Breaking News

ಜಿಲ್ಲೆ

ಕೋಲಾರದ ಚಿನ್ನದ ಗಣಿಯಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಲು ನಿರ್ಧಾರ; ಸಚಿವ ಜಗದೀಶ್ ಶೆಟ್ಟರ್ ಮಾಹಿತಿ

ಕೋಲಾರ  : ಕೋಲಾರ ಜಿಲ್ಲೆಯ ಕೆಜಿಎಫ್​ನ ಬಿಜಿಎಂಎಲ್​ನ ಕೋಲಾರ ಗೋಲ್ಡ್ ಫೀಲ್ಡ್ಸ್ ಒಡೆತನದ ಬಳಕೆಯಾಗದ ಪ್ರದೇಶದಲ್ಲಿ ಕೈಗಾರಿಕಾ ಪ್ರದೇಶವನ್ನು ಸ್ಥಾಪಿಸಲು ಮುಂದಾಗಿದೆ. ಚಿನ್ನದ ಗಣಿಯು 12 ಸಾವಿರ ಎಕರೆ ವಿಶಾಲವಾದ ಪ್ರದೇಶದಲ್ಲಿದ್ದು, ಇಲ್ಲಿ ಇದುವರೆಗೂ ಬಳಸದ 3,200 ಎಕರೆ ಜಾಗದಲ್ಲಿ ಇಂಡಸ್ಟ್ರಿಯಲ್ ಪಾರ್ಕ್ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಆದರೆ, ಈ ಸ್ಥಳ ಕೇಂದ್ರ ಸರ್ಕಾರದ ಸ್ವಾಮ್ಯದಲ್ಲಿ ಇರುವುದರಿಂದ ಕೇಂದ್ರದ ಸಮ್ಮತಿ ಅತ್ಯಗತ್ಯವಾಗಿದೆ. ಶನಿವಾರ ಬೃಹತ್ ಕೈಗಾರಿಕಾ ಸಚಿವ ಜಗದೀಶ್ …

Read More »

ಅಂಗನವಾಡಿ- ಸಹಾಯಕಿಯರ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ 13 ಅಂಗನವಾಡಿ ಕಾರ್ಯಕರ್ತೆ ಹಾಗೂ 50 ಸಹಾಯಕಿಯರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ವಿದ್ಯಾರ್ಹತೆ, ವಯೋಮಿತಿಯನ್ನು ಹೊಂದಿರುವ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕಡೆ ದಿನ 05.09.2020 ಆಗಿದ್ದು, ಹೆಚ್ಚಿನ ಮಾಹಿತಿಗೆ anganwadirecruit.kar.nic.inಗೆ ಸಂಪರ್ಕಿಸಬಹುದು.  

Read More »

38ರ ಆಂಟಿಯೊಬ್ಬಳು 22 ವರ್ಷದ ಯುವಕನನ್ನ ಆರನೇ ಗಂಡನಾಗಿ ಕೈಹಿಡಿದಿದ್ದಾಳೆ.

ಚಿಕ್ಕಮಗಳೂರು: 38ರ ಆಂಟಿಯೊಬ್ಬಳು 22 ವರ್ಷದ ಯುವಕನನ್ನ ಆರನೇ ಗಂಡನಾಗಿ ಕೈಹಿಡಿದಿದ್ದಾಳೆ. ಆಕೆಗೆ ಇತನೇ ಬೇಕು ಎನ್ನುವುದು ಮುಖ್ಯವಲ್ಲ. ಆದರೆ ಈತ ಇವಳೇ ಬೇಕು, ಬಾಳು ಕೊಡುತ್ತೇನೆ ಎನ್ನುವುದು ವಿಶೇಷದಲ್ಲಿ ವಿಶೇಷ. ಕಂಬಿಹಳ್ಳಿ ಚಂದ್ರುಗೂ ಈಕೆ ಹೆಂಡತಿ. ಹನಿಕೆ ಬಸವರಾಜನ ಪ್ರೇಮಿಯೂ ಈಕೆ. ಬೆಂಗಳೂರಿನ ಬೇಕರಿಯ ಕಿರಣನ ಮನದರಸಿಯೂ ಹೌದು. ರಮೇಶನ ರಾಧೆಯೂ ಇವಳೇ. ತುಕಾರಂನ ಮಡದಿಯೂ ಇದೇ ಗಟ್ಟಿಗಿತ್ತಿ. ಈಗ ರಂಗೇನಹಳ್ಳಿ ಚಂದ್ರುವಿನ ಚಕೋರಿ.   38ರ ಅಸುಪಾಸಿಗೆ …

Read More »

ಫನ್ ಗೋಸ್ಕರ ಚಟದ ಹಿಂದೆ ಬೀಳಬಾರದು.: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್

ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಡ್ರಗ್ ಮಾಫಿಯಾ ನಡೀತಾ ಇದೆ ಅನ್ನೋ ಸುದ್ದಿ ಮಾಧ್ಯಮಗಳ ಮೂಲಕ ನನಗೂ ಗೊತ್ತಾಗಿದೆ. ಫನ್ ಗೋಸ್ಕರ ಚಟದ ಹಿಂದೆ ಬೀಳಬಾರದು. ಫನ್ ಅನ್ನೋದು ವಿಪರೀತ ಆಗಬಾರದು ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ಹೇಳಿದ್ದಾರೆ. ನನಗೆ 58 ವರ್ಷ, ಈ ರೀತಿಯ ಎಲ್ಲ ಬೆಳವಣಿಗೆಗಳನ್ನು ನೋಡಿಕೊಂಡು ಬಂದಿದ್ದೇನೆ. ನಾವು ಬೇರೆಯವರಿಗೆ ಮಾದರಿಯಾಗಿ ಇರೋ ರೀತಿ ಜೀವನ ನಡೆಸಬೇಕು. ಈ ಮಾತನ್ನ ನಾನೊಬ್ಬ ಮಗನಾಗಿ, ತಂದೆಯಾಗಿ, ಗಂಡನಾಗಿ ಹೇಳ್ತಿದ್ದೇನೆ. ಪೊಲೀಸರೇ …

Read More »

536 ಮಂದಿ ಗುಣಮುಖ

ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 276 ಮಂದಿಗೆ ಕೋವಿಡ್-19 ದೃಢಪಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಜಿಲ್ಲಾಡಳಿತ ಶನಿವಾರ ತಿಳಿಸಿದೆ. ಈ ಸೋಂಕಿನ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. 536 ಮಂದಿ ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದೆ.

Read More »

ಪಾರ್ಟಿಗಳಲ್ಲಿ ಡ್ರಗ್ಸ್ ಹೇಗೆ ತಗೋತ್ತಾರೆ ಅನ್ನೋದು ನಮಗೆ ಗೊತ್ತೇ ಇಲ್ಲ: ಉಪೇಂದ್ರ

  ಬೆಂಗಳೂರು: ನಾವೂ ಪಾರ್ಟಿಗಳಿಗೆ ಹೋಗುತ್ತೇವೆ ಆದರೆ ಡ್ರಗ್ಸ್ ದಂಧೆ ಎಲ್ಲ ನನಗೆ ಗೊತ್ತಿಲ್ಲ ಎಂದು ನಟ ಉಪೇಂದ್ರ ತಿಳಿಸಿದ್ದಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಅವರು, ಡ್ರಗ್ಸ್ ಎಲ್ಲಿಂದ ಬರುತ್ತೆ, ಹೇಗೆ ಬರುತ್ತೆ ಎಂದು ಗೊತ್ತಿಲ್ಲ. ಆ ಪ್ರಪಂಚವೇ ನಮಗೆ ಗೊತ್ತಿಲ್ಲ. ಚಿತ್ರರಂಗದಲ್ಲಿ ಡ್ರಗ್ಸ್ ವಿಚಾರದ ಬಗ್ಗೆ ಕೇಳಿ ದಿಗ್ಬ್ರಮೆಯಾಯಿತು. ಸರಿಯಾಗಿ ಮಾಹಿತಿ ಸಿಗುವವರೆಗೂ ಮಾತನಾಡೋದು ಸರಿಯಲ್ಲ. ಸಿನಿಮಾ ಇಂಡಸ್ಟ್ರಿಯಲ್ಲಿ ನಾವೂ ಸಹ ಹಲವು ಪಾರ್ಟಿಗಳಿಗೆ ಹೋಗಿದ್ದೇವೆ. ಆದರೆ …

Read More »

ಕೊರೋನಾ ಆತಂಕ: ಹಳ್ಳಿಗಳು, ಸಣ್ಣ ಪಟ್ಟಣಗಳಲ್ಲಿ ಮಿಂಚಿನ ವೇಗದಲ್ಲಿ ಹರಡುತ್ತಿದೆ ಸೋಂಕು!

ಬೆಂಗಳೂರು: ಕೋವಿಡ್ -19 ರ ಪಟ್ಟಿಯಲ್ಲಿ ಕರ್ನಾಟಕವು ಮೂರು ಲಕ್ಷ ಗಡಿ ದಾಟುತ್ತಿದ್ದಂತೆ – ತಿಂಗಳಾರಂಭದಲ್ಲಿ 1.29 ಲಕ್ಷ ಸಕಾರಾತ್ಮಕ ಪ್ರಕರಣಗಳಿಂದ ಭಾರಿ ಜಿಗಿತ ಕಂಡಿದೆ. ಸಣ್ಣ ಪಟ್ಟಣಗಳು ​​ಮತ್ತು ಹಳ್ಳಿಗಳಲ್ಲಿ ಈ ವೈರಸ್ ವೇಗವಾಗಿ ಹರಡುತ್ತಿದೆ. ಶನಿವಾರ, ರಾಜ್ಯವು 8,324 ಹೊಸ ಪ್ರಕರಣಗಳನ್ನು ವರದಿ ಮಾಡಿದೆ, ಇದುವರೆಗೆ ರಾಜ್ಯದಲ್ಲಿ 32,7076 ಪ್ರಕರಣಗಳು ವರದಿಯಾಗಿದೆ. ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಿಸಿದ ನಂತರ ಜನ ಮುಕ್ತ ಸಂಚಾರ, ನಗರಗಳಿಗೆ ಮರಳುವಿಕೆಮತ್ತು ಪರೀಕ್ಷೆಗಳ ಸಂಖ್ಯೆಯಲ್ಲಿನ …

Read More »

ಥಿಯೇಟರ್, ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್-ಅನ್‍ಲಾಕ್ 4.O ಮಾರ್ಗಸೂಚಿ ಪ್ರಕಟ

    ನವದೆಹಲಿ: ಕೇಂದ್ರ ಸರ್ಕಾರ ಅನ್‍ಲಾಕ್ 4.Oರ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ಸೆಪ್ಟೆಂಬರ್ 7ರಿಂದ ಮೆಟ್ರೋ ರೈಲುಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಸೆಪ್ಟೆಂಬರ 30ರವರೆಗೆ ಲಾಕ್‍ಡೌನ್ ಮುಂದುವರಿಯಲಿದೆ./ ಸಾಮಾಜಿಕ/ರಾಜಕೀಯ/ಕ್ರೀಡೆ/ಮನೋರಂಜನೆ/ ಧಾರ್ಮಿಕ ಕಾರ್ಯಕ್ರಮಗಳಿಗೆ ಅನುಮತಿ ನೀಡಲಾಗಿದೆ. ಕಾರ್ಯಕ್ರಮದಲ್ಲಿ 100 ಜನರು ಮಾತ್ರ ಪಾಲ್ಗೊಳ್ಳುವದರ ಜೊತೆ ಕೋವಿಡ್ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಈ ಆದೇಶ ಸೆಪ್ಟೆಂಬರ್ 21ರಿಂದ ಅನ್ವಯವಾಗಲಿದೆ. ಹವಾನಿಯಂತ್ರಣ ರಹಿತ ಚಿತ್ರಮಂದಿರಗಳನ್ನು ಸೆಪ್ಟೆಂಬರ್ 21ರಿಂದ ತೆರೆಯಲು ಸರ್ಕಾರ ಅನುಮತಿ ನೀಡಿದೆ …

Read More »

11 ಹೊಸ ಏತ ನೀರಾವರಿ ಯೋಜನೆ ಗಳನ್ನು ಜಾರಿಗೊಳಿಸುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌

ಬೆಳಗಾವಿ: ಜಿಲ್ಲೆಗೆ 11 ಹೊಸ ಏತ ನೀರಾವರಿ ಯೋಜನೆ ಗಳನ್ನು ಜಾರಿಗೊಳಿಸುವ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ‌ ಅವರ ಪ್ರಸ್ತಾಪಗಳಿಗೆ ವಿಸ್ತೃತ ಯೋಜನಾ ವರದಿ ತಯಾರಿಸಲು ಕರ್ನಾಟಕ ನೀರಾವರಿ ನಿಗಮ ನಿಯಮಿತವು ಅನುಮತಿ ನೀಡಿದೆ. ನಿನ್ನೆ ನಡೆದ ನಿಗಮದ ಅಂದಾಜು ಪರಿಶೀಲನಾ ಸಭೆಯಲ್ಲಿ ಈ 11 ಏತ ನೀರಾವರಿ ಯೋಜನೆ ಗಳ ಅನುಷ್ಠಾನಕ್ಕೆ ಸಂಬಂಧಿಸಿ ಚರ್ಚೆ ನಡೆಸಿ, ಈ ಯೋಜನೆಗಳಿಗೆ ಅವಶ್ಯವಿರುವ 9.91 ಟಿಎಂಸಿ ನೀರನ್ನು ಹಂಚಿಕೆ‌ ಮಾಡಲು ಸಹಾ  …

Read More »

ಕೋವಿಡ್  ನಿಯಂತ್ರಣ ಗೊಳಿಸುವಲ್ಲಿ ಸರ್ಕಾರ  ಸಂಪೂರ್ಣ ವಿಫಲ,ಮೋದಿ  ರಾತ್ರಿ 8 ಗಂಟೆಗೆ ಟಿವಿಲಿ ಬರುತ್ತಾರೆ ಎಂದ್ರೆ ದೇಶಕ್ಕೆ ಏನೇ ಕಾದಿದೆ:ಸತೀಶ್ ಜಾರಕಿಹೊಳಿ

ಬೆಳಗಾವಿ: ಪ್ರಧಾನಿ ಮೋದಿ  ರಾತ್ರಿ 8 ಗಂಟೆಗೆ ಟಿವಿಲಿ ಬರುತ್ತಾರೆ ಎಂದ್ರೆ ದೇಶಕ್ಕೆ ಏನೇ ಕಾದಿದೆ ಎಂದೇ ಅರ್ಥ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಕುಟುಕಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ 1 ವಾರ ಸಮಯ ಕೊಡಬೇಕಿತ್ತು. ಜನರು ತಮ್ಮ ಊರುಗಳಿಗೆ ಸೇರುತ್ತಿದ್ದರು. ಆ ಬಳಿಕ ಲಾಕ್ ಡೌನ್ ಮಾಡಬೇಕಿತ್ತು. ಆದರೆ ಒಮ್ಮೆಲೆ  ಲಾಕ್ ಡೌನ್ ಮಾಡಿದ್ದರಿಂದ ಜನರು ಸಮಸ್ಯೆ ಅನುಭವಿಸುವಂತಾಗಿಯಿತು ಎಂದರು. ಕೋವಿಡ್  ನಿಯಂತ್ರಣ …

Read More »