Breaking News

ಬೆಳಗಾವಿ

ಕೋವಿಡ್-೧೯ ತಡೆಗಟ್ಟುವ ಹಿನ್ನೆಲೆಯಲ್ಲಿ ನಿಪ್ಪಾಣಿ ನಗರದಲ್ಲಿ ಸೂಕ್ತ ಬಂದೊಬಸ್ತ್:

ನಿಪ್ಪಾಣಿ – ಕೋವಿಡ್-೧೯ ತಡೆಗಟ್ಟುವ ಹಿನ್ನೆಲೆಯಲ್ಲಿ ನಿಪ್ಪಾಣಿ ನಗರದಲ್ಲಿ ಸೂಕ್ತ ಬಂದೊಬಸ್ತ್ ಕೈಗೊಳ್ಳಲಾಗಿದೆ ಎಂದು ಸಿ.ಪಿ.ಐ ಸಂತೋಷ ಸತ್ಯನಾಯಿಕ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಈಗಾಗಲೇ ೧೪೪ ಕಲಂ ಜಾರಿಯಲ್ಲಿದ್ದು ನಗರದಲ್ಲಿ ಅನಗತ್ಯವಾಗಿ ಓಡಾಡುವ ಜನರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು, ಸರಕಾರದ ಆದೇಶವನ್ನು ಇಂತಹ ಸಮಯದಲ್ಲಿ ಪ್ರತಿಯೊಬ್ಬರೂ ಪಾಲನೆ ಮಾಡಬೇಕು. ಸಾರ್ವಜನಿಕರು ಇದಕ್ಕೆ ಸ್ಪಂದಿಸಿದರೆ ಮಾತ್ರ ಇದನ್ನು ತಡೆಗಟ್ಟಲು ಸಾಧ್ಯ‌ ಎಂದು ತಿಳಿಸಿದರು. ನಗರದಲ್ಲಿ ಇದುವರೆಗೆ …

Read More »

ಲಾಕ್‍ಡೌನ್ ಯಶಸ್ವಿಗೊಳಿಸಲು ಮೋದಿಗೆ ಚಿಕ್ಕೋಡಿ ಗೃಹಿಣಿ ಪತ್ರ

ಚಿಕ್ಕೋಡಿ(ಬೆಳಗಾವಿ): ಲಾಕ್ ಡೌನ್ ಯಶಸ್ವಿಗೊಳಿಸಲು ಗೃಹಿಣಿಯೊಬ್ಬರು ಪ್ರಧಾನಿ ಮೋದಿಗೆ ಟ್ವೀಟ್ ಮೂಲಕ ಪತ್ರ ಬರೆದಿದ್ದಾರೆ. ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಗೃಹಿಣಿ ದೀಪಾ ಬಿ.ಕೆ, ಪ್ರಧಾನಿಗೆ ಪತ್ರ ಬರೆದು ರಾಜ್ಯದ ಎಲ್ಲ ಇಲಾಖೆಗಳನ್ನ ಲಾಕ್ ಡೌನ್ ಸೇವೆಗೆ ಬಳಸಿಕೊಳ್ಳಬೇಕು. ಕೇವಲ 5 ರಿಂದ 6 ಇಲಾಖೆಗಳು ಮಾತ್ರ ಲಾಕ್ ಡೌನ್ ಇದ್ದರೂ ಸೇವೆ ಸಲ್ಲಿಸುತ್ತಿವೆ. ಬಾಕಿ ಉಳಿದಿರುವ 50ಕ್ಕೂ ಹೆಚ್ಚು ಇಲಾಖೆಗಳ ನೌಕರರ ಸದ್ಬಳಕೆ ಮಾಡಿಕೊಂಡು ಕೊರೊನಾ ಬಗ್ಗೆ ಜಾಗೃತಿ …

Read More »

ನಾವು ಎಷ್ಟು ಕಠಿಣವಾಗಿ ಲಾಕ್‌ಡೌನ್ ಪಾಲಿಸುತ್ತೇವೋ ಅದರ ಮೇಲೆ ವಿಸ್ತರಣೆ ಅವಲಂಬಿತ

ಬೆಳಗಾವಿ:  ನಾವು ಎಷ್ಟು ಕಠಿಣವಾಗಿ ಲಾಕ್‌ಡೌನ್ ಪಾಲಿಸುತ್ತೇವೋ ಅದರ ಮೇಲೆ ವಿಸ್ತರಣೆ ಅವಲಂಬಿತವಾಗಲಿದೆ ಎಂದು ಕೇಂದ್ರ ಸಚಿವ ಸುರೇಶ್ ಅಂಗಡಿ ಹೇಳಿದ್ದಾರೆ. ಮತ್ತೆ ಲಾಕ್‌ಡೌನ್ ವಿಸ್ತರಣೆ ಸಾಧ್ಯತೆ ವಿಚಾರವಾಗಿ  ನಗರದಲ್ಲಿ ಇಂದು  ಪ್ರತಿಕ್ರಿಯಿಸಿದ ಅವರು,   ಲಾಕ್‌ಡೌನ್ ಇನ್ನೂ ಹೆಚ್ಚು ಗಂಭೀರವಾಗಿ ತಗೆದುಕೊಂಡರೇ ಸಮಸ್ಯೆ ಪರಿಹಾರವಾಗಲಿದೆ.  ಇಲ್ಲದಿದ್ದರೆ ದೊಡ್ಡಮಟ್ಟಕ್ಕೆ ಅನಾಹುತ ಆಗುವ ಸಂಭವವಿರುತ್ತೆ. ದಯವಿಟ್ಟು ಲಾಕ್‌ಡೌನ್‌ನ್ನು ಗಂಭೀರವಾಗಿ ಪಾಲಿಸುವಂತೆ ಜನರಿಗೆ  ಮನವಿ ಮಾಡಿಕೊಂಡರು. ಮನೆ ಬಿಟ್ಟು ಹೊರಬರಬೇಡಿ, ನಿಮಗೆ ಬೇಕಾದ ಎಲ್ಲ …

Read More »

ಬೆಳಗಾವಿ ಜಿಲ್ಲೆಯಲ್ಲಿ ಲಾಕ್‌ಡೌನ್ ಉಲ್ಲಂಘಿಸಿದ 496 ವಾಹನಗಳ ಸೀಜ್ 66 ಎಫ್ಐಆರ್ ಪ್ರಕರಣಗಳು ದಾಖಲಾಗಿವೆ

ಬೆಳಗಾವಿ: ಕೊರೋನಾ ಮಹಾಮಾರಿ ಎದುರಿಸಲು ಕಟ್ಟುನಿಟ್ಟಿನ ಲಾಕ್ ಡೌನ್ ಜಾರಿಗೆ ಬೆಳಗಾವಿ ಜಿಲ್ಲೆಯ ಪೊಲೀಸ್ ಇಲಾಖೆ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಂಡಿದೆ. ಬೆಳಗಾವಿ ಜಿಲ್ಲೆಯಲ್ಲಿ ಲಾಕ್‌ಡೌನ್ ಉಲ್ಲಂಘಿಸಿದ 496 ವಾಹನಗಳ ಸೀಜ್ ಮಾಡಲಾಗಿದ್ದು, ಈವರೆಗೆ ಬೆಳಗಾವಿ ಜಿಲ್ಲೆಯಲ್ಲಿ 66 ಎಫ್ಐಆರ್ ಪ್ರಕರಣಗಳು ದಾಖಲಾಗಿವೆ ಎಂದು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ,ನಿಂಬರಗಿ ತಿಳಿಸಿದ್ದಾರೆ. ಲಾಕ್‌ಡೌನ್ ಉಲ್ಲಂಘಿಸಿದ 66 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ …

Read More »

25 ಕುಟುಂಬಗಳಿಗೆ ಅಕ್ಕಿ,ತೊಗರೆ ಬೇಳೆ,ಎಣ್ಣೆ,ಬಟ್ಟೆ ತೊಳೆಯಲು ಹಾಗೂ ಸ್ನಾನದ ಸಾಬೂನು ,ಸಾಸಿವೆ ಜೀರಿಗೆನೀಡಿದ ಅಶೋಕ್ ಚಂದರಗಿ:

ಬೆಳಗಾವಿ:ಕೊರೋನಾ ಲಾಕ್ ಔಟ್ ನಿಂದಾಗಿ ಉಂಟಾಗಿರುವ ಅನೇಕ ಸಮಸ್ಯೆಗಳಲ್ಲಿ ಇವರದೂ ಒಂದು.ಬೆಳಗಾವಿ,ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಅನೇಕ ಲಂಬಾಣಿ ತಾಂಡಾಗಳಿಂದ ಬೆಳಗಾವಿಗೆ ದುಡಿಯಲು ಬಂದಿರುವ ನೂರಾರು ಪುರುಷರು,ಮಹಿಳೆಯರು,ಮಕ್ಕಳು ಎದುರಿಸುತ್ತಿರುವ ಸಮಸ್ಯೆಯತ್ತಲೂ ಸ್ವಲ್ಪ ಗಮನ ಹರಿಸಿದೆ . ಶಾಹೂನಗರ,ಅಜಮ್ ನಗರ ಮತ್ತು ನೆಹರೂ ನಗರ,ವೈಭವ ನಗರಗಳಲ್ಲಿ ಈ ಜನರು ವಾಸವಾಗಿದ್ದು ಕಳೆದ 15 ದಿನಗಳಿಂದ ಕೆಲಸವಿಲ್ಲ.ಕೈಗೆ ಸಂಬಳವಿಲ್ಲ.ಮನೆ ನಡೆಸಲು ಕಾಳು,ಕಡಿ ಇಲ್ಲ.ನನ್ನನ್ನು ಮೂರ್ನಾಲ್ಕು ದಿನಗಳಿಂದ ಸಂಪರ್ಕಿಸಿದ ಸುಮಾರು 25 ಕುಟುಂಬಗಳಿಗೆ ಅಕ್ಕಿ,ತೊಗರೆ ಬೇಳೆ,ಎಣ್ಣೆ,ಬಟ್ಟೆ …

Read More »

ಗೋಕಾಕ್: ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಣ ಮಾಡಬೇಕಿದೆ:ರಮೇಶ ಜಾರಕಿಹೊಳಿ ಮನವಿ

ಗೋಕಾಕ್: ಕೊರೊನಾ ಸೋಂಕು ಹರಡುವಿಕೆಯನ್ನು ನಿಯಂತ್ರಣ ಮಾಡಬೇಕಿದೆ. ನಾವು ಯಾರು ರಾಜಕೀಯ ಮಾಡುವುದು ಬೇಡ. ಸಮಾಜ ರಕ್ಷಿಸುವ ಸಮಯವಾಗಿದೆ. ಆದ ಕಾರಣ ಮನೆಯಿಂದ ಯಾರು ಹೊರ ಬರದಿರಿ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಮನವಿ ಮಾಡಿಕೊಂಡಿದ್ದಾರೆ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ಜಗತ್ತಿನಾದ್ಯಂತ ಕೊರೊನಾ ಸೋಂಕು ಹರಡಿದ್ದು,ಎಲ್ಲರನ್ನು ತಲ್ಲಣಗೊಳಿಸಿದೆ. ಇದರ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಏಪ್ರೀಲ್ 14ರವರೆಗೆ ಲಾಕ್ ಡೌನ್ ಘೋಷಿಸಲಾಗಿದೆ. ಆದ ಕಾರಣ ಜನರು ಮನೆಯಿಂದ ಹೊರಗೆ …

Read More »

ಬೈಲಹೊಂಗಲ ತಾಲೂಕಿನಲ್ಲಿರುವ ಅಕ್ರಮ ಕಳ್ಳಭಟ್ಟಿ ಅಡ್ಡಾಗಳ ಮೇಲೆ ದಾಳಿ

ಬೈಲಹೊಂಗಲ ತಾಲೂಕಿನಲ್ಲಿರುವ ಅಕ್ರಮ ಕಳ್ಳಭಟ್ಟಿ ಅಡ್ಡಾಗಳ ಮೇಲೆ ದಾಳಿ ನೊವೆಲ್ ಕೊರೊನಾ ವೈರಸ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಿಂದ ಬೈಲಹೊಂಗಲ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಹಾಗೂ ಈ ಹಿಂದೆ ಇದ್ದ ಕಳ್ಳಭಟ್ಟಿ ಕೇಂದ್ರಗಳ ಅಡ್ಡಾಗಳಾದ ದೇಶನೂರ, ಹೊಗರ್ತಿ,ಕೊಳದೂರ, ಮೊಹರೆ,ಸುತಗಟ್ಟಿ ವಟಬಾಳ ಹಳ್ಳಿಗಳ ಮೇಲೆ ಮೇಲಿಂದ ಮೇಲೆ ದಾಳಿ ಮಾಡಲಾಗುತ್ತಿದೆ. ಎಂದು ಬೈಲಹೊಂಗಲ ಅಬಕಾರಿ ನೀರಿಕ್ಷಕರಾದ ರವಿ.ಎಂ ಮುರಗೋಡ ಇವರು ತಿಳಿಸಿದರು. ದಾಳಿಯ ವಿವರಣೆ:- ಮಾರ್ಚ್ ೨೪ ರಂದು ಹೊಗರ್ತಿ ಕ್ರಾಸ್ ಬಳಿ …

Read More »

ಸಾತಪುತೆ ಔಷಧಿ ಅಂಗಡಿಯಲ್ಲಿ ಕೊರೋನಾ ಹೆಸರಲ್ಲಿ ಜನರ ಕಣ್ಣಿಗೆ ಮಣ್ಣೇರಿಸುವ ಕೆಲಸ

ಸಾತಪುತೆ ಔಷಧಿ ಅಂಗಡಿಯಲ್ಲಿ ಕೊರೋನಾ ಹೆಸರಲ್ಲಿ ಜನರ ಕಣ್ಣಿಗೆ ಮಣ್ಣೇರಿಸುವ ಕೆಲಸ

Read More »

ರೈತರು ಬೆಳೆದಿರುವ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಂಬಲ ಬೆಲೆ ನೀಡಿ: ಭೀಮಪ್ಪ ಗಡಾದ

ಮೂಡಲಗಿ: ರೈತರು ಬೆಳೆದಿರುವ ಕೃಷಿ ಉತ್ಪನ್ನಗಳಿಗೆ ಯೋಗ್ಯ ಬೆಂಬಲ ಬೆಲೆ ನೀಡಿ ಖರೀದಿಸುವ ಸಲುವಾಗಿ, ಪ್ರತಿ ತಾಲೂಕು ಹೋಬಳಿ ಮಟ್ಟದಲ್ಲಿ ಸರ್ಕಾರದಿಂದಲೇ ಖರೀದಿ ಕೇಂದ್ರಗಳನ್ನು ಪ್ರಾರಂಭಿಸುವುದರ ಮೂಲಕ ಸಂಭವಿಸಬಹುದಾದ ರೈತರ ಆತ್ಮಹತ್ಯೆಗಳನ್ನು ತಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಉತ್ತರ ಕರ್ನಾಟಕ ಹೋರಾಟ ಸಮೀತಿ ಹಾಗೂ ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ತಿಳಿಸಿದ್ದಾರೆ. ಕೊರೊನಾ ನಿಯಂತ್ರಿಸಲು ಕೇಂದ್ರ ಸರ್ಕಾರವು ಲಾಕ್‍ಡೌನ್ ಜಾರಿಗೆ ಮಾಡಿದೆ. ಜಿಲ್ಲೆಯ …

Read More »

ಉದ್ದೇಶಪೂರ್ವಕವಾಗಿ ಲಾಠಿ ಬೀಸಬಾರದು: ಮಹಾಂತೇಶ ಕವಟಗಿಮಠ

ಚಿಕ್ಕೋಡಿ : ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿಯೂ ಎಲ್ಲ ಜನರಿಗೂ ಮಾಸ್ಕ ವಿತರಿಸುವ ಮೂಲಕ ಸಾಮಾಜಿಕ ಅಂತರಕಾಯ್ದುಕೊಳ್ಳುವಂತೆ ಕೊರೊನಾ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ವಿಧಾನಪರಿಷತ್‍ನ ಸರಕಾರಿ ಮುಖ್ಯಸಚೇತಕ ಮಹಾಂತೇಶ ಕವಟಗಿಮಠ ಹೇಳಿದರು. ಪಟ್ಟಣದ ಮಿನಿವಿಧಾನ ಸೌಧದಲ್ಲಿ ಸೋಮವಾರ ನಡೆದ ಅಧಿಕಾರಿಗಳಸಭೆಯಲ್ಲಿ ಮಾತನಾಡಿದ ಅವರು, ತರಕಾರಿ ಮಾರಾಟಕ್ಕೆ ಹೋಗುವವರು ಹಾಗೂ ಅಟೋದವರು ಕಡ್ಡಾಯವಾಗಿ ಮಾಸ್ಕ ಹಾಕಿಕೊಳ್ಳಬೇಕು. ಆ ನಿಟ್ಟಿನಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು …

Read More »