ಬೆಳಗಾವಿ: ಇಲ್ಲಿರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಐಒಸಿ, ಎಚ್‌ಪಿ ಹಾಗೂ ಬಿಪಿ ಕಂಪನಿಯ ಪೆಟ್ರೋಲ್ ಬಂಕ್‌ಗಳಲ್ಲಿ ವಾರದಿಂದೀಚೆಗೆ ಪೆಟ್ರೋಲ್ ಬೆಲೆ ಸ್ಥಿರವಾಗಿದೆ. ಆದರೆ, ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಹೋದ ವಾರದ ಯಾವುದೇ ದಿನಗಳಲ್ಲೂ ಪೆಟ್ರೋಲ್ ಬೆಲೆ ಏರಿಕೆಯಾಗಿಲ್ಲ; ಇಳಿಕೆಯೂ ಆಗಿಲ್ಲ. ಲೀಟರ್ ಡೀಸೆಲ್ ಬೆಲೆ ಸರಾಸರಿ 40 ಪೈಸೆ ಜಾಸ್ತಿಯಾಗಿದೆ. *ಹೆಚ್ಚಿನ ಸುದ್ದಿಗಾಗಿ ಲಕ್ಷ್ಮಿ ನ್ಯೂಸ್ ಚಾನಲ್ ಅನ್ನ subscribe ಹಾಗೂ ಕ್ಷಣ ಕ್ಷಣದ ಸುದ್ದಿಗಳಿಗಾಗಿ ಲಕ್ಷ್ಮಿ ನ್ಯೂಸ್ ವೆಬ್ …
Read More »ಸೋಂಕಿತ ಗರ್ಭಿಣಿ ಕರೆದೊಯ್ಯಲು ಬಂದ ಕೊರೊನಾ ವಾರಿಯರ್ಸ್ ಮೇಲೆ ಕುಟುಂಬಸ್ಥರಿಂದ ಹಲ್ಲೆ
ಬೆಳಗಾವಿ: ಸೋಂಕಿತೆಯನ್ನ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ವಿರೋಧ ವ್ಯಕ್ತಪಡಿಸಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪಟ್ಟಣದಲ್ಲಿ ನಡೆದಿದೆ. ಗರ್ಭಿಣಿಗೆ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಆಕೆಯನ್ನ ಬೆಳಗಾವಿ ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಲು ಬಂದಿದ್ದ ಆಯಂಬುಲೆನ್ಸ್ ತಡೆದು ಕೊರೊನಾ ವಾರಿಯರ್ಸ್ನ ಸೋಂಕಿತೆಯ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಬೆಳಗಾವಿಗೆ ಸೋಂಕಿತೆಯನ್ನ ಕರೆದುಕೊಂಡು ಹೋಗದಂತೆ ವಿರೋಧಿಸಿ ಆಯಂಬುಲೆನ್ಸ್ ಡ್ರೈವರ್ ಮತ್ತು ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ. ಅರ್ಧ ದಾರಿಗೆ ಆಯಂಬುಲೆನ್ಸ್ …
Read More »ಅಥಣಿ: ಕೇಂದ್ರದ ಹಣ ಲೂಟಿ ಹೊಡೆಯುವ ಯತ್ನ; ಆರೋಪ
ಅಥಣಿ: ‘ಕೊರೊನಾ ಸೋಂಕು ಪರೀಕ್ಷೆ ಮಾಡಿಸಿದಾಗ ಒಂದೊಂದು ಸಲ ಒಂದೊಂದು ರೀತಿಯ ಫಲಿತಾಂಶವನ್ನು ಆರೋಗ್ಯ ಇಲಾಖೆಯವರು ನೀಡುತ್ತಿದ್ದಾರೆ. ಒಮ್ಮೆ ಪಾಸಿಟಿವ್ ನೀಡಿದರೆ, ಮರುದಿನವೇ ನೆಗೆಟಿವ್ ನೀಡುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ಬರುತ್ತಿರುವ ಕೋಟ್ಯಾಂತರ ರೂಪಾಯಿ ಅನುದಾನವನ್ನು ಲೂಟಿ ಹೊಡೆಯಲು ಹೀಗೆ ಮಾಡುತ್ತಿದ್ದಾರೆ’ ಎಂದು ಇಲ್ಲಿನ ಹಿಪ್ಪರಗಿ ಗಲ್ಲಿಯ ನಿವಾಸಿಯೊಬ್ಬರು ಆರೋಪಿಸಿದ್ದಾರೆ. ಪಟ್ಟಣದಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇದೇ ತಿಂಗಳು 15ರಂದು ಅಥಣಿಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿದ್ದೆ. ವರದಿ …
Read More »ಶೀಘ್ರವೇ ನೀರಾವರಿ ಕಾಮಗಾರಿಗಳು ಆರಂಭ
ಗೋಕಾಕ: ನೀರಾವರಿ ಹಾಗೂ ರಸ್ತೆ ಕಾಮಗಾರಿಗೆ ಹೆಚ್ಚಿನ ಮಹತ್ವ ನೀಡಿ ಕಾರ್ಯ ಮಾಡಲಾಗುತ್ತಿದ್ದು, ಇಡೀ ಗೋಕಾಕ ಮತಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಲೋಕೋಪಯೋಗಿ ಇಲಾಖೆಯಿಂದ ಅಲ್ಪಸಂಖ್ಯಾತರ ಕಾಲೋನಿಗಳ ಅಭಿವೃದ್ಧಿಗಾಗಿ 6 ಕೋಟಿ, ಸಣ್ಣ ನೀರಾವರಿ ಇಲಾಖೆಯಿಂದ ಬಾಂದಾರ- ಕಮ್- ಸೇತುವೆಗಳನ್ನು ನಿರ್ಮಿಸಲು 14.80 ಕೋಟಿ ರೂ. ಕಾಮಗಾರಿಗಳು …
Read More »ಸಿದ್ದರಾಮಯ್ಯಗೆ ಲೀಗಲ್ ನೋಟಿಸ್ ಕೊಡಲು ಸಿಎಂ ತಯಾರಿ: ರಮೇಶ್ ಜಾರಕಿಹೊಳಿ
ಬೆಳಗಾವಿ: ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಲೀಗಲ್ ನೋಟಿಸ್ ನೀಡಲು ಸಿಎಂ ಯಡಿಯೂರಪ್ಪ ಅವರು ತಯಾರಿ ಮಾಡಿದ್ದಾರೆ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರದ ವಿರುದ್ಧ ಕೊರೊನಾ ವಿಚಾರದಲ್ಲಿ ಭ್ರಷ್ಟಾಚಾರ ಆರೋಪ ಮಾಡುತ್ತಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಲೀಗಲ್ ನೋಟಿಸ್ ನೀಡಲು ಸರ್ಕಾರದ ಮಟ್ಟದಲ್ಲಿ ತಯಾರಿ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ ಆರೋಪ ಬಗ್ಗೆ ಈಗಾಗಲೇ ನಮ್ಮ …
Read More »ಬೆಳಗಾವಿ | 30ರಿಂದ ಸಿಇಟಿ ಪರೀಕ್ಷೆ: ಸಿದ್ಧತೆಗೆ ಸೂಚನೆ
ಬೆಳಗಾವಿ: ‘ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕಾಗಿ ಜುಲೈ 30ರಿಂದ ಮೂರು ದಿನಗಳವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಸೂಚಿಸಿದರು. ಇಲ್ಲಿನ ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ‘ಕೋವಿಡ್-19 ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಗಳ ಒಳಗಡೆ ಹಾಗೂ ಸುತ್ತಲೂ ಸೋಂಕು ನಿವಾರಕ ದ್ರಾವಣ ಸಿಂಪಡಿಸಬೇಕು. ವಿದ್ಯಾರ್ಥಿಗಳು ಅಂತರ ಕಾಯ್ದುಕೊಳ್ಳುವಂತೆ ವ್ಯವಸ್ಥೆ ಮಾಡಬೇಕು’ ಎಂದು ತಿಳಿಸಿದರು. …
Read More »ಬೆಳಗಾವಿ| ಬ್ರಾಹ್ಮಣರಿಗೆ ಮೀಸಲಾತಿ: ವೆಬಿನಾರ್ ನಾಳೆ.
ಬೆಳಗಾವಿ: ‘ರಾಜ್ಯ ಸರ್ಕಾರ ಇತ್ತೀಚೆಗೆ ಬ್ರಾಹ್ಮಣರಿಗೆ ಶೇ 10ರಷ್ಟು ಮೀಸಲಾತಿ ಜಾರಿ ಮಾಡಿ ಆದೇಶಿಸಿದೆ. ಇದರಿಂದ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಆಗುವ ಪರಿಣಾಮಗಳ ಕುರಿತು ಜುಲೈ 26ರಂದು ಸಂಜೆ 4ಕ್ಕೆ ವೆಬಿನಾರ್ ಮೂಲಕ ಚಿಂತನ-ಮಂಥನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ’ ಎಂದು ವಿದ್ಯಾರ್ಥಿ ಬಂಧುತ್ವ ವೇದಿಕೆ ಮತ್ತು ಮಾನವ ಬಂಧುತ್ವ ವೇದಿಕೆ ತಿಳಿಸಿವೆ. ‘ಕಲಬುರ್ಗಿಯ ಕನಕ ಗುರುಪೀಠದ ಸಿದ್ಧರಾಮಾನಂದ ಸ್ವಾಮೀಜಿ ಚಾಲನೆ ನೀಡುವರು. ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ …
Read More »ಬೆಳಗಾವಿ | 116 ಮಂದಿಗೆ ಕೋವಿಡ್ ದೃಢ…
ಬೆಳಗಾವಿ: ಜಿಲ್ಲೆಯಲ್ಲಿ ಹೊಸದಾಗಿ 116 ಮಂದಿಗೆ ಕೋವಿಡ್-19 ಸೋಂಕು ದೃಢಪಟ್ಟಿದೆ. ಒಬ್ಬರು ಮೃತರಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ. ಚಿಕಿತ್ಸೆಗಾಗಿ ಅವರನ್ನು ನಿಗದಿತ ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಿ ಸಂಖ್ಯೆ 48,135 ಆದ 47 ವರ್ಷದ ವ್ಯಕ್ತಿ ಜುಲೈ 14ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಅವರು 20ರಂದು ಸಾವಿಗೀಡಾಗಿದ್ದಾರೆ. ಅವರಿಗೆ ತೀವ್ರ ಉಸಿರಾಟದ ತೊಂದರೆ ಇತ್ತು. ಅವರು ಬೆಳಗಾವಿ ತಾಲ್ಲೂಕಿನವರು ಎಂದು ಮಾಹಿತಿ ನೀಡಿದೆ. ಸವದತ್ತಿ ವರದಿ: ತಾಲ್ಲೂಕಿನಲ್ಲಿ 19 ಮಂದಿಗೆ ಕೋವಿಡ್ …
Read More »ಕೊರಾನಾ ವಿರುದ್ದ ಹೋರಾಡಲು ಗೋಕಾಕದಲ್ಲಿಟಾಸ್ಕ್ ಪೋರ್ಸ್ ಸಭೆ ನಡೆಯಿತು.
ಗೋಕಾಕ: ಕೊರಾನಾ ವಿರುದ್ದ ಹೋರಾಡಲು ಗೋಕಾಕದಲ್ಲಿ ನಗರಸಭೆ ಸದಸ್ಯೆ ಲಕ್ಷ್ಮಿ ಬಸವರಾಜ ದೇಶನೂರ ಇವರ ನೇತೃತ್ವದಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಯಿತು. ನಗರಸಭೆಯ ಟಾಸ್ಕ ಪೋರ್ಸ ಅಧಿಕಾರಿಯಾದ ಎಂ,ಎಚ್,ಗಜಾಕೋಶ ಇವರು ಮಾತನಾಡಿ, ಜಿಲ್ಲಾಧಿಕಾರಿಗಳ ಆದೇಶದಂತೆ ಹಲವು ಇಲಾಖೆ ಮತ್ತು ಸ್ಥಳಿಯ ಸದಸ್ಯರನ್ನು ಒಳಗೊಂಡು ಟಾಸ್ಕ್ ಪೊರ್ಸ ರಚನೆಯಾಗಿರುತ್ತದೆ. ಇದರ ಉದ್ದೇಶ ಕೊರಾನಾ ರೋಗ ಹರಡದಂತೆ ರೋಗದ ವಿರುದ್ದ ಹೊರಾಟ ಮಾಡುವುದು ಹೊರತು ರೋಗಿಯ ವಿರುದ್ದ ಅಲ್ಲ. ಅದಕ್ಕಾಗಿ ಯಾರು ಕೊರಾನಾಗೆ …
Read More »ಮಾನವ ಬಂಧುತ್ವ ವೇದಿಕೆ ಮೂಲಕ ಯಶಸ್ವಿಯಾಗಿ ಬಸವ ಪಂಚಮಿ ಆಚರಣೆ.
ಗೋಕಾಕ: ಮಾನವ ಬಂಧುತ್ವ ವೇದಿಕೆ ಮೂಲಕ ರಾಜ್ಯಾದ್ಯಂತ ನಮ್ಮ ಬೆಂಬಲಿಗರು ಯಶಸ್ವಿಯಾಗಿ ಬಸವ ಪಂಚಮಿ ಆಚರಿಸುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ನಗರದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗರ ಪಂಚಮಿಯಂದು ಪ್ರತಿ ಬಸವ ಪಂಚಮಿಯಾಗಿ ಆಚರಿಸಲಾಗುತ್ತಿದೆ. ಹಾವುಗಳು ಎಂದು ಹಾಲು ಕುಡಿಯುವುದಿಲ್ಲ. ಮೂಢನಂಬಿಕೆ ಆಚರಿಸುವ ಬದಲು ಅದೇ ಹಾಲನ್ನು ಬಡ ಮಕ್ಕಳಿಗೆ, ಹಾಸ್ಟೆಲ್ ವಿದ್ಯಾರ್ಥಿಗಳಿಗೆ ನೀಡುಲು ಅಭಿಯಾನ ಆರಂಭಿಸಿದ್ದೇವೆ. ರಾಜ್ಯಾದ್ಯಂತ ಯಶಸ್ವಿಯಾಗಿ ಆಚರಿಸಲಾಗುತ್ತಿದೆ ಎಂದು ಹೇಳಿದ್ರು.
Read More »