶ್ರೀಕಾಂತ್ ಚೌರಿ ಬಂಧಿತ. ಮೇ 14ರಂದು ಜಮಖಂಡಿ ನಗರದಲ್ಲಿ ಶ್ರೀಕಾಂತ್​ನ ಮದುವೆ ಅದ್ದೂರಿಯಾಗಿ ನೆರವೇರಿತ್ತು. ಇದಾದ 5 ದಿನಕ್ಕೆ ಸಿಐಡಿ ಪೊಲೀಸರು ಈತನನ್ನು ವಶಕ್ಕೆ ಪಡೆದಿದ್ದಾರೆ. ಧಾರವಾಡದಲ್ಲಿರುವ ಇನ್ಸ್ಪೈರ್ ಇಂಡಿಯಾ ಐಎಎಸ್ ಆಯಂಡ್ ಕೆಎಎಸ್ ಕೋಚಿಂಗ್​ ಸೆಂಟರ್​ನ ಮಾಜಿ ನಿರ್ದೇಶಕನಾಗಿದ್ದ ಶ್ರೀಕಾಂತ, ಪಿಎಸ್​ಐ ಅಭ್ಯರ್ಥಿಗಳಿಂದ …

Read More »

ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಸತ್ತಿಗೇರಿಯ ಸಹನಾ ಕನ್ನಡದಲ್ಲಿ ಟಾಪರ್

ಬೆಳಗಾವಿ: ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಪ್ರಕಟವಾಗಿದ್ದು, ಜಿಲ್ಲೆಯ ಯರಗಟ್ಟಿ ತಾಲ್ಲೂಕಿನ ಸತ್ತಿಗೇರಿ ಕರ್ನಾಟಕ ಪಬ್ಲಿಕ್ ಶಾಲೆ ವಿದ್ಯಾರ್ಥಿನಿ ಸಹನಾ ಮಹಾಂತೇಶ ರಾಯರ, ಕನ್ನಡ ವಿಭಾಗದಲ್ಲಿ ಪೂರ್ಣ ಅಂಕ ಗಳಿಸಿ ರಾಜ್ಯಕ್ಕೆ ಟಾಪರ್‌ ಆಗಿ ಹೊರಹೊಮ್ಮಿದ್ದಾರೆ.   ಸಂತಸ ಹಂಚಿಕೊಂಡ ಅವರು, ‘ಕೋವಿಡ್‌-19 ಸಂಕಷ್ಟದಿಂದ ತರಗತಿ ಸಮರ್ಪಕವಾಗಿ ನಡೆಯಲಿಲ್ಲ. ಆನ್‌ಲೈನ್‌ ತರಗತಿಗೆ ಹಾಜರಾಗಲು ನೆಟ್‌ವರ್ಕ್‌ ಸಮಸ್ಯೆಯೂ ಕಾಡುತ್ತಲಿತ್ತು. ಆದರೂ, ಸಮಸ್ಯೆಗೆ ಎದೆಗುಂದದೆ ಆತ್ಮವಿಶ್ವಾಸದಿಂದ ಓದು ಮುಂದುವರಿಸಿದೆ. ಶಿಕ್ಷಕರು ಮತ್ತು ಹೆತ್ತವರು ಪ್ರೋತ್ಸಾಹಿಸಿದರು. …

Read More »

ವಿಧಾನಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟ

ಬೆಳಗಾವಿ: ಕರ್ನಾಟಕ ವಾಯವ್ಯ ಪಧವೀಧರು ಮತ್ತು ಶಿಕ್ಷಕರ ಕ್ಷೇತ್ರದಿಂದ ಕರ್ನಾಟಕ ವಿಧಾನಪರಿಷತ್ತಿಗೆ ತಲಾ ಒಬ್ಬ ಸದಸ್ಯರನ್ನು ಚುನಾಯಿಸಲು ಪ್ರಾದೇಶಿಕ ಆಯುಕ್ತರು ಹಾಗೂ ಚುನಾವಣಾಧಿಕಾರಿಯಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಗುರುವಾರ ಅಧಿಸೂಚನೆ ಹೊರಡಿಸಿದ್ದಾರೆ.   ನಾಮಪತ್ರಗಳನ್ನು ಉಮೇದುವಾರರು ಅಥವಾ ಅವರ ಸೂಚಕರು ಚುನಾವಣಾಧಿಕಾರಿ ಕಚೇರಿ ಅಥವಾ ಸಹಾಯಕ ಚುನಾವಣಾಧಿಕಾರಿಯಾದ ಜಿಲ್ಲಾಧಿಕಾರಿ ಕಾರ್ಯಾಲಯಕ್ಕೆ ಮೇ 26ರೊಳಗೆ ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ (ಸರ್ಕಾರಿ ರಜಾ ದಿನಗಳನ್ನು ಹೊರತುಪಡಿಸಿ) ಸಲ್ಲಿಸಬಹುದು ಎಂದು ತಿಳಿಸಲಾಗಿದೆ. …

Read More »

ಬಡತನದಲ್ಲಿ ಉತ್ತಮ ಅಂಕ ಪಡೆದ ಅಮಿತ್

ವಿಜಯಪುರ: ರಾಜ್ಯದ ಎಸ್‌ಎಸ್‌ಎಲ್‌ಸಿ (SSLC) ವಿದ್ಯಾರ್ಥಿಗಳ (Students) ಪರೀಕ್ಷಾ ಫಲಿತಾಂಶ (Exam Result) ಪ್ರಕಟಗೊಂಡಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ (Education Minister) ಬಿ.ಸಿ. ನಾಗೇಶ್ (B.C. Nagesh) ಫಲಿತಾಂಶ ಪ್ರಕಟಿಸಿದ್ದಾರೆ. ಈ ಬಾರಿ ಶೇ.85.63ರಷ್ಟು ವಿದ್ಯಾರ್ಥಿಗಳು (Students) ಉತ್ತೀರ್ಣರಾಗಿದ್ದಾರೆ. ಈ ಬಾರಿಯೂ ಬಾಲಕಿಯರೇ (Girls) ಮೇಲುಗೈ ಸಾಧಿಸಿದ್ದಾರೆ. ಶೇ. 90.29ರಷ್ಟು ಬಾಲಕಿಯರು, ಶೇ. 81.30ರಷ್ಟು ಬಾಲಕರು (Boys) ಪಾಸ್ (Pass) ಆಗಿದ್ದಾರೆ. ಒಟ್ಟೂ 7,30,881 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ …

Read More »

ಶಾಸಕ ರಾಜೂಗೌಡ ಹೆಸರೇಳಿ ಜನರನ್ನು ವಂಚಿಸಿದ್ದ ನಯವಂಚಕಿ ರೇಖಾ ಎಂಬಾಕೆಯ ಬಂಧನ

ರಾಯಚೂರು: ಶಾಸಕ ರಾಜೂಗೌಡ ಹೆಸರೇಳಿ ಜನರನ್ನು ವಂಚಿಸಿದ್ದ ನಯವಂಚಕಿ ರೇಖಾ ಎಂಬಾಕೆಯ ಬಂಧನವಾಗಿದೆ. ರೇಖಾ ವಂಚನೆಯ ಬಗ್ಗೆ ಇದೇ ಮೇ 10 ರಂದು ದಿಗ್ವಿಜಯ ನ್ಯೂಸ್ ವಿಸ್ತೃತ ವರದಿ ಬಿತ್ತರಿಸಿತ್ತು. ಇದರ ಪರಿಣಾಮವಾಗಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.   ಎನ್​​ಜಿಓ ಮೂಲಕ ಬ್ಯಾಂಕ್ ಓಪನ್ ಮಾಡಿ ಬ್ಯಾಂಕಿನಲ್ಲಿ ನೌಕರಿ ಕೊಡಿಸುವುದಾಗಿ ಜನರಿಂದ ಲಕ್ಷಾಂತರ ರೂಪಾಯಿ ಹಣ ಪಡೆದು ರೇಖಾ ಮೋಸ ಮಾಡಿದ್ದಾಳೆ. ತನ್ನ ಕೃತ್ಯಕ್ಕೆ ಶಾಸಕ ರಾಜೂಗೌಡ ಹೆಸರನ್ನು ಬಳಸಿಕೊಂಡಿದ್ದಳು. ಈ …

Read More »

ಬಿಡದಿ ನಿತ್ಯಾನಂದನ ಆರೋಗ್ಯ.ಬಿಗಡಾಯಿಸಿತೇ .?

ನವದೆಹಲಿ: ಕೈಲಾಸ ದೇಶದ ಪೀಠಾಧಿಪತಿ ಬಿಡದಿ ನಿತ್ಯಾನಂದನ ಆರೋಗ್ಯ ತೀವ್ರವಾಗಿ ಬಿಗಡಾಯಿಸಿರುವ ಶಂಕೆ ಮೂಡಿದೆ. ತಾನು ಬದುಕಲು ಬಯಸುತ್ತಿಲ್ಲ ಎಂದು ನಿತ್ಯಾನಂದ ಫೇಸ್‍ಬುಕ್ ಪೋಸ್ಟ್ ನಲ್ಲಿ ತಿಳಿಸಿದ್ದಾರೆ. ತನಗೆ ಕ್ಯಾನ್ಸರ್ ಇಲ್ಲ, ದೇಹದ ಎಲ್ಲಾ ಅಂಗಾಂಗ ಸರಿಯಾಗಿ ಕೆಲಸ ಮಾಡ್ತಿವೆ ಎಂದು ವೈದ್ಯಕೀಯ ವರದಿಗಳು ಹೇಳುತ್ತಿವೆ. ಆದರೆ ತಮಗೆ ಅನ್ನ, ನೀರು ಸೇವಿಸಲು ಆಗುತ್ತಿಲ್ಲ. ಒಂದು ವೇಳೆ ಬಲವಂತವಾಗಿ ಆಹಾರ ಸೇವಿಸಿದರೂ ಅದು ಜೀರ್ಣವಾಗುತ್ತಿಲ್ಲ. ನಿತ್ಯ ಪೂಜೆ ಮಾತ್ರ ಮಾಡಲು …

Read More »

ಖಾನಾಪುರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರ

ಖಾನಾಪುರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರದ ಪ್ರಯುಕ್ತÀವಾಗಿ ಎಚ್‍ಇಆರ್‍ಎಫ್ ರಕ್ಷಣಾ ತಂಡ ಬೆಳಗಾವಿ ವತಿಯಿಂದ ಪ್ರಕೃತಿ ವಿಕೋಪ ನಿರ್ವಹಣೆ ಕುರಿತಂತೆ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.ಖಾನಾಪುರದ ಪೊಲೀಸ್ ತರಬೇತಿ ಕೇಂದ್ರದಲ್ಲಿ ಮಕ್ಕಳ ಬೇಸಿಗೆ ಶಿಬಿರದ ಪ್ರಯುಕ್ತÀವಾಗಿ ಕೊನೆಯ ದಿನ ಎಚ್‍ಇಆರ್‍ಎಫ್ ರಕ್ಷಣಾ ತಂಡ ಬೆಳಗಾವಿ ವತಿಯಿಂದ ಮಕ್ಕಳಿಗೆ ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ರಕ್ಷಣಾ ತಂತ್ರಗಳನ್ನು ಕುರಿತಂತೆ ಎಚ್‍ಇಆರ್‍ಎಫ್ ರಕ್ಷಣಾ ತಂಡ ಸಿಬ್ಬಂದಿ ಮಕ್ಕಳಿಗೆ ಪ್ರಾತ್ಯಕ್ಷಿಕೆಯನ್ನು ನೀಡಿದರು. ಈ ವೇಳೆ ಮಕ್ಕಳಿಗೆ …

Read More »

ಚಿಂಚಲಿ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ

ಸಾರ್ವಜನಿಕ ಬಳಿ ಲಂಚಕ್ಕೆ ಬೇಡಿಕೆಇಟ್ಟು ಹಣ ಪೀಕುತ್ತಿದ್ದ ಲಂಚಬಾಕ ಗ್ರಾಮಲೆಕ್ಕಾಧಿಕಾರಿ ಎಸಿಬಿ ಬಲೆಗೆ ಬಿದ್ದಿರುವ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ.ಹೌದು ರಾಯಬಾಗ್ ತಾಲೂಕಿನ ಚಿಂಚಲಿ ಗ್ರಾಮದ ಗ್ರಾಮಲೆಕ್ಕಾಧಿಕಾರಿ ಜಗದೀಶ್ ಕಿತ್ತೂರ ಎಂಬವ ಸಾರ್ವಜನಿಕವಾಗಿ ಕೆಲಸಮಾಡುತ್ತಿದ್ದ ವೇಳೆ ಜನರಿಂದ ಲಂಚ ಸ್ವೀಕರಿಸುತ್ತಿದ್ದ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾನೆ. ದಿನಾಂಕ: 18.05.2022 ರಂದು ಗ್ರಾಮ ಲೆಕ್ಕಾಧಿಕಾರಿ ಲಂಚ ಕೇಳುತ್ತಿದ್ದಾರೆ ಎಂದು ಗಣಕೋಡಿಯ ಸಚೀನ್ ಶಾಂತಿನಾಥ ಶಿಂಧೆ ಎಸಿಬಿಗೆ …

Read More »