Breaking News

ಜಿಲ್ಲೆ

ಒಂದು ಬಲಿ ಪಡೆದ ಭ್ರೂಣ ಹತ್ಯೆ ಪ್ರಕರಣ: ಕುಟುಂಬ ಕಲ್ಯಾಣಾಧಿಕಾರಿ ಅಧಿಕಾರ ಮೊಟಕು ಮಾಡಿದ ಡಿಸಿ

ಬೆಳಗಾವಿ- ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಯಾಗಿರುವ ಡಾ.ಎ.ವಿ.ಕಿವಡಸಣ್ಣವರ ಅವರು ನಿರ್ವಹಿಸುತ್ತಿದ್ದ ಕೆಪಿಎಂಇ ಮತ್ತು ಪಿಸಿ-ಪಿಎನ್ ಡಿಟಿ ಕಾರ್ಯವನ್ನು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಿ.ಎನ್.ತುಕ್ಕಾರ ಅವರಿಗೆ ಹಂಚಿಕೆ ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಆದೇಶ ಹೊರಡಿಸಿದ್ದಾರೆ.   ಮೂಡಲಗಿಯಲ್ಲಿ ಹಳ್ಳದಲ್ಲಿ ಭ್ರೂಣಗಳು ಪತ್ತೆಯಾದ ಹಿನ್ನೆಲೆಯಲ್ಲಿ ಇವರ ಕಾರ್ಯವೈಖರಿ ಸಮರ್ಪಕವಾಗಿರುವುದಿಲ್ಲ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿದ್ದರು. ಕೆಪಿಎಂಇ ಮತ್ತು ಪಿಸಿ-ಪಿಎನ್ ಡಿಟಿ ಕಾರ್ಯವನ್ನು ಡಾ.ಕಿವಡಸನ್ನವರ …

Read More »

ಗೋಕಾಕ KSRTC ನೌಕರರ ಬೀಳ್ಕೊಡುಗೆ ಸಮಾರಂಭದಲ್ಲಿ ಸಂತೋಷ್ ಜಾರಕಿಹೊಳಿ ಭಾಗಿ

ಗೋಕಾಕ: ಗೋಕಾಕ ನಗರದ ವಾಯುವ್ಯ ರಸ್ತೆ ಸಾರಿಗೆ ಘಟಕದ ಸಿಬ್ಬಂದಿಗಳ ಉದ್ಘಾಟನೆ ಸಂದರ್ಭ ದಲ್ಲಿ ಸಂತೋಷ್ ಜಾರಕಿಹೊಳಿ ಭಾಗವಹಿಸಿದ್ದರು. ಗೋಕಾಕ ಘಟಕದ ಸಿಬ್ಬಂದಿಗಳ ಬೀಳ್ಕೊಡುವ ಸಮಾರಂಭದಲ್ಲಿ ಸಂತೋಷ್ ಜಾರಕಿಹೊಳಿ ಅವರು ಭಾಗಿಯಾಗಿಅವರಿಗೆ ಗೌರವಯುತವಾಗಿ ನಮಸ್ಕರಿಸಿ ಬೀಳ್ಕೊಡುಗೆ ಮಾಡಿಕೊಟ್ಟರು.     ಗೋಕಾಕ ನಗರದ ವಿವಿಧ ಸಭೆ ಸಮಾರಂಭ ಗಳಲ್ಲಿ ಸಂತೋಷ್ ಜಾರಕಿಹೊಳಿ ಅವರು ಇತ್ತೀಚಿನ ದಿನಗಳಲ್ಲಿ ಆಕ್ಟಿವ್ ಆಗಿ ಭಾಗವಹಿಸುತ್ತಿದ್ದಾರೆ, ಬೀಳ್ಕೊಡುಗೆ ಪಡೆದ ಸಿಬ್ಬಂದಿಗಳಿಗೆ ಸಂತೋಷ್ ಜಾರಕಿಹೊಳಿ ಅಭಿನಂದಿಸಿ ನಿಮ್ಮ …

Read More »

ಹಣ ನೀಡಿದರೆ ಫೇಲ್ ಆದವರಿಗೂ ಸಿಗುತ್ತಿದೆ ಪಾಸಾದ (Gulbarga University)ಅಕ್ರಮ

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ನಡೆದ (Gulbarga University)ಅಕ್ರಮಬಯಲಾಗಿದ್ದು, ಫೇಲ್ ಆದ ವಿದ್ಯಾರ್ಥಿಗಳಿಗೆ ಪಾಸ್ ಆಗಿರುವ ಅಂಕಪಟ್ಟಿ (Marks Card) ನೀಡಿರುವುದು ಬೆಳಕಿಗೆ ಬಂದಿದೆ. ಹಣ ನೀಡಿದರೆ ಸಾಕು ಫೇಲ್ ಆದವರಿಗೂ ವಿವಿ ಸಿಬ್ಬಂದಿ ಮಾರ್ಕ್ಸ್ ಕಾರ್ಡ್ ನೀಡುತ್ತಿದೆ. ನಾಗರಾಜ್ ಎಂಬ ವಿದ್ಯಾರ್ಥಿ ಪರೀಕ್ಷೆಯಲ್ಲಿ ಅನುತ್ತೀರ್ಣನಾಗಿದ್ದ. ಈತ ಫೇಲ್ ಆಗಿದ್ದರೂ ವಿವಿ ಸಿಬ್ಬಂದಿ 30 ಸಾವಿರ ರೂಪಾಯಿ ಹಣ ಪಡೆದು ನಕಲಿ ಅಂಕಪಟ್ಟಿ ನೀಡಿದೆ. ಈ ಬಗ್ಗೆ ವಿದ್ಯಾರ್ಥಿ ತನಗೆ ವಿವಿಯಿಂದ ಅನ್ಯಾಯವಾಗಿದೆ …

Read More »

ಬೆಳಗಾವಿಯಲ್ಲಿ ಮತ್ತೊಂದು ಮರ್ಡರ್

ಬೆಳಗಾವಿಯ ಉದ್ಯಮ ಬಾಗ ಪ್ರದೇಶದಲ್ಲಿ ಬೆಳಿಗ್ಗೆಯೇ ಮತ್ತೊಂದು ಮರ್ಡರ್ ಆಗಿದೆ. ಕೊಲೆಯಾದ ವ್ಯಕ್ತಿ ಮಜಗವೀಯ ಅಂಬೇಡ್ಕರ್ ಗಲ್ಲಿಯ ನಿವಾಸಿ ಎಂದು ಹೇಳಲಾಗುತ್ತಿದೆ. ಕೊಲೆಗೆ ಅಕ್ರಮ ಸಂಬಂಧ ಕಾರಣ ಎಂಬ ಶಂಕೆ ಇದೆ. ಉದ್ಯಂಬಾಗ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Read More »

ಸ್ಮಶಾನ ಭೂಮಿ ಇಲ್ಲದ ಕಡೆ ಖಾಸಗಿ ಜಮೀನು ಖರೀದಿಸಲು ಸರಕಾರ ಅನುಮತಿ: ನಿತೇಶ್ ಪಾಟೀಲ

ಮುಂಬರುವ ಮೂರು ತಿಂಗಳಿನಲ್ಲಿ ಜಿಲ್ಲೆಯ ಎಲ್ಲ ಗ್ರಾಮಗಳಲ್ಲಿ ಸ್ಮಶಾನ ಭೂಮಿ ಒದಗಿಸಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಬುಧವಾರ (ಜೂ.29) ನಡೆದ ಅನುಸೂಚಿತ ಜಾತಿ/ಪಂಗಡಗಳ (ದೌರ್ಜನ್ಯ ನಿಯಂತ್ರಣ) ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು ಸ್ಮಶಾನ ಭೂಮಿ ಇಲ್ಲದ ಕಡೆ ಖಾಸಗಿ ಜಮೀನು ಖರೀದಿಸಲು ಸರಕಾರ ಅನುಮತಿ ನೀಡಿದೆ. ಉಪ ನೋಂದಣಾಧಿಕಾರಿಗಳ …

Read More »

ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ಹೊನಕುಪ್ಪಿ ರಸ್ತೆ 2.50 ಕೋಟಿ ರೂ. ಅನುದಾನ ಬಿಡುಗಡೆ

  ಮೂಡಲಗಿ : ತಾಲೂಕಿನ ಹೊನಕುಪ್ಪಿಯಿಂದ ಲಕ್ಷ್ಮೇಶ್ವರವರೆಗಿನ ರಸ್ತೆ ಕಾಮಗಾರಿಗೆ ಮಂಗಳವಾರದಂದು ಗುದ್ದಲಿ ಪೂಜೆ ನಡೆಯಿತು. ಸುಣಧೋಳಿ ಗ್ರಾಪಂ ಅಧ್ಯಕ್ಷೆ ಜಮೇಲಾ ಮೋಮಿನ ಮತ್ತು ಉಪಾಧ್ಯಕ್ಷ ಬಸಪ್ಪ ಹೆಗಡೆ ಅವರು 2.50 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.   ಕೆಎಂಎಫ್ ಅಧ್ಯಕ್ಷ ಮತ್ತು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ವಿಶೇಷ ಕಾಳಜಿಯಿಂದಾಗಿ ಹೊನಕುಪ್ಪಿ ರಸ್ತೆ ಸುಧಾರಣೆಗೆ ಅನುದಾನ ಬಿಡುಗಡೆಯಾಗಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ಅನುಕೂಲವಾಗಲಿದೆ …

Read More »

ಮೀನು ಹಿಡಿಯುವ ವಿಚಾರವಾಗಿ ಜಗಳ: ಯುವಕನ ಮೇಲೆ ಮಾರಣಾಂತಿಕ ಹಲ್ಲೆ

ಬೆಳಗಾವಿ: ತಾಲ್ಲೂಕಿನ ನಾವಗೆ ಗ್ರಾಮದ ಕೆರೆಯಲ್ಲಿ ಬುಧವಾರ ಮೀನು ಹಿಡಿಯುವ ವಿಚಾರವಾಗಿ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಹುಚ್ಚಾನಟ್ಟಿ ಗ್ರಾಮದ ಶಂಕರ ಪಾಟೀಲ (28) ಹಲ್ಲೆಯಿಂದ ಗಾಯಗೊಂಡವರು. ಅವರನ್ನು ಜಿಲ್ಲಾ ಆಸ್ಪತ್ರೆ ಸೇರಿಸಲಾಗಿದೆ. ಶಂಕರ ಅವರು ನಾವಗೆ ಗ್ರಾಮದ ಕೆರೆಯಲ್ಲಿ ಎಂದಿನಂತೆ ಮೀನು ಹಿಡಿಯಲು ಹೋಗಿದ್ದರು. ಅದೇ ಜಾಗದಲ್ಲಿ ಮೀನು ಹಿಡಿಯಲು ಬಂದ ಇನ್ನೊಂದು ಗುಂಪಿನ ಯುವಕರು ತಕರಾರು ತೆಗೆದರು. ತಾವು ಕೇಳಿದ …

Read More »

ಬೆಳಗಾವಿಯ ಐವರಿಗೆ ಪೋಟೋಗ್ರಾಪಿ ಎಕ್ಸಲೆನ್ಸಿ ಅವಾರ್ಡ್‌

ಕರ್ನಾಟಕ ಛಾಯಾಗ್ರಾಹಕರ ಸಂಘದ ವತಿಯಿಂದ ಬೆಂಗಳೂರಿನಲ್ಲಿ 28 ರಂದು ಆಯೋಜಿಸಲಾಗಿದ್ದ ” ಪೋಟೋಗ್ರಾಪಿ ಎಕ್ಸಲೆನ್ಸಿ ಅವಾರ್ಡ್‌” ನ್ನು ಬೆಳಗಾವಿಯ ಐವರು ಪೋಟೋಗ್ರಾಪರ್‌ಗೆ ಈ ಪ್ರಶಸ್ತಿ ನೀಡಿ, ಗೌರವಿಸಲಾಗಿದೆ.   ಬೆಳಗಾವಿ ಜಿಲ್ಲಾ ಛಾಯಾಗ್ರಾಹಕ ಕ್ಷೇಮಾಭಿವೃದ್ಧಿ ಸಂಘದ ಸದ್ಯಸರಾದ ಸುಭಾಷ ಲಕ್ಷ್ಮಣರಾವ್‌ ಓಲೋಕರ್‌ , ಅನುರೂಪ ಅಶೋಕ ನಾಯಿಕ, ಮಂಜುನಾಥ ಡಿ. ಕುಂದರಗಿ, ಸಂತೋಷ ಹರಿಬಾಹು ಪಾಟೀಲ, ಮೊಮ್ಮಹದ ಮುಬಸೀರ್‌ ಅವರು ಪೋಟೋಗ್ರಾಪಿ ಎಕ್ಸಲೆನ್ಸಿ ಅವಾರ್ಡ್‌ ಗಳನ್ನು ಮುಡಿಗೇಡಿಸಿಕೊಂಡಿದ್ದು, ಇವರಿಗೆ ಬೆಳಗಾವಿ …

Read More »

ಜಿಲ್ಲಾಧಿಕಾರಿಗಳು ಎಂಇಎಸ್ ಮನವಿ ಕಸದ ಬುಟ್ಟಿಗೆ ಚೆಲ್ಲಬೇಕು:

ಚುನಾವಣೆ ಸಮೀಪ ಬರುತ್ತಿದ್ದಂತೆಯೇ ಎಂಇಎಸ್ ನಾಯಕರಿಗೆ ಭಾಷಾ ಪ್ರೇಮ ಹೆಚ್ಚಾಗುತ್ತದೆ. ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ರಾಜಕೀಯ ಮಾಡುತ್ತಲೇ ಬಂದಿರುವ ಎಂಇಎಸ್ ಎಲ್ಲ ರಂಗಗಳಲ್ಲಿ ಅಧಿಕಾರ ಕಳೆದುಕೊಂಡು ಕಂಗಾಲಾಗಿದ್ದು, ಮರಾಠಿ ಫಲಕ, ಮರಾಠಿ ಕಾಗದಪತ್ರ ಎಂದು ಮತ್ತೆ ಕಾಲು ಕೆದರಿ ಜಗಳಕ್ಕೆ ನಿಂತಿರುವ ಎಂಇಎಸ್ ಸಂಘಟನೆಯನ್ನು ನಿಷೇಧಿಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಒತ್ತಾಯಿಸಿದೆ. ಈ ಸಂಬಂಧ ಪತ್ರಿಕಾ ಪ್ರಕಟಣೆ ಹೊರಡಿಸಿರುವ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಭಾಷಾ ಅಲ್ಪ …

Read More »

ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಮಲೇರಿಯಾ ಮಾಸಾಚರಣೆ &ಆರೋಗ್ಯ ತಪಾಸಣಾ ಶಿಬಿರ

ಗೋಕಾಕ: ಗೋಕಾಕ ಹಿರೆನಂದಿ ಗ್ರಾಮದಲ್ಲಿರುವ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ತಾಲೂಕ ವೈದ್ಯ ಅಧಿಕಾರಿಗಳ ಆಶ್ರಯದಲ್ಲಿ ಸಂತೋಷ್ ಜಾರಕಿಹೊಳಿ ಅವರ ಶ್ರೀ ಸೌಭಾಗ್ಯ ಲಕ್ಷ್ಮಿ ಶುಗರ್ಸ್ ನಲ್ಲಿ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಆರೋಗ್ಯ ತಪಾಸಣಾ ಶಿಬಿರದಲ್ಲಿ ಮಲೇರಿಯಾ ಮಾಸಾಚರಣೆ ಹಾಗೂ ವಿವಿಧ ರೀತಿಯ ತಪಾಸಣೆ ಗಳನ್ನ ಮಾಡಲಾಯಿತು. ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರ್ಮನ್ ಸಂತೋಷ್ ಜಾರಕಿಹೊಳಿ ಅವರು ಹಾಗೂ ಆರೋಗ್ಯ ಅಧಿಕಾರಿಗಳು ಸಸಿಗೆ ನೀರುಣಿಸುವ ಮೂಲಕ ಕಾರ್ಯ ಕ್ರಮಕ್ಕೆ …

Read More »