ಬೆಳಗಾವಿ – ಏಪ್ರಿಲ್ 17ರಂದು ನಡೆಯಲಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆನ್ನು ಪ್ರತಿಷ್ಠೆಯನ್ನಾಗಿ ತೆಗೆದುಕೊಂಡಿರುವ ಕಾಂಗ್ರೆಸ್, ಈ ಕುರಿತು ತಂತ್ರಗಾರಿಕೆಗೆ ಗುರುವಾರ ರಾತ್ರಿ ಖಾಸಗಿ ಹೊಟೆಲ್ ನಲ್ಲಿ ಸಭೆ ನಡೆಸಿತು. ಬೆಳಗಾವಿ ಲೋಕಸಭೆ ಕ್ಷೇತ್ರದ ಉಪಚುನಾವಣೆ ಅಭ್ಯರ್ಥಿ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಸಚಿವರಾದ ಎಚ್.ಎಂ. ರೇವಣ್ಣ, ರಾಮಲಿಂಗಾರೆಡ್ಡಿ, ಎಂ.ಬಿ. ಪಾಟೀಲ್ ಮೊದಲಾದವರು ಸಭೆಯಲ್ಲಿದ್ದರು. ಡಿ.ಕೆ.ಶಿವಕುಮಾರ ಬುಧವಾರ ರಾತ್ರಿಯಿಂದ ಬೆಳಗಾವಿಯಲ್ಲಿದ್ದು, ಹಲವಾರು ಗಣ್ಯರನ್ನು ಭೇಟಿ ಮಾಡಿದ್ದಾರೆ. …
Read More »ಬೆಳಗಾವಿ ಸಬ ರಿಜಿಸ್ಟರ್ ಕಚೇರಿಯಲ್ಲಿ ಮತ್ತೆ ಲಂಚದ ಹಾವಳಿ ಸಂಕನ್ ಗೌಡ ಹಟಾವೋ ವಿಷ್ಣು ತೀರ್ಥ ಬುಲಾವೋ ಎಂದ ಜನತೆ
ಬೆಳಗಾವಿ: ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ಖಂಡಿಸಿ ವಕೀಲರು ಸಬ್ ರಿಜಿಸ್ಟ್ರಾರ್ ಗೆ ಘೇರಾವ್ ಹಾಕಿ ಪ್ರತಿಭಟನೆ ನಡೆಸಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ದುಡ್ಡು ಕೊಟ್ಟರೆ ಮಾತ್ರ ಜನಸಾಮಾನ್ಯರಿಗೆ ಕೆಲಸ ಮಾಡಿಕೊಡಲಾಗುತ್ತಿದೆ. ಏಜೆಂಟ್ ಗಳ ಹಾವಳಿ ಮಿತಿ ಮೀರಿದ್ದು, ಅಧಿಕಾರಿಗಳು ವಕೀಲರಿಗೂ ಕ್ಯಾರೇ ಎನ್ನುತ್ತಿಲ್ಲ. 5-50 ಸಾವಿರ ರೂಪಾಯಿವರೆಗೆ ಲಂಚ ಪಡೆಯುತ್ತಿದ್ದಾರೆ ಎಂದು ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೊಸದಾಗಿ ವಿವಾಹವಾಗುವ ಜೋಡಿಗಳಿಗೂ ರಜಿಸ್ಟರ್ ಮಾಡಿಕೊಳ್ಳಲು 5 ಸಾವಿರ ಲಂಚಕ್ಕೆ …
Read More »ನಮಗೆ ಲಿಂಗಾಯತ, ಮರಾಠಾ ಸೇರಿದಂತೆ ಎಲ್ಲಾ ಸಮುದಾಯದವರು ಒಂದೆ..: ಡಿ ಕೆ ಶಿವಕುಮಾರ್
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ಡಿ ಕೆ ಶಿವಕುಮಾರ್ ಹೇಳಿಕೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ನಾಯಕರ ಜೊತೆಗೆ ಸಭೆ ಮಾಡುತ್ತೇನೆ. ಈಗಾಗಲೇ ರೈತ ನಾಯಕ ಬಾಬಾಗೌಡ ಪಾಟೀಲ್, ಸೇರಿದಂತೆ ಎಲ್ಲರಿಗೂ ಭೇಟಿ ಆಗುತ್ತಿದ್ದೇನೆ.. ಅನೇಕ ಧರ್ಮ ಪೀಠದ ಸ್ವಾಮೀಜಿಗಳಿಗೆ ಭೇಟಿ ಮಾಡಿದ್ದೇನೆ . ಕಾಂಗ್ರೆಸ್ ಅಭ್ಯರ್ಥಿ ಬಗ್ಗೆ ಉತ್ತಮ ಪ್ರತಿಕ್ರಿಯೆ ಕೊಟ್ಟಿದ್ದಾರೆ.. ದೆಹಲಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ರೂ ಕೇಂದ್ರ ಸರ್ಕಾರ ಅವರು ಜೊತೆಗೆ ಮಾತನಾಡಿಲ್ಲ. ಹೀಗಾಗಿ ರೈತರ ಆಕ್ರೋಶ …
Read More »3ಲಕ್ಷ ಅಂತರದಿಂದ ಸತೀಶ ಜಾರಕಿಹೊಳಿ ಗೆದ್ದು ಬರುತ್ತಾರೆ:M.B. ಪಾಟೀಲ..
ಬೆಳಗಾವಿ ಕಾಂಗ್ರೆಸ್ ಭವನದಲ್ಲಿ ಮಾಜಿ ಸಚಿವ ಎಂ ಬಿ ಪಾಟೀಲ್ ಹೇಳಿಕೆ. ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಗೆ ಅಭ್ಯರ್ಥಿ ಗೆ ವ್ಯಾಪಕವಾಗಿ ಬೆಂಬಲ ಸಿಗುತ್ತಿದೆ.. ಎರಡರಿಂದ ಮೂರು ಲಕ್ಷ ಮತ ಗಳ ಅಂತರಿದಿಂದ ಗೆಲುವು.. ಲಿಂಗಾಯತರು ಕಾಂಗ್ರೆಸ್ ಪರವಾಗಿದ್ದಾರೆ. ಲಕ್ಷ್ಮಿ ಹೆಬ್ಬಾಳ್ಕರ್, ಮಹಾಂತೇಶ್ ಕೌಜಲಗಿ ಲಿಂಗಾಯತ ಶಾಸಕರಿದ್ದಾರೆ. ನಾನು, ಎ. ಬಿ ಪಾಟೀಲ್, ಪ್ರಕಾಶ್ ಹುಕ್ಕೇರಿ ಸೇರಿ ಪ್ರಚಾರ ನಡೆಸುತ್ತೇವೆ. ಸಿದ್ದರಾಮಯ್ಯ ಚುನಾವಣೆ ಪ್ರವಾಸಕ್ಕೆ ಬರ್ತಾರೆ. ಮತ್ತಷ್ಟು ಬಲ …
Read More »ಸರ್ಕಾರ ನಡೆಸುವುದು ನಮಗೆ ಗೊತ್ತಿದೆ: ಮಾಧ್ಯಮದವರ ಪ್ರಶ್ನೆಗೆ ಗರಂ ಆದ ಸಿಎಂ
ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರದ ಹಿನ್ನೆಲೆಯಲ್ಲಿ ಖಾಸಗಿ ವಾಹನ ಕಾರ್ಯಾಚರಣೆ ನಡೆಸುತ್ತಿದ್ದು, ಸಾಕಷ್ಟು ಸರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದರು. ನಗರದ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಅಸುರಕ್ಷಿತ ಪ್ರಯಾಣದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಗರಂ ಆದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸರ್ಕಾರ ನಡೆಸುವುದು ನಮಗೆ ಗೊತ್ತಿದೆ. ನೀವು ಅದರ ಬಗ್ಗೆ ತಲೆ ಕೆಡಿಸಕೊಳ್ಳುವುದು ಬೇಡ. ಸರ್ಕಾರ ಹೇಗೆ ನಡೆಸಬೇಕು ನಮಗೆ ಗೊತ್ತಿದೆ. ಪ್ರಯಾಣಿಕರ ಜವಾಬ್ದಾರಿ …
Read More »ನಾವು ಜಾತಿ ಮೇಲೆ ರಾಜಕಾರಣ ಮಾಡಲ್ಲ, ನಮ್ಮದು ‘ನೀತಿ’ ರಾಜಕಾರಣ: ಡಿ.ಕೆ.ಶಿವಕುಮಾರ್
ಬೆಳಗಾವಿ: ಕಾಂಗ್ರೆಸ್ ಪಕ್ಷ ಜಾತಿಯ ಮೇಲೆ ರಾಜಕೀಯ ಮಾಡುವುದಿಲ್ಲ. ಏನೇ ಇದ್ದರೂ ನಾವು ನೀತಿ ಮೇಲೆ ರಾಜಕಾರಣ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದರು. ಬೆಳಗಾವಿಯಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತದಾನದ ಹಕ್ಕು ಹೊಂದಿರುವ ಲಿಂಗಾಯತರು ನಮ್ಮವರೇ. ಮರಾಠರು ನಮ್ಮ ಅಣ್ಣ-ತಮ್ಮಂದಿರಂತೆ. ನಮಗೆ ಎಲ್ಲರೂ ಒಂದೇ. ಆದರೆ ಬಿಜೆಪಿಯವರೇ ಅವರನ್ನು ಬೇರೆ ಬೇರೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು. ಉಪಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಕಮ್ಯುನಿಷ್ಟ್ ಪಕ್ಷಗಳ ನಾಯಕರು, …
Read More »ಬೈಎಲೆಕ್ಷನ್‍ನಲ್ಲಿ ರೈತಪರ, ಕನ್ನಡಪರ, ಕಮ್ಯುನಿಷ್ಟ ಪಕ್ಷಗಳಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನವಿ
ಬೈಎಲೆಕ್ಷನ್‍ನಲ್ಲಿ ರೈತಪರ, ಕನ್ನಡಪರ, ಕಮ್ಯುನಿಷ್ಟ ಪಕ್ಷಗಳಿಗೆ ಕಾಂಗ್ರೆಸ್ ಬೆಂಬಲಿಸುವಂತೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಮನವಿ
Read More »ಮನೆಗಳ್ಳನ ಬಂಧನ; ೨೩,೧೫,೦೦೦/- ರೂ. ಮೌಲ್ಯದ ಬಂಗಾರದ ಆಭರಣ, ಹಾಗೂ ೬೦ ಸಾವಿರ ನಗದು ವಶಕ್ಕೆ
ಬೆಳಗಾವಿ – ದಿನಾಂಕ:೦೩-೦೪-೨೦೨೧ ರಂದು ಗೌಸಮೋದಿನ ಮೈನುದ್ದಿನ ತೋರಗಲ್ಲ, ಬೆಳಗಾವಿ ಇವರು ದಿನಾಂಕ: ೦೨-೦೪-೨೦೨೧ ರಂದು ರಾತ್ರಿ ವೇಳೆಯಲ್ಲಿ ಸಂಗಮೇಶ್ವರ ನಗರದಲ್ಲಿರುವ ತಮ್ಮ ಮನೆಯಲ್ಲಿದ್ದ ೪೭೦ ಗ್ರಾಂ ಬಂಗಾರದ ಆಭರಣ ಹಾಗೂ ಒಂದು ಲಕ್ಷ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ದೂರಿನನ್ವಯ ಎ.ಪಿ.ಎಮ್.ಸಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು. ಮೊಹ್ಮದಸಲ್ಮಾನ ನಸೀರಅಹ್ಮದ ಅನ್ಸಾರಿ ( ವಯಾ: ೨೨ ವರ್ಷ, ಸಾ: ಸಿಕಂದರಪೂರ, …
Read More »ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ರಮೇಶ್ ಜಾರಕಿಹೊಳಿ ಕೆಲ ದಿನ ಹೋಂ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ
ಬೆಳಗಾವಿ : ತೀವ್ರ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್ ಜಾರಕಿಹೊಳಿ ಡಿಸ್ಚಾರ್ಜ್, ಇನ್ನು ಕೆಲ ದಿನ ಹೋಂ ಕ್ವಾರಂಟೈನ್ ನಲ್ಲಿ ಇರಲಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಗೋಕಾಕ ತಾಲ್ಲೂಕು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. ಏಪ್ರಿಲ್ 4ರಂದು ರಾತ್ರಿ 10.30ರ ಸುಮಾರಿಗೆ ತೀವ್ರ ಉಸಿರಾಟದ ಸಮಸ್ಯೆ ಎದುರಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದ ರಮೇಶ್ ಜಾರಕಿಹೊಳಿ ಬಿಪಿ, ಶುಗರ್ …
Read More »ಅಧಿಕಾರದ ಅವಧಿ ಪೂರೈಸುತ್ತೀರಿ: ಯಡಿಯೂರಪ್ಪ ಅವರಿಗೆ ಜೈನ ಮುನಿ ಆಶೀರ್ವಾದ
ಬೆಳಗಾವಿ: ‘ನೀವು ಅಧಿಕಾರದ ಅವಧಿ ಪೂರೈಸುತ್ತೀರಿ. ಚಿಂತೆ ಬಿಡಿ. ಬಳಿಕ ರಾಜ್ಯಪಾಲ, ಉಪ ರಾಷ್ಟ್ರಪತಿ ಅಥವಾ ರಾಷ್ಟ್ರಪತಿ ಆಗುತ್ತೀರಿ’ ಎಂದು ತಾಲ್ಲೂಕಿನ ಹಲಗಾದ ಸಿದ್ಧಸೇನಾ ಮುನಿ ಅವರು ತಮ್ಮ ಬಳಿಗೆ ಬಂದಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಂಗಳವಾರ ಆಶೀರ್ವಾದ ಮಾಡಿದರು. ‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆಲ್ಲುವ ಬಗ್ಗೆ ಹೇಳಿ’ ಎಂದು ಯಡಿಯೂರಪ್ಪ ಕೇಳಿದಾಗ ಪ್ರತಿಕ್ರಿಯಿಸಿದ ಮುನಿ, ’40 ಸಾವಿರ ಮತಗಳ ಅಂತರದಿಂದ ಮಂಗಲಾ ಅಂಗಡಿ ಗೆಲ್ಲುತ್ತಾರೆ’ …
Read More »