ತುಮಕೂರು: ಮಹಾಮಾರಿ ಕೊರೊನಾ ಮನುಷ್ಯತ್ವದ ಪರೀಕ್ಷೆ ಮಾಡ್ತಿದೆ. ಕೊರೊನಾದಿಂದ ತಮ್ಮವರೇ ತಮ್ಮ ಜೊತೆಗಿದ್ದವರೇ ತಮಗೆ ಬೇಕಾದವರೇ ಮೃತಪಟ್ಟರೂ ಅವರ ಅಂತ್ಯಸಂಸ್ಕಾರಕ್ಕೆ ಸಂಬಂಧಿಕರು ಹಿಂದೇಟು ಹಾಕುತ್ತಿದ್ದಾರೆ. ಇಂಥದ್ದೊಂದು ವಿಚಿತ್ರ ಸನ್ನಿವೇಶಕ್ಕೆ ತುಮಕೂರು ಸಾಕ್ಷಿ ಆಗಿದೆ.ಸಂಬಂಧಿಕರು ಬರದೇ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ 40 ಶವಗಳು ಅನಾಥವಾಗಿವೆ. ಇದುವರೆಗೂ ಜಿಲ್ಲೆಯಲ್ಲಿ 3,470 ಜನರಿಗೆ ಸೋಂಕು ದೃಢವಾಗಿದೆ. ಇವರಲ್ಲಿ 108 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇವುಗಳಲ್ಲಿ 40 ಶವಗಳನ್ನು ಸಂಬಂಧಿಕರು ಸ್ವೀಕರಿಸಿಯೇ ಇಲ್ಲ. ಹೀಗಾಗಿ ಸ್ವಯಂಸೇವಕರ ಸಹಕಾರದೊಂದಿಗೆ …
Read More »ಮಾರಕವಾಗುವ ತ್ಯಾಜ್ಯ ವಸ್ತುಗಳನ್ನು ಇನ್ನು ಮುಂದೆ ನದಿಗೆ ಬಿಟ್ಟರೆ ಕಾರ್ಖಾನೆಯ ವಿರುದ್ಧ ಕಠಿಣ ಕ್ರಮ:
ಗೋಕಾಕ : ನಗರದ ಹೊರವಲಯದಲ್ಲಿರುವ ರಾಕೇಟ್ ಇಂಡಿಯಾ ಲಿ., ಕಾರ್ಖಾನೆಯು ರಾಸಾಯನಿಕಗಳಿಂದ ಕೂಡಿದ ಹಾನಿಕಾರಕ ತ್ಯಾಜ್ಯ ವಸ್ತುಗಳನ್ನು ಮಾರ್ಕಂಡೇಯ ನದಿಗೆ ಬಿಡುತ್ತಿರುವುದರಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ. ನದಿ ತೀರದ ಜಮೀನುಗಳಲ್ಲಿ ರೈತರು ಬೆಳೆದ ಬೆಳೆಗಳು ಹಾನಿಯಾಗುತ್ತವೆ. ಮಾರಕವಾಗುವ ತ್ಯಾಜ್ಯ ವಸ್ತುಗಳನ್ನು ಇನ್ನು ಮುಂದೆ ನದಿಗೆ ಬಿಟ್ಟರೆ ಕಾರ್ಖಾನೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಎಚ್ಚರಿಕೆ ನೀಡಿದ್ದಾರೆ. …
Read More »ಜಾರಕಿಹೊಳಿ ತಂಡದಿಂದ ಲಾಬಿ; ಬಿಜೆಪಿ ರಾಷ್ಟ್ರ ನಾಯಕರ ಮೇಲೆ ಒತ್ತಡ; ಲಕ್ಷ್ಮಣ ಸವದಿ ಡಿಸಿಎಂ ಸ್ಥಾನಕ್ಕೆ ಕುತ್ತು?
ಬೆಳಗಾವಿ: ಎರಡು ವರ್ಷಗಳ ರಾಜಕೀಯ ವನವಾಸದ ಬಳಿಕ ಕಷ್ಟಪಟ್ಟು ಪರಿಷತ್ ಸದಸ್ಯರಾಗಿರುವ ಸಿ.ಪಿ.ಯೋಗೇಶ್ವರ್, ಈಗ ಸಚಿವ ಪಟ್ಟಕ್ಕಾಗಿ ಪ್ರಯತ್ನ ಆರಂಭಿಸಿದ್ದಾರೆ. ಇದರ ಜೊತೆಗೆ ರಮೇಶ್ ಜಾರಕಿಹೊಳಿ ಕೂಡ ಡಿಸಿಎಂ ಸ್ಥಾನಕ್ಕಾಗಿ ಹಪಹಪಿಸುತ್ತಿದ್ದು ಇದಕ್ಕಾಗಿ ದೆಹಲಿ ದಂಡಯಾತ್ರೆ ಕೈಗೊಂಡಿದ್ದಾರೆ. ಕಾಂಗ್ರೆಸ್-ಜೆಡಿಎಸ್ ಸರ್ಕಾರವನ್ನು ಕೆಡವಿ ಬಿಜೆಪಿ ಸರ್ಕಾರ ರಚಿಸುವುದರಲ್ಲಿ ಮುಂಚೂಣಿಯಲ್ಲಿದ್ದ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಈಗ ಉಪ ಮುಖ್ಯಮಂತ್ರಿ ಸ್ಥಾನ ಪಡೆಯಲು ಕಸರತ್ತು ನಡೆಸಿದ್ದಾರೆ. ಮತ್ತೊಂದೆಡೆ ಸಿಪಿ ಯೊಗೇಶ್ವರ್ ಸಚಿವ ಸ್ಥಾನಕ್ಕೆ ಲಾಬಿಗೆ …
Read More »ಘಟಪ್ರಭಾ ಅಟ್ಟಹಾಸದಿಂದ ಸಂಕಷ್ಟಕ್ಕೆ ಒಳಗಾದ ಬಾಣಂತಿ, ಗರ್ಭಿಣಿ!
ಬೆಳಗಾವಿ: ಘಟಪ್ರಭಾ ಅಟ್ಟಹಾಸಕ್ಕೆ ಜನ ಜೀವನ ಅಸ್ತವ್ಯಸ್ತಗೊಂಡಿದೆ. ನದಿ ನೀರು ಮನೆಗಳಿಗೆ ನುಗ್ಗಿದೆ. ರಸ್ತೆಗಳಲ್ಲಿ ನೀರು ನಿಂತಿದೆ. ಜನ ತಮ್ಮ ಮನೆಗಳನ್ನು ಬಿಟ್ಟು ಪರಿಹಾರ ಕೇಂದ್ರಗಳಲ್ಲಿ ಜೀವನ ನಡೆಸುವಂತ ಪರಿಸ್ಥಿತಿ ಎದುರಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಮೇಳವಂಕಿ ಗ್ರಾಮದ ಪರಿಹಾರ ಕೇಂದ್ರದಲ್ಲಿ ತಮ್ಮ ಪರಿಸ್ಥಿತಿ ನೆನೆದು ಬಾಣಂತಿ ಮತ್ತು ಗರ್ಭಿಣಿ ಕಣ್ಣೀರು ಹಾಕಿದ್ದಾರೆ. ಮೇಳವಂಕಿ ಗ್ರಾಮಕ್ಕೆ ಘಟಪ್ರಭಾ ನದಿ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಎರಡು ತಿಂಗಳ ಮಗುವನ್ನ ಕರೆದುಕೊಂಡು ಬಾಣಂತಿ …
Read More »ಕೋಟಿ ಕೋಟಿ ಸುರಿದು ರೆಡಿಮಾಡಿದ ಕೋವಿಡ್ ಸೆಂಟರ್‌ಗಳತ್ತ ತಲೆ ಹಾಕದ ಸೋಂಕಿತರು..!
ಬೆಂಗಳೂರು, : ಕೊರೊನಾ ಸೋಂಕಿ ತರಿಗೆ ಹೋಂ ಐಸೊಲೇಷನ್ ವ್ಯವಸ್ಥೆಯನ್ನು ಜಾರಿಗೆ ತಂದ ನಂತರ ಬಿಬಿಎಂಪಿ ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಕೋವಿಡ್ ಕೇರ್ ಸೆಂಟರ್‍ಗಳತ್ತ ಜನ ಮುಖ ಹಾಕುತ್ತಿಲ್ಲ. ನಗರದಲ್ಲಿ 12 ಕೋವಿಡ್ ಕೇರ್ ಸೆಂಟರ್‍ಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಬಿಐಇಸಿನಲ್ಲಿ 10 ಸಾವಿರ ಹಾಸಿಗೆಗಳ ಸೆಂಟರ್ ನಿರ್ಮಿಸಲಾಗಿದ್ದು, 6 ಸಾವಿರ ಹಾಸಿಗೆ ಸಿದ್ಧವಿದೆ. ಆದರೆ, ಇಲ್ಲಿ ಕೇವಲ 700 ರಿಂದ 800 ಮಂದಿ ರೋಗಿಗಳು ದಾಖಲಾಗಿದ್ದಾರೆ. ಇದೇ …
Read More »ನೆರೆ ಹಾಗೂ ಅತಿವೃಷ್ಟಿಯ ಪರಿಣಾಮ, 43,300 ಹೆಕ್ಟೇರ್ ಬೆಳೆ ‘ಆಹುತಿ’
ಬೆಳಗಾವಿ: ಜಿಲ್ಲೆಯಲ್ಲಿ ಪ್ರವಾಹ ಹಾಗೂ ಅತಿವೃಷ್ಟಿಯಿಂದಾಗಿ ಮಂಗಳವಾರದವರೆಗೆ 43,300 ಹೆಕ್ಟೇರ್ ಬೆಳೆಗಳು ಮುಳುಗಿವೆ. 15 ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಕೃಷ್ಣಾ, ವೇದಗಂಗಾ, ದೂಧ್‌ಗಂಗಾ, ಘಟಪ್ರಭಾ, ಮಾರ್ಕಂಡೇಯ, ಹಿರಣ್ಯಕೇಶಿ, ಮಲಪ್ರಭಾ ನದಿಗಳಲ್ಲಿ ಮಹಾಪೂರ ಉಂಟಾಗಿದೆ. ತೀರಕ್ಕೆ ಹೊಂದಿಕೊಂಡಿರುವ ಜಮೀನುಗಳಿಗೆ ನೀರು ವ್ಯಾಪಿಸಿದೆ. ಇದರೊಂದಿಗೆ ಬೆಳಗಾವಿ ತಾಲ್ಲೂಕಿನಲ್ಲಿ ಬಳ್ಳಾರಿ ನಾಲಾ ಪ್ರವಾಹವೂ ಉಂಟಾಗಿದೆ. ಇದರಿಂದಲೂ ಸಾವಿರಾರು ಎಕರೆ ವಿವಿಧ ಬೆಳೆಗಳು ಜಲಾವೃತವಾಗಿವೆ. ಅಲ್ಲಲ್ಲಿ ಮಳೆ ಹಾಗೂ ಪ್ರವಾಹದ ಪರಿಸ್ಥಿತಿ ಮುಂದುವರಿದಿದ್ದು, ಬೆಳೆಗಳ ಹಾನಿ …
Read More »ಬೆಳಗಾವಿ: 379 ಮಂದಿಗೆ ಕೋವಿಡ್ ದೃಢ
ಬೆಳಗಾವಿ: ‘ಜಿಲ್ಲೆಯಲ್ಲಿ ಹೊಸದಾಗಿ 379 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಜಿಲ್ಲಾಡಳಿತ ತಿಳಿಸಿದೆ. ಈ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಇವರಲ್ಲಿ ಇಬ್ಬರು ಮಹಿಳೆಯರು ಹಾಗೂ ಒಬ್ಬರು ಪುರುಷ. ಎಲ್ಲರೂ ಬೆಳಗಾವಿ ತಾಲ್ಲೂಕಿನವರು. ಅವರಿಗೆ ತೀವ್ರ ಉಸಿರಾಟದ ತೊಂದರೆ ಇತ್ತು ಎಂದು ಮಾಹಿತಿ ನೀಡಿದೆ. 267 ಮಂದಿ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ.
Read More »ಕೇವಲ 5 ದಿನದಲ್ಲಿ 228 ಮಂದಿ ಬಲಿ ಪಡೆದ ಮಹಾಮಾರಿ ಕೊರೋನಾ
ಬೆಂಗಳೂರು : ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಸೋಂಕಿತರ ಸಾವಿನ ಸಂಖ್ಯೆ ಮತ್ತೆ ಏರಿಕೆಯಾಗುತ್ತಿದ್ದು, ಬುಧವಾರ 56 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದು ಆಗಸ್ಟ್ ತಿಂಗಳಿನಲ್ಲಿ ಒಂದೇ ದಿನ ದಾಖಲಾದ ಅತಿ ಹೆಚ್ಚಿನ ಸಾವಿನ ಸಂಖ್ಯೆಯಾಗಿದೆ. ಕಳೆದ ಐದು ದಿನಗಳಿಂದ ನಗರದಲ್ಲಿ ಕೊರೋನಾ ಸೋಂಕಿಗೆ 228 ಮಂದಿ ಸಾವನ್ನಪ್ಪಿದ್ದಾರೆ. ಆ.16 ಮತ್ತು 18 ರಂದು ತಲಾ 49 ಮಂದಿ ಸೋಂಕಿನಿಂದ ಮೃತಪಟ್ಟಿದ್ದು ಅತಿ ಹೆಚ್ಚಿನ ಸಾವಿನ ಸಂಖ್ಯೆಯಾಗಿತ್ತು. ಆದರೆ, ಬುಧವಾರ 56 …
Read More »ಒಂದು ವರ್ಷದಲ್ಲಿ ಎಮ್ಮೆ ಕಾಂತಣ್ಣ ಒಟ್ಟು ಏಳು ಹಸುಗಳನ್ನು ಕಳೆದುಕೊಂಡಿದ್ದಾರೆ.
ಚಿಕ್ಕಮಗಳೂರು: ಕಳೆದ ಹತ್ತು ತಿಂಗಳಲ್ಲಿ ಏಳು ಹಸುಗಳನ್ನು ಕಳೆದುಕೊಂಡಿದ್ದೇನೆ. ದನಗಳ್ಳರನ್ನು ಹಿಡಿದುಕೊಟ್ಟರೆ ನಿಂತ ಜಾಗದಲ್ಲಿ ನಾನೇ ಅವರಿಗೆ 50 ಸಾವಿರ ಹಣ ಕೊಡುತ್ತೇನೆ ಎಂದು ಚಿಕ್ಕಮಗಳೂರು ತಾಲೂಕಿನ ತೇಗೂರಿನ ರೈತ ಕಾಂತರಾಜ್ ಆಫರ್ ಕೊಟ್ಟಿದ್ದಾರೆ. ದನಗಳ್ಳರನ್ನು ಯಾರೇ ಹಿಡಿದುಕೊಟ್ಟರು ಅವರಿಗೆ ಹಣ ಕೊಡುತ್ತೇನೆ ಎಂದು ಘೋಷಿಸಿದ್ದಾರೆ. ಕಳೆದ ಮೂರು ದಿನಗಳ ಹಿಂದೆ ರೈತ ಕಾಂತರಾಜು ಅಲಿಯಾಸ್ ಎಮ್ಮೆ ಕಾಂತಣ್ಣರವರ ಎಂಟೂವರೆ ತಿಂಗಳ ಗರ್ಭಿಣಿ ಹಸುವನ್ನು ದನಗಳ್ಳರು ಸ್ಕಾರ್ಪಿಯೋ ಕಾರಿನಲ್ಲಿ ತುಂಬಿಕೊಂಡು …
Read More »ಗೋಕಾಕ್‍ನ ಉಪ್ಪಾರಗಲ್ಲಿ, ಹಳೆದನದಪೇಟೆ, ಕುಂಬಾರಗಲ್ಲಿ, ಮಟನ್ ಮಾರ್ಕೆಟ್ ಮತ್ತು ಮಹಾಲಿಂಗೇಶ್ವರ ನಗರ ಜಲಾವೃತ
ಬೆಂಗಳೂರು: ಮಳೆಯಬ್ಬರ ತಗ್ಗಿದ್ದು, ಉತ್ತರ ಕರ್ನಾಟಕದಲ್ಲೂ ಪ್ರವಾಹ ಇಳಿಮುಖವಾಗಿದೆ. ಹವಾಮಾನ ಇಲಾಖೆಯ ಪ್ರಕಾರ ಕೇವಲ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಆಗಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆಯ ಬರಬಹುದು. ಮಹಾರಾಷ್ಟ್ರದ ಪುಣೆ, ರತ್ನಗಿರಿ, ಸತಾರದಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಮಳೆ ಮುಂದುವರಿಯಲಿದೆ ಎಂದು ಎಚ್ಚರಿಸಲಾಗಿದೆ.ಕಳೆದ ಆರೇಳು ದಿನಗಳಿಂದ ಆಗುತ್ತಿರುವ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಡ್ಯಾಂಗಳು ಬಹುತೇಕ …
Read More »
Laxmi News 24×7