ಚಿಕ್ಕೋಡಿ: ‘ಲಿಂಗಾಯತ ಸಮಾಜ ಉಚಿತವಾಗಿ ಅನ್ನದಾಸೋಹ ಮಾಡುವ ಮೂಲಕ ಹೆಸರಾಗಿದ್ದು, ಕೆಎಲ್ಇ ಸಂಸ್ಥೆ 300ಕ್ಕೂ ಹೆಚ್ಚು ಅಂಗ ಸಂಸ್ಥೆಗಳ ಮೂಲಕ ನಾಡಿಗೆ ಜ್ಞಾನ ದಾಸೋಹ ಮಾಡುತ್ತಿದೆ’ ಎಂದು ಸಾಹಿತಿ ರಾಮಕೃಷ್ಣ ಮರಾಠೆ ಹೇಳಿದರು. ಪಟ್ಟಣದ ಬಿ.ಕೆ ಕಾಲೇಜಿನಲ್ಲಿ ಹಮ್ಮಿಕೊಂಡ 109ನೇ ಕೆಎಲ್ಇ ಸಂಸ್ಥೆಯ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ‘ಶಿಕ್ಷಣ, ವೈದ್ಯಕೀಯ, ಸಮಾಜ ಸೇವೆಯಲ್ಲಿ ಕೆಎಲ್ಇ ಸಂಸ್ಥೆ ತನ್ನದೇ ಆದ ಕೊಡುಗೆಯನ್ನು ದೇಶ ವಿದೇಶಗಳಲ್ಲಿ ನೀಡುತ್ತಿದೆ’ ಎಂದರು. …
Read More »John Michael D’Cunh ಟೀಕೆ;ಜೋಶಿ ತತ್ ಕ್ಷಣ ರಾಜೀನಾಮೆ ನೀಡಲಿ: ಎಚ್.ಕೆ. ಪಾಟೀಲ್
ಗದಗ: ಸಂವಿಧಾನ ಎತ್ತಿ ಹಿಡಿಯುವ, ನ್ಯಾಯಾಂಗದ ಬಗ್ಗೆ ಪ್ರಶ್ನಿಸಬಾರದು ಹಾಗೂ ಗೌರವದಿಂದ ಇರಬೇಕಾದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಜಸ್ಟಿಸ್ ಮೈಕೆಲ್ ಕುನ್ನಾ ಅವರ ಬಗ್ಗೆ ಏಜೆಂಟ್ ಎಂದು ಹೇಳಿರುವುದು, ಆಯೋಗದ ಬಗ್ಗೆ ಲಘುವಾಗಿ ಟೀಕೆ ಮಾಡಿರುವುದು ಅತ್ಯಂತ ದುರ್ದೈವದ ಸಂಗತಿಯಾಗಿದ್ದು, ಪ್ರಹ್ಲಾದ್ ಜೋಶಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾನೂನು, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ್ ಆಗ್ರಹಿಸಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ …
Read More »ಖಾವಿಧಾರಿಗಳಿಂದ ದೇಹದಾನ ಜಾಗೃತಿ
ಬೆಳಗಾವಿ: ಜಿಲ್ಲೆಯಲ್ಲಿ ಕೆಲವು ಮಠಾಧೀಶರು ಧರ್ಮ ಪ್ರಸಾರದ ಜತೆಗೆ ದೇಹದಾನದ ಕುರಿತು ಜಾಗೃತಿ ಮೂಡಿಸುತ್ತಿದ್ದಾರೆ. ‘ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಿ. ಮೌಢ್ಯದಿಂದ ಹೊರಬನ್ನಿ’ ಎಂದು ಕರೆ ಕೊಟ್ಟಿದ್ದಾರೆ. 2017ರಲ್ಲಿ ಇಲ್ಲಿನ ಕಾರಂಜಿಮಠದ ಗುರುಸಿದ್ಧ ಸ್ವಾಮೀಜಿ, 2019ರಲ್ಲಿ ರಾಮದುರ್ಗ ತಾಲ್ಲೂಕಿನ ನಾಗನೂರಿನ ಗುರುಬಸವ ಮಠದ ಬಸವಪ್ರಕಾಶ ಸ್ವಾಮೀಜಿ ದೇಹದಾನ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ. 2011ರಲ್ಲಿ ಮುನವಳ್ಳಿಯ ಸೋಮಶೇಖರ ಮಠದ ಮುರುಘೇಂದ್ರ ಸ್ವಾಮೀಜಿ ನೇತ್ರದಾನ, 2019ರಲ್ಲಿ ನಾಗನೂರಿನ ಬಸವಗೀತಾ ತಾಯಿ ಚರ್ಮ ಮತ್ತು ನೇತ್ರದಾನ ಮಾಡುವುದಾಗಿ ವಾಗ್ದಾನ ಮಾಡಿದ್ದಾರೆ. ಇದರಿಂದ ಪ್ರೇರಣೆಗೊಂಡ …
Read More »ಬೆಳಗಾವಿ: ಮೂವರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತ ದಾಳಿ
ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯ ಮೂರು ಕಡೆ ಮೂವರು ಅಧಿಕಾರಿಗಳ ಮನೆಗಳ ಮೇಲೆ ಲೋಕಾಯುಕ್ತರು ಮಂಗಳವಾರ ದಾಳಿ ನಡೆಸಿದರು. ಸದ್ಯ ಬೆಂಗಳೂರಿನಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿರುವ ವೆಂಕಟೇಶ ಮಜುಂದಾರ್ ಅವರ ಬೆಳಗಾವಿ ಮನೆ ಮೇಲೆ ದಾಳಿ ನಡೆದಿದೆ. ಈ ಮೊದಲು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದ ವೆಂಕಟೇಶ ಇಲ್ಲೂ ಮನೆ ಖರೀದಿಸಿದ್ದಾರೆ. ಗೋವಿಂದ ಹನುಮಂತಪ್ಪ ಭಜಂತ್ತಿ ಅವರ ಮನೆ ಇನ್ನೊಂದೆಡೆ, ನಿಪ್ಪಾಣಿ ತಾಲ್ಲೂಕಿನ ಬೋರಗಾಂವ ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಶಿವಪ್ಪ ಅವರ …
Read More »ಸೀಟಿಗಾಗಿ ರೈಲಿನಲ್ಲಿ ಹೊಡೆದಾಡಿಕೊಂಡ ಪ್ರಯಾಣಿಕರು
ಬೆಳಗಾವಿ: ರೈಲಿನಲ್ಲಿ ಪ್ರಯಾಣಿಕರು ಸೀಟಿಗಾಗಿ ಪರಸ್ಪರ ಹೊಡೆದಾಡಿಕೊಂಡ ಘಟನೆ ಬೆಳಗಾವಿ ರೈಲ್ವೆ ನಿಲ್ದಾಣದ ರೈಲಿನಲ್ಲಿ ನಡೆದಿದೆ. ಬೆಳಗಾವಿಯಿಂದ ಕೆಎಸ್ಆರ್ ಬೆಂಗಳೂರಿಗೆ ಹೊರಟಿದ್ದ ಸೂಪರ್ ಫಾಸ್ಟ್ ರೈಲಿನಲ್ಲಿ ಸೀಟಿಗಾಗಿ ಇಬ್ಬರು ಪ್ರಯಾಣಿಕರ ನಡುವೆ ವಾಗ್ವಾದ ನಡೆದು ನಂತರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ಅವಾಚ್ಯ ಶಬ್ದಗಳಿಂದ ನಿಂದನೆ ಮೂಲಕ ಇಬ್ಬರೂ ಹೊಡೆದಾಡಿಕೊಂಡರು. ಪ್ರಯಾಣಿಕರು ಬಡಿದಾಡಿಕೊಳ್ಳುವ ಮತ್ತೊಬ್ಬ ಪ್ರಯಾಣಿಕ ಮೊಬೈಲ್ ನಲ್ಲಿ ಇದನ್ನು ಸೆರೆ ಹಿಡಿದಿದ್ದಾರೆ. ರೈಲ್ವೆ ಪೋಲಿಸರು ಬಂದು …
Read More »ಮರಾಠ ರೆಜಿಮೆಂಟ್ನಲ್ಲಿ ನೇಮಕಾತಿ ರಾಲಿ; ಯುವಕರಿಂದ ನೂಕುನುಗ್ಗಲು, ತಳ್ಳಾಟ
ಬೆಳಗಾವಿ: ನಗರದ ಕ್ಯಾಂಪ್ ಪ್ರದೇಶದಲ್ಲಿ ಮರಾಠ ರೆಜಿಮೆಂಟ್ ನಲ್ಲಿ ಸೇನಾ ನೇಮಕಾತಿ ಮುಕ್ತ ರಾಲಿ ನಡೆಯುತ್ತಿದ್ದು, ಸುಮಾರು ಮೂವತ್ತು ಸಾವಿರಕ್ಕೂ ಅಧಿಕ ಯುವಕರು ಭಾಗಿಯಾಗಿದ್ದಾರೆ. ಮಹಾರಾಷ್ಟ್ರ ಮತ್ತು ಉತ್ತರ ಕರ್ನಾಟಕ ಭಾಗದ ಅರ್ಜಿ ಹಾಕಿದ್ದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಆದರೆ ಏಕಾಏಕಿ ಯುವಕರು ಸೇರಿದ್ದರಿಂದ ನೂಕು ನುಗ್ಗಲು, ತಳ್ಳಾಟ ನೂಕಾಟ ನಡೆದಿದೆ. ಈ ವೇಳೆ ಇಬ್ಬರು ಯುವಕರಿಗೆ ಗಾಯವಾಗಿದೆ. ನೂಕು ನುಗ್ಗಲು ಹಿನ್ನೆಲೆಯಲ್ಲಿ ಪೊಲೀಸರು ಹಾಗೂ ಸೈನಿಕರು …
Read More »ವಕ್ಫ್ ಕಾಯ್ದೆ ರದ್ದಿಗೆ ಆಗ್ರಹಿಸಿ ನ.12ರಂದು ಪ್ರತಿಭಟನಾ ಸಭೆ
ಬೆಳಗಾವಿ: ‘ವಕ್ಫ್ ಕಾಯ್ದೆ ರದ್ದುಪಡಿಸಬೇಕು ಒತ್ತಾಯಿಸಿ ಹಾಗೂ ಈ ಕಾಯ್ದೆಯಿಂದ ಹಿಂದೂ ಧಾರ್ಮಿಕ ಸಂಸ್ಥೆಗಳ ಮೇಲೆ ಆಗುತ್ತಿರುವ ಅನ್ಯಾಯದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವುದಕ್ಕಾಗಿ ಇಲ್ಲಿನ ಸಂಭಾಜಿ ಉದ್ಯಾನದಲ್ಲಿ ನ.12ರಂದು ಪ್ರತಿಭಟನಾ ಸಭೆ ಹಮ್ಮಿಕೊಂಡಿದ್ದೇವೆ’ ಎಂದು ನಾಗರಿಕ ಹಿತರಕ್ಷಣಾ ಸಮಿತಿ ಮುಖಂಡ ಬಸವರಾಜ ಭಾಗೋಜಿ ಹೇಳಿದರು. ಇಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಹಾರಾಷ್ಟ್ರದ ಕೊಲ್ಹಾಪುರದ ಕನ್ಹೇರಿಮಠದ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮೀಜಿ ಸಭೆ ಉದ್ದೇಶಿಸಿ ಮಾತನಾಡುವರು. ಜಿಲ್ಲೆಯ ವಿವಿಧ ಮಠಾಧೀಶರು, ಸಂತರು, …
Read More »ಕಲಕಾಂಬ ಗ್ರಾ.ಪಂ ಕಟ್ಟಡಕ್ಕೆ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು
ಬೆಳಗಾವಿ: ತಾಲ್ಲೂಕಿನ ಕಲಕಾಂಬ ಗ್ರಾಮ ಪಂಚಾಯಿತಿ ಕಟ್ಟಡದೊಳಗೆ ಶುಕ್ರವಾರ ತಡರಾತ್ರಿ ದುಷ್ಕರ್ಮಿಗಳು ಪೆಟ್ರೋಲ್ ಬಾಂಬ್ ಎಸೆದು ಬೆಂಕಿ ಹಚ್ಚಲು ಯತ್ನಿಸಿದ್ದಾರೆ. ಕಚೇರಿಯೊಳಗಿನ ಕೆಲ ಪೀಠೋಪಕರಣಗಳಿಗೆ ಹಾನಿಯಾಗಿದೆ. ಸಿಸಿಟಿವಿ ಕ್ಯಾಮೆರಾ ಕೂಡ ಕಿತ್ತುಕೊಂಡು ಹೋಗಿದ್ದಾರೆ. ಘಟನೆ ಶನಿವಾರ ಬೆಳಿಗ್ಗೆಯೇ ಜನರಿಗೆ ಗೊತ್ತಾಗಿದೆ. ಬಿಯರ್ ಬಾಟಲಿಯಲ್ಲಿ ಪೆಟ್ರೋಲ್ ತುಂಬಿ, ಅದಕ್ಕೆ ಬೆಂಕಿ ಹಚ್ಚಿ ಗ್ರಾಮ ಪಂಚಾಯಿತಿ ಕಟ್ಟಡದ ಕಿಟಕಿಗೆ ಎಸೆಯಲಾಗಿದೆ. ಕಿಟಕಿಗೆ ಹೊತ್ತಿಕೊಂಡ ಬೆಂಕಿ ಕೆಲ ನಿಮಿಷಗಳ ಬಳಿಕ ತಾನಾಗಿಯೇ ನಂದಿದೆ. ಅದರ …
Read More »ರಾಣಿ ಚನ್ನಮ್ಮ ಪ್ರತಿಮೆ ಪ್ರತಿಷ್ಠಾಪನೆ: ಜನ- ಪೊಲೀಸರ ಮಧ್ಯೆ ವಾಗ್ವಾದ
ಬೆಳಗಾವಿ: ತಾಲ್ಲೂಕಿನ ಕಣಬರಗಿಯ ಮುಖ್ಯವೃತ್ತದಲ್ಲಿ ಎರಡು ದಿನಗಳ ಹಿಂದೆ ಪ್ರತಿಷ್ಠಾಪಿಸಿದ್ದ ವೀರರಾಣಿ ಕಿತ್ತೂರು ಚನ್ನಮ್ಮನ ಅಶ್ವಾರೂಢ ಪ್ರತಿಮೆ ತೆರವು ಮಾಡುವ ವಿಚಾರಾಗಿ, ಶುಕ್ರವಾರ ತಡರಾತ್ರಿ ಗ್ರಾಮಸ್ಥರು ಹಾಗೂ ಪೊಲೀಸರ ನಡುವೆ ವಾಗ್ವಾದ ನಡೆಯಿತು. ಶನಿವಾರ ನಸುಕಿನವರೆಗೂ ಗ್ರಾಮದಲ್ಲಿ ವಾತಾವರಣ ಬಿಗುವಿನಿಂದ ಕೂಡಿತ್ತು. ಬೆಳಗಾವಿ ನಗರದಿಂದ ಕಣಬರಗಿಗೆ ಪ್ರವೇಶ ಮಾಡುವಾಗ ಸಿಗುವ ಮೊದಲ ವೃತ್ತದಲ್ಲಿ ಯಾವುದೇ ಪ್ರತಿಮೆ ಇರಲಿಲ್ಲ. ಆರಂಭದಿಂದಲೂ ಇದಕ್ಕೆ ರಾಣಿ ಚನ್ನಮ್ಮ ವೃತ್ತ ಎಂದೇ ಹೆಸರಿಡಲಾಗಿದೆ. ಇಲ್ಲಿ ಚನ್ನಮ್ಮನ …
Read More »ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ..!
ಮೂಡಲಗಿ : ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಮಾರ್ಗದರ್ಶಕರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲ್ಲೂಕಿನ ಭೈರನಟ್ಟಿ ಗ್ರಾಮದ ಶ್ರೀ ಜಡಿಸಿದ್ದೇಶ್ವರ ದೇವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು. ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಮಾರ್ಗದರ್ಶಕರಾದ ರಾದ ಸಂತೋಷ ಜಾರಕಿಹೊಳಿ …
Read More »