Breaking News

ಬೆಳಗಾವಿ

ಯೋಧನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ ಠಾಣೆಯ ಪಿಎಸ್ಐ ಅನೀಲ ಕಂಬಾರ್ ಅವರನ್ನು ಅಮಾನತುಗೊಳಿಸಲಾಗಿದೆ.

ಬೆಳಗಾವಿ – ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿರುವ ಸಿಆರ್ ಪಿಎಫ್ ಯೋಧನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದಲಗಾ ಠಾಣೆಯ ಪಿಎಸ್ಐ ಅನೀಲ ಕಂಬಾರ್ ಅವರನ್ನು ಅಮಾನತುಗೊಳಿಸಲಾಗಿದೆ. ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ ಮಾಸ್ಕ್ ಧರಿಸಿರಲಿಲ್ಲ ಎನ್ನುವ ಕಾರಣಕ್ಕೆ ಮಾತಿಗೆ ಮಾತು ಬೆಳೆದು ಮಾರಾಮಾರಿ ಹಂತಕ್ಕೆ ಹೋಗಿತ್ತು. ನಂತರ ಯೋಧನನ್ನು ಅಮಾನವೀಯವಾಗಿ ಠಾಣೆಗೆ ಕರೆದೊಯ್ದು ಹಿಂಸಿಸಲಾಗಿದೆ ಎಂದು ಆರೋಪಿಸಲಾಗಿತ್ತು. ಯೋಧನಿಗೆ ಕೊಳ ತೊಡಿಸಿ ಕೂಡ್ರಿಸಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ …

Read More »

ಕೋವಿಡ್-೧೯: ಮತ್ತೇ ಒಬ್ಬ ಗುಣಮುಖ: ಆಸ್ಪತ್ರೆಯಿಂದ ಡಿಸ್ಚಾರ್ಜ್

ಬೆಳಗಾವಿ, ಏ.೨೯(ಕರ್ನಾಟಕ ವಾರ್ತೆ): ಕೋವಿಡ್-೧೯ ಸೋಂಕು ತಗುಲಿದ್ದ ಮತ್ತೊಬ್ಬ ವ್ಯಕ್ತಿ ಸಂಪೂರ್ಣ ಗುಣಮುಖರಾಗಿದ್ದು, ಇಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿರುತ್ತದೆ ಎಂದು ಬಿಮ್ಸ್ ನಿರ್ದೇಶಕರಾದ ಡಾ.ವಿನಯ ದಾಸ್ತಿಕೊಪ್ಪ ಅವರು ತಿಳಿಸಿದ್ದಾರೆ. ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬಿಮ್ಸ್) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರಾಯಬಾಗ ತಾಲ್ಲೂಕಿನ ಕುಡಚಿಯ ೨೫ ವರ್ಷದ ವ್ಯಕ್ತಿ(ಪಿ-೨೨೬)ಯನ್ನು ಇಂದು ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿರುತ್ತದೆ. ಇವರು ಏ.೧೨ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜಿಲ್ಲೆಯಲ್ಲಿ ಇಂದಿನವರೆಗೆ ಒಟ್ಟು ೫೫ ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ …

Read More »

ಬೆಳಗಾವಿ ಯೋಧನಿಗೆ ಬಾಸುಂಡೆ ಬರೋ ಹಾಗೆ ಥಳಿತ

ಬೆಳಗಾವಿ: ಸಿಆರ್ ಪಿಎಫ್ ಯೋಧ ಸಚಿನ್ ಸಾವಂತ್ ಅವರಿಗೆ ಬಾಸುಂಡೆ ಬರುವ ಹಾಗೆ ಸದಲಗಾ ಪೊಲೀಸರು ಥಳಿಸಿರುವ ಆರೋಪಗಳು ಕೇಳಿ ಬಂದಿದೆ. ಯೋಧನಿಗೆ ಬಾಸುಂಡೆ ಬಂದಿರುವ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಪೊಲೀಸರ ನಡೆಗೆ ಕಿಡಿಕಾರಿದ್ದಾರೆ. ಏಪ್ರಿಲ್ 23ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಪೊಲೀಸರು ಮತ್ತು ಯೋಧನ ನಡುವೆ ಗಲಾಟೆ ನಡೆದಿತ್ತು. ತದನಂತರ ಪೊಲೀಸರು ಯೋಧನನ್ನು ಠಾಣೆಗೆ ಕರೆದುಕೊಂಡು ಕೈಗೆ ಕೋಳ ಹಾಕಿದ್ದರು. …

Read More »

ಡೊಣ್ಣೆ ಮೆಣಸಿನಕಾಯಿ ಹಾನಿ ಲಕ್ಷಾಂತರ ರೊ ನಷ್ಟ ಸರ್ಕಾರ ನೀಡುತ್ತಾ ಸಹಾಯ ದನ ?…..

ಚಿಕ್ಕೋಡಿ:೧೫ ಲಕ್ಷ ರೂ ಹಾನಿ. ಸಮರ್ಪಕ ಮಾರಾಟವಾಗದೇ ರೈತನ ಕಣ್ಣಲ್ಲಿ ನೀರು ತರಿಸಿದ ಡೊಣ್ಣ ಮೆಣಸಿನಕಾಯಿ ತರಕಾರಿ ಬೆಳೆ ಒಂದು ಕಡೆ ಕೊರೊನಾ ಭೀತಿ ಮತ್ತೊಂದು ಕಡೆ ನೆತ್ತಿ ಸುಡುವ ಬೀರು ಬಿಸಲಿನ ಬೇಗೆ ಇಂತಹ ಸಂದೀಗ್ಧ ಪರಿಸ್ಥಿತಿಯಲ್ಲಿ ಜಮೀನಿನಲ್ಲಿ ಹುಲಸಾಗಿ ಬೆಳೆದ ಡೊಣ್ಣೆ ಮೆಣಸಿನಕಾಯಿ ಸಮರ್ಪಕ ಮಾರಾಟವಾಗದೇ ರೈತನ ಕಣ್ಣಲ್ಲಿ ಕಣ್ಣಿರು ತರಿಸುತ್ತಿದೆ. ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ ವ್ಯಾಪ್ತಿಯ ಡೋಣವಾಡ ಗ್ರಾಮದ ಸಿದ್ದಗೌಡ ಪಾಟೀಲ ಎಂಬ ರೈತ ತನ್ನ …

Read More »

ಹುಕ್ಕೇರಿ ತಾಲೂಕಿನ 12 ವರ್ಷದ ಬಾಲಕನಿಗೆ ಕೊರೋನಾ ಸೋಂಕು ಪತ್ತೆ

ರಾಜ್ಯದಲ್ಲಿ ಇಂದು 9 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಇವರಲ್ಲಿ 8 ಜನರು ಕಲಬುರ್ಗಿಯವರು. ಬೆಳಗಾವಿಯಲ್ಲಿ ಹುಕ್ಕೇರಿ ತಾಲೂಕಿನ 12 ವರ್ಷದ ಬಾಲಕನಿಗೆ ಕೊರೋನಾ ಸೋಂಕು ಪತ್ತೆಯಾಗಿದೆ. ಬಾಲಕನಿಗೆ ರೋಗಿ ನಂಬರ್ 293 ರಿಂದ ಸೋಂಕು ತಗುಲಿದೆ. ಕಲಬುರ್ಗಿಯಲ್ಲಿ ಸೋಂಕಿತರ ಸಂಖ್ಯೆ ನಿರಂತರವಾಗಿ ಏರಿಕೆಯಾಗುತ್ತಿದೆ. ಕಲಬುರ್ಗಿಯಲ್ಲಿ 4, 12 ಹಾಗೂ 17 ವರ್ಷದ ಬಾಲಕಿಯರಿಗೆ ಸೋಂಕು ದೃಢಪಟ್ಟಿದೆ. ಹುಕ್ಕೇರಿ ತಾಲೂಕು ಎಂದರೆ ಈಗಾಗಲೆ ಪತ್ತೆಯಾಗಿರುವ ಸಂಕೇಶ್ವರ ಪಟ್ಟಣದ ಬಾಲಕನಿರಬಹುದು ಎಂದು …

Read More »

ಬೆಳಗಾವಿಯ ಸುಮಾರು 4500 ಬಡಕುಟುಂಬಗಳಿಗೆ ರೆಷನ್ ಕಿಟ್ ವಿತರಿಸಿದ ಗರೀಬ ನವಾಜ್ ಫೌಂಡೇಷನ್

ಬೆಳಗಾವಿ: ಇಲ್ಲಿನ ನ್ಯೂ ಗಾಂಧಿ ನಗರದ ಖ್ವಾಜಾ ಗರೀಬ ನವಾಜ್ ಪೌಂಡೇಶನ್ ವತಿಯಿಂದ ಸುಮಾರು 26 ಲಕ್ಷ ರೂ. ವೆಚ್ಚದ ರೇಷನ್ ಕಿಟ್ ಗಳನ್ನು ಬಡಕುಟುಂಬಗಳಿಗೆ ವಿತರಣಾ ಕಾರ್ಯಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಚಾಲನೆ ನೀಡಿದರು. ಲಾಕ್‌ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಸುಮಾರು 3 ಸಾವಿರ ಬಡಕುಟುಂಬಗಳಿಗೆ ಈ ರೇಷನ್‌ಕಿಟ್ ಗಳನ್ನು ವಿತರಿಸಲಾಗುತ್ತಿದೆ. ಫೌಂಡೇಶನ್ ವತಿಯಿಂದ ನಡೆಯುತ್ತಿರುವ ಈ‌‌ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿರುವ ಶಾಸಕರೂ ಆದ ಸತೀಶ ಜಾರಕಿಹೊಳಿ …

Read More »

ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮನೆ ಮಗಳಾಗಿ ಕ್ಷೇತ್ರದ ಜನರ ಅನ್ನದ ಹಸಿವು ಇಂಗಿಸುವ ಕೆಲಸದಲ್ಲಿ ನಿರತ

ಬೆಳಗಾವಿ – ಆ ವೃದ್ದೆಯರ ಕೈ ನಡುಗುತ್ತಿತ್ತು. ಆದರೂ ಮನೆ ಮಗಳ ತಲೆಯ ಮೇಲೆ ಕೈಯಿಟ್ಟು ಹರಸುತ್ತಿದ್ದರು. ತಾಯಂದಿರ ಕಣ್ಣಂಚಿನಲ್ಲಿ ನೀರು ಜಿನುಗುತ್ತಿತ್ತು, ಮನೆಮಗಳನ್ನು ಬಿಗಿದಪ್ಪಿ ಕೃತಜ್ಞತೆ ಸಲ್ಲಿಸುತ್ತಿದ್ದರು. ಹಿರಿಯರು, ಯುವಕರ ಮುಖದಲ್ಲಿ ತಾವು ನೀಡಿದ ಒಂದೊಂದು ಓಟು ನಿಜವಾಗಿಯೂ ಸಾರ್ಥಕವಾದ ಧನ್ಯತಾಭಾವ ಕಾಣುತ್ತಿತ್ತು. ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಮಂಗಳವಾರ ನಿಜಾರ್ಥದಲ್ಲಿ ಶಿವ-ಬಸವ ಜಯಂತಿ ಆಚರಿಸಲ್ಪಟ್ಟಿತು. ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ್ತೊಮ್ಮೆ ಮನೆ ಮಗಳಾಗಿ ಕ್ಷೇತ್ರದ ಜನರ …

Read More »

ಮದುವೆಯಾಗದ ಸಿಬ್ಬಂದಿಗೆ ಬೇಗ ಮದುವೆ ಮಾಡಿಸಿ ಎಂದು ಅಲೋಕ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಬೆಳಗಾವಿ: ಮದುವೆಯಾಗದ ಸಿಬ್ಬಂದಿಗೆ ಬೇಗ ಮದುವೆ ಮಾಡಿಸಿ ಎಂದು ಅಲೋಕ್ ಕುಮಾರ್ ಅವರು ಅಧಿಕಾರಿಗಳಿಗೆ ಸೂಚಿಸುವ ಮೂಲಕ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಕೊರೊನಾ ಡ್ಯೂಟಿಯನ್ನು ನಿರಂತರವಾಗಿ ಮಾಡುತ್ತಿರುವ ಕೆಎಸ್‍ಆರ್‍ಪಿ ಸಿಬ್ಬಂದಿಗೆ ಧೈರ್ಯ ತುಂಬುವ ಕೆಲಸವನ್ನ ಇಂದು ಕೆಎಸ್‍ಆರ್‍ಪಿ ಎಡಿಜಿಪಿ ಅಲೋಕ್ ಕುಮಾರ್ ಮಾಡಿದ್ದಾರೆ. ಬೆಳಗಾವಿ ನಗರಕ್ಕೆ ಆಗಮಿಸಿದ್ದ ಅಲೋಕ್ ಕುಮಾರ್ ಕೆಎಸ್‍ಆರ್‍ಪಿ ತುಕಡಿಗಳು ಕೆಲಸ ನಿರ್ವಹಿಸುತ್ತಿದ್ದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಅವರ ಆರೋಗ್ಯ ವಿಚಾರಣೆ ಮಾಡಿದರು. ಪ್ರತಿಯೊಬ್ಬ ಪೇದೆಗಳ …

Read More »

ಬೆಳಗಾವಿ:ಯೋಧ ಸಚಿನ್ ಸಾವಂತ್‍ಗೆ ಬೇಲ್……..

ಬೆಳಗಾವಿ: ಭಾರೀ ಚರ್ಚೆಗೆ ಗ್ರಾಸವಾಗಿದ್ದ ಸಿಆರ್‌ಪಿಎಫ್ ಯೋಧ ಸಚಿನ್ ಸಾವಂತ್ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆಯಾಗಿದ್ದು, ನ್ಯಾಯಾಲಯ ಜಾಮೀನು ನೀಡಿದೆ. ಸಚಿನ್ ಸಾವಂತ್ ಅವರಿಗೆ ಜಾಮೀನು ಸಿಕ್ಕಿರುವ ಹಿನ್ನೆಲೆ ನ್ಯಾಯಾಲಯದ ಆದೇಶ ಪ್ರತಿ ಜೊತೆಗೆ ಸಿಆರ್‌ಪಿಎಫ್ ಅಧಿಕಾರಿಗಳು ಬೆಳಗಾವಿಯ ಹಿಂಡಲಗಾ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು. ಜೈಲು ಅಧಿಕಾರಿಗಳು ನ್ಯಾಯಾಲಯ ಆದೇಶ ಪ್ರತಿ ಪರಿಶೀಲನೆ ನಡೆಸಿ ಸಚಿನ್ ಸಾವಂತ್ ಅವರನ್ನು ಬಿಡುಗಡೆ ಮಾಡಿದ್ದಾರೆ. ಚಿಕ್ಕೋಡಿ ತಾಲೂಕಿನ ಯಕ್ಸಂಬಾ ಪಟ್ಟಣದಲ್ಲಿ ಮಾಸ್ಕ್ …

Read More »

ಮಕ್ಕಳಗೇರಿಗ್ರಾಮ ಪಂಚಾಯತಿ ಕಾರ್ಯಾಲಯದ ವತಿಯಿಂದ ಗ್ರಾಮದಲ್ಲಿ ಪ್ರತಿಯೊಂದು ಮನೆ ಮತ್ತು ವ್ಯಕ್ತಿಗೆ ಕರೋನ ಸೋಂಕು ತಡೆಗಟ್ಟುವ ಮತ್ತು ಕರೋನ ಜಾಗೃತಿ ಆದೋಲನ ಮಾಡಲಾಯಿತು.

ಗೋಕಾಕ: ಮಕ್ಕಳಗೇರಿಗ್ರಾಮ ಪಂಚಾಯತಿ ಕಾರ್ಯಾಲಯದ ವತಿಯಿಂದ ಗ್ರಾಮದಲ್ಲಿ ಪ್ರತಿಯೊಂದು ಮನೆ ಮತ್ತು ವ್ಯಕ್ತಿಗೆ ಕರೋನ ಸೋಂಕು ತಡೆಗಟ್ಟುವ ಮತ್ತು ಕರೋನ ಜಾಗೃತಿ ಆದೋಲನ ಮಾಡಲಾಯಿತು. ಪ್ರತಿಯೊಂದು ಮನೆಗೆ ಹೋಗಿ ಪ್ರತಿಯೊಬ್ಬರನ್ನು ಮಹಿಳೆಯರು ಮತ್ತು ಪುರುಷರು ಹಾಗೂ ವ್ಯಕ್ತಿಯನ್ನು ಹಾಗೂ ಮಕ್ಕಳನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆ ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಪಿ.ಡಿ.ಓ.ಇವರ ಜಂಟಿಯಾಗಿ ಮಾಸ್ಕ ವಿತರಣೆ ಮಾಡಿದರು. ಸಾರ್ವಜನಿಕರಿಗೆ ಈ ಮುಖದ ರಕ್ಷಕಗಳು ಸಹಾಯಕವಾಗುವುದು. ಅಲ್ಲದೇ ನರ್ಸ್, …

Read More »