ಯಾದಗಿರಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಕಪ್ಪು ಪಟ್ಟಿ ಧರಿಸಿ ಕೆಲಸಕ್ಕೆ ಹಾಜರಾಗಿದ್ದಾರೆ. ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 560 ನೌಕರರು ರಾಜ್ಯ ಆರೋಗ್ಯ ಮತ್ತು ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಇಲಾಖೆ ಗುತ್ತಿಗೆ ಹಾಗೂ ಹೊರಗುತ್ತಿಗೆ ಆಧಾರದ ಮೇಲೆ ವಿವಿಧ ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ಹಲವಾರು ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ …
Read More »ಯಾರ ಸಹಾಯವೂ ಬೇಡ ನಮ್ಮನ್ನು ಬಿಟ್ಟು ಬಿಡಿ’ – ಬೈಕ್, ಕಾಲ್ನಡಿಗೆಯಲ್ಲಿ ತಮ್ಮೂರಿನತ್ತ ಕೂಲಿ ಕಾರ್ಮಿಕರ ಪಯಣ
ಯಾದಗಿರಿ: ಇಷ್ಟು ದಿನ ರಾಜ್ಯದ ವಿವಿಧ ಜಿಲ್ಲೆಯಲ್ಲಿ ಪಾನಿಪೂರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ ಉತ್ತರ ಭಾರತದ ವಿವಿಧ ರಾಜ್ಯಗಳ ಕೂಲಿ ಕಾರ್ಮಿಕರು, ಕಾಲ್ನಡಿಗೆ ಮತ್ತು ಬೈಕ್ ಮೂಲಕ ತಮ್ಮ-ತಮ್ಮ ಊರುಗಳಿಗೆ ವಾಪಸ್ಸಾಗುತ್ತಿದ್ದಾರೆ. ಮಕ್ಕಳು, ಮಹಿಳೆಯರು, ವೃದ್ಧರು ಹೀಗೆ ತಮ್ಮ ಕುಟುಂಬಗಳೊಂದಿಗೆ ಕೆಲವರು ಮಧ್ಯಪ್ರದೇಶಕ್ಕೆ ನಡೆದುಕೊಂಡು ಹೋಗುತ್ತಿದ್ದರೆ. ಇನ್ನೂ ಕೆಲವರು ಉತ್ತರ ಪ್ರದೇಶಕ್ಕೆ ಬೈಕ್ ಮೇಲೆ ಹೊರಟಿದ್ದಾರೆ. ಕಲಬುರಗಿ, ವಿಜಯಪುರ ಹಾಗೂ ದಾವಣಗೆರೆಯಲ್ಲಿ ಪಾನಿಪೂರಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ …
Read More »ಸೋಂಕಿತನ ಸಂಪರ್ಕದಲ್ಲಿದ್ದ ವ್ಯಕ್ತಿಯ ವರದಿ ನೆಗೆಟಿವ್ ಯಾದಗಿರಿ ಸೇಫ್
ಯಾದಗಿರಿ: ಸದ್ಯ ಗ್ರೀನ್ ಝೋನ್ ನಲ್ಲಿರುವ ಯಾದಗಿರಿ ಸೇಫ್ ಆಗಿದೆ. ರೋಗಿ ನಂ.413 ಜೊತೆ ಪ್ರಥಮ ಸಂಪರ್ಕದಲ್ಲಿದ್ದ ವ್ಯಕ್ತಿಯ ವರದಿ ಕೊರೊನಾ ನೆಗೆಟಿವ್ ಬಂದಿದ್ದು, ಇದರಿಂದ ಯಾದಗಿರಿ ಜನತೆ ನಿಟ್ಟುಸಿರು ಬಿಟ್ಟಿದ್ದಾರೆ. ರೋಗಿ ನಂ.413 ಕನ್ನಡಕದ ಅಂಗಡಿ ಹೊಂದಿದ್ದು, ಯಾದಗಿರಿಯೊಂದಿಗೆ ನಿಕಟ ವ್ಯವಹಾರ ಸಂಪರ್ಕ ಹೊಂದಿದ್ದ. ವ್ಯಾಪಾರಕ್ಕಾಗಿ ಕಲಬುರಗಿಯಿಂದ ಯಾದಗಿರಿಗೆ ಸಂಚಾರ ಮಾಡಿದ್ದ. ಈ ವೇಳೆ ಕೊರೊನಾ ಸೋಂಕು ತಗುಲಿದ್ದ ರೋಗಿ ನಂ.413 ಜೊತೆ ಯಾದಗಿರಿ ವ್ಯಕ್ತಿ ಹತ್ತಿರದ ಒಡನಾಟ …
Read More »ಗ್ರೀನ್‍ಜೋನ್ ಯಾದಗಿರಿಗೆ ಕೊರೊನಾ ಆತಂಕ ಎದುರಾಗಿದೆ.
ಯಾದಗಿರಿ ಜಿಲ್ಲೆಯಲ್ಲಿ ಈವರೆಗೆ ಯಾವುದೇ ಕೊರೊನಾ ಸೋಂಕು ಪತ್ತೆಯಾಗಿರಲಿಲ್ಲ. ಹೀಗಾಗಿ ಗ್ರೀನ್‍ಜೋನ್ ಎಂದು ಘೋಷಿಸಾಲಾಗಿತ್ತು. ಇದೀಗ ಯಾದಗಿರಿಗೆ ಕೊರೊನಾ ಆತಂಕ ಎದುರಾಗಿದೆ. ಲಾಕ್‍ಡೌನ್ ಸಡಲಿಕೆ ಎಫೆಕ್ಟ್ ನಿಂದಾಗಿ ಯಾದಿಗಿರಿಗೆ ಬಂದು ಹೋಗಿದ್ದ ಕಲಬುರಗಿ ಸೋಂಕಿತನಿಂದ ಇದೀಗ ಜಿಲ್ಲಾಡಳಿತ ಸಂಕಷ್ಟಕ್ಕೀಡಾಗಿದೆ. ಏಪ್ರಿಲ್ 21 ರಂದು ರೋಗಿ 413 ಕಲಬುರಗಿ ವ್ಯಕ್ತಿಗೆ ಕೊರಾನಾ ದೃಢಪಟ್ಟಿದೆ. ಇತನ ಟ್ರಾವೆಲ್ ಹಿಸ್ಟರಿಯಲ್ಲಿ ಹೊರ ಬಿದ್ದರುವ ಸತ್ಯ ಯಾದಗಿರಿ ಜನರ ನಿದ್ದೆಗೆಡಿಸಿದೆ. ಪಾಸಿಟಿವ್ ಬಂದ ವ್ಯಕ್ತಿಗೆ ಯಾದಗಿರಿ …
Read More »ಯಾದಗಿರಿಯಲ್ಲಿ ಕಲಬುರಗಿ ಸೋಂಕಿತ ತಂದ ಫಜೀತಿ…………
ಯಾದಗಿರಿ: ಗ್ರೀನ್‍ಜೋನ್‍ನಲ್ಲಿರುವ ಯಾದಗಿರಿಗೆ ಕೊರೊನಾ ಆತಂಕ ಎದುರಾಗಿದೆ. ಲಾಕ್‍ಡೌನ್ ಸಡಲಿಕೆ ಎಫೆಕ್ಟ್ ನಿಂದಾಗಿ ಯಾದಿಗಿರಿಗೆ ಬಂದು ಹೋಗಿದ್ದ ಕಲಬುರಗಿ ಸೋಂಕಿತನಿಂದ ಇದೀಗ ಜಿಲ್ಲಾಡಳಿತ ಫಜೀತಿಗೆ ಸಿಲುಕಿದೆ. ಏಪ್ರಿಲ್ 21 ರಂದು ರೋಗಿ 413 ಕಲಬುರಗಿ ವ್ಯಕ್ತಿಗೆ ಕೊರಾನಾ ದೃಢಪಟ್ಟಿದೆ. ಇತನ ಟ್ರಾವೆಲ್ ಹಿಸ್ಟರಿಯಲ್ಲಿ ಹೊರ ಬಿದ್ದರುವ ಸತ್ಯ ಯಾದಗಿರಿ ಜನರ ನಿದ್ದೆಗೆಡಿಸಿದೆ. ಪಾಸಿಟಿವ್ ಬಂದ ವ್ಯಕ್ತಿಗೆ ಯಾದಗಿರಿ ನಗರದಲ್ಲಿ ಕನ್ನಡಕದ ಅಂಗಡಿಯಿದ್ದು, ಈ ಅಂಗಡಿ ಏಪ್ರಿಲ್ 15 ರಿಂದ 22ವರೆಗೆ …
Read More »ಇದ್ದಕ್ಕಿದ್ದಂತೆ ಜಾನುವಾರಗಳ ಸಾವು – ಗ್ರಾಮಸ್ಥರಲ್ಲಿ ಹೆಚ್ಚಿದ ಆತಂಕ
ಯಾದಗಿರಿ: ಸದ್ಯ ಕೊರೊನಾ ಗ್ರೀನ್ ಜೋನ್‍ನಲ್ಲಿರುವ ಯಾದಗಿರಿಗೆ ಮತ್ತೊಂದು ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಕೆಳದ ಮೂರು ದಿನಗಳಿಂದ ದನ-ಕರುಗಳು ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿವೆ. ಜಿಲ್ಲೆಯ ಯಾದಗಿರಿ ತಾಲೂಕಿನ ನಗಲಾಪುರ ಗ್ರಾಮದಲ್ಲಿ ಕಳೆದ ಮೂರು ದಿನದಲ್ಲಿ ಆರು ದನಗಳು ಸಾವನ್ನಪ್ಪಿದ್ದು, ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ದನಗಳ ಸಾವಿಗೆ ಯಾವುದೇ ಕಾರಣವಿಲ್ಲ ಮತ್ತು ಅವುಗಳಲ್ಲಿ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಮೇಯಿಯಲು ಹೊರಗಡೆ ತಿರುಗಾಡಿ ಮನೆಗೆ ಬಂದು ನೀರು ಕುಡಿದ ತಕ್ಷಣವೇ ದನಗಳು …
Read More »ಯಾದಗಿರಿ:ವಾರಿಯರ್ಸ್‍ಗೆ ಯಾದಗಿರಿ ಜಿಲ್ಲಾ ಬಿಜೆಪಿ ಘಟಕದಿಂದ ಪುಷ್ಪವೃಷ್ಟಿ….
ಯಾದಗಿರಿ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಖಾಕಿ ಪಡೆಗೆ ಯಾದಗಿರಿ ಜಿಲ್ಲಾ ಬಿಜೆಪಿ ಘಟಕದಿಂದ ಪುಷ್ಪವೃಷ್ಟಿ ಮಾಡುವ ಮೂಲಕ ಗೌರವ ಸೂಚಿಸಲಾಯಿತು. ನಗರದಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಶರಣಭೂಪಾಲರೆಡ್ಡಿ ನಾಯ್ಕಲ್ ಹಾಗೂ ಬಿಜೆಪಿ ಕಾರ್ಯಕರ್ತರು, ಪದವಿ ಕಾಲೇಜ್ ಹತ್ತಿರ ಪೊಲೀಸರ ಮೇಲೆ ಪುಷ್ಪವೃಷ್ಟಿ ಮಾಡುವ ಮೂಲಕ ನಮನ ಸಲ್ಲಿಸಿದರು. ಇದೇ ವೇಳೆ ಪೊಲೀಸರ ಕಾರ್ಯ ನೆನೆದು ಅವರಿಗೆ ಏಳನೀರು ಕೊಟ್ಟು …
Read More »ಮನೆ ಅಂಗಳದಲ್ಲೇ ಹೋಳೆಯಂತೆ ತುಂಬಿದ ಚರಂಡಿ ನೀರು.
ಮನೆ ಅಂಗಳದಲ್ಲೇ ಹೋಳೆಯಂತೆ ತುಂಬಿದ ಚರಂಡಿ ನೀರು. ಗಬ್ಬು ನಾತಕ್ಕೆ ಗ್ರಾ.ಪಂ.ನಾಕರ ರೊಚ್ಚಿಗೆದ್ದ ಗ್ರಾಮಸ್ಥರು. ರೋಗಕ್ಕೆ ಕೈ ಬೀಸಿ ಕರೆಯುತ್ತೀರುವ ಗ್ರಾ.ಪಂ ಅಧಿಕಾರಿ. ರೋಗಕ್ಕೆ ಕೈ ಬೀಸಿ ಕರೆಯುತ್ತೀರುವ ಗ್ರಾ.ಪಂ ಅಧಿಕಾರಿ. ಪಿಡಿಒ ನಿರ್ಲಕ್ಷ್ಯಕ್ಕೆ ಗ್ರಾಮದಲ್ಲಿ ಹೋಳೆ ಹರಿದ ಚರಂಡಿ ನೀರು. ಸೊಳ್ಳೆ, ನೊಣ,ತಿಗಣಿ ಕಾಟಕ್ಕೆ ಗ್ರಾಮಸ್ಥರಿಗಿಲ್ಲ ನಿದ್ದೆ. ಯಾದಗೀರಿ ಜಿಲ್ಲೆಯ ಎಮ್ ಹೊಸಳ್ಳಿ ಗ್ರಾಮದಲ್ಲಿ ದುರ್ನಾತ. ಭಯಾನಕ ಕರೋನ ರೋಗಕ್ಕೆ ಭಯಪಟ್ಟ ಗ್ರಾಮಸ್ಥರು. ಮನೆಗೆ ನುಗ್ಗಿದ ಚರಂಡಿ ನೀರು …
Read More »ಕೊರೊನಾದಿಂದ ಕಂಗೆಟ್ಟಿರುವ ರೈತರಿಗೆ ಆಸರೆ- ವೈದ್ಯ, ಗುತ್ತಿಗೆದಾರನಿಂದ ನೂತನ ಪ್ರಯತ್
ಯಾದಗಿರಿ: ಕೊರೊನಾದಿಂದಾಗಿ ದೇಶವೇ ಲಾಕ್‍ಡೌನ್ ಆಗಿದ್ದು, ಬೆಳೆದ ಹಣ್ಣುಗಳನ್ನು ಕೊಳ್ಳುವವರೇ ಇಲ್ಲದಂತಾಗಿದೆ. ಅದೇ ರೀತಿ ಯಾದಗಿರಿ ಜಿಲ್ಲೆಯ ರೈತರಿಗೂ ಸಂಕಷ್ಟ ಎದುರಗಿದ್ದು, ಜಿಲ್ಲೆಯ ಖಾಸಗಿ ವೈದ್ಯ ಮತ್ತು ಗುತ್ತಿಗೆದಾರ ಸ್ಪಂದಿಸುವ ಮೂಲಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ ಸಂಕಷ್ಟದಲ್ಲಿರುವ ಜಿಲ್ಲೆಯ ಹಣ್ಣು ಮತ್ತು ತರಕಾರಿ ಬೆಳೆದ ರೈತರಿಗೆ ನೆರವಾಗಲು ರಾಜ್ಯದಲ್ಲಿಯೇ ವಿನೂತನ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಲಾಕ್‍ಡೌನ್ ಗೆ ಸಿಲುಕಿ, ಸಾರಿಗೆ ಮತ್ತು ಸರಿಯಾದ ಮಾರುಕಟ್ಟೆ ಇಲ್ಲದೆ ಬೆಳೆದ …
Read More »ಅನಾರೋಗ್ಯದಿಂದ 6ರ ಬಾಲಕಿ ಸಾವು – ಕೊರೊನಾ ಪ್ರೋಟೋಕಾಲ್‍ನಂತೆ ಶವಸಂಸ್ಕಾರ
ಯಾದಗಿರಿ: ತೀವ್ರ ಅನಾರೋಗ್ಯದಿಂದ ಮೃತಪಟ್ಟಿದ್ದ ಜಿಲ್ಲೆಯ ಶಹಪುರ ತಾಲೂಕಿನ ಕೊಂಗಂಡಿ ಗ್ರಾಮದ ಆರು ವರ್ಷದ ಬಾಲಕಿಯ ಅಂತ್ಯಕ್ರಿಯೆಯನ್ನು ವಿಶ್ವ ಅರೋಗ್ಯ ಸಂಸ್ಥೆಯ ಪ್ರೋಟೋಕಾಲ್ ನಿಯಮದಂತೆ ಅಧಿಕಾರಿಗಳು ನೆರವೇರಿಸಿದ್ದಾರೆ. ಕಳೆದ ಮೂರು ದಿನಗಳಿಂದ ಬಾಲಕಿ ತೀವ್ರ ಕೆಮ್ಮು, ಜ್ವರ ಹಾಗೂ ಗಂಟಲು ನೋವಿನಿಂದ ಬಳಲುತ್ತಿದ್ದಳು. ಹೀಗಾಗಿ ಬಾಲಕಿ ಕುಟುಂಬಸ್ಥರು ಅವಳಿಗೆ ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಆದರೆ ಬಾಲಕಿ ಗುಣಮುಖವಾಗದ ಹಿನ್ನಲೆ ಹೆಚ್ಚಿನ ಚಿಕಿತ್ಸೆಗಾಗಿ, ಶಹಾಪುರ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು …
Read More »
Laxmi News 24×7