Breaking News

ಬೆಳಗಾವಿ

ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಒಂದು‌ ಕಳಂಕ;ಸತೀಶ್‌ ಜಾರಕಿಹೊಳಿ

ಬೆಳಗಾವಿ: ವಾಲ್ಮೀಕಿ ನಿಗಮದ ಪ್ರಕರಣ ಸದ್ಯ ತನಿಖಾ ಹಂತದಲ್ಲಿದ್ದು, ಈ ಪ್ರಕರಣದಲ್ಲಿ ಮಂತ್ರಿಗಳು ಹಾಗೂ ಶಾಸಕರು ಭಾಗಿಯಾಗಿದ್ದರೆ ಖಂಡಿತವಾಗಿ ಅದು ಕಳಂಕ ಎಂದು ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಹೇಳಿದರು. ಶುಕ್ರವಾರ ಬೆಳಗಾವಿ ಸುವರ್ಣ ವಿಧಾನಸೌಧದ ಮುಂಭಾಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯ ವಾಲ್ಮೀಕಿ ಪ್ರಕರಣ ತನಿಖಾ ಹಂತದಲ್ಲಿದ್ದು, ದಾಖಲೇ ನೋಡಿದ ಮೇಲೆಯೇ ಈ ಪ್ರಕರಣ ಗೊತ್ತಾಗಲಿದೆ. ತಕ್ಷಣ ಈ ಪ್ರಕರಣ ಹೀಗೆ ಇದೆ ಎಂದು ಹೇಳಲು ಕಷ್ಟ ಎಂದು …

Read More »

ಅಥಣಿ ಬಿಜೆಪಿ ಲೀಡ್ ಪಡೆದಿದ್ದು ಖುಷಿ ಸಂಗತಿ ; ಸವದಿ ವಿರುದ್ಧ ಸಾಹುಕಾರ್ ಪರೋಕ್ಷ ವಾಗ್ದಾಳಿ

ಅಥಣಿ : ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ಪಕ್ಷಕ್ಕೆ ಅಥಣಿ ಜನ ಲೀಡ್ ಕೊಟ್ಟಿದ್ದು ಖುಷಿ ವಿಚಾರ. ನಮ್ಮವರು ಒಳ್ಳೆಯ ಕೆಲಸ ಮಾಡುವ ಮೂಲಕ‌ ಕಾಂಗ್ರೆಸ್ ಲೀಡ್ ಕಡಿಮೆ ಮಾಡಿ ಬಿಜೆಪಿಗೆ ಹೆಚ್ಚಿಸಿದ್ದಾರೆ ಎಂದು ಹೇಳುವ ಮೂಲಕ ಶಾಸಕ ಸವದಿ ವಿರುದ್ಧ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಕಾಲೆಳೆದರು. ಬಿಜೆಪಿ ಕಾರ್ಯಕರ್ತರ ಭೇಟಿ ಹಿನ್ನಲೆಯಲ್ಲಿ ಅಥಣಿ ಪಟ್ಟಣಕ್ಕೆ ಆಗಮಿಸಿದ ರಮೇಶ ಜಾರಕಿಹೊಳಿ ಮಾತನಾಡಿ. ವಿಧಾನ ಸಭೆ ಚುನಾವಣೆಯಲ್ಲಿ ಬಿಜೆಪಿ ಲೀಡ್ ಕಳೆದುಕೊಂಡಿಟ್ಟು …

Read More »

ವಧು-ವರರ ಸಮಾವೇಶ 20ರಂದು

ಗೋಕಾಕ: ತಾಲ್ಲೂಕು ಶಿವಶರಣ ಹಡಪದ ಅಪ್ಪಣ್ಣ ಸೇವಾ ಸಂಘದ ವತಿಯಿಂದ ನಡೆಯಲಿರುವ ಶಿವಶರಣ ಹಡಪದ ಅಪ್ಪಣ್ಣನವರ ಜಯಂತ್ಯುತ್ಸವ ಅಂಗವಾಗಿ ರಾಜ್ಯಮಟ್ಟದ ಹಡಪದ ಅಪ್ಪಣ್ಣ ಸಮಾಜದವರ ವಧು-ವರರ ಸಮಾವೇಶವನ್ನು ಜುಲೈ 20ರಂದು ಏರ್ಪಡಿಸಲಾಗಿದೆ. ಎಂದು ಶಿವಶರಣ ಹಡಪದ ಅಪ್ಪಣ್ಣ ಸೇವಾ ಸಂಘದ ಅಧ್ಯಕ್ಷ ಸಿದ್ದಪ್ಪ ನಾವಲಗಿ ತಿಳಿಸಿದ್ದಾರೆ.   ರಾಜ್ಯಮಟ್ಟದ ಹಡಪದ ಅಪ್ಪಣ್ಣ ಸಮಾಜದವರ ವಧು-ವರರ ಸಮಾವೇಶವನ್ನು ನಗರಸಭೆ ಸಮುದಾಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದು ಆಸಕ್ತರು ಜುಲೈ 18ರ ಒಳಗೆ ಹೆಸರು ನೋಂದಾಯಿಸಬೇಕು. …

Read More »

ಗ್ಯಾರಂಟಿ’ ನಿಲ್ಲಿಸುವ ಪ್ರಶ್ನೇಯೇ ಇಲ್ಲ: ರಾಜು ಕಾಗೆ

ಕಾಗವಾಡ: ‘ರಾಜ್ಯದ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರೆಂಟಿ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ವಿರೋಧ ಪಕ್ಷದವರು ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುತ್ತಾರೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದ್ದು’ ಎಂದು ಕಾಗವಾಡ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ಶಾಸಕ ರಾಜು ಕಾಗೆ ಹೇಳಿದರು. ಕಾಗವಾಡ ಪಟ್ಟಣದಲ್ಲಿ ರಾಜ್ಯ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕಾಗಿ ನೂತನ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿದರು. ‘ಐದು ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆವರೆಗೆ ಮಾತ್ರ …

Read More »

ರಾಮದುರ್ಗ: ತಾಲ್ಲೂಕಿನ ಕಡೇ ಗ್ರಾಮ ನಂದಿಹಾಳಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯೇ ಹದಗೆಟ್ಟಿದೆ.

ರಾಮದುರ್ಗ: ತಾಲ್ಲೂಕಿನ ಕಡೇ ಗ್ರಾಮ ನಂದಿಹಾಳಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯೇ ಹದಗೆಟ್ಟಿದೆ. ಇಲ್ಲಿನ ಜನರು ಪಕ್ಕದ ಕಲಾದಗಿ, ಕಾಡರಕೊಪ್ಪ, ಲೋಕಾಪುರಕ್ಕೆ ತೆರಳಲು ನಿತ್ಯ ಯಾತನೆ ಅನುಭವಿಸುವಂತಾಗಿದೆ. ನಂದಿಹಾಳದಿಂದ ಅಕ್ಕಪಕ್ಕದ ಗ್ರಾಮಗಳು ಮತ್ತು ಹೊಲಗಳಿಗೆ ತೆರಳಲು ಇರುವುದು ಇದೊಂದೇ ರಸ್ತೆ. ಆದರೆ, ಜಿಟಿಜಿಟಿ ಮಳೆಯಾದರೂ ಅದು ಕೆಸರುಮಯವಾಗಿ ಮಾರ್ಪಡುತ್ತದೆ. ಅಪಾರ ಪ್ರಮಾಣದಲ್ಲಿ ಮಳೆನೀರು ರಸ್ತೆ ಮೇಲೆಯೇ ಸಂಗ್ರಹವಾಗುತ್ತದೆ. ಇದರಿಂದ ವಾಹನ ಸವಾರರು ಮತ್ತು ಪಾದಚಾರಿಗಳು ಹೈರಾಣಾಗಿದ್ದಾರೆ. ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಒಳಪಡದ …

Read More »

ಡೆಂಗಿ: ಸಮಗ್ರ ಮಾಹಿತಿಗೆ ಸಂಸದ ಜಗದೀಶ ಶೆಟ್ಟರ್ ಸೂಚನೆ

ಬೆಳಗಾವಿ: ‘ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ಡೆಂಗಿಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಈ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ’ ಎಂದು ಸಂಸದ ಜಗದೀಶ ಶೆಟ್ಟರ್ ಹೇಳಿದರು. ಇಲ್ಲಿನ ಜಿಲ್ಲಾಸ್ಪತ್ರೆಗೆ ಮಂಗಳವಾರ ಭೇಟಿ ನೀಡಿ ಡೆಂಗಿ ಕಾಯಿಲೆಯಿಂದ ಬಳಲುತ್ತಿರುವವರ ಆರೋಗ್ಯ ವಿಚಾರಿಸಿ, ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಸುದ್ದಿಗಾರರ ಜತೆ ಅವರು ಮಾತನಾಡಿದರು. …

Read More »

ಸಂತೋಷ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ರಕ್ತದಾನ.

ಸಂತೋಷ್ ಅಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ರಕ್ತದಾನ. ಯರಗಟ್ಟಿ : ಡೆಂಗ್ಯೂ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಕ್ತದ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ, ಆದಕಾರಣ ಯುವ ನಾಯಕ ಸಂತೋಷ್ ಅಣ್ಣಾ ಜಾರಕಿಹೊಳಿ ಅವರ ನೂರಾರು ಅಭಿಮಾನಿಗಳು ರಕ್ತದಾನವನ್ನು ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ

Read More »

ಮಹಾರಾಷ್ಟ್ರದಲ್ಲಿ ಭಾರಿ ಮಳೆ; ಕೃಷ್ಣಾ, ದೂಧಗಂಗಾ, ಮಲಪ್ರಭಾ ಒಳಹರಿವು ಹೆಚ್ಚಳ

ಬೆಳಗಾವಿ: ಮಹಾರಾಷ್ಟ್ರದ ಕೊಯ್ನಾ ಹಾಗೂ ಕಾಳಮ್ಮವಾಡಿ ಜಲಾನಯನ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಕೃಷ್ಣಾ ಮತ್ತು ದೂಧಗಂಗಾ ನದಿಗಳ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಈಗ ಲಭ್ಯದ ಅಗಿರುವ ಮಾಹಿತಿಯ ಪ್ರಕಾರ ಕೃಷ್ಣಾ ನದಿಯ ಒಳಹರಿವಿನ ಪ್ರಮಾಣ 62 ಸಾವಿರ ಕ್ಯೂಸೆಕ್ಸ್ ದಾಟಿದೆ. ಮಹಾರಾಷ್ಟ್ರದ ಸಾವಂತವಾಡಿ ಹಾಗೂ ಅಂಬೋಲಿ ಅರಣ್ಯ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದೆ. ಇದರಿಂದ ಘಟಪ್ರಭಾ ನದಿಯ ಮೂಲಕ ಹಿಡಕಲ್ ಜಲಾಶಯಕ್ಕೆ 21 ಸಾವಿರ ಕ್ಯೂಸೆಕ್ಸ್ ನೀರು ಹರಿದು ಬರುತ್ತಿದೆ. …

Read More »

ಬೈಲಹೊಂಗಲ | ಮೊಹರಂ ಸಿದ್ಧತೆ: ಚಿನಕೋಲು, ಹುಲಿ‌ಕುಣಿತದ ಸದ್ದು

ಬೈಲಹೊಂಗಲ: ಸರ್ವಧರ್ಮ ಸಮನ್ವಯದ ಸಂದೇಶ ಸಾರುವ ಮೊಹರಂ ಹಬ್ಬದ ಸಂಭ್ರಮದ ಆಚರಣೆಗಾಗಿ ತಾಲ್ಲೂಕಿನ ವಕ್ಕುಂದ ಗ್ರಾಮದಲ್ಲಿ ಈಗಾಗಲೇ ತಯಾರಿ ಶುರುವಾಗಿದೆ. ವಾಲ್ಮೀಕಿ ಸಮಾಜದ ಯುವ ಪಡೆ ಹಾಗೂ ಎಲ್ಲ ಸಮಾಜದವರು ಸೇರಿಕೊಂಡು ಹಬ್ಬದ ಆಚರಣೆಗೆ ಭರದ ಸಿದ್ಧತೆ ನಡೆಸಿದ್ದಾರೆ. ಚಿನಕೋಲು, ಹುಲಿಕುಣಿತದ ತಯಾರಿ: ವಾಲ್ಮೀಕಿ ಸಮಾಜದ ಯುವ ಪಡೆಯ 20ಕ್ಕೂ ಹೆಚ್ಚಿನ ಜನ ಸದಸ್ಯರು ಕಾಲಿಗೆ ಗೆಜ್ಜೆ ಕಟ್ಟಿಕೊಂಡು, ಹಿರಿಯರ ಮಾರ್ಗದರ್ಶನದಂತೆ ಮೊಹರಂ ಗೀತೆಗಳಿಗೆ ಹೆಜ್ಜೆ ಹಾಕುತ್ತಿದ್ದಾರೆ. ವಕ್ಕುಂದದ ಸುತ್ತಲಿನ …

Read More »

ಕಾರ್‌ ಅಡ್ಡಗಟ್ಟಿ ₹10 ಲಕ್ಷ ಕಳವು

 ಕಿತ್ತೂರು: ಇಲ್ಲಿನ ರಾಷ್ಟ್ರೀಯ ಹೆದ್ದಾರಿಯ ಹಿರೇಹಳ್ಳ ಬಳಿ ಕಾರ್‌ ಅಡ್ಡಗಟ್ಟಿ ₹10 ಲಕ್ಷ ಕಸಿದ ಕಳ್ಳರು ಪರಾರಿಯಾಗಿದ್ದಾರೆ. ಬೆಳಗಾವಿ ಶಾಸ್ತ್ರೀನಗರದ ಹಾರ್ಡ್‌ವೇರ್ ಅಂಗಡಿ ಮಾಲೀಕ ಅಮಿತ್ ಅಶೋಕ ಪೇರಿವಾಲ ಅವರು ಶಿವಮೊಗ್ಗದ ಮಿತ್ರರಿಗೆ ₹10 ಲಕ್ಷ ಕೊಡಲು, ತಮ್ಮ ಅಂಗಡಿಯ ಕೆಲಸಗಾರ ಚಂದನಾಥ ರಾಮೇಶ್ವರ ಸಿದ್ ಹಾಗೂ ಸುನೀಲ ರಾಜಕುಮಾರ ಪ್ರಜಾಪತ್ ಅವರನ್ನು ಕಳುಹಿಸಿದ್ದರು. ಅವರು ಸಾಗುತ್ತಿದ್ದ ಕಾರ್‌ ಅಡ್ಡಗಟ್ಟಿದ ಕಳ್ಳರು ಹಣ ಕಸಿದು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚುವರಿ …

Read More »