ಬೆಳಗಾವಿ: ‘ಅಧಿಕಾರಿಗಳ ನಡೆ ಹಳ್ಳಿ ಕಡೆ’ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಬೈಲಹೊಂಗಲ ತಾಲೂಕಿನ ಬೈಲವಾಡ ಗ್ರಾಮದಲ್ಲಿ ಶನಿವಾರ ಗ್ರಾಮ ವಾಸ್ತವ್ಯ ಕೈಗೊಂಡಿದ್ದಾರೆ. ಸರ್ಕಾರಿ ಬಸ್ ನಲ್ಲಿ ಜಿಲ್ಲಾ ಮಟ್ಟದ ಎಲ್ಲ ಅಧಿಕಾರಿಗಳು ಗ್ರಾಮಕ್ಕೆ ಆಗಮಿಸಿದರು. ಗ್ರಾಮಸ್ಥರು ಜಿಲ್ಲಾಧಿಕಾರಿ ಸೇರಿ ಎಲ್ಲ ಇಲಾಖೆಗಳ ಹಿರಿಯ ಅಧಿಕಾರಿಗಳನ್ನು ಸಂತಸದಿಂದ ಬರಮಾಡಿಕೊಂಡರು. ಗ್ರಾಮದ ವರ್ತಿ ಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಜಿಲ್ಲಾಧಿಕಾರಿಗಳು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಆರಂಭಿಸಿದ್ದಾರೆ. ₹ …
Read More »ಮನುವಾದಿಗಳಿಗೆ ಸೆಡ್ಡು ಹೊಡೆದು ಬದುಕುತ್ತೇವೆ : ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಸ್ಮಶಾನ ಭೂಮಿಯಲ್ಲಿ ಅಭಿಮಾನಿಯ ಹೊಸ ಕಾರಿಗೆ ಶಾಸಕ ಚಾಲನೆ
ಬೆಳಗಾವಿ : ‘ ಮನುವಾದಿಗಳಿಗೆ ಹೆದರಿ ಜೀವನ ಮಾಡುವವರು ನಾವಲ್ಲ. ಅವರಿಗೆ ಸೆಡ್ಡು ಹೊಡೆದು ಬದುಕುತ್ತೇವೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ , ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು. ಇಲ್ಲಿನ ಸದಾಶಿವನಗರದ ಸ್ಮಶಾನ ಭೂಮಿಯಲ್ಲಿ ಶನಿವಾರ ಅಭಿಮಾನಿಯ ಹೊಸ ಕಾರಿಗೆ ಚಾಲನೆ ನೀಡಿ ಮಾತನಾಡಿದ ಅವರು, ‘ಮೂಢನಂಬಿಕೆಯ ವಿರುದ್ಧ ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದೇವೆ. ಅದರ ಒಂದು ಭಾಗ ನೂತನ ಕಾರಿಗೆ ಇಂದು ಚಾಲನೆ ನೀಡಲಾಗುತ್ತಿದೆ ಎಂದರು. ‘ಸಂಕೇಶ್ವರದ ವಿಕ್ರಂ ಎಂಬುವವರು …
Read More »ಖಾಕಿ ರೇಡ್ ಬೆಳಗಾವಿಯಲ್ಲಿ ಅನ್ನಭಾಗ್ಯ ಅಕ್ಕಿ ವಶ
ಬೆಳಗಾವಿ ನಗರದ ಖಡೇಬಜಾರ ಪೊಲೀಸ್ ಠಾಣಾ ವ್ಯಾಪ್ತಿಯ ಶೆರಿಗಲ್ಲಿಯಲ್ಲಿ ಸರ್ಕಾರ ವಿತರಿಸುವ ಪಡಿತರ ಅಕ್ಕಿಯನ್ನು ಮಾರಾಟ ಮಾಡುತ್ತಿದ್ದಾಗ ರೇಡ್ ಮಾಡಿ 3 ಜನ ಆರೋಪಿಗಳನ್ನು ಬಂಧಿಸಲಾಗಿದೆ.- 1, ಸುಹಾಸ ಸುರೇಶ್ ಪಿಳವಕರ, ಸಾ: ವಡಗಾಂವಿ, ಅನಂ-2 ಮಹಾದೇವ ಲಕ್ಷ್ಮಣ ಪಾಟೀಲ್, ಸಾ: ಧಾಮನೆ, ಹಾಗೂ ಆರೋಪಿ-3 ಅಹಮದ ಬಸೀರ ಅಹಮದ, ಸಾ: ವೀರಭದ್ರನಗರ, ಬೆಳಗಾವಿ ರವರನ್ನು ಬಂಧಿಸಲಾಗಿದೆ ಖಡೇಬಜಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸಪೆಕ್ಟರ್ ಶ್ರೀ ದೀರಜ್ ಬಿ ಶಿಂಧೆ …
Read More »ಅಕ್ರಮ ಸಂಬಂಧ: ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದ ಜೋಡಿಯನ್ನ ಟ್ರ್ಯಾಕ್ಟರ್ ಗೆ ಕಟ್ಟಿ ಹಾಕಿದ ಗ್ರಾಮಸ್ಥರು
ಬೆಳಗಾವಿ: ವಿವಾಹೇತರ ಸಂಬಂಧ ಹೊಂದಿದ್ದ ಜೋಡಿಯನ್ನ ಗ್ರಾಮಸ್ಥರು ರೆಡ್ ಹ್ಯಾಂಡ್ ಆಗಿ ಹಿಡಿದು ಟ್ಯಾಕ್ಟರ್ ಗೆ ಕಟ್ಟಿ ಹಾಕಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ರಾಮದುರ್ಗ ತಾಲೂಕಿನ ಮುರಕಟನಾಳ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಘಟನೆ ಸಂಭವಿಸಿದೆ. ಚುಂಚನೂರ ಗ್ರಾಮದ ಭೀಮಸಿ ಜೆಟ್ಟೆನ್ನವರ್ ಎಂಬಾತ ಮುರಕಟನಾಳದ ವಿವಾಹಿತ ಮಹಿಳೆ ಜತೆ ಅಕ್ರಮ ಸಂಬಂಧ ಹೊಂದಿದ್ದ. ನಿನ್ನೆ ತಡರಾತ್ರಿ ಮನೆಯವರ ಕಣ್ತಪ್ಪಿಸಿ ಹೊರ ಹೊದಾಕೆ ಮುರಕಟನಾಳ ಗ್ರಾಮ ಹೊರವಲಯದ ಹೊಲದಲ್ಲಿ ಪ್ರಿಯಕರನನ್ನು ಭೇಟಿ …
Read More »ಬೈಲವಾಡ ಗ್ರಾಮದಲ್ಲಿ ಜನರ ಸಮಸ್ಯೆಗಳಿಗೆ ಜಿಲ್ಲಾಧಿಕಾರಿಗಳು ಧ್ವನಿಯಾದರು,ಈ ಗ್ರಾಮದ ಯುವಕ ಡಿಸಿ ಹಿರೇಮಠ ಅವರನ್ನು ಭೇಟಿಯಾಗಿ,ತಂದೆ ಇಲ್ಲ ತಾಯಿಗೆ ಅನಾರೋಗ್ಯ,ನಾನು ಇರೋದು ಬಾಡಿಗೆ ಮನೆಯಲ್ಲಿ ನನಗೊಂದು ಆಶ್ರಯ ಮನೆ ಕೊಡಿ ಎಂದು ಗ್ರಾಮದ ಬಾಲಕನೊಬ್ಬ ಡಿಸಿಗೆ ಮನವಿ ಅರ್ಪಿಸಿ ಎಲ್ಲರ ಗಮನ ಸೆಳೆದಿದ್ದಾನೆ.ಇದೇ ಗ್ರಾಮದಲ್ಲಿ ವಾಸ್ತವ್ಯ ಮಾಡಲಿರುವ ಜಿಲ್ಲಾಧಿಕಾರಿಗಳು ಈ ಬಾಲಕನ ಸಮಸ್ಯೆಗೆ ಸ್ಪಂದನೆ ಮಾಡುತ್ತಾರೆಯೋ ಇಲ್ಲವೋ ಕಾದು ನೋಡೋಣ ಬೆಳಗಾವಿ,-ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ಹಳ್ಳಿಯ ಕಡೆ ಹೆಜ್ಜೆ …
Read More »ಗೊಡಚಿನ ಮಲ್ಕಿ ಬಸ್ ಅಪಘಾತ: ಗಾಯಗೊಂಡ ಗಾಯಾಳುಗಳ ಆರೋಗ್ಯ ವಿಚಾರಿಸಿದ ಯುವ ನಾಯಕ ರಾಹುಲ್ ಜಾರಕಿಹೊಳಿ
ಗೋಕಾಕ ತಾಲೂಕಿನ ಗೊಡಚಿನ ಮಲ್ಲಿ ಸಮೀಪ ರಾಜ ರಸ್ತೆ ಸಾರಿಗೆ ಬಸ್ ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಗಾಯಗೊಂಡ ಸುಮಾರು 20ಕ್ಕೂ ಹೆಚ್ಚು ಗಾಯಾಳುಗಳು ನಗರದ ಸರಕಾರಿ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು ಎಲ್ಲಾ ಗಾಯಾಳುಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರ ಪುತ್ರ ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಭೆಟ್ಟಿ ನೀಡಿ ಗಾಯಾಳುಗಳ ಆರೋಗ್ಯವನ್ನು ವಿಚಾರಿಸಿದರು. ಈ ಅಪಘಾತದಲ್ಲಿ ಗಾಯಗೊಂಡ ಹೆಚ್ಚಿನ …
Read More »ಹಿಂಡಲಗಾ ಜೈಲಿನಲ್ಲಿ ಇದ್ದುಕೊಂಡೇ ರೌಡಿಯೊಬ್ಬ ಫೋನ್ ಮಾಡಿ ಧಮಕಿ ಖಾಕಿ ಪಡೆ ಹಿಂಡಲಗಾ ಜೈಲಿನ ಮೇಲೆ ಧಿಡೀರ್ ದಾಳಿ
ಬೆಳಗಾವಿ- ಹಿಂಡಲಗಾ ಜೈಲಿನಲ್ಲಿ ಇದ್ದುಕೊಂಡೇ ರೌಡಿಯೊಬ್ಬ ಫೋನ್ ಮಾಡಿ ಧಮಕಿ ಹಾಕಿದ ಬೆನ್ನಲ್ಲಿಯೇ ಬೆಳಗಾವಿ ಖಾಕಿ ಪಡೆ ಹಿಂಡಲಗಾ ಜೈಲಿನ ಮೇಲೆ ಧಿಡೀರ್ ದಾಳಿ ಮಾಡಿ,ಸುಮಾರು ಐವತ್ತಕ್ಕೂ ಹೆಚ್ಚು ಪೋಲೀಸರು ಜೈಲಿನಲ್ಲಿ ಶೋಧ ಮಾಡಿದಾಗ ಸಿಕ್ಕಿದ್ದು ಒಂದೇ ಒಂದು ಮೋಬೈಲ್… ಯಾಕಂದ್ರೆ ಹಿಂಡಲಗಾ ಜೈಲಿನಲ್ಲಿದ್ದ ರೌಡಿಯೊಬ್ಬ ಫೋನ್ ಮಾಡಿದ್ದು ಹೇಗೆ,ಜೈಲಿನಲ್ಲಿ ಫೋನ್ ಬಂದಿದ್ದು ಎಲ್ಲಿಂದ ಎಂದು ಮಾದ್ಯಗಳು ಪ್ರಶ್ನೆ ಮಾಡಿದ ಹಿನ್ನಲೆಯಲ್ಲಿ ಹಿಂಡಲಗಾ ಜೈಲಿನ ಅಧಿಕಾರಿಗಳು ಎಚ್ಚೆತ್ತುಕೊಂಡು ಸುಧಾರಿಸಿಕೊಂಡ ಸಂಧರ್ಭದಲ್ಲಿಯೇ …
Read More »87.40 ಲಕ್ಷ ರೂ. ವೆಚ್ಚದ ನೂತನ ಶಾಲಾ ಕೊಠಡಿಗಳನ್ನು ಉದ್ಘಾಟಿಸಿದ ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಪ್ರಯಾಣಿಕರ ಅನುಕೂಲಕ್ಕಾಗಿ ಸುಸಜ್ಜಿತ ಬಸ್ ನಿಲ್ದಾಣವನ್ನು ನಿರ್ಮಿಸಲಾಗಿದೆ. ಕೋವಿಡ್ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದ್ದ ಸಾರಿಗೆಗಳನ್ನು ಪ್ರಯಾಣಿಕರು ಮತ್ತು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬಸ್ ಸೇವೆಯನ್ನು ಆರಂಭಿಸುವಂತೆ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಗುರುವಾರದಂದು ಕೌಜಲಗಿಯಲ್ಲಿ ಸಾರಿಗೆ ಇಲಾಖೆಯ ಹಿಂದುಳಿದ ಪ್ರದೇಶಾಭಿವೃದ್ಧಿ ಯೋಜನೆಯಡಿ 85 ಲಕ್ಷ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಿಸಲಾದ ಬಸ್ ನಿಲ್ದಾಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರಯಾಣಿಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಸಾರಿಗೆಗಳನ್ನು ಆರಂಭಿಸಿ ಪ್ರಯಾಣಿಕರಿಗೆ …
Read More »ಸರ್ಕಾರಿ ಬಸ್ ಮರಕ್ಕೆ ಗುದ್ದಿ 40ಕ್ಕೂ ಹೆಚ್ಚು ಜನರಿಗೆ ಗಾಯ.
ಗೋಕಾಕ – ರಸ್ತೆ ಮಧ್ಯೆ ಭೀಕರ ಅಫಘಾತ ಗೋಕಾಕ ಧಿಂದ ಹೋರಾಟ ಬಸ ಪಾಚಾಪೂರ್ ಹಾಗೂ ಗೊಡಚಿನ್ ಮಲಕಿ ಮಾರ್ಗದಿಂದ ಬೆಳಗಾವಿ ಕಡೆಗೆ ಬರುತ್ತಿರುವ ಬಸ ಪಾಟ ಕಟ್ ಆಗಿದೆ ಎಂದು ಅಲ್ಲಿರುವ ಸಾರ್ವಜನಿಕರಿಂದ ಕೇಳಿ ಬರ್ತಿದೆ.. ಇನ್ನೂ ಬಸ್ಸಿನಲ್ಲಿ ಸುಮಾರು 45ಕ್ಕೂ ಹೆಚ್ಚಿನ ಜನ ಪ್ರಯಾಣಿಕರು ಸಂಚರಿಸುತ್ತಿದ್ದು ವಯೋವೃದ್ಧರು ಹಾಗೂ ಶಾಲಾ ಕಾಲೇಜಿನ ಮಕ್ಕಳು ಇದ್ದರೂ, ಬಸ್ ಮರಕ್ಕೆ ಡಿಕ್ಕಿ ಹೊಡೆದು ಭೀಕರ ಗಾಯವಾದ ಜನರನ್ನ ಆಂಬ್ಯುಲೆನ್ಸ್ ಮೂಲಕ …
Read More »ಬೆಳಗಾವಿಯಲ್ಲಿ ಇರುವ ಕಲಾವಿದರಿಗೆ ಒಂದು ಸುವರ್ಣ ಅವಕಾಶ
ಬೆಳಗಾವಿ:ಬೆಳಗಾವಿಯಲ್ಲಿ ಇರುವ ಕಲಾವಿದರಿಗೆ ಒಂದು ಸುವರ್ಣ ಅವಕಾಶ ತಮ್ಮ ಪ್ರತಿಭೆಯನ್ನ ತೋರಿಸಲು ಶಬರಿ ಪ್ರೊಡಕ್ಷನ್ ಅವರು ಚಿನ್ನದ ಚೂರಿ ಎಂಬ ಒಂದು ಕಿರುಚಿತ್ರವನ್ನು ಮಾಡ್ತಿದ್ದಾರೆ. ಈ ಒಂದು ಕಿರುಚಿತ್ರದಲ್ಲಿ ನಟಿಸಲು ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬುದು ಈ ಚಿತ್ರದ ನಿರ್ದೇಶಕರ ಉದ್ದೇಶ ವಾಗಿದೆ. ಇದೆ ಭಾನುವಾರ ಬೆಳಗಾವಿಯ ಜಿಲ್ಲಾ ಪಂಚಾಯತಿ ಕಛೇರಿ ಹತ್ತಿರ ಇರುವ ಶಬರಿ ಸೇವಾ ಕಚೇರಿಯಲ್ಲಿ ತಾವು ಬಂದು ಆಡಿಷನ ನಲ್ಲಿ ಭಾಗವಹಿಸಿ. ನಮ್ಮ ಉತ್ತರ ಕರ್ನಾಟಕದ …
Read More »