Breaking News

ಬೆಳಗಾವಿ

.ಹಿಂಡಲ್ಕೋ ಕಂಪನಿಗಳು ನೀಡುತ್ತಿರುವ 300ಕ್ಕೂ ಹೆಚ್ಚು ಆಹಾರ  ಕಿಟ್ ಗಳನ್ನು ಬಡವರಿಗೆ ನೀಡಿದ ಸತೀಶ್ ಜಾರಕಿಹೊಳಿ

ಬೆಳಗಾವಿ:  ಕಾಕತಿ ಗ್ರಾಮದ  ಸರ್ಕಾರಿ ಮಾದರಿ ಮರಾಠಿ ಶಾಲೆಯಲ್ಲಿ ಬಡ ಕುಟುಂಬಗಳಿಗೆ  ಹಿಂಡಲ್ಕೋ ಕಂಪನಿಗಳು ನೀಡುತ್ತಿರುವ 300ಕ್ಕೂ ಹೆಚ್ಚು ಆಹಾರ  ಕಿಟ್ ಗಳನ್ನು ಶಾಸಕ , ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಡವರಿಗೆ ನೀಡಿದರು. ಕೊರೊನಾ ಮಾರಕ ಸೋಂಕಿನಿಂದ ದೇಶದಲ್ಲಿ ಲಾಕ್ ಡೌನ್ ಘೋಷಿಸಿದೆ. ಇದರಿಂದ ಬಡವರು, ಕೂಲಿ ಕಾರ್ಮಿಕರು ಆಹಾರಕ್ಕಾಗಿ ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಉಳ್ಳವರು ಬಡವರ ನೆರವಿಗೆ ನಿಲ್ಲಬೇಕು. ಸಂಕಷ್ಟದಲ್ಲಿ ಇರುವ ಬಡವರಿಗೆ ತಮ್ಮಿಂದ ಆದ ಸಹಾಯವನ್ನು …

Read More »

ಬೆಳಗಾವಿ: ಕಾಂಗ್ರೆಸ್ ರಸ್ತೆಯಲ್ಲಿನ ವೈನ್ ಶಾಪ್ ಕಳ್ಳತನಕ್ಕೆ ಯತ್ನ

ಬೆಳಗಾವಿ: ಲಾಕ್ ಡೌನ್ ನಿಂದಾಗಿ ಸಾರಾಯಿ ಸಿಗದಕ್ಕೆ  ಕಂಗಾಲಾಗಿರುವ ಕುಡುಕರು ಮದ್ಯದಂಗಡಿ ಕಳ್ಳತನ ಯತ್ನಿಸಿ ವಿಫಲರಾಗಿದ್ದರೆ.  ಇಲ್ಲಿನ ಕಾಂಗ್ರೆಸ್ ರಸ್ತೆಯಲ್ಲಿನ ರವಿ ಹಂಜಿ ಮಾಲೀಕತ್ವದ ವೈನ್ಸ್ ಮಳಿಗೆ ಕನ್ನ ಹಾಕಿದ ಖದೀಮರು ವೈನ್ಸ್ ಶಾಪ್ ನ ಹೆಂಚು ತಗೆದಾಗ ತಗಡಿನ ಶೀಟ್ ಗಳು ಎದುರಾಗಿವೆ. ತಗಡಿನ ಶೀಟ್   ಕೊರೆದು ಕೆಳಗೆ ಇಳಿಯಲಾಗದೆ ಲಕ್ಷಾಂತರ ಮೌಲ್ಯದ ಮದ್ಯ ಬಚಾವ್ ಆಗಿದೆ.

Read More »

ಗೋಕಾಕ ಇಂದಿರಾ ಕ್ಯಾಂಟಿನ ಉದ್ಘಾಟನೆ ಮಾಡಿದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ.

  ಗೋಕಾಕ: ನಗರದಲ್ಲಿ ಇಂದು ಸುಮಾರು ದಿನಗಳಿ ಸ್ಥಗಿತವಾಗಿರುವ ಇಂದಿರಾ ಕ್ಯಾಂಟಿನ, ಇಂದು ಗೋಕಾಕ ಕ್ಷೇತ್ರದ ಶಾಸಕರು ಹಾಗೂ ಜಲಸಂಪನ್ಮೂಲ ಸಚಿವರು ರಮೇಶ ಜಾರಕಿಹೊಳಿ ಅವರ ಗೋಕಾಕ ಇಂದಿರಾ ಕ್ಯಾಂಟಿನ್ ಗೆ ಉದ್ಘಾಟನಾ ಮಾಡುವ ಮೂಲಕ ಚಾಲನೆ ನೀಡಿದರು. ಬಡವರಿಗೆ ಮತ್ತು ನಿರಾಶ್ರಿತರಿಗಾಗಿ ಸರ್ಕಾರ ಇಂದಿರಾ ಕ್ಯಾಂಟೀನ್ ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟದ ವ್ಯವಸ್ಥೆ ಮಾಡವ ನಿಟ್ಟಿನಲ್ಲಿ ನಿರ್ದೇಶನಮಾಡಲಾಗಿತ್ತು, ಆದರೆ ಇಂದು ಸರಕಾರ ಕೊರೊನಾ ಲಾಕ್​ಡೌನ್​ ಬಳಿಕ ಕೆಲದಿನಗಳ …

Read More »

ಬೆಳಗಾವಿಯಲ್ಲಿ ಮತ್ತೊಂದು ಕೊರೋನಾ ಪ್ರಕರಣ ದೃಢಪಟ್ಟಿದ್ದು, ಒಟ್ಟಾರೆ ಜಿಲ್ಲೆಯಲ್ಲಿ 18ಕ್ಕೇರಿದೆ.

  ಬೆಳಗಾವಿ :ರಾಜ್ಯದಲ್ಲಿ ಇಂದು 11 ಹೊಸ ಪ್ರಕರಣ ಪತ್ತೆಯಾಗಿದ್ದು, ಒಟ್ಟಾರೆ 258ಕ್ಕೇರಿದೆ. 9 ಜನರು ಸಾವನ್ನಪ್ಪಿದ್ದಾರೆ. ಇಂದು ಬಾಗಲಕೋಟೆ ಮತ್ತು ಕಲಬುರ್ಗಿಯಲ್ಲಿ ತಲಾ 3 ಪ್ರಕರಣ ದಾಖಲಾಗಿದೆ. ಬೆಂಗಳೂರು ನಗರದಲ್ಲಿ 2, ಚಿಕ್ಕಬಳ್ಳಾಪುರ, ಬೆಳಗಾವಿ ಹಾಗೂ ವಿಜಯಪುರದಲ್ಲಿ ತಲಾ ಒಂದು ಪ್ರಕರಣ ಇಂದು ದಾಖಲಾಗಿದೆ. ಬೆಳಗಾವಿಯಲ್ಲಿ ದೃಢಪಟ್ಟಿರುವ 33 ವರ್ಷದ ಪುರುಷ ದೆಹಲಿಗೆ ಹೋಗಿ ಬಂದಿದ್ದ ಎನ್ನುವುದು ಗೊತ್ತಾಗಿದೆ. ಆದರೆ ಆತ ಯಾವ ಪ್ರದೇಶದವನು ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. …

Read More »

ಜನರು ಆತಂಕ ಪಡುವ ಅಗತ್ಯವಿಲ್ಲ: ಸಚಿವ ರಮೇಶ ಜಾರಕಿಹೊಳಿ

ಗೋಕಾಕ : ಎಲ್ಲೆಡೆ ಹರಡುತ್ತಿರುವ ಮಾರಕ ಕೊರೊನಾ ಸೋಂಕು ನಿಯಂತ್ರಣಕ್ಕಾಗಿ ಪ್ರಧಾನಮಂತ್ರಿ ‌ನರೇಂದ್ರ ಮೋದಿಯವರು ಭಾರತದ ಲಾಕ್ ಡೌನ್ ಅವಧಿಯನ್ನು ಮೇ 3ರ ವರೆಗೆ‌ ವಿಸ್ತರಿಸಿರುವುದನ್ನು‌ ನಾನು‌ ಸ್ವಾಗತಿಸುತ್ತೇನೆ.ಸೊಂಕು ನಿಯಂತ್ರಣಕ್ಕೆ ಹಗಲಿರುಳು ಶ್ರಮಿಸುತ್ತಿರುವ ಕೊರೋನಾ ವಾರಿಯರ್ಸ್‌ ಗಳನ್ನು ಮುಕ್ತಕಂಠದಿಂದ ಗೌರವಿಸೋಣ ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು, ವಿಶ್ವವ್ಯಾಪಿಯಾಗಿರುವ ಕೊರೊನಾ ವೈರಸ್ ನ್ನು ನಿರ್ಮೂಲನೆ ಮಾಡುವುದೇ ನಮ್ಮ ಆದ್ಯ ಧ್ಯೇಯವಾಗಬೇಕು. ಪ್ರಪಂಚದ ಬಹುದೊಡ್ಡ …

Read More »

ಬಡವರ ಗೋಳು ಕೇಳುವವರು ಯಾರು ಬೆಳೆ ಬೆಳೆಸಿದ ರೈತರು ಕಂಗಾಲಾಗುತ್ತಿದ್ದಾರೆ

ಬೆಳಗಾವಿ :-ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಜನರ ಗೋಳು ಕೋರೋನಾ ಎಂಬ ಮಹಾಮಾರಿ ಯಿಂದ ಜನರು ಎಲ್ಲಿ ಕೆಲಸಕ್ಕೆ ಹೋಗದಂತೆ ಆಗಿದೆ ಕೋರೋನಾ ಕಾರಣದಿಂದಾಗಿ ಹಳ್ಳಿಯ ಜನರುತಮ್ಮ ಹೊಲದಲ್ಲಿ ಬೆಳೆಸಿದ ಬೆಳೆ ಸಹಿತ ಮಾರುವಂತಿಲ್ಲ ಸುಮಾರು 3ಲಕ್ಷ ಖರ್ಚು ಮಾಡಿ 2ಎಕರೆ ಕಲ್ಲಂಗಡಿ ಹಚ್ಚಿದ್ದಾರೆ ಈಗ ಮಾರಾಟ ಆಗದೆ ಉಳಿದು ಮಣ್ಣು ಮುಚ್ಚುತ್ತಿದ್ದಾರೆ ಸುಮಾರು ಎಂಟು ಲಕ್ಷ ಲಾಭವಾಗುತ್ತಿತ್ತು. ಈಗ ಎಲ್ಲ ಮಣ್ಣು ಪಾಲಾಗಿದೆ ಇದೇ ರೀತಿ …

Read More »

ಸುಮಾರು 600 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದ, ಸತೀಶಣ್ಣಾ ಜಾರಕಿಹೊಳಿ ಅಭಿಮಾನಿ ಬಳಗ

ಬೆಳಗಾವಿ: ಕಿತ್ತೂರು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸತೀಶಣ್ಣಾ ಜಾರಕಿಹೊಳಿ ಅಭಿಮಾನಿ ಬಳಗದಿಂದ ಹಬೀಬ್ ಶೀಲ್ಲೆದಾರ ನೇತೃತ್ವದಲ್ಲಿ ಸೋಮವಾರ ಸುಮಾರು 600 ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಿದರು. ದೇವರಶೀಗಿಹಳ್ಳಿ, ಮಾಗ೯ನಕೊಪ್ಪ , ದಾಸ್ತಿಕೊಪ್ಪ , ಹೊಸಕಾದರವಳ್ಳಿ , ತುರಮರಿ , ಕಲಬಾಂವಿ, ಹಿರೇನಂದಿಹಳ್ಳಿ ,ಚಿಕ್ಕನಂದಿಹಳ್ಳಿ , ಎತ್ತಿನಕೇರಿ , ಮಲ್ಲಾಪೂರ , ಅವರಾದಿ , ನಿಚ್ಚಣಕಿ , ಡೊಂಬರಕೊಪ್ಪ, ಗ್ರಾಮಗಳಲ್ಲಿನ ಬಡಕುಟುಂಬಗಳಿಗೆ ಆಹಾರ ಕಿಟ್ ನೀಡಿದರು. ಆಹಾರ ಕಿಟ್ ನಲ್ಲಿ …

Read More »

ಕೊರೊನಾ ಎಫೆಕ್ಟ್: ಆನ್‌ಲೈನ್ ಮೂಲಕ SSLC, PUC ವಿದ್ಯಾರ್ಥಿಗಳಿಗೆ ಪಾಠ ಹೇಳುತ್ತಿರುವ ಉಪನ್ಯಾಸಕ

ನಾಳೆಯಿಂದ SSLC ವಿದ್ಯಾರ್ಥಿ ಗಳಿಗೆ ಆನ್‌ಲೈನ್ ತರಗತಿಗಳು ಆರಂಭವಾಗಲಿವೆ 10:30.AM ರಿಂದ ಮದ್ಯಾನ12 ಮತ್ತು ಸಂಜೆ 4.30 TO 6.00 PM ಮೊದಲಿಗೆ play store ಗೆ ಹೋಗಿ ಮತ್ತು Onbimba app ಡೌನ್‌ಲೋಡ್ ಮಾಡಿ installe ಮಾಡಿಕೊಳ್ಳಿ ನಂತರ app open ಮಾಡಿ ಮತ್ತು ನಿಮ್ಮ ವಿವರಗಳನ್ನು ಈ ಕೆಳಗಿನ ರೀತಿಯಲ್ಲಿ ನಮೂದಿಸಿ Name Mobile number Email id ನಂತರ ಅ್ಯಪ್ ಓಪನ್ ಮಾಡಿ go to …

Read More »

ದ್ರಾವಣ ಸಿಂಪಡಣಾ ಸುರಂಗ ಮಾರ್ಗಕ್ಕೆ ಸಚಿವ ರಮೇಶ

ಗೋಕಾಕ್ : ನಗರದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಕೊರೊನಾ ನಿಯಂತ್ರಣಗೊಳಿಸುವ ನಿಟ್ಟಿನಲ್ಲಿ ಸೋಂಕು ತೊಡೆದು ಹಾಕುವ ದ್ರಾವಣ ಸಿಂಪಡಣಾ ಸುರಂಗ ಮಾರ್ಗ ವನ್ನು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಇಂದು ಉದ್ಘಾಟಿಸಿದರು. ಕೊರೊನಾ ಸೋಂಕು ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕ್ಷೇತ್ರದ ಜನರ ಆರೋಗ್ಯ ದೃಷ್ಟಿಯಿಂದ ಕೊರೊನಾ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಈ ವಿನೂತನ ಪ್ರಯೋಗ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಿ. ಸಾರ್ವಜನಿಕರು ಸಹ ವೈದ್ಯರು, ಪೊಲೀಸರಿಗೆ ಸಹಕರಿಸಬೇಕು. ಲಾಕ್ ಡೌನ್ …

Read More »

ಕೊರೊನಾ ವೈರಸ್ ನಿರ್ಮೂಲನೆಗಾಗಿ ಇಷ್ಠಲಿಂಗ ಪೂಜೆ ಮಾಡಿದ ಲಿಂಗಾಯತ ಸಂಘಟನೆ

ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆ ವೀರಶೈವ ಲಿಂಗಾಯತ ಸಂಘಟನೆಯ ಕರೆಯ ಮೇರೆಗೆ ಕೊರೊನಾ ವೈರಸ್ ನಿರ್ಮೂಲನೆಗಾಗಿ ಇಷ್ಠಲಿಂಗ ಪೂಜೆ ಕಾರ್ಯಕ್ರಮ ಘಟಪ್ರಭಾದ ಶ್ರೀ ಕುಮಾರೇಶ್ವರ ಹೊಸಮಠದಲ್ಲಿ ಪೂಜ್ಯ ವಿರುಪಾಕ್ಷ ದೇವರ ಸಾನ್ನಿಧ್ಯ ದಲ್ಲಿ ನೆರವೇರಿಸಲಾಯಿತು. ವೆ.ಮೂ.ಗುರುಬಸಯ್ಯ ಕರ್ಪೂರಮಠ ಬಂಧುಗಳು ಭಾಗಿಯಾಗಿ ಲಿಂಗಯ್ಯನಲ್ಲಿ ಪ್ರಾರ್ಥಿಸಿದರು

Read More »