ಬೆಳಗಾವಿ – ಬೆಳಗಾವಿಯಲ್ಲಿ ಒಂದೇ ದಿನ 17 ಜನರಿಗೆ ಕೊರೋನಾ ವೈರಸ್ ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 36ಕ್ಕೆ ಏರಿದಂತಾಗಿದೆ. ಹಿರೇಬಾಗೇವಾಡಿಯ 8, ರಾಯಬಾಗದ 7 ಜನರಿಗೆ ಸೋಂಕಿರುವುದು ಇಂದು ದೃಢಪಟ್ಟಿದೆ. ಇವರೆಲ್ಲ ನಿಜಾಮುದ್ದೀನ್ ಧರ್ಮಸಭೆಗೆ ಹಾಜರಾಗಿ ಹಿಂದಿರುಗಿದವರ ಜೊತೆ ಸಂಪರ್ಕಕ್ಕೆ ಬಂದಿದ್ದರು ಎಂದು ಗೊತ್ತಾಗಿದೆ. ಹಿರೇಬಾಗೇವಾಡಿಯಲ್ಲಿ 6 ಮಹಿಳೆಯರಿಗೆ ಸೋಂಕು ತಗುಲಿದೆ. ಚಿಕ್ಕೋಡಿಯ ಒಬ್ಬರಿಗೆ, ಬೆಳಗಾವಿಯ ಒಬ್ಬರಿಗೆ ಸೋಂಕು ದೃಢಪಟ್ಟಿದೆ. ರಾಜ್ಯದಲ್ಲಿ ಇಂದು ಒಂದೇ ದಿನ …
Read More »ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪೌರಕಾರ್ಮಿಕರು, ಆಶಾಕಾರ್ಯಕರ್ತೆಯರಿಗೆ ದಿನ ಬಳಕೆ ವಸ್ತುಗಳ ವಿತರಣೆ
ಮೂಡಲಗಿ: ವಿಶ್ವವ್ಯಾಪಿ ಜನ ಜೀವನ ಹದಗೆಟ್ಟಿರುವಾಗ ಪೌರ ಕಾರ್ಮಿಕರು, ಆಶಾಕಾರ್ಯಕರ್ತೆಯರ ಸೇವಾಕಾರ್ಯ ಮೆಚ್ಚುವಂತಹದು. ಇಂತಹ ಸಂದರ್ಭದಲ್ಲಿ ತಮ್ಮ ಜೀವದ ಹಂಗು ತೊರೆದು ಸಾಮಾಜಿಕ ಅಂತರ ಕಾಯ್ದುಕೊಂಡು ಸೇವೆಯು ಶ್ಲಾಘನೀಯವಾಗಿದೆ ಎಂದು ಬಿಇಒ ಅಜಿತ ಮನ್ನಿಕೇರಿ ಹೇಳಿದರು. ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಜರುಗಿದ ಪೌರ ಕಾರ್ಮಿಕರು, ಆಶಾಕಾರ್ಯಕರ್ತೆಯರಿಗೆ ದಿನ ಬಳಕೆ ವಸ್ತುಗಳ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೊರೋನಾ ಎಂಬ ಮಹಾಮಾರಿ ವೈರಸ್ ವಿಶ್ವವನ್ನೆ ನಡುಗಿಸಿದೆ. ಸಾಮಾಜಿಕವಾಗಿ ನಗರದಲ್ಲಿ ಯಾವುದೇ ರೋಗಗಳು, …
Read More »ಬೆಳಗಾವಿಯಲ್ಲಿ ಮೊದಲ ಬಲಿ- ರಾಜ್ಯದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ
ಬೆಳಗಾವಿ: ಹೆಮ್ಮಾರಿ ಕೊರೊನಾ ವೈರಸ್ ಬೆಳಗಾವಿ ಜಿಲ್ಲೆಯಲ್ಲಿ ಮೊದಲ ಬಲಿ ಪಡೆದುಕೊಂಡಿದ್ದು, ಈ ಮೂಲಕ ರಾಜ್ಯದಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಕೆ ಕಂಡಿದೆ. ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದ 80 ವರ್ಷದ ವೃದ್ಧೆ ಏಪ್ರಿಲ್ 13ರಂದು ಮೃತಪಟ್ಟಿದ್ದರು. ಕೊರೊನಾ ಶಂಕೆ ವ್ಯಕ್ತವಾಗಿದ್ದರಿಂದ ಮೃತ ವೃದ್ಧೆಯ ಥ್ರೋಟ್ ಸ್ವ್ಯಾಬ್ ಅನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ರಿಪೋರ್ಟ್ ಸದ್ಯ ಹೊರ ಬಿದ್ದಿದ್ದು, ವೃದ್ಧೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ದೆಹಲಿಯ ತಬ್ಲಿಘಿ ಜಮಾತ್ ಸಭೆಗೆ …
Read More »ಲಾಕ್ ಡೌನ್ ಇದ್ರೂ ಬೆಳಗಾವಿಗೆ ಬಂದಿಳಿದ ವಿಶೇಷ ವಿಮಾನ, ಕಾರಣ ಗೊತ್ತಾ..?
ಬೆಳಗಾವಿ :ದೇಶಾದ್ಯಂತ ಲಾಕ್ಡೌನ್ ಜಾರಿ ಮಾಡಲಾಗಿದ್ದು ವಿಮಾನ, ರೈಲು, ಬಸ್ ಸೇವೆ ಸ್ಥಗಿತಗೊಳಿಸಲಾಗಿದೆ. ಲಾಕ್ ಡೌನ್ ನಡುವೆಯೂ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಖಾಸಗಿ ವಿಮಾನ ಬಂದಿದೆ. ಈ ವಿಶೇಷ ವಿಮಾನದಲ್ಲಿ ನವಜಾತ ಶಿಶುವನ್ನು ಕರೆತರಲಾಗಿದೆ. ಗುಜರಾತ್ ನ ಸೂರತ್ ನಿಂದ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಮಾನದಲ್ಲಿ ವೈದ್ಯರ ತಂಡ ನವಜಾತ ಶಿಶುವನ್ನು ಕರೆತಂದಿದ್ದು ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಹೃದಯ ಸಂಬಂಧಿ ಕಾಯಿಲೆ ಇರುವ ನವಜಾತ ಶಿಶುವನ್ನು …
Read More »ಚಿಕ್ಕೋಡಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದಿದ್ದ ಬೆಳೆಗಳನ್ನು ಕೆಲವರು ಉಚಿತವಾಗಿ ಜನರಿಗೆ ನೀಡುತ್ತಿದ್ದಾರೆ.
ಚಿಕ್ಕೋಡಿ/ಬೆಳಗಾವಿ: ಲಾಕ್‍ಡೌನ್ ಹಿನ್ನೆಲೆಯಲ್ಲಿ ರೈತರು ತಾವು ಬೆಳೆದಿದ್ದ ಬೆಳೆಗಳನ್ನು ಕೆಲವರು ಉಚಿತವಾಗಿ ಜನರಿಗೆ ನೀಡುತ್ತಿದ್ದಾರೆ. ಇನ್ನೂ ಕೆಲವರು ತಿಪ್ಪೆಗೆ ಸುರಿಯುತ್ತಿದ್ದಾರೆ. ಆದರೆ ಇಲ್ಲೊಬ್ಬ ರೈತ ತಾನು ಬೆಳೆದ ತರಕಾರಿಯನ್ನ ಕುರಿ ಮತ್ತು ಮೇಕೆಗಳಿಗೆ ಮೇವು ನೀಡಿರುವ ಘಟನೆ ಜಿಲ್ಲೆಯ ಮೂಡಲಗಿ ತಾಲೂಕಿನ ತುಕ್ಕಾನಟ್ಟಿ ಗ್ರಾಮದಲ್ಲಿ ನಡೆದಿದೆ. ರೈತ ಗುರುನಾಥ್ ಹುಕ್ಕೇರಿ ತನ್ನ ಎರಡು ಎಕರೆ ಜಮೀನಿನಲ್ಲಿ ಒಂದು ಎಕರೆಯಲ್ಲಿ ಎಲೆಕೋಸು, ಇನ್ನೊಂದು ಎಕರೆಯಲ್ಲಿ ಹೂಕೋಸು ಬೆಳೆಯನ್ನ ಬೆಳೆಸಿದ್ದರು. ಸುಮಾರು 2 …
Read More »ನಗರ ಪ್ರದೇಶಕ್ಕೆ ಮಾದರಿಯಾದ ಹಳ್ಳಿಯ ಸ್ವಯಂ ನಿರ್ಬಂಧನೆ; ಬೆಳಗಾವಿಯ ಈ ಗ್ರಾಮದಲ್ಲಿ ಜನತಾ ಕರ್ಫ್ಯೂ
ಬೆಳಗಾವಿ(14): ದೇಶಾದ್ಯಂತ ಮೇ 3ರ ವರೆಗೆ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ನಗರದ ಪ್ರದೇಶದಲ್ಲಿ ಲಾಕ್ ಡೌನ್ ಯಶಸ್ವಿಗೊಳಿಸಲು ಪೊಲೀಸರು ಹಗಲು, ರಾತ್ರಿ ಕೆಲಸ ಮಾಡುತ್ತಿದ್ದಾರೆ. ನಗರ ಪ್ರದೇಶದಲ್ಲಿ ಪ್ರತಿ ಬಡಾವಣೆ, ಪ್ರಮುಖ ರಸ್ತೆಯಲ್ಲಿ ಬ್ಯಾರಿಕೇಡ್ ವ್ಯವಸ್ಥೆ ಮಾಡಲು ಕಾಯುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಹಳ್ಳಿಗೆ ತಾವೇ ಸ್ವಯಂ ನಿರ್ಬಂಧನೆ ಹಾಕಿಕೊಳ್ಳುವ ಮೂಲಕ ಪುಟ್ಟ ಗ್ರಾಮದ ಜನ ಮಾದರಿಯಾಗಿದ್ದಾರೆ ಬೆಳಗಾವಿ ಜಿಲ್ಲೆಯ …
Read More »ಲಾಕ್‌ಡೌನ್ ಎನ್ನುವುದು ಹೇಗೆಲ್ಲ ವಿಧಿಯಾಟ ಆಡಿಸುತ್ತಿದೆಯಲ್ಲ ಎಂಬ ಆಕ್ರೋಶ
ಬೆಳಗಾವಿ- ಆ ತಾಯಿಯ ಕರುಳ ಬಳ್ಳಿಯ ರೋಧನ… ಎದೆಯೆತ್ತರಕ್ಕೆ ಬೆಳೆದು ಮಗನ ಹೆಣದ ಮುಂದೆ ತಾಯಿ ಒಡಲ ರೋಧನ… ಎಲ್ಲವೂ ನೋಡಿದಾಗ ಅಲ್ಲಿದ್ದಾಗ ದುಃಖ ಉಮ್ಮಳಿಸಿ ಬಂತು… ಅದನ್ನೆಲ್ಲ ಬರಿಯಬೇಕು ಅಂದ್ರೆ ನಡುಗುತ್ತಿರುವ ಕೈ ಇನ್ನು ನಿಂತಿಲ್ಲ.. ಇಷ್ಟೆಲ್ಲ ಪೀಠಿಕೆ ಏಕೆಂದರೆ ಲಾಕ್‌ಡೌನ್ ಮಧ್ಯೆ ಸ್ಮಶಾನ ಮೌನದಂತೆ ಇರೋ ಬೆಳಗಾವಿಯಲ್ಲಿ ನಡೆದ ನತದೃಷ್ಟ ತಾಯಿ-ಮಕ್ಕಳ ಕರುಣಾಜನಕ, ಕರುಳ ಬಳ್ಳಿ ಕಳೆದುಕೊಂಡು ಪಡಬಾರದ ಪರದಾಟ ಕಂಡ ಘಟನೆ ಇದೆ.. ಸಮಗ್ರ ವಿವರ …
Read More »129 ನೇ ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಆಚರಣೆ ಮಾಡಿದ ಬಾಗೇವಾಡಿ ಗ್ರಾಮಸ್ಥರು..
ಹುಕ್ಕೇರಿ: ತಾಲ್ಲೂಕಿನ ಬಾಗೇವಾಡಿ ಗ್ರಾಮದ ಬಿ.ಆರ್.ಅಂಬೇಡ್ಕರ್ ಸಮೂದಯ ಭವನದಲ್ಲಿ ಅಂಬೇಡ್ಕರ್ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಹಾಗೂ ದ್ವಜಾರೋಹಣ ಮಾಡುವ ಮುಂಕಾತರ್ 129 ನೇ ಅಂಬೇಡ್ಕರ್ ಜಯಂತಿಯನ್ನು ಬಾಗೇವಾಡಿ ಗ್ರಾಮದಲ್ಲಿ ಆಚರಣೆ ಮಾಡಲಾಯಿತು. ಬಳಿಕ ಗ್ರಾಮದಲ್ಲಿ ಸಮೂದಾಯ ಭವನದಲ್ಲಿ ಅಂಬೇಡ್ಕರ್ ಜಯಂತಿ ಬಗ್ಗೆ ಮಾದ್ಯಮದ ಜೊತೆಗೆ ಮಾತನಾಡಿದ ಮಾಜಿ ಜಿಲ್ಲಾ.ಪಂಚಾಯತಿ ಸದಸ್ಯ ಶಿವಾಜಿ ಸಂಜೀವಗೋಳ ಅವರು ಸರಳ ರೀತಿಯಲ್ಲಿ ಬಾಗೇವಾಡಿ ಗ್ರಾಮದ ಬಿ.ಆರ್.ಅಂಬೇಡ್ಕರ್ ಸಮೂದಾಯ ಭವನದಲ್ಲಿ ದೀಪ ಬೆಳಗಿಸಿ, …
Read More »129 ನೇ ವಿಶ್ವರತ್ನ ಡಾ||ಬಿ.ಆರ್.ಅಂಬೇಡ್ಕರರ ಜಯಂತಿ ಆಚರಿಸಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ.
ಗೋಕಾಕ: ತಾಲ್ಲೂಕಿನ ಸುಲಧಾಳ ಗ್ರಾಮದಲ್ಲಿ 129 ನೇ ವಿಶ್ವರತ್ನ ಡಾ||ಬಿ.ಆರ್.ಅಂಬೇಡ್ಕರರ ಜಯಂತಿಯನ್ನು ಪೂಜೆ ಮಾಡುವ ಮೂಲಕ ಅತಿ ಸರಳವಾಗಿ ಆಚರಿಸಲಾಯಿತು. ಪ್ರಸ್ತುತ ಕೋವಿಡ್—19 ವೈರೆಸ್ ಹರಡುವಿಕೆಯನ್ನು ತಡೆಗಟ್ಟವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಆದೇಶ ಪಾಲಿಸುವ ನಿಟ್ಟಿನಲ್ಲಿ ಡಾ||ಬಿ.ಆರ್.ಅಂಬೇಡ್ಕರರ 129 ನೇ ಜಯಂತಿಯನ್ನು ಸುಲಧಾಳ ಗ್ರಾಮದಲ್ಲಿ ಅತಿ ಸರಳವಾಗಿ ಆಚರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ರಿ) ಸುಲಧಾಳ ಗ್ರಾಮದ ಅಧ್ಯಕ್ಷರಾದ …
Read More »ಜೀವದ ಹಂಗು ತೊರೆದು ಹಗಲಿರುಳು ಶ್ರಮಸುತ್ತಿರುವ ಎಲ್ಲಾ ಇಲಾಖೆ ಮತ್ತು ಸಿಬ್ಬಂದಿಗಳಿಗೂ
ಗೋಕಾಕ ತಾಲೂಕಿನ ಘಟಪ್ರಭಾದಲ್ಲಿ ಲಾಕ್ ಡೌನ್ ಸಲವಾಗಿ ತಮ್ಮ ಜೀವದ ಹಂಗು ತೊರೆದು ಹಗಲಿರುಳು ಶ್ರಮಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೂ ,ಪೌರಕಾರ್ಮಿಕರಿಗೂ,ಆರೋಗ್ಯ ಇಲಾಖೆ ಸಿಬ್ಬಂದಿಗಳಿಗೂ,ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ಘಟಪ್ರಭಾ ಹೊಸಮಠದ ಪೂಜ್ಯ ಶ್ರೀ ವಿರುಪಾಕ್ಷ ದೇವರು ದಿನಾಂಕ,14-04-2020 ರಂದು ಮದ್ಯಾಹ್ನ ಮಹಾಪ್ರಸಾದ ವ್ಯವಸ್ಥೆ ಮಾಡಿದ್ದರು. ರಾಜ್ಯ ಎನ್ ಟಿ ಸಿ ಒಕ್ಕೂಟದ ಅಧ್ಯಕ್ಷ ಜಿ.ಎಸ್. ಕರ್ಪೂರಮಠ,ಪಿ ಎಸ್ ಆಯ್ ಹಾಲಪ್ಪ. ಬಾಲದಂಡಿ.ಸರಕಾರಿ ವೈದ್ಯಾಧಿಕಾರಿ ಡಾ !! ಪ್ರವೀಣ.ಕರಗಾಂವಿ,ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ …
Read More »