Breaking News

ಬೆಳಗಾವಿ

ಕೇಳಿಸದೇ ಕಲ್ಲು ಕಲ್ಲಿನಲಿನ ಕಲ್ಲುಕುಟಿಗರ ಧ್ವನಿ

ಚಿಕ್ಕೋಡಿ: ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಲ್ಲು ಕುಟಿಗರು ಈಗಲೂ ತಮ್ಮ ಕುಲಕಸುಬು ಮಾಡುತ್ತಿದ್ದಾರೆ. ತುತ್ತಿನಚೀಲ ತುಂಬಿಸಿಕೊಳ್ಳಲು ಕಲ್ಲು- ಬಂಡೆಗಳನ್ನೇ ಪುಡಿ ಮಾಡಿ ರೂಪ ನೀಡುತ್ತಿದ್ದಾರೆ. ‌ಮೂರು ತಲೆಮಾರುಗಳಿಂದ ಇದೇ ಕೆಲಸ ಮಾಡುತ್ತಿದ್ದರೂ ಅವರ ಬದುಕು ಮಾತ್ರ ಇನ್ನೂ ಮೂರ್ತರೂಪ ಪಡೆದಿಲ್ಲ. ಸಂಕಷ್ಟಗಳು ಕಲ್ಲು-ಬಂಡೆಗಳಂತೆಯೇ ದೃಢವಾಗಿ ಉಳಿದುಬಿಟ್ಟಿವೆ. ಜೈನಾಪುರ ಕ್ರಾಸ್‌ಗೆ ಬಂದರೆ ಸಾಕು; ಒಳಕಲ್ಲು, ಬೀಸುವ ಕಲ್ಲು, ರುಬ್ಬುವ ಕಲ್ಲು, ಚಟ್ನಿ ಕಲ್ಲು, ನಂದಿ, ಲಿಂಗ, ನಾಗಪ್ಪ ಮುಂತಾದ ಮೂರ್ತಿಗಳು …

Read More »

ಬೆಳಗಾವಿ | ಧಾರಾಕಾರ ಮಳೆ: ಮನೆಗಳಿಗೆ ನುಗ್ಗಿದ ನೀರು

ಬೈಲಹೊಂಗಲ: ಪಟ್ಟಣ ಹಾಗೂ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಗುರುವಾರ ಧಾರಾಕಾರ ಮಳೆ ಸುರಿಯಿತು. ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದ ಹೊತ್ತಿಗೆ ಬಿರುಸಿನ ಮಳೆ ಬಿದ್ದು, ಪಟ್ಟಣದ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತು. ಹೊಸೂರ ರಸ್ತೆಯ ವಿಜಯ ಸೋಸಿಯಲ್ ಕ್ಲಬ್, ಪೊಲೀಸ್ ಠಾಣೆ, ಬಸ್ ನಿಲ್ದಾಣ ಮುಖ್ಯ ರಸ್ತೆಗಳು ಮಳೆ ನೀರಿನಿಂದಾಗಿ ಕೆರೆಯಂತೆ ಕಂಡವು. ಕಾರ್‌, ಬೈಕ್‌ ಸವಾರರು ಸಂಚಾರಕ್ಕೆ ಪರದಾಡುವಂತಾಯಿತು. ಈಟಿ ಬಸವೇಶ್ವರ ದೇವಸ್ಥಾನ ಹತ್ತಿರದ ಎಂ.ಜೆ. ಹೌಸಿಂಗ್ …

Read More »

ಚಿಕ್ಕೋಡಿ: ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾಗೆ 90,834 ಮತಗಳ ಅಂತರದಿಂದ ಗೆಲುವು

ಚಿಕ್ಕೋಡಿ: ಲೋಕಸಭೆ ಕ್ಷೇತ್ರಕ್ಕೆ ಈ ಬಾರಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪ್ರಿಯಾಂಕಾ ಜಾರಕಿಹೊಳಿ ಮೊದಲ ಯತ್ನದಲ್ಲೇ ಬಿಜೆಪಿ ಅಭ್ಯರ್ಥಿ ಹಾಗೂ ಹಾಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ ವಿರುದ್ಧ 90,834 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಇಲ್ಲಿನ ಆರ್‌.ಡಿ ಕಾಲೇಜು ಆವರಣದಲ್ಲಿ ಮಂಗಳವಾರ ಬೆಳಿಗ್ಗೆ ಮತಗಳ ಎಣಿಕೆ ಪ್ರಕ್ರಿಯೆ ಆರಂಭಗೊಂಡಿತು. ಮಧ್ಯಾಹ್ನದವರೆಗೆ 22 ಸುತ್ತುಗಳ ಎಣಿಕೆ ನಡೆಯಿತು. ಮೊದಲ ಸುತ್ತಿನಲ್ಲಿ 8,533 ಮತಗಳ ಮುನ್ನಡೆ ಸಾಧಿಸಿದ ಪ್ರಿಯಾಂಕಾ, ಎರಡನೇ ಸುತ್ತಿನಲ್ಲಿ 20,314 …

Read More »

ಲೋಕಸಭಾ ಚುನಾವಣೆ ಫಲಿತಾಂಶ: ಬೆಳಗಾವಿಯಲ್ಲಿ ತಮ್ಮ ತಾಕತ್ತು ತೋರಿಸಿದ ಜಾರಕಿಹೊಳಿ ಬ್ರದರ್ಸ್

ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಗದೀಶ್​ ಶೆಟ್ಟರ್​ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​ ಪುತ್ರ ಮೃಣಾಲ್​ ಅಂಬರೀಶ್​ ಸೋಲು ಕಂಡಿದ್ದಾರೆ. ಮೃಣಾಲ್ ಸೋಲಿಸಲು ಜಾರಕಿಹೊಳಿ ಸಹೋದರರು ಸೈಲೆಂಟ್ ಆಗಿ ಸೂತ್ರ ಹೆಣೆದಿದ್ದರು. ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸೇಡು ತೀರಿಸಿಕೊಂಡಿದ್ದು, ಜಗದೀಶ್ ಶೆಟ್ಟರ್ ಗೆಲ್ಲಿಸುವಲ್ಲಿ ಜಾರಕಿಹೊಳಿ ಸಹೋದರರ ಯಶಸ್ವಿ ಆಗಿದ್ದಾರೆ.   ಬೆಳಗಾವಿ, ಜೂನ್​ 04: ರಾಜ್ಯದ ಪ್ರಭಾವಿ ರಾಜಕೀಯ ಕುಟುಂಬಗಳಲ್ಲಿ ಬೆಳಗಾವಿಯ ಜಾರಕಿಹೊಳಿ ಕುಟುಂಬವೂ …

Read More »

ದುಃಸ್ಥಿತಿಯಲ್ಲಿ ವಿದ್ಯಾರ್ಥಿನಿಯರ ವಸತಿ ನಿಲಯ

ಚಿಕ್ಕೋಡಿ: ಚಿಕ್ಕೋಡಿ ಹಾಗೂ ನಿಪ್ಪಾಣಿ ತಾಲ್ಲೂಕು ವ್ಯಾಪ್ತಿಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಬಾಲಕ ಹಾಗೂ ಬಾಲಕಿಯರ 16 ವಸತಿ ನಿಲಯಗಳು ಇದ್ದು, ಇವುಗಳ ಪೈಕಿ ಚಿಕ್ಕೋಡಿ ಪಟ್ಟಣದ ಬಾಲಕಿಯರ ವಸತಿ ನಿಲಯ ಶಿಥಿಲಗೊಂಡಿದ್ದು, ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿದೆ. ಶಾಲಾ ತರಗತಿಗಳು ಪ್ರಾರಂಭವಾಗುತ್ತಿದ್ದರೂ ಪರ್ಯಾಯ ವ್ಯವಸ್ಥೆ ಮಾಡದೇ ಅಧಿಕಾರಿಗಳು ಕೈ ಕಟ್ಟಿ ಕುಳಿತಿದ್ದಾರೆ. ಮೆಟ್ರಿಕ್ ಪೂರ್ವ 13 ಹಾಗೂ ಮೆಟ್ರಿಕ್ ನಂತರದ 3 ವಸತಿ ನಿಲಯಗಳಲ್ಲಿ 2024-25ನೇ ಸಾಲಿನಲ್ಲಿ ವ್ಯಾಸಾಂಗ …

Read More »

ಚಿಕ್ಕೋಡಿಯಲ್ಲಿ ಯಾರ ಪಾಲಾಗಲಿದೆ ಗೆಲುವಿನ ಪಟ್ಟ?

ಚಿಕ್ಕೋಡಿ, ಮೇ 27: ಬೆಳಗಾವಿ ಜಿಲ್ಲೆ ತಾಲೂಕು ಕೇಂದ್ರವಾಗಿರುವ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಈ ಭಾರಿ ಎರಡು ಪ್ರಮುಖ ಪಕ್ಷಗಳು ತೀವ್ರ ಪೈಪೋಟಿ ಒಡ್ಡಿದವು. ಮೇ 7ರಂದು ಚುನಾವಣೆ ನಡೆದಿದ್ದು, ಬರೋಬ್ಬರಿ ಈ ಕ್ಷೇತ್ರವೊಂದರಲ್ಲೇ ಶೇಕಡಾ 78.66 ರಷ್ಟು ಮತದಾನ ಆಗಿದೆ. ಹಾಗಾದರೆ ಈ ಬಾರಿ ಗೆಲುವು ಯಾರಿಗೆ? ಕಾಂಗ್ರೆಸ್‌-ಬಿಜೆಪಿಗೆ ಇರುವ ಪೂರಕ ಅಂಶಗಳ ಏನು?. ಚಿಕ್ಕೋಡಿಯಲ್ಲಿ ಬಿಜೆಪಿಯಿಂದ ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಹಾಗೂ ಕಾಂಗ್ರೆಸ್‌ನಿಂದ ಕರ್ನಾಟಕದ ಹಾಲಿ …

Read More »

ಸವದತ್ತಿ: ಬಹಿರ್ದೆಸೆ ತಾಣವಾದ ಚಿಕ್ಕುಂಬಿ ಕೆರೆ, ಅಧಿಕಾರಿಗಳ ವಿರುದ್ಧ ಜನರ ಆಕ್ರೋಶ

ಸವದತ್ತಿ: ಗ್ರಾಮಸ್ಥರ ಜೀವನಾಡಿಯಾಗಿದ್ದ ಚಿಕ್ಕುಂಬಿ ಕೆರೆ ಇದೀಗ ಬಹಿರ್ದೆಸೆ ತಾಣವಾಗಿ ಮಾರ್ಪಟ್ಟಿದೆ. ಗ್ರಾಮ ಪ್ರವೇಶಿಸುತ್ತಿದ್ದಂತೆ ದುರ್ವಾಸನೆಯೇ ಸ್ವಾಗತಿಸುತ್ತದೆ.   ಕೆರೆಯ ಸುತ್ತಲೂ ಮುತ್ತಿಕೊಂಡಿರುವ ಕಸರದ ರಾಶಿ, ತಿಪ್ಪೆ ಗುಂಡಿಗಳು ರಸ್ತೆವರೆಗೂ ಹಬ್ಬಿವೆ.

Read More »

ಕರಂಜಾಳ ಕೆರೆಯಲ್ಲಿ ಬೇಸಿಗೆಯಲ್ಲೂ ನೀರು

ಖಾನಾಪುರ: ಸಾಮಾನ್ಯವಾಗಿ ಬೇಸಿಗೆಯಲ್ಲಿ ಹಳ್ಳ-ಕೊಳ್ಳಗಳು, ಕೆರೆ-ಕಟ್ಟೆಗಳು ಮತ್ತು ನದಿ ಮತ್ತಿತರ ಜಲಮೂಲಗಳಲ್ಲಿ ನೀರಿನ ಹರಿವು ಮತ್ತು ಪ್ರಮಾಣ ಕ್ಷೀಣಿಸುವುದು ವಾಡಿಕೆ. ಆದರೆ ತಾಲ್ಲೂಕಿನ ಲೋಂಡಾ ಅರಣ್ಯ ವಲಯದ ಕರಂಜಾಳ ಗ್ರಾಮ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಹತ್ತು ವರ್ಷಗಳ ಹಿಂದೆ ಅರಣ್ಯ ಇಲಾಖೆಯವರು ನಿರ್ಮಿಸಿದ ಕೆರೆಯಲ್ಲಿ ಈ ವರ್ಷದ ಕಡು ಬೇಸಿಗೆಯಲ್ಲೂ ಅವಶ್ಯ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ.

Read More »

ಕಾಹೇರ್‌ ಘಟಿಕೋತ್ಸವ ಮೇ 27ರಂದು: ಉಪರಾಷ್ಟ್ರಪತಿ ಧನ್‌ಕರ್ ಭಾಗಿ

ಬೆಳಗಾವಿ: ‘ಇಲ್ಲಿನ ಕೆಎಲ್‌ಇ ಅಕಾಡೆಮಿ ಆಫ್‌ ಹೈಯರ್‌ ಎಜ್ಯುಕೇಷನ್‌ ಆಯಂಡ್‌ ರಿಸರ್ಚ್‌ನ(ಕಾಹೇರ್‌) 14ನೇ ಘಟಿಕೋತ್ಸವ ಮೇ 27ರಂದು ಬೆಳಿಗ್ಗೆ 11.30‌ಕ್ಕೆ ನಡೆಯಲಿದೆ’ ಎಂದು ಕಾಹೇರ್‌ ಕುಲಪತಿಯೂ ಆಗಿರುವ ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

Read More »

ಚಿಕ್ಕೋಡಿ: ಹಾವು ಕಚ್ಚಿ ಬಾಲಕಿ ಸಾವು

ಚಿಕ್ಕೋಡಿ: ತಾಲ್ಲೂಕಿನ ಕೇರೂರವಾಡಿಯಲ್ಲಿ ಶುಕ್ರವಾರ ರಾತ್ರಿ ಹಾವು ಕಚ್ಚಿ 4 ವರ್ಷದ ಬಾಲಕಿ ಶಿವಾನಿ ತುಳಸಿಗೇರಿ ಮೃತಪಟ್ಟ ಘಟನೆ ನಡೆದಿದೆ. ಮೂಲತಃ ರಾಯಬಾಗ ತಾಲ್ಲೂಕಿನ ಚಿಂಚಲಿ ಪಟ್ಟಣದ ನಿವಾಸಿಗಳಾದ ಭುಜೇಂದ್ರ ಹಾಗೂ ದೀಪಾ ದಂಪತಿಯ ಪುತ್ರಿ ಶಿವಾನಿ ಅಜ್ಜಿಯ ಮನೆಗೆ ಬಂದಿದ್ದಳು. ಶುಕ್ರವಾರ ರಾತ್ರಿ ತೋಟದ ಮನೆಯ ಮುಂದೆ ಆಟ ಆಡುವಾಗ ಬಾಲಕಿಯ ಕಾಲಿಗೆ ಹಾವು ಕಚ್ಚಿದೆ. ಕೂಡಲೇ ಚಿಕ್ಕೋಡಿ ತಾಲ್ಲೂಕು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗೆ …

Read More »