4ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನ ಇಂಟರ್ನೆಟ್ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರ ಜ್ಞಾನ ಇರುವುದು ಅವಶ್ಯಕವಾಗಿದೆ- ವಿಶ್ವಜೀತ್ ಹಸಬೆ ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಒಡನಾಟ ಚೆನ್ನಾಗಿದ್ದರೆ ಮಾತ್ರ ಜ್ಞಾನದ ವರ್ಧನೆ ಸಾಧ್ಯ. ಇಂದಿನ ಇಂಟರ್ನೆಟ್ ಸ್ಪರ್ಧಾತ್ಮಕ ಯುಗದಲ್ಲಿ ಎಲ್ಲದರ ಜ್ಞಾನ ಇರುವುದು ಅವಶ್ಯಕವಾಗಿದೆ ಎಂದು ವಿಶ್ವಜೀತ ಹಸಬೆ ಹೇಳಿದರು. ಗುರುವರ್ಯ ವಿ.ಗೋ. ಸಾಠೇ ಮರಾಠಿ ಪ್ರಭೋದಿನಿಯ ವತಿಯಿಂದ ಆಯೋಜಿಸಿದ್ದ 24ನೇ ಮರಾಠಿ ಬಾಲ ಸಾಹಿತ್ಯ ಸಮ್ಮೇಳನವನ್ನು ಉದ್ದೇಶಿಸಿ ಅವರು ಮಾತನಾಡಿದರು. …
Read More »ಕಾಳಭೈರವ ಮಂದಿರದಲ್ಲಿ ನಾಥ್ ಪಂಥಿಯ ರಾವುಳ ಸಮಾಜದ ವತಿಯಿಂದ ಶ್ರೀ ಕಾಳಭೈರವ ಜಯಂತಿಯನ್ನು ಆಚರಿಸಲಾಯಿತು.
ಬೆಳಗಾವಿ ಶಹಪುರದಲ್ಲಿರುವ ಶ್ರೀ ಕಾಳಭೈರವ ಮಂದಿರದಲ್ಲಿ ನಾಥ್ ಪಂಥಿಯ ರಾವುಳ ಸಮಾಜದ ವತಿಯಿಂದ ಶ್ರೀ ಕಾಳಭೈರವ ಜಯಂತಿಯನ್ನು ಆಚರಿಸಲಾಯಿತು. ಬೆಳಗಾವಿ ಶಹಪುರದಲ್ಲಿರುವ ಶ್ರೀ ಕಾಳಭೈರವ ಮಂದಿರದಲ್ಲಿ ಶ್ರೀ ಕಾಳ ಭೈರವ ಜಯಂತಿಯ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶುಕ್ರವಾರದಿಂದಲೇ ಅಭಿಷೇಕ್, ಪೂಜೆ, ಮಹಾಆರತಿ, ಮಹಾಪ್ರಸಾದ ವಿತರಣೆ ಇನ್ನುಳಿದ ಕಾರ್ಯಕ್ರಮಗಳು ನಡೆದವು. ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಮಂದಿರ ವ್ಯವಸ್ಥಾಪನೆ ಸಮಿತಿಯ ಸಲಹೆಗಾರ ಶ್ರೀಕಾಂತ್ ಕಾಕತಿಕರ್ ಅವರು ನಾಥ್ …
Read More »ಮೂಡಲಗಿ ಪಟ್ಟಣದ ಆರ್ಡಿಎಸ್ ಶಿಕ್ಷಣ ಸಂಸ್ಥೆ ಆವರಣದ ಪ್ರೊ. ಕೆ.ಜಿ. ಕುಂದಣಗಾರ ವೇದಿಕೆಯಲ್ಲಿ ಆರಂಭವಾದ ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನ
ಮೂಡಲಗಿ (ಪ್ರೊ. ಕೆ.ಜಿ.ಕುಂದಣಗಾರ ಪ್ರಧಾನ ವೇದಿಕೆ): ಮೂಡಲಗಿ ಪಟ್ಟಣದ ಆರ್ಡಿಎಸ್ ಶಿಕ್ಷಣ ಸಂಸ್ಥೆ ಆವರಣದ ಪ್ರೊ. ಕೆ.ಜಿ. ಕುಂದಣಗಾರ ವೇದಿಕೆಯಲ್ಲಿ ಆರಂಭವಾದ ಬೆಳಗಾವಿ ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕನ್ನಡಾಭಿಮಾನಿಗಳ ಸಮ್ಮುಖದಲ್ಲಿ ವಿದ್ಯುಕ್ತವಾಗಿ ಚಾಲನೆ ದೊರೆಯಿತು. ಪ್ರೊ. ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಪ್ರೊ. ಚಂದ್ರಶೇಖರ ಅಕ್ಕಿ ಮಾತನಾಡಿ, ಯಾವುದೇ ಒಂದು ಭಾಷೆಯ ಅಳಿವು-ಉಳಿವಿನ ಮೂಲ ಸಮಸ್ಯೆ ಶಿಕ್ಷಣ ಮಾಧ್ಯಮದಲ್ಲಿಯೇ ಇರುತ್ತದೆ. ಇಂಗ್ಲಿಷ್ ಭಾಷೆಗೆ ಈಗಾಗಲೇ ಜಗತ್ತಿನ ಬಹಳಷ್ಟು ಭಾಷೆಗಳು …
Read More »ಪುರೋಹಿತ್ ಫುಡ್ ಪ್ಲಾಜಾ ಎದುರು ಅಸ್ವಚ್ಚತೆ 5,000 ದಂಡವನ್ನು ವಿಧಿಸಿದ ಆಯುಕ್ತರಾದ ಶುಭಾ. ಬಿ
ಬೆಳಗಾವಿ ಉದ್ಯಮಬಾಗ ಪ್ರದೇಶದಲ್ಲಿ ಅಸ್ವಚ್ಛತೆಯನ್ನ ನಿರ್ಮಿಸಿದ್ದ ಅಂಗಡಿಕಾರನಿಗೆ ಮಹಾನಗರ ಪಾಲಿಕೆಯು 5,000 ದಂಡವನ್ನು ವಿಧಿಸಿದೆ. ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತರಾದ ಶುಭಾ. ಬಿ ಅವರು ಇಂದು ಸಿ ಟಿ ರೌಂಡ್ ನಡೆಸುತ್ತಿದ್ದಾಗ, ಉದ್ಯಮಬಾಗ ಪ್ರದೇಶದಲ್ಲಿರುವ ಪುರೋಹಿತ್ ಫುಡ್ ಪ್ಲಾಜಾ ಎದುರು ಅಸ್ವಚ್ಚತೆ ಪಸರಿಸಿರುವುದನ್ನ ಕಂಡು ಅಂಗಡಿಕಾರನನ್ನು ತರಾಟೆಗೆ ತೆಗೆದುಕೊಂಡರು. ನಂತರ ಅಂಗಡಿಕಾರನಿಗೆ 5,000ಗಳ ತಂಡವನ್ನು ವಿಧಿಸಿದರು. ಪ್ರತಿದಿನ ಬೆಳಗಿನ ಜಾವ ಬರುವ ಬೆಳಗಾವಿ ಮಹಾನಗರ ಪಾಲಿಕೆಯ ತ್ಯಾಜ್ಯ ವಿಲೇವಾರಿ ಗಂಟೆ …
Read More »ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಮತ್ತೆರಡು ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ
ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಬ್ಯಾಡ್ಮಿಂಟನ್ ಆಟಗಾರರಿಗೆ ಅನುಕೂಲವಾಗುವಂತೆ ಮತ್ತೆರಡು ಬ್ಯಾಡ್ಮಿಂಟನ್ ಕೋರ್ಟ್ ನಿರ್ಮಾಣ ಮಾಡುವ ಉದ್ದೇಶದಿಂದ ಇಂದು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಲಾಯಿತು. ಈ ಸಂದರ್ಭದಲ್ಲಿ ಕಾಗವಾಡ ಶಾಸಕ ರಾಜು ಕಾಗೆ, ಶಿಗ್ಗಾಂವಿ ಕಾಂಗ್ರೆಸ್ ಅಭ್ಯರ್ಥಿ ಪಠಾಣ, ಯುವನಾಯಕರಾದ ರಾಹುಲ ಜಾರಕಿಹೊಳಿ ಹಾಗೂ ಅನೇಕ ಮುಖಂಡರು ಉಪಸ್ಥಿತರಿದ್ದರು.
Read More »ಬೆಳಗಾವಿಯ ಮಹೇಶ್ ಫೌಂಡೇಶನ್ ಅವರ ಮೈಬ್ಲಡ್ ಚಾರಿಟೇಬಲ್ ಬ್ಲಡ್ ಬ್ಯಾಂಕ್ನ ನೂತನ ರಕ್ತ ಸಂಗ್ರಹಣಾ ಮತ್ತು ಸಾರಿಗೆ ವಾಹನವನ್ನು ಇಂದು ಉದ್ಘಾಟಿಸಿ,ಶುಭ ಹಾರೈಸಿದೆ.
ಬೆಳಗಾವಿಯ ಮಹೇಶ್ ಫೌಂಡೇಶನ್ ಅವರ ಮೈಬ್ಲಡ್ ಚಾರಿಟೇಬಲ್ ಬ್ಲಡ್ ಬ್ಯಾಂಕ್ನ ನೂತನ ರಕ್ತ ಸಂಗ್ರಹಣಾ ಮತ್ತು ಸಾರಿಗೆ ವಾಹನವನ್ನು ಇಂದು ಉದ್ಘಾಟಿಸಿ, ಫೌಂಡೇಶನ್ ಅವರ ಸಾಮಾಜಿಕ ಚಿಂತನೆಯ ಈ ಮಹತ್ವದ ಹೆಜ್ಜೆಯನ್ನು ಶ್ಲಾಘಿಸಿ ಶುಭ ಹಾರೈಸಿದೆ. ರಕ್ತದಾನಿಗಳಿಂದ ರಕ್ತವನ್ನು ಸಂಗ್ರಹಿಸಿ, ಅವಶ್ಯಕತೆ ಇದ್ದ ಕಡೆ ಸಾಗಿಸುವ ಫೌಂಡೇಶನ್ ಅವರ ಸಾಮಾಜಿಕ ಕಾರ್ಯಕ್ಕೆ ಈ ವಾಹನ ಸಹಕಾರಿಯಾಗಲಿದೆ ಮತ್ತು ಅಗತ್ಯವಿರುವ ರೋಗಿಗಳಿಗೆ ಸಕಾಲಿಕ ಸಹಾಯ ದೊರಕುತ್ತದೆ ಎಂದು ಭಾವಿಸುತ್ತೇನೆ. ಈ ವೇಳೆ …
Read More »ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ 14 ನೇ ಪುಣ್ಯಸ್ಮರಣೆ 7 ಬಾರಿ ಸಂಸದರಾಗಿ ಮಾಡಿದ ಕಾರ್ಯ ಅಮೂಲ್ಯ – ಸಚಿವ ಸತೀಶ್ ಜಾರಕಿಹೊಳಿ
ಮಾಜಿ ಕೇಂದ್ರ ಸಚಿವ ಬಿ. ಶಂಕರಾನಂದ 14 ನೇ ಪುಣ್ಯಸ್ಮರಣೆ 7 ಬಾರಿ ಸಂಸದರಾಗಿ ಮಾಡಿದ ಕಾರ್ಯ ಅಮೂಲ್ಯ – ಸಚಿವ ಸತೀಶ್ ಜಾರಕಿಹೊಳಿ ಬೆಳಗಾವಿ ಜಿಲ್ಲೆಯ ಕೀರ್ತಿ ರಾಷ್ಟ್ರಾದ್ಯಂತ ಬೆಳಗಿಸಿದ ಮಹಾ ವ್ಯಕ್ತಿ ಬಿ ಶಂಕರಾನಂದ ಅವರ 14ನೇ ಪುಣ್ಯಸ್ಮರಣೆ ಯನ್ನು ಅವರ ಸಹ ಕಣಗಲಾ ಗ್ರಾಮದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಸಾನಿಧ್ಯ ವಹಿಸಿದ ಶಿವಲಿಂಗೇಶ್ವರ ಮಹಾಸ್ವಾಮಿಗಳು ಸಿದ್ಧ ಸಂಸ್ಥಾನ ಮಠ ನಿಡಸೋಶಿ ಇವರು ಮಾತನಾಡಿ ಬಿ ಶಂಕರನಂದ ಬೆಳಗಾವಿ …
Read More »ರಾಯಬಾಗ ಪೊಲೀಸರಿಂದ 7.82ಲಕ್ಷ ಮೊತ್ತದ ಗಾಂಜಾ ವಶ ಆರೋಪಿಗಳ ಬಂಧನ
ರಾಯಬಾಗ ಪೊಲೀಸರಿಂದ 7.82ಲಕ್ಷ ಮೊತ್ತದ ಗಾಂಜಾ ವಶ ಆರೋಪಿಗಳ ಬಂಧನ ರಾಯಬಾಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ನಂದಿಕುರಳಿ ಗ್ರಾಮ ಹದ್ದಿ ಜಮೀನದಲ್ಲಿ ಸುಮಾರು 7.82ಲಕ್ಷ ಮೊತ್ತದ ಗಾಂಜಾ ವಶಪಡಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಮಂಗಳವಾರ ಬೆಳಗ್ಗೆ ತಾಲೂಕಿನ ನಂದಿಕುರಳಿ ಗ್ರಾಮ ಹದ್ದಿ ಜಮೀನ ರಿ.ಸ ನಂ. 303/5 ನೇದ್ದರಲ್ಲಿ ರಾಯಪ್ಪ ಸತ್ಯಪ್ಪ ತೋಳಿ ಸಾ: ಕಂಚಕರವಾಡಿ ಇವನು ತನ್ನ ಪಾಲಿನಿಂದ ಮಾಡಿದ ಜಮೀನದಲ್ಲಿ ಕಬ್ಬಿನ ಬೆಳೆಯಲ್ಲಿ ಅನಧೀಕೃತವಾಗಿ ಗಾಂಜಾಗೆ ಹೋಲುವ …
Read More »ಶೀಘ್ರ ಕನಕ ಭವನ ನಿರ್ಮಾಣ: ಪ್ರಕಾಶ ಹುಕ್ಕೇರಿ
ಚಿಕ್ಕೋಡಿ: ಹಾಲುಮತ ಸಮಾಜದವರಿಗೆ ಅನುಕೂಲದ ದೃಷ್ಟಿಯಿಂದ ಚಿಕ್ಕೋಡಿ ಪಟ್ಟಣದಲ್ಲಿ ಹೈಟೆಕ್ ಕನಕ ಭವನ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದೆ. ಶೀಘ್ರದಲ್ಲಿ ಕನಕ ಭವನ ನಿರ್ಮಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಕರ್ನಾಟಕ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ 2 ಪ್ರಕಾಶ ಹುಕ್ಕೇರಿ ಹೇಳಿದರು. ಪಟ್ಟಣದ ಐಎಂಎ ಸಭಾಭವನದಲ್ಲಿ ತಾಲ್ಲೂಕು ಆಡಳಿತದಿಂದ ಹಮ್ಮಿಕೊಂಡ ಸಂತ ಶ್ರೇಷ್ಠ ಕನಕದಾಸ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಪಟ್ಟಣದಲ್ಲಿ ಕನಕ ಭವನ, ವಾಲ್ಮೀಕಿ ಭವನ ನಿರ್ಮಾಣದ ಭರವಸೆ …
Read More »ಸೌಕರ್ಯ, ಸಿಬ್ಬಂದಿ: ಕೊರತೆ ಆಸ್ಪತ್ರೆಗೇ ಬೇಕಿದೆ ಚಿಕಿತ್ಸೆ!
ಚಿಕ್ಕೋಡಿ: ಪಟ್ಟಣದ ಹೊರವಲಯದಲ್ಲಿ ₹20 ಕೋಟಿ ವೆಚ್ಚದಲ್ಲಿ ಐದು ಎಕರೆಯಲ್ಲಿ ತಲೆ ಎತ್ತಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉದ್ಘಾಟನೆ ಆಗದಿದ್ದರೂ, ಸೇವೆ ಆರಂಭಿಸಿ ತಿಂಗಳಾಗಿದೆ. ಒಳರೋಗಿಗಳ ವಿಭಾಗ ಕಾರ್ಯಾರಂಭ ಮಾಡಿದ್ದು, ವೈದ್ಯರು, ಸಿಬ್ಬಂದಿ ಹಾಗೂ ಮೂಲಸೌಕರ್ಯ ಕೊರತೆ ಎದ್ದು ಕಾಣುತ್ತಿದೆ. 100 ಹಾಸಿಗೆಗಳ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಅ.17ರಿಂದ ನ.16ರವರೆಗೆ 35 ಹೆರಿಗೆಯಾಗಿವೆ. ಈ ಪೈಕಿ 12 ಸಿಸೇರಿಯನ್ ಹೆರಿಗೆಯಾಗಿವೆ. ಆದರೆ, ಆರೋಗ್ಯ ಮತ್ತು …
Read More »