ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿ ರೈಲ್ವೆ ನಿಲ್ದಾಣ ಸದ್ಯದಲ್ಲೇ ವಿಶ್ವದ ಅತಿ ಉದ್ದದ ರೈಲ್ವೆ ಪ್ಲಾಟ್ ಫಾರ್ಮ್ ಹೊಂದಿರುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ಈಗಿರುವ ಒಂದನೇ ಪ್ಲಾಟ್ ಫಾರ್ಮ್ 550 ಮೀಟರ್ ಉದ್ದವಿದ್ದು, ಅದನ್ನು 1,400 ಮೀಟರ್‍ಗೆ ಹೆಚ್ಚಿಸಲಾಗುತ್ತಿದ್ದು, ಹತ್ತು ಮೀಟರ್ ಅಗಲವಿರುತ್ತದೆ. ಈಗಿನ ತಪಾಸಣಾ ಕ್ಯಾರೇಜ್ ಮಾರ್ಗವನ್ನು ಪೂರ್ಣ ಪ್ಲಾಟ್ ಫಾರ್ಮ್ ಆಗಿ ಪರಿವರ್ತಿಸಲಾಗುತ್ತಿದೆ. ಈಗಾಗಲೇ ಕೆಲಸ ಆರಂಭವಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ ಕಾಮಗಾರಿ …
Read More »ಗೋಕಾಕ: ಕೊರೋನಾ ಶಂಕೆ ಹಿನ್ನೆಲೆ ಇಲ್ಲಿನ ಲೋಕೊಪಯೋಗಿ ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.
ಗೋಕಾಕ: ಕೊರೋನಾ ಶಂಕೆ ಹಿನ್ನೆಲೆ ಇಲ್ಲಿನ ಲೋಕೊಪಯೋಗಿ ಕಚೇರಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಸುಮಾರು 14 ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಈಗಾಗಲೇ ಲೋಕೊಪಯೋಗಿ ಕಚೇರಿಯನ್ನು ಸಿಲ್ ಡೌನ್ ಮಾಡಲಾಗಿದ್ದು ಕೊರೋನಾ ಶಂಕೆವಿರುವ ಅಧಿಕಾರಿ ಮತ್ತು ಸಿಬ್ಬಂದಿಗಳ ಮೇಲೆ ತೀವ್ರ ನಿಗಾಃ ಇರಿಸಲಾಗಿದೆ. ಲೊಕೋಪಯೋಗಿ ಇಲಾಖೆಯ ಎಸ್‌ಡಿಎ ಕಲ್ಲೊಳ್ಳಿ ಗ್ರಾಮದ ಸೋಂಕಿತನ ಸಂಪರ್ಕಕ್ಕೆ ಬಂದಿದ್ದಾನೆ. ಮುಂಬೈನಿಂದ ಬಂದ …
Read More »ಶ್ರೀ ಮಹಾಲಕ್ಷ್ಮೀ ಸೋಸೈಟಿಯಿಂದ ಆಶಾ ಕಾರ್ಯಕರ್ತೆಯರಿಗೆ ಗೌರವ ಧನ
ಮೂಡಲಗಿ:- ಕೊರೋನಾ ಲಾಕ್‍ಡೌನ್ ಸಮಯದಲ್ಲಿ ತಮ್ಮ ಜೀವ ಪಣಕ್ಕಿಟ್ಟು ವಾರಿಯರ್ಸಗಳಾಗಿ ಕಾರ್ಯ ನಿರ್ವಹಿಸಿದ ಆಶಾ ಕಾರ್ಯಕರ್ತೆಯರನ್ನು ಸ್ಥಳೀಯ ಶ್ರೀ ಮಹಾಲಕ್ಷ್ಮೀ ಕೋ-ಆಪ್ ಕ್ರೆಡಿಟ್ ಸೊಸಾಯಿಟಿ ವತಿಯಿಂದ ಮೂರು ಸಾವಿರ ಗೌರವ ಧನ ನೀಡಿ ಗೌರವಿಸಲಾಯಿತು. ಬ್ಯಾಂಕ್ ಸಭಾ ಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ ಆಶಾ ಕಾರ್ಯಕರ್ತೆಯರಾದ ಇಂದೂಮತಿ ರಾಜನಾಳ,ಮಹಾದೇವಿ ಹಣಬರ,ಸವಿತಾ ಪಾಲಬಾಂವಿ,ವಿಜಯಲಕ್ಷ್ಮೀ ರೇಳೆಕರ ಅವರನ್ನು ಸೊಸಾಯಿಟಿ ವತಿಯಿಂದ ಗೌರವ ಧನದ ಚೆಕ್ಕು ನೀಡಿ ಗೌರವಿಸಿದರು. ಸೊಸಾಯಿಟಿ ಅಧ್ಯಕ್ಷ ಎಸ್.ಆರ್.ಖಾನಟ್ಟಿ, ಉಪಾಧ್ಯಕ್ಷ …
Read More »ಜನತಾ ಜೀವ ವೈವಿಧ್ಯತೆಯ ಸಂರಕ್ಷಣೆಯು ಪ್ರತಿಯೊಬ್ಬರ ಆದ್ಯಕರ್ತವ್ಯ.ಮುಖ್ಯಾಧಿಕಾರಿ ಸತೀಶ್ ಕುಮಾರ್.
ಮಂಡ್ಯ :ರಾಜಪೇಟೆ ಪಟ್ಟಣದ ಸ್ವರ್ಣಜಯಂತಿ ಶಹರಿ ರೋಜ್ ಗಾರ್ ಯೋಜನಾ ಭವನದ ಸಭಾಂಗಣದಲ್ಲಿ ಜನತಾ ಜೀವವೈವಿದ್ಯ ದಾಖಲಾತಿ ನೋಂದಣಿ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿದರು. ನಾವು ಉಸಿರಾಡುವ ಗಾಳಿ, ಕುಡಿಯುವ ನೀರು, ತಿನ್ನುವ ಆಹಾರ ಸೇರಿದಂತೆ ಸಂಪೂರ್ಣವಾಗಿ ಪರಿಸರವೇ ಮಾಲಿನ್ಯವಾಗುತ್ತಿರುವುದರಿಂದ ಅಪರೂಪದ ಜೀವಸಂಕುಲಗಳು ನಶಿಸಿಹೋಗುತ್ತಿವೆಯಲ್ಲದೇ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ರಾಜ್ಯ ಸರ್ಕಾರವು ಪುರಸಭೆ ಹಾಗೂ ಪಟ್ಟಣ ಪಂಚಾಯಿತಿಗಳ …
Read More »ಶಂಕರ ಬಿದರಿಗೆ ಪರಿಷತ್ ಟಿಕೆಟ್ ನೀಡಲು ಮನವಿ
ಬೆಂಗಳೂರು, ಜೂ.4- ನಿವೃತ್ತ ಡಿಜಿಪಿ ಶಂಕರ ಬಿದರಿ ಅವರನ್ನು ರಾಜ್ಯಸಭೆ ಹಾಗೂ ವಿಧಾನ ಪರಿಷತ್‍ಗೆ ಸ್ಪರ್ಧೆಗೆ ಅವಕಾಶ ಕಲ್ಪಿಸುವಂತೆ ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಒಕ್ಕೂಟದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ದಾರೆ. ಮಹಾಸಂಸ್ಥೆ ಅಧ್ಯಕ್ಷ ಶಿವಕುಮಾರ್ ಮೇಟಿ ನೇತೃತ್ವದಲ್ಲಿ ಮುಖ್ಯಮಂತ್ರಿ ಗೃಹ ಕಚೇರಿ ಕೃಷ್ಣಾದಲ್ಲಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದು, ಶಂಕರ ಬಿದರಿಯವರು ಪೊಲೀಸ್ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ್ದು, ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಉತ್ತರ ಕರ್ನಾಟಕದ ಸುಮಾರು …
Read More »ರಾಜ್ಯಸಭೆಗೆ ಚುನಾವಣೆ : ಈವರೆಗೂ ಸಲ್ಲಿಕೆಯಾಗಿಲ್ಲ ಯಾವುದೇ ನಾಮಪತ್ರ …………
ಬೆಂಗಳೂರು,ಜೂ.4-ರಾಜ್ಯ ವಿಧಾನಸಬೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಗೆ ಈವರೆಗೂ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ. ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. 10 ಜನ ಶಾಸಕರ ಸಹಿಯೊಂದಿಗೆ ಮೀಸಲಾತಿ ವ್ಯಾಪ್ತಿಯಡಿ ಬರುವ ಅಭ್ಯರ್ಥಿಗಳು 5 ಸಾವಿರ, ಸಾಮಾನ್ಯ ವರ್ಗದ ಅಭ್ಯರ್ಥಿಗಳು 10 ಸಾವಿರ ರೂ. ಠೇವಣಿಯೊಂದಿಗೆ ನಾಮಪತ್ರ ಸಲ್ಲಿಸಬಹುದು. ಆದರೆ ಈವರೆಗೂ ಯಾವ ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿಲ್ಲ. ಪ್ರತಿಯೊಬ್ಬ ಅಭ್ಯರ್ಥಿಯೂ ನಾಲ್ಕು 4 ನಾಮಪತ್ರಗಳನ್ನು …
Read More »ಕನಿಷ್ಠ ಇನ್ನೆರಡು ತಿಂಗಳು ಶಾಲೆಗಳನ್ನು ಪ್ರಾರಂಭಿಸುವುದು ಸೂಕ್ತವಲ್ಲಸಿದ್ದರಾಮಯ್ಯ
ಬೆಂಗಳೂರು,ಜೂ.4- ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣ ಮೀರಿ ಹರಡುತ್ತಿರುವ ಹಿನ್ನೆಲೆಯಲ್ಲಿ ಕನಿಷ್ಠ ಇನ್ನೆರಡು ತಿಂಗಳು ಶಾಲೆಗಳನ್ನು ಪ್ರಾರಂಭಿಸುವುದು ಸೂಕ್ತವಲ್ಲ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ಶಾಲೆಗಳನ್ನು ಜುಲೈ ತಿಂಗಳಿನಲ್ಲಿ ಪುನರಾರಂಭಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಇದರಿಂದ ಪೋಷಕರು ಆತಂಕಕ್ಕೀಡಾಗಿ ವಿರೋಧ ವ್ಯಕ್ತಪಡಿಸುತ್ತಿರುವುದನ್ನು ಸರ್ಕಾರ ಗಮನಿಸಬೇಕು ಎಂದು ಹೇಳಿದ್ದಾರೆಬ್ರಿಟನ್, ಫ್ರಾನ್ಸ್, ಇಟಲಿ ಸೇರಿದಂತೆ ಬೇರೆ ಬೇರೆ ದೇಶಗಳಲ್ಲಿ ಶಾಲೆಗಳನ್ನು ಪುನರಾರಂಭಿಸಿದ ನಂತರ …
Read More »ಸದ್ಯಕ್ಕೆ ಶಾಲೆ ಆರಂಭಿಸುವುದಿಲ್ಲ, ಯಾರೂ ಆತಂಕ ಪಡುವ ಅಗತ್ಯವಿಲ್ಲ : ಸುರೇಶ್ ಕುಮಾರ್
ಬೆಂಗಳೂರು: ಸದ್ಯಕ್ಕೆ ನಾವು ಶಾಲೆ ಆರಂಭಿಸುವುದಿಲ್ಲ. ಪೋಷಕರು ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ. ಫೇಸ್‍ಬುಕ್‍ನಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಮೇ 30 ರಂದು ಶಾಲೆಗಳನ್ನು ಆರಂಭಿಸುವ ಬಗ್ಗೆ ಪೋಷಕರ ಅಭಿಪ್ರಾಯವನ್ನು ಕೇಳಿ ಎಂದು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಿತ್ತು. ಈ ನಿಟ್ಟಿನಲ್ಲಿ ನಾವು ರಾಜ್ಯದಲ್ಲಿರುವ ಶಾಲೆಗಳಿಗೆ ಸುತ್ತೋಲೆ ಕಳುಹಿಸಿ ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು ಇದೇ ಜೂನ್ …
Read More »ರೈತರ ಹಣ ಏರ್‍ಟೆಲ್ ಅಕೌಂಟ್‌ಗೆ..! ಸರ್ಕಾರದ ಮಹಾ ಎಡವಟ್ಟು
ಬೆಂಗಳೂರು,ಜೂ.4- ಕೃಷಿ ಇಲಾಖೆಯ ಎಡವಟ್ಟಿನಿಂದಾಗಿ ರೈತರ ಖಾತೆಗೆ ಹೋಗಬೇಕಾಗಿದ್ದ ಹಣ ಏರ್‍ಟೆಲ್ ಪೇಮೆಂಟ್ ಬ್ಯಾಂಕ್‍ಗೆ ವರ್ಗಾವಣೆಯಾಗಿರುವ ಪ್ರಸಂಗ ನಡೆದಿದೆ. ಪತ್ರಿಕಾಗೋಷ್ಠಿಯಲ್ಲಿ ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರೇ ಖುದ್ದು ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಏರ್‍ಟೆಲ್ ಕಂಪನಿ ವಿರುದ್ಧ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ನೀಡಿದ್ದಾರೆ. ಆಧುನಿಕ ತಂತ್ರಜ್ಞನದಲ್ಲಿ ಸ್ವಲ್ಪ ಯಾಮಾರಿದರೂ ಏನೆಲ್ಲ ಎಡವಟ್ಟುಗಳಾಗುತ್ತವೆ ಎಂಬುದಕ್ಕೆ ಈ ಪ್ರಕರಣ ಸಾಕ್ಷಿಯಾಗಿದೆ. ಏರ್‍ಟೆಲ್ ಕಂಪನಿ ಸಿಮ್ ಮಾರಾಟ ಮಾಡಬೇಕಾದರೆ ಆಧಾರ್ ಸಂಖ್ಯೆ ಪಡೆದುಕೊಳ್ಳುತ್ತದೆ. …
Read More »ಛತ್ರಪತಿ ಶಿವಾಜಿ ಸ್ಟೈಲಲ್ಲಿ ಮೀಸೆ-ಗಡ್ಡ ಬೆಳೆಸಿ ಮೋದಿ ಮಿಂಚಿಂಗ್..!
ನವದೆಹಲಿ, ಜೂ.4-ಅತ್ಯಂತ ಸಂಕಷ್ಟ ಸಂದರ್ಭಗಳಲ್ಲಿ ಅತ್ಯಂತ ಜಣ್ಮೆ ಮತ್ತು ದೂರದೃಷ್ಟಿಯಿಂದ ಬಗೆಹರಿಸುವ ಮಹಾ ಚತುರ ಪ್ರಧಾನಿ ಮೋದಿ ಈಗ ಲೋಕಪ್ರಿಯ ನಾಯಕ. ವಿಶ್ವದ ನಂಬರ್ 1 ಖ್ಯಾತಿಯ ಅಗ್ರಮಾನ್ಯ ಧುರೀಣರಾಗಿದ್ದಾರೆ. ಪಾಕಿಸ್ತಾನ ಮತ್ತು ಚೀನಾದಂಥ ಕುತಂತ್ರಿ ದೇಶಗಳು ಬಾಲ ಮುದುರಿಕೊಳ್ಳುವಂತೆ ಮಾಡಿರುವ ನಮೋ ಈಗ ವಿಶ್ವದ ಅತ್ಯಂತ ಪ್ರಬಲ ದೇಶಗಳ ಪರಮಾಪ್ತ ಮಿತ್ರ ಜಗತಿಕ ವೇದಿಕೆಗಳಲ್ಲಿ ಮೋದಿ ಇರಲೇಬೇಕೆಂಬಷ್ಟು ಮಟ್ಟಿಗೆ ಅವರ ಲೋಕವಿಖ್ಯಾತಿ ಉತ್ತುಂಗಕ್ಕೇರಿದೆ. ಇದು ನರೇಂದ್ರ ಮೋದಿ ಅವರ …
Read More »
Laxmi News 24×7