ರಾಯಚೂರು: ಜಿಲ್ಲೆಯ ಕೋವಿಡ್ ಆಸ್ಪತ್ರೆಗಳಾದ ರಿಮ್ಸ್ ಹಾಗೂ ಓಪೆಕ್ ನಲ್ಲಿನ ಸಮಸ್ಯೆಗಳು ಬಗೆಹರಿಯುವ ಲಕ್ಷಣಗಳೇ ಕಾಣುತ್ತಿಲ್ಲ. ಸ್ವಚ್ಛತೆ ಕೊರತೆ, ಊಟ, ನೀರಿನ ಸೌಲಭ್ಯ ಸರಿಯಾಗಿ ಇಲ್ಲದಿರುವುದು, ಮುಖ್ಯವಾಗಿ ಸಮರ್ಪಕ ಚಿಕಿತ್ಸೆ ನೀಡುತ್ತಿಲ್ಲ ಅನ್ನೋ ಸೋಂಕಿತರ ಆರೋಪ ಈಗಲೂ ಮುಂದುವರೆದಿದೆ.ಊಟ, ತಿಂಡಿ, ನೀರಿಗಾಗಿ ರೋಗಿಗಳ ಜೊತೆಗೆ ಇರುವವರು ಹಾಗೂ ರೋಗಿಗಳು ಸಹ ಹೊರಗೆ ಬಂದು ಹೋಟೆಲ್‍ಗಳಲ್ಲಿ ತೆಗೆದುಕೊಂಡು ಆಸ್ಪತ್ರೆಗೆ ವಾಪಸ್ ಮರಳುತ್ತಿದ್ದಾರೆ. ಟೀ ಕೊಡುತ್ತಿಲ್ಲ, ಕುಡಿಯುವ ನೀರಿನ ಸೌಲಭ್ಯವಿಲ್ಲ, ಹೊರಗಡೆಯಿಂದಲೇ ನೀರು …
Read More »ದೇವದುರ್ಗದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಮುಳುಗಡೆ ಭೀತಿ
ರಾಯಚೂರು: ಕಳೆದ ವರ್ಷದ ಪ್ರವಾಹಕ್ಕೆ ಮುಳುಗಡೆಯಾಗಿದ್ದ ರಾಯಚೂರಿನ ದೇವದುರ್ಗದ ಐತಿಹಾಸಿಕ ಕೊಪ್ಪರ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಈ ಬಾರಿಯೂ ಮುಳುಗಡೆ ಭೀತಿ ಎದುರಿಸುತ್ತಿದೆ ಈಗಾಗಲೇ ದೇವಾಲಯದ ಆಧಾರ ಸ್ಥಂಬಗಳು ಜಲಾವೃತವಾಗಿವೆ. ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುವುದರಿಂದ ಭಕ್ತರ ಸಂಖ್ಯೆಯೂ ಕಡಿಮೆಯಾಗಿದೆ. ಕಳೆದ ವರ್ಷ ದೇವಾಲಯ ಪಕ್ಕದಲ್ಲಿರುವ ಅರ್ಚಕರು ಹಾಗೂ ಗ್ರಾಮದ ಹಲವಾರು ಕುಟುಂಬಗಳು ಪ್ರವಾಹದ ಹೊಡೆತಕ್ಕೆ ನಲುಗಿದ್ದವು. ಈ ಬಾರಿ ನಾರಾಯಣಪುರ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದ …
Read More »ಕೋವಿಡ್ ಕೇರ್ ಸೆಂಟರ್ ನಲ್ಲಿ ಇರಲು ಸಾಧ್ಯವಾಗುತ್ತಿಲ್ಲ ನಮ್ಮನ್ನ ಮನೆಗೆ ಬಿಡಿ
ರಾಯಚೂರು: ನಗರದ ಹೊರವಲಯದ ಯರಮರಸ್ ಬಳಿಯ ಕೋವಿಡ್ ಕೇರ್ ಸೆಂಟರ್ ನಲ್ಲಿ ವಿದ್ಯುತ್ ಸಮಸ್ಯೆ ಉಂಟಾಗಿದ್ದು ಕೊರೊನಾ ಸೊಂಕಿತರು ಕತ್ತಲಲ್ಲೇ ಕಾಲ ಕಳೆಯಬೇಕಾಗಿದೆ. ವಿದ್ಯುತ್ ಇಲ್ಲದಿರುವುದರಿಂದ ನಾನಾ ಸಮಸ್ಯೆಗಳ ಕೊರೋನಾ ಸೋಂಕಿತರು ಎದುರಿಸುತ್ತಿದ್ದಾರೆ. ಮುಖ್ಯವಾಗಿ ನೀರಿನ ಸಮಸ್ಯೆ ಎದುರಾಗಿದ್ದು ಶೌಚಕ್ಕೂ ಹೋಗಲು ಆಗದೇ ಪರದಾಡುವಂತಾಗಿದೆ. ಸೊಳ್ಳೆ ಕಾಟದಿಂದ ನಿದ್ದೆ ಮಾಡಲು ಆಗದ ಪರಸ್ಥಿತಿಗೆ ಸೋಂಕಿತರು ಹೆದರಿದ್ದಾರೆ. ನಿನ್ನೆಯಿಂದಲೂ ವಿದ್ಯುತ್ ಸಮಸ್ಯೆಯಿದ್ದು ಜೆಸ್ಕಾಂ ಅಧಿಕಾರಿಗಳು ಸರಿಯಾಗಿ ಸ್ಪಂದಿಸಿಲ್ಲ. ಹೀಗಾಗಿ ಇಲ್ಲಿ ಇರಲು …
Read More »ಕೊರೊನಾ ಭೀತಿ ನಡುವೆಯೂ ಜನ ಸಾಮಾಜಿಕ ಅಂತರ ಮರೆತು ವ್ಯಾಪಾರ ಜೋರಾಗಿ ನಡೆಸಿದ್ದಾರೆ.
ರಾಯಚೂರು: ವರಮಹಾಲಕ್ಷ್ಮಿ ಹಬ್ಬದ ಹಿನ್ನೆಲೆ ರಾಯಚೂರಿನಲ್ಲಿ ಹಣ್ಣು, ಹೂ ವ್ಯಾಪಾರ ಜೋರಾಗಿದೆ. ಕೊರೊನಾ ಭೀತಿ ನಡುವೆಯೂ ಜನ ಸಾಮಾಜಿಕ ಅಂತರ ಮರೆತು ವ್ಯಾಪಾರ ಜೋರಾಗಿ ನಡೆಸಿದ್ದಾರೆ. ಮಾಸ್ಕ್ ಸಹ ಧರಿಸದೆ ಜನ ಬಾಳೆದಿಂಡು, ಹಸಿರು ಬಳೆ, ಹಣ್ಣು ಖರೀದಿ ಮಾಡುತ್ತಿದ್ದಾರೆ. ಮಾರ್ಕೆಟ್ ತುಂಬಾ ಮಹಿಳೆಯರೇ ವ್ಯಾಪಾರ ನಡೆಸಿದ್ದು ಹಬ್ಬದ ಸಂಭ್ರಮಕ್ಕೆ ಸಾಕ್ಷಿಯಾಗಿದೆ. ಆದ್ರೆ ವ್ಯಾಪಾರಿಗಳು ಮಾತ್ರ ಈ ವರ್ಷ ವ್ಯಾಪಾರವೇ ಇಲ್ಲಾ ಅಂತ ಬೇಸರ ವ್ಯಕ್ತಪಡಿಸಿದ್ದಾರೆ. ಬೆಲೆಯಲ್ಲೂ ವ್ಯತ್ಯಾಸವಾಗಿದ್ದು ಮಳೆ …
Read More »ರಾಯಚೂರು :ಕೋವಿಡ್ 19 ದೃಢ ಹೆಡ್ ಕಾನ್‌ಸ್ಟೇಬಲ್ ರಾಘವೇಂದ್ರ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತ
ರಾಯಚೂರು: ಕೋವಿಡ್ ದೃಢವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಗ್ರಾಮೀಣ ಠಾಣೆಯ ಹೆಡ್ ಕಾನ್‌ಸ್ಟೇಬಲ್ ರಾಘವೇಂದ್ರ ಅವರು ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮೃತಪಟ್ಟಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಿ.ಬಿ.ವೇದಮೂರ್ತಿ ಅವರು ಗ್ರಾಮೀಣ ಠಾಣೆಗೆ ಭೇಟಿಕೊಟ್ಟರು. ಇದೇ ವೇಳೆ ರಾಘವೇಂದ್ರ ಅವರಿಗೆ ಪೊಲೀಸರು ಶ್ರದ್ಧಾಂಜಲಿ ಸಲ್ಲಿಸಿದರು. ‘ರಾಘವೇಂದ್ರ ಅವರು ಸಹೃದಯಿ. ಎಲ್ಲರನ್ನು ಪ್ರೀತಿಯಿಂದ ಮಾತನಾಡಿಸುತ್ತಿದ್ದರು ಕರ್ತವ್ಯದಲ್ಲಿ ಪ್ರಾಮಾಣಿಕತೆ, ನಿಷ್ಠೆಯಿಂದ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಇಂತಹ ವ್ಯಕ್ತಿಯ ಮರಣ ನಿಜಕ್ಕೂ ಇಲಾಖೆಗೆ ನೋವುಂಟು ಮಾಡಿದೆ’ …
Read More »ರಾಯಚೂರಿನಲ್ಲಿ ಸಂಡೇ ಲಾಕ್‍ಡೌನ್‍ಗೆ ಎಲ್ಲಾ ಬಂದ್: ಹೊರಬಂದವರಿಗೆ ಲಾಠಿ ಏಟು
ರಾಯಚೂರು: ಸಂಡೇ ಲಾಕ್‍ಡೌನ್ ಉಲ್ಲಂಘಿಸಿ ಓಡಾಡುವವರಿಗೆ ರಾಯಚೂರು ಪೊಲೀಸರು ಲಾಠಿ ರುಚಿ ತೋರಿಸಿ ವಾಪಸ್ ಕಳುಹಿಸುತ್ತಿದ್ದಾರೆ. ಭಾನುವಾರ ಲಾಕ್ ಡೌನ್ ಇರುವುದು ತಿಳಿದಿದ್ದರೂ ಜನ ಅನಾವಶ್ಯಕವಾಗಿ ರಸ್ತೆಗೆ ಇಳಿಯುವುದನ್ನ ಮುಂದುವರಿಸಿದ್ದಾರೆ. ಹೀಗಾಗಿ ಪೊಲೀಸರು ಲಾಠಿ ರುಚಿ ತೋರಿಸುತ್ತಿದ್ದಾರೆ.ಬೈಕ್, ಕಾರ್ ಗಳನ್ನ ಜಪ್ತಿಮಾಡಿ ದಂಡ ವಸೂಲಿ ಮಾಡುತ್ತಿದ್ದಾರೆ. ಇನ್ನೂ ಬೀದಿ ಬದಿಯಲ್ಲಿ ಟೀ, ತರಕಾರಿ ಮಾರುವವರು ಸಾಮಾಜಿಕ ಅಂತರವಿಲ್ಲದೆ ಮಾಸ್ಕ್ ಇಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ. ರಸ್ತೆ ಬದಿಯ ವ್ಯಾಪಾರಿಗಳನ್ನ ಪೊಲೀಸರು ಚದುರಿಸಿ ಕಳುಹಿಸುತ್ತಿದ್ದಾರೆ. …
Read More »ದೇವದುರ್ಗದಲ್ಲಿ ಗುಡ್ಡ ಕುಸಿತ- ಇಬ್ಬರು ಬಾಲಕರು ಸಾವು………
ರಾಯಚೂರು: ನಿರಂತರವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆ ದೇವದುರ್ಗ ಪಟ್ಟಣದ ಗೌರಂಪೇಟೆ ಕಾಲೋನಿ ಬಳಿ ಗುಡ್ಡ ಕುಸಿದು ಇಬ್ಬರು ಬಾಲಕರು ಸಾವನ್ನಪ್ಪಿದ್ದಾರೆ. ಇನ್ನೋರ್ವ ಬಾಲಕನ ಕಾಲು ಮುರಿದಿದೆ. 13 ವರ್ಷದ ವಿರೇಶ್, 10 ವರ್ಷದ ರಮೇಶ್ ಮೃತ ಬಾಲಕರು. ಇನ್ನೋರ್ವ ಬಾಲಕ ಮೌನೇಶ್‍ಗೆ ಕಾಲು ಮುರಿದಿದ್ದು, ದೇವದುರ್ಗ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.ನಿರಂತರ ಮಳೆಯಿಂದಾಗಿ ಗುಡ್ಡದ ಮಣ್ಣು ಸಡಿಲವಾಗಿದ್ದು, ಬಂಡೆ ಕೆಳೆಗೆ ಉರುಳಿದೆ. ಗುಡ್ಡದ ಪಕ್ಕದಲ್ಲೇ ಮನೆಗಳಿದ್ದು, ಬಾಲಕರು ಆಟವಾಡುತ್ತಿದ್ದ ವೇಳೆ ಬಂಡೆ …
Read More »ಅಮವಾಸ್ಯೆ ಹೂ, ಹಣ್ಣಿಗೆ ಮುಗಿಬಿದ್ದ ಜನ- ಲಾಕ್‍ಡೌನ್ ಮಧ್ಯೆ ಭಕ್ತರಿಂದ ತುಂಬಿದ ದೇವಾಲಯ
ರಾಯಚೂರು: ಭೀಮನ ಅಮವಾಸ್ಯೆ ಹಾಗೂ ಶ್ರಾವಣ ಆರಂಭ ಹಿನ್ನೆಲೆ ರಾಯಚೂರಿನಲ್ಲಿ ಕೊರೊನಾ ಹರಡುವಿಕೆ ಭೀತಿ ಮರೆತು ಭಕ್ತರು ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ತೆರಳುತ್ತಿದ್ದಾರೆ. ನಗರದ ಉರುಕುಂದಿ ಈರಣ್ಣ ದೇವಾಲಯದಲ್ಲಿ ಭಕ್ತರ ದಂಡು ಹರಿದು ಬಂದಿದೆ. ಲಾಕ್‍ಡೌನ್ ಮಧ್ಯೆ ಅಮವಾಸ್ಯೆ ಹಿನ್ನೆಲೆ ವಿಶೇಷ ಪೂಜೆ ಹಮ್ಮಿಕೊಳ್ಳಲಾಗಿತ್ತು, ಇದರಿಂದ ದೇವರ ದರ್ಶನಕ್ಕೆ ಭಕ್ತರು ಸಾಲುಗಟ್ಟಿ ನಿಂತಿದ್ದರು. ಸಾಮಾಜಿಕ ಅಂತರ, ಮಾಸ್ಕ್ ಸೇರಿದಂತೆ ಎಲ್ಲವನ್ನೂ ಮರೆತು ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಮುನ್ನೆಚ್ಚರಿಕೆಯಾಗಿ ಕೆಲ …
Read More »ರಾಯಚೂರಿನಲ್ಲಿ ಲಾಕ್‍ಡೌನ್ ಬಿಗಿ- ಶಾಸಕರ ಕಾರನ್ನೂ ವಾಪಸ್ ಕಳುಹಿಸಿದ ಪೊಲೀಸರು
ರಾಯಚೂರು: ಜಿಲ್ಲೆಯ ರಾಯಚೂರು ಹಾಗೂ ಸಿಂಧನೂರು ನಗರಗಳ 3ನೇ ದಿನದ ಲಾಕ್‍ಡೌನ್‍ನಲ್ಲೂ ಜನ ಯಾವುದೇ ಭೀತಿಯಿಲ್ಲದೆ ರಸ್ತೆಗಿಳಿಯುತ್ತಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಎರಡು ನಗರಗಳನ್ನು ಒಂದು ವಾರ ಕಾಲ ಲಾಕ್‍ಡೌನ್ ಮಾಡಲಾಗಿದೆ. ಅನಗತ್ಯವಾಗಿ ಜನ ರಸ್ತೆಗೆ ಇಳಿಯುತ್ತಲೇ ಇದ್ದಾರೆ. ಹೀಗಾಗಿ ಲಾಕ್‍ಡೌನ್ ಬಿಗಿಗೊಳಿಸಲು ಪೋಲಿಸರು ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಲಾಕ್‍ಡೌನ್ ಹಿನ್ನೆಲೆ ಶಾಸಕರ ಕಾರನ್ನು ಸಹ ವಾಪಸ್ ಕಳುಹಿಸಿ ಪೊಲೀಸ್ ಸಿಬ್ಬಂದಿ ಕರ್ತವ್ಯ ನಿಷ್ಠೆ …
Read More »ಲಾಕ್‍ಡೌನ್ ಎಫೆಕ್ಟ್- ಮಳೆಯನ್ನೂ ಲೆಕ್ಕಿಸದೆ ಮದ್ಯದಂಗಡಿ ಮುಂದೆ ಕುಡುಕರ ಕ್ಯೂ
ರಾಯಚೂರು: ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆ ನಾಳೆಯಿಂದ ಜಿಲ್ಲೆಯ ರಾಯಚೂರು ಹಾಗೂ ಸಿಂಧನೂರು ನಗರಗಳಲ್ಲಿ ಒಂದು ವಾರ ಸಂಪೂರ್ಣ ಲಾಕ್‍ಡೌನ್ ಮಾಡಲಾಗುತ್ತಿದೆ. ಹೀಗಾಗಿ ಕುಡುಕರು ಮಳೆಯನ್ನೂ ಲೆಕ್ಕಿಸದೆ ಒಂದು ವಾರಕ್ಕಾಗುವಷ್ಟು ಮದ್ಯ ಖರೀದಿಸಲು ಸರತಿಯಲ್ಲಿ ನಿಂತಿದ್ದಾರೆ. ಒಂದು ವಾರ ಮದ್ಯದಂಗಡಿಗಳು ಸಹ ಬಂದ್ ಆಗುವ ಹಿನ್ನೆಲೆ ಮದ್ಯ ಪ್ರೀಯರಿಗೆ ಕಷ್ಟವಾಗಿದ್ದು, ಮಳೆಯನ್ನೂ ಲೆಕ್ಕಿಸದೆ ಮದ್ಯದ ಅಂಗಡಿಗಳ ಮುಂದೆ ಕ್ಯೂ ನಿಂತಿದ್ದಾರೆ. ನಗರದ ಗಂಜ್ ರಸ್ತೆಯ ಎಂಎಸ್‍ಐಎಲ್ …
Read More »