Breaking News

ಬೆಳಗಾವಿ

O.Y.C.ರ್ಯಾಲಿ ಸುಮಾರು 300 ಜನರ ವಿರುದ್ಧ ಪ್ರಕರಣ, ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ: ಲತೀಫ್ ಖಾನ್ ಪಠಾಣ್

ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆ ಪ್ರಚಾರಕ್ಕಾಗಿ ಎಂಐಎಂಐಎಂ ಪಕ್ಷದ ಅಧ್ಯಕ್ಷ ಅಸಾವುದ್ದೀನ್ ಒವೈಸಿ ಪ್ರಚಾರದ ಸಂದರ್ಭದಲ್ಲಿ ಕೊರೋನಾ ನಿಯಮಗಳನ್ನು ಪಾಲಿಸಿಲ್ಲ ಎನ್ನುವ ಕಾರಣದಿಂದ ಸುಮಾರು 300 ಜನರ ವಿರುದ್ಧ ಪ್ರಕರಣ ದಾಖಲಾಗಿತ್ತು. ಲತೀಫ್ ಖಾನ್ ಪಠಾಣ್, ಝೋಯಾ ಡೋಣಿ, ಮುಸ್ತಾಕ್ ಅಹ್ಮದ್ ಶಫಿ ತಹಸಿಲ್ದಾರ್ ಸೇರಿದಂತೆ 300 ಜನರ ಮೇಲೆ ಪ್ರಕರಣ ದಾಖಲಾಗಿತ್ತು. ಕೊರೋನಾ ನಿಯಮ ಉಲ್ಲಂಘಿಸಲಾಗಿದೆ ಮತ್ತು ಚುನಾವಣೆ ಆಯೋಗ ವಿಧಿಸಿದ ಷರತ್ತುಗಳನ್ನು ಪಾಲಿಸಲಾಗಿಲ್ಲ ಎನ್ನುವ …

Read More »

KMFನ್ನು ನಂ.1 ಸಂಸ್ಥೆಯನ್ನಾಗಿ ಪರಿವರ್ತಿಸುವುದೇ ನನ್ನ ಗುರಿ : ಬಾಲಚಂದ್ರ ಜಾರಕಿಹೊಳಿ: ಬಾಲಚಂದ್ರ ಜಾರಕಿಹೊಳಿ

ಹೊರ ದೇಶಗಳಿಗೆ ನಂದಿನಿ ಉತ್ಪನ್ನಗಳ ಮಾರಾಟ ಮಾಡಲು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉತ್ಸುಕತೆ ಹೊಸದಾಗಿ 5 ಸಾವಿರ ನಂದಿನಿ ಮಳಿಗೆಗಳು, 100 ನಂದಿನಿ ಕೆಫೆ ಮೂ ಮಳಿಗೆಗಳ ಆರಂಭಕ್ಕೆ ಕೆಎಂಎಫ್ ಚಿಂತನೆ ಎರಡು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೆಎಂಎಫ್ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ಸಭೆ ನಡೆಸಿದ ಬಾಲಚಂದ್ರ ಜಾರಕಿಹೊಳಿ ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಕೆಎಂಎಫ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ತೃಪ್ತಿ ತಮಗಿದೆ. ನಂದಿನಿ …

Read More »

ಕಿತ್ತೂರು ಶಾಸಕನನ್ನ ಮಹಾರಾಜನಂತೆ ಮೆರೆಸಿದ ಪೊಲೀಸ್ ಅಧಿಕಾರಿಗಳು

ಬೆಳಗಾವಿ: ಜಿಲ್ಲೆಯ ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಅವರ ಹುಟ್ಟುಹಬ್ಬದ ಹಿನ್ನೆಲೆ ಪೊಲೀಸರು ದಂಪತಿಗೆ ಹೂಮಳೆ ಸುರಿಸಿ ಮಹಾರಾಜನಂತೆ ಮೆರೆಸಿದ ಘಟನೆ ನಡೆದಿದೆ. ಇಂದು ಕಿತ್ತೂರು ಶಾಸಕ ಮಹಾಂತೇಶ ದೊಡ್ಡಗೌಡರ ಹುಟ್ಟು ಹಬ್ಬವಿತ್ತು.. ಈ ಹಿನ್ನೆಲೆ ಅವರ ನಿವಾಸಕ್ಕೆ ತೆರಳಿದ ಪೊಲೀಸ್ ಅಧಿಕಾರಿಗಳು ದಂಪತಿಯನ್ನ ಕೂರಿಸಿ ಹೂಮಳೆಗರೆದಿದ್ದಾರೆ. ಬೈಲಹೊಂಗಲ ಡಿಎಸ್​ಪಿ, ಸಿಪಿಐ, ನೇಸರಗಿ ಪಿ.ಎಸ್.ಐ ಹಾಗೂ ಎ.ಎಸ್.ಐ ಭಾಗಿಯಾಗಿದ್ದಾರೆ. ಶಾಸಕ ಮಹಾಂತೇಶ ದೊಡ್ಡಗೌರ್ ಅವರ ಅಂಧಾ ದರ್ಭಾರ್​ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. …

Read More »

ಸವದತ್ತಿ: ಅನ್ನದಾನ ಮಹಾದಾನ ಹೇಳಿಕೆ ಯೊಂದಿಗೆ ಇವತ್ತಿನ ವಿಷಯ

ಸವದತ್ತಿ: ಅನ್ನದಾನ ಮಹಾದಾನ ಹೇಳಿಕೆ ಯೊಂದಿಗೆ ಇವತ್ತಿನ ವಿಷಯ ಮತ್ತೆ ಇವತ್ತು ಶನಿವಾರ ಬಂತು ನಮ್ಮ ತಂಡ ಅನ್ನ ಸಂತರ್ಪಣೆ ಮಾಡಲು ಇವತ್ತು ಸಜ್ಜಾಗಿದ್ದು ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದಲ್ಲಿ ನಮ್ಮ ತಂಡ ಇಂದಿನ ಕಾರ್ಯಕ್ರಮ ರೂಪಿಸಿದೆ   ಹೌದು ಇಂದು ಸವದತ್ತಿ ತಾಲೂಕಿನ ಕಡಬಿ ಗ್ರಾಮದ ಸಿದ್ದಾರೂಢ ಮಠದಲ್ಲಿ ಇಂದಿನ ಅನ್ನ ಸಂತರ್ಪಣೆ ಮಾಡಲು ಶ್ರೀ ಸಂತೋಷ್ ಜಾರಕಿಹೊಳಿ ಅವರ ಆದೇಶದ ಮೇರೆಗೆ ಅಲ್ಲಿ ಎಲ್ಲ ತಂಡ …

Read More »

ನಾಳೆ ವೀಕೆಂಡ್ ಕರ್ಫ್ಯೂ ಇರುವುದಿಲ್ಲ, ತಮ್ಮ ಗಮನಕ್ಕೆ…

ಗೋಕಾಕ ಕೋವಿಡ್ ಮಹಾಮಾರಿ ಮೂರನೇ ಅಲೆಯ ಮುಂಜಾಗ್ರತಾ ಕ್ರಮವಾಗಿ ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಗಡಿ ಜಿಲ್ಲೆ ಬೆಳಗಾವಿ ವೀಕೆಂಡ್ ಕರ್ಪ್ಯೂ ಜಾರಿ ಮಾಡಲಾಗಿತ್ತು. ಮಹಾರಾಷ್ಟ್ರದಲ್ಲಿ ಕೋವಿಡ್ ಪ್ರಕರಣಗಳು ಇಳಿಮುಖ ಹಿನ್ನೆಲೆ ರಾಜ್ಯ ಸರ್ಕಾರ ವೀಕೆಂಡ್ ಕರ್ಪ್ಯೂ ಹಿಂಪಡೆದು ಬೆಳಗಾವಿ ಜಿಲ್ಲೆಯಲ್ಲಿ ಕೋವಿಡ್ ನಿಯಮ ಪಾಲಿಸಿ ವ್ಯಾಪಾರ ವಹಿವಾಟಿಗೆ ಅವಕಾಶ ನೀಡಲಾಗಿದೆ.ಗೋಕಾಕ ತಹಸೀಲ್ದಾರ್ ಪ್ರಕಾಶ್ ಹೊಳೆಪ್ಪಗೋಳ ಪ್ರತಿಕಾಗೋಷ್ಠಿ ತಿಳಿಸಿದ್ದಾರೆ.

Read More »

ಕೃಷ್ಣಾ ನದಿ ನೀರಿನಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ12 ಕೆ.ಜಿ. ತೂಕದ ಬೃಹತ್ ಗಾತ್ರದ ಮೀನು ಸಿಕ್ಕಿದೆ.

ಬೆಳಗಾವಿ: ಕೃಷ್ಣಾ ನದಿ ನೀರಿನಲ್ಲಿ ಇಳಿಕೆ ಕಂಡ ಹಿನ್ನೆಲೆಯಲ್ಲಿ ಜನ ಮೀಗಾರಿಕೆ ಆರಂಭಿಸಿದ್ದು, ಇದೇ ವೇಳೆ 12 ಕೆ.ಜಿ. ತೂಕದ ಬೃಹತ್ ಗಾತ್ರದ ಮೀನು ಸಿಕ್ಕಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಯಡೂರು – ಕಲ್ಲೋಳ ಸೇತುವೆ ಬಳಿ 12 ಕೆ.ಜಿ. ತೂಕದ ಮೀನು ಬಲೆಗೆ ಬಿದ್ದಿದೆ. ಬೋರಗಾಂವ ಪಟ್ಟಣದ ಹೈದರ ಅವರಿಗೆ ಮೀನು ಸಿಕ್ಕಿದೆ. ಇಷ್ಟೊಂದು ದೊಡ್ಡ ಗಾತ್ರದ ಮೀನು ಸಿಕ್ಕಿರುವುದಕ್ಕೆ ಹವ್ಯಾಸಿ ಮೀನಗಾರ ಹೈದರ ಸಂತಸ ವ್ಯಕ್ತಪಡಿಸಿದ್ದಾರೆ. ಇಷ್ಟೊಂದು …

Read More »

ನಾವು ಗೆದ್ದೇ ಗೆಲ್ತೇವೆ ಮತ್ತೇ ಮೆಜಾರಿಟಿ ತಂದೇ ತರ್ತೇವೆ: ಫಿರೋಜ್ ಸೇಠ್ ವಿಶ್ವಾಸ

ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಗೆದ್ದೇ ಗೆಲ್ಲುತ್ತೇವೆ ಮತ್ತು ಮೆಜಾರಿಟಿ ಪಡೆದು ಪಾಲಿಕೆ ಚುಕ್ಕಾಣಿ ಹಿಯುತ್ತೇವೆ ಎಂದು ಫಿರೋಜ್ ಸೇಠ್ ಹೇಳಿದ್ದಾರೆ. ನಾವು ಜನರಲ್ಲಿ ನಮ್ಮ ಅಭ್ಯರ್ಥಿಗಳಿಗೆ ಮತ ಹಾಕುವಂತೆ ಮನವರಿಕೆ ಮಾಡುತ್ತೇವೆ. ಈ ಹಿಂದೆ ನಮ್ಮ 10 ವರ್ಷಗಳ ಅಧಿಕಾರಾವಧಿಯಲ್ಲಿ ಮಾಡಿದಂತೆ ಈ ಬಾರಿಯೂ ಅಭಿವೃದ್ಧಿ ಕಾರ್ಯ ಮಾಡುತ್ತೇವೆ ಎಂದಿದ್ದಾರೆ. ಎಂಐಎಂ ಸ್ಪರ್ಧೆಯಿಂದ ಬಿಜೆಪಿಗೆ ಲಾಭವಾಗುತ್ತೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ ಇದು ಪಶ್ಚಿಮ ಬಂಗಾಳದಲ್ಲಿ …

Read More »

ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸರ್ಕಾರದಿಂದ ಇನ್ನೂ ಮನೆ ಹಂಚಿಕೆ ಮಾಡಿಲ್ಲ.

ಹುಬ್ಬಳ್ಳಿ: ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಸರ್ಕಾರದಿಂದ ಇನ್ನೂ ಮನೆ ಹಂಚಿಕೆ ಮಾಡಿಲ್ಲ. ಇದಕ್ಕಾಗಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಮನೆ ಹಂಚಿಕೆ ಮಾಡುವಂತೆ ಭಿಕ್ಷೆ ಬೇಡುತ್ತಿಲ್ಲ. ಮನೆ ಕೊಟ್ಟರೆ ಕೊಡಲಿ, ಬಿಡುವುದಿದ್ದರೆ ಬಿಡಲಿ, ಇನ್ನು ಮುಂದೆ ಮನೆ ಹಂಚಿಕೆ ಮಾಡುವಂತೆ ಕೇಳುವುದಿಲ್ಲ ಎಂದು ಅವರು ಹೇಳಿದ್ದಾರೆ. ಹುಬ್ಬಳ್ಳಿ -ಧಾರವಾಡ ಮಹಾನಗರ ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನ ಮಾಡಲು ಆಗಮಿಸಿದ್ದ ಅವರು ಮತದಾನದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಮನೆ …

Read More »

ಬೆಳಗಾವಿ ಸೇರಿ ರಾಜ್ಯದ 3 ಮಹಾನಗರ ಪಾಲಿಕೆಗೆ ಇಂದು ಚುನಾವಣೆ, ಬೆಳಗ್ಗೆ 7 ರಿಂದ ಸಂಜೆ 6 ರವರೆಗೆ ಮತದಾನ

ಬೆಂಗಳೂರು: ರಾಜ್ಯದ ಮೂರು ಮಹಾನಗರ ಪಾಲಿಕೆಗಳಿಗೆ ಇಂದು ಚುನಾವಣೆ ನಡೆಯಲಿದೆ. ಬೆಳಗಾವಿ, ಕಲಬುರ್ಗಿ, ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಗಳಿಗೆ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ. ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿ ಮತದಾನ ನಡೆಯಲಿದ್ದು, ಸೆಪ್ಟಂಬರ್ 6 ರಂದು ಚುನಾವಣೆಯ ಫಲಿತಾಂಶ ಪ್ರಕಟಿಸಲಾಗುವುದು. ಬೆಳಗಾವಿ ಮಹಾನಗರಪಾಲಿಕೆಯ 58 ವಾರ್ಡ್ ಗಳಿಗೆ ಚುನಾವಣೆ ನಡೆಯಲಿದ್ದು 385 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 4,28,364 ಮತದಾರರು ಮತ ಚಲಾವಣೆ ಮಾಡಲಿದ್ದು, 415 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 162 …

Read More »

ಗೋಕಾಕ ನಗರದ ಸಾರ್ವಜನಿಕಕರಿಗೆ ನಗರಸಭೆಯಿಂದ ಸೂಚನೆ?

ಗೋಕಾಕ ನಾಗರಿಕರಲ್ಲಿ ಈ ಮೂಲಕ ತಿಳಿಸುವುದೇನೆಂದರೆ   ಗೋಕಾಕ ನಗರಕ್ಕೆ ನೀರು ಪೂರೈಕೆ ಮಾಡುವ ನಗರದ ನದಿಯ ದಡದಲ್ಲಿರುವ ಜಾಕವೆಲ್ ನಲ್ಲಿರುವ 200 ಎಚ್.ಪಿ ಪಂಪಸೆಟ್ ಮೋಟಾರ್ ರಿಪೇರಿ ಇದ್ದ ಕಾರಣ ಗೋಕಾಕ ನಗರದಲ್ಲಿ  ಶುಕ್ರವಾರ ದಿ.3-9-2021ಮತ್ತು ಶನಿವಾರ ದಿ.4-9-2021 ರಂದು ನೀರು ಸರಬುರಾಜಿನಲ್ಲಿ ವ್ಯತ್ಯಯವಾಗಲಿದೆ ಕಾರಣ ಸಾರ್ವಜನಿಕರು ಸಹಕರಿಸಲು   ನಗರಸಭೆಯ ಅಧ್ಯಕ್ಷರಾದ ಶ್ರೀ ಜಯಾನಂದ ಹುಣಶ್ಯಾಳಿ,ಪೌರಾಯುಕ್ತರಾದ ಶ್ರೀ ಶಿವಾನಂದ ಹಿರೇಮಠ   ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ …

Read More »