ಬೆಳಗಾವಿ: ಕೆ.ಎಸ್. ಈಶ್ವರಪ್ಪ ವಿರುದ್ದ 40 ಪರ್ಸೆಂಟ್ ಕಮಿಷನ್ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾಗಿರುವ ಗುತ್ತಿಗೆದಾರ ಸಂತೋಷ ಪಾಟೀಲ್ ಕುಟುಂಬಕ್ಕೆ ನ್ಯಾಯ ಸಿಗುವುದು ಅನುಮಾನ ಎಂದು ಆಪ್ ಮುಖಂಡ ಭಾಸ್ಕರ್ ರಾವ್ ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಶ್ವರಪ್ಪ ಹಾಗೂ ಸರ್ಕಾರದ ಮೇಲೆ ವಿಶ್ವಾಸವಿಟ್ಟು ಸಂತೋಷ ಪಾಟೀಲ್ ಕೆಲಸ ಮಾಡಿದ್ದನು. ಆದರೆ ಮಾಜಿ ಸಚಿವರು ಬಿಲ್ ಮಂಜೂರು ಮಾಡಲು ಕಾಯಿಸುವ ಜತೆಗೆ ಸಂತೋಷ ಪಾಟೀಲ್ ಅವರನ್ನು ಅವಮಾನ ಮಾಡಿದರು. …
Read More »ಅಸಭ್ಯ ವರ್ತಿಸಿದ ಉಪನ್ಯಾಸಕ ಚಪ್ಪಲಿ ಹಾಗೂ ಕೋಲಿನಿಂದ ಧರ್ಮದೇಟು
ಬೆಳಗಾವಿ: ಉಪನ್ಯಾಸಕನ ವಿರುದ್ಧ ಅಸಭ್ಯ ವರ್ತಿಸಿದ ಆರೋಪ ಕೇಳಿಬಂದಿದ್ದು, ಕಾಲೇಜಿನ ಸ್ಟಾಫ್ ರೂಮ್ನಲ್ಲೇ ಉಪನ್ಯಾಸಕಿಯರು ಉಪನ್ಯಾಸಕನಿಗೆ ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಏಪ್ರಿಲ್ 12 ರಂದು ಬೆಳಗಾವಿಯ ಸರ್ಕಾರಿ ಸರ್ದಾರ್ ಪಿಯು ಕಾಲೇಜಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಲೇಜಿನ ಖಾಯಂ ಉಪನ್ಯಾಸಕನನ್ನು ಅತಿಥಿ ಉಪನ್ಯಾಸಕಿಯರು ಹಿಗ್ಗಾಮುಗ್ಗಾ ಥಳಿಸಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇಂಗ್ಲಿಷ್ ವಿಭಾಗದ ಖಾಯಂ ಉಪನ್ಯಾಸಕ ಅಮಿತ್ ಬಸವಮೂರ್ತಿಗೆ ಕಾಲಿನಿಂದ ಒದ್ದು ಚಪ್ಪಲಿ ಹಾಗೂ ಕೋಲಿನಿಂದ …
Read More »ಸಚಿವ ಈಶ್ವರಪ್ಪ ವಿರುದ್ಧ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಿಂದ ಸ್ಪೋಟಕ ಮಾಹಿತಿ
ಸಚಿವ ಈಶ್ವರಪ್ಪ ಪತ್ರಿಕಾಗೋಷ್ಠಿ ಬೆನ್ನಲ್ಲೇ ಬೆಳಗಾವಿ ಜಿಲ್ಲೆ ಹಿಂಡಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷ ನಾಗೇಶ್ ಮನೋನ್ನೊಳ್ ಕರ್, ನಾನು ಮತ್ತು ಸಂತೋಷ್ ಬೈಲಹೊಂಗಲದ ಸ್ವಾಮೀಜಿ ಅವರ ಜೊತೆ ಈಶ್ವರಪ್ಪ ಅವರನ್ನು ಎರಡು ಬಾರಿ ಭೇಟಿಯಾಗಿದ್ದೆವು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ. 100 ವರ್ಷಕ್ಕೊಮ್ಮೆ ನಡೆಯುವ ಗ್ರಾಮದೇವತೆಯ ಜಾತ್ರೆಗೆ 108 ಕಾಮಗಾರಿಗಳನ್ನು ನಡೆಸುವುದಾಗಿ ಪಟ್ಟಿ ತಯಾರಿಸಿಕೊಂಡು ಹೋಗಿದ್ದವು. ಕಾಮಗಾರಿಗಳನ್ನು ಚೆನ್ನಾಗಿ ನಡೆಸಿ ಎಂದು ಈಶ್ವರಪ್ಪನವರು ಸೂಚನೆ ನೀಡಿದ್ದರು ಎಂದು ತಿಳಿಸಿದ್ದಾರೆ. ಈಶ್ವರಪ್ಪನವರ …
Read More »ರಾಹುಲ ಕಪ ವೇದಿಕೆಗೆ ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ
ಬೆಳಗಾವಿ ತಾಲೂಕಿನ ಮುಚ್ಚಂಡಿ ಗ್ರಾಮದ ಎನ್.ಎಸ್.ಎಫ್ ಶ್ರೀ ಸಿದ್ದಾರೂಢ ಪ್ರೌಢಶಾಲೆ ಮೈದಾನದಲ್ಲಿ ಎಪ್ರಿಲ್ 12, 13 ರಂದು ಜಿಲ್ಲಾ ಅಮೆಚೂರ ಕಬಡ್ಡಿ ಅಸೋಸಿಯೆಷನ್ ಹಾಗೂ ಸತೀಶ್ ಜಾರಕಿಹೊಳಿ ಫೌಂಡೇಶನ್ ಗೋಕಾಕ ಪ್ರಾಯೋಜಕತ್ವದಲ್ಲಿ ಬೆಳಗಾವಿ ಜಿಲ್ಲಾ ಪುರುಷ ಹಾಗೂ ಮಹಿಳಾ ಹೊನಲು ಬೆಳಕಿನ ಕಬಡ್ಡಿ ಚಾಂಪಿಯನಶಿಫ್ 2022 ನ್ನು ಮಂಗಳವಾರದಂದು ಉದ್ಘಾಟಿಸಿ ಮಾತನಾಡಲಾಯಿತು. ಈ ಸಂಧರ್ಬದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ್ , ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ , ಶಾಸಕ ಮಹಾಂತೇಶ …
Read More »ಬೆಳಗಾವಿ ಇವರ ಆಶ್ರಯಲ್ಲಿ ವೀರಶೈವ ಲಿಂಗಾಯತ ಬಡ ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿ ನಿಲಯ
ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕ, ಬೆಳಗಾವಿ ಇವರ ಆಶ್ರಯಲ್ಲಿ ವೀರಶೈವ ಲಿಂಗಾಯತ ಬಡ ವಿದ್ಯಾರ್ಥಿನಿಯರಿಗಾಗಿ ಉಚಿತ ವಸತಿ ನಿಲಯ ಇದರ ಅಡಿಗಲ್ಲು ಸಮಾರಂಭದಲ್ಲಿ ಭಾಗಿಯಾದೆ. ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ ಎಸ್ ಯಡಿಯೂರಪ್ಪನವರಿಂದ ಶಂಕುಸ್ಥಾಪನೆ ನೆರವೇರಿಸಿಲಾಯಿತು ಹಾಗೂ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಗುರುಸಿದ್ದ ಮಹಾಸ್ವಾಮಿಗಳು ಕಾರಂಜಿಮಠ ಬೆಳಗಾವಿ ಇವರು ವಹಿಸಿದ್ದರು. ಈ ಸಂದರ್ಭದಲ್ಲಿ ಕೆ.ಎಲ್. ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ್ ಕೋರೆ, ಸಂಸದರಾದ …
Read More »ಬಿಎಸ್ವೈ ಭೇಟಿ ಮಾಡಿ ಚರ್ಚಿಸಿದ ಸಿಎಂ : ಇಂದೇ ರಾಜೀನಾಮೆ ನೀಡ್ತಾರಾ ಈಶ್ವರಪ್ಪ?
ಬೆಳಗಾವಿ : ಸಚಿವ ಕೆ ಎಸ್ ಈಶ್ವರಪ್ಪ ರಾಜೀನಾಮೆಗೆ ಪ್ರತಿಪಕ್ಷಗಳಿಂದ ಒತ್ತಡ ಹಿನ್ನೆಲೆ ಬಿಎಸ್ವೈ ಜೊತೆಗೆ ಸಿಎಂ ಬಸವರಾಜ್ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ. ಬೆಳಗಾವಿ ಪ್ರವಾಸದಲ್ಲಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪರನ್ನು ಸಂಕಮ್ ಹೋಟೆಲಿನಲ್ಲಿ ಭೇಟಿ ಮಾಡಿ ಚರ್ಚಿಸಿದ್ದಾರೆ. ಈಶ್ವರಪ್ಪರಿಂದ ರಾಜೀನಾಮೆ ಪಡೆಯುವ ಬಗ್ಗೆ ಬಿಎಸ್ವೈ ಜೊತೆಗೆ ಬೊಮ್ಮಾಯಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಸಿಎಂ ಬಸವರಾಜ್ ಬೊಮ್ಮಾಯಿ ಮಾತಿಗೆ ಬಿಎಸ್ವೈ ಸಮ್ಮತಿ ನೀಡಿದ್ದಾರಾ ಎಂಬ ಬಗ್ಗೆ ಖಚಿತ ಮಾಹಿತಿ …
Read More »ಗುತ್ತಿಗೆದಾರ ಸಂತೋಷ್ ಸಾವು: ‘ಸಚಿವ ಈಶ್ವರಪ್ಪರನ್ನ ಅರೆಸ್ಟ್ ಮಾಡಿ’ ಸಿದ್ದರಾಮಯ್ಯ ಆಗ್ರಹ
ಬೆಂಗಳೂರು: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ 40 ಪರ್ಸೆಂಟ್ ಕಮೀಷನ್ ಆರೋಪ ಮಾಡಿದ್ದ ಸಂತೋಷ್ ಪಾಟೀಲ್ ಮೃತದೇಹ ಉಡುಪಿಯ ಹೋಟೆಲ್ ಒಂದರಲ್ಲಿ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಟಿ ನಡೆಸಿದರು. ಈ ಹಿನ್ನೆಲೆಯಲ್ಲಿ ಸರ್ಕಾರ ಈಶ್ವರಪ್ಪ ವಿರುದ್ಧ ಸೆಕ್ಷನ್ 302 ಅಡಿಯಲ್ಲಿ ಕೇಸ್ ದಾಖಲಿಸಿಕೊಳ್ಳಬೇಕು. ಈ ಕೂಡಲೇ ಈಶ್ವರಪ್ಪರನ್ನ ಬಂಧಿಸಬೇಕು. ಅಲ್ಲದೇ ಬೊಮ್ಮಾಯಿ ಅವರು ಕ್ಯಾಬಿನೆಟ್ನಿಂದ ವಜಾ ಮಾಡಬೇಕು. ಯಾಕಂದ್ರೆ ಈಶ್ವರಪ್ಪ ಅವರೇ ನನ್ನ …
Read More »ಮದುವೆ ಸಂಭ್ರಮ ಕಸಿದುಕೊಂಡ ಅಕಾಲಿಕ ಮಳೆ – ತಂದೆ ಆಸ್ಪತ್ರೆಯಲ್ಲಿ, ಮಗಳು ಮನೆಯಲ್ಲಿ ಕಣ್ಣೀರು
ಬೆಳಗಾವಿ: ಕಳೆದ ಮೂರುನಾಲ್ಕು ದಿನಗಳಿಂದ ಕುಂದಾನಗರಿಯಲ್ಲಿ ಸುರಿಯುತ್ತಿರೋ ಅಕಾಲಿಕ ಮಳೆಯಿಂದಾಗಿ ಮಗಳ ಮದುವೆಯ ಸಂಭ್ರಮ ಕಸಿದುಕೊಂಡಿದೆ. ಬೆಳಗಾವಿ ತಾಲೂಕಿನ ಅಲಾರವಾಡ ಗ್ರಾಮದ ಆಶ್ರಯ ಕಾಲೋನಿಯಲ್ಲಿ ಸುರಿದ ಬಾರಿ ಮಳೆ, ಗಾಳಿಗೆ ಚಂದ್ರಶೇಖರ್ ಹುಡೇದ್ ಅವರ ಮನೆ ಸೇರಿ ಐದಕ್ಕೂ ಹೆಚ್ಚು ಮನೆಗಳ ಮೇಲ್ಛಾವಣಿ ಕುಸಿದಿವೆ. ಈ ಪರಿಣಾಮ, ಏಪ್ರಿಲ್ 15ಕ್ಕೆ ಅದ್ಧೂರಿಯಾಗಿ ಮಗಳ ಮದುವೆಯನ್ನು ನಿಶ್ಚಯ ಮಾಡಿಕೊಂಡಿದ್ದ ಅವರು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಮದುವೆ ಸಂಭ್ರಮದಲ್ಲಿ ಇರಬೇಕಿದ್ದ ಮದುಮಗಳು ಕೂಡ …
Read More »ಸೌಭಾಗ್ಯ ಲಕ್ಷ್ಮಿ ಶುಗರ್ಸ್ &ಸಂತೋಷ್ ಜಾರಕಿಹೊಳಿ ಅವರ್ ವತಿಯಿಂದ ಹಾಪ್ ಪಿಚ್ ಕ್ರಿಕೆಟ್ ಟೂರ್ನಮೆಂಟ್
ಗೋಕಾಕ: ಶ್ರೀ ಸಂತೋಷ್ ಜಾರಕಿಹೊಳಿ ಅವರು ಇತ್ತೀಚಿಗೆ ಸುಮಾರು ಸಮಾಜ ಮುಖಿ ಕಾರ್ಯಕ್ರಮ ಗಳಿಗೆ ಚಾಲನೆ ನೀಡುತ್ತಿದ್ದಾರೆ. ಜಾರಕಿಹೊಳಿ ಅವರು ಅಂದ್ರೆ ಎಂದು ಕೊಡುವ ಕೈ ದೇವರ ಗುಡಿಗಳು, ಜನರ, ಸಂಕಷ್ಟ, ಸಕ್ಕರೆ ಕಾರ್ಖಾನೆ ಸಿಬ್ಬಂದಿಗಳಿಗೆ ಕೊಡುವ ಗೌರವ್ , ಶಾಲಾ ಕಾಲೇಜು ಗಳ ಬಗ್ಗೆ ಕಾಳಜಿ, ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆ, ಇದೆ ರೀತಿ ಪಟ್ಟಿ ಗಳನ್ನ ಹೇಳುತ್ತಾ ಹೋದ್ರೆ ಕಮ್ಮಿನ್ನೆ ಅನ್ನಬಹುದು ಆದ್ರೂ ಇವು …
Read More »ಬಣವಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದು, ಹಾನಿಯಾದ 9 ರೈತರ ಕುಟುಂಬಕ್ಕೆ ಸತೀಶ್ ಜಾರಕಿಹೊಳಿ ಫೌಂಡೇಶನ್ ನಿಂದ ತಲಾ 10 ಸಾವಿರ ರೂ. ದಂತೆ ಒಟ್ಟು 90 ಸಾವಿರ ರೂಪಾಯಿ ವಿತರಿಸಲಾಯಿತು.
ಬೆಳಗಾವಿ ಕುವೆಂಪು ನಗರದ ಕಚೇರಿಯಲ್ಲಿ ಯಮಕನಮರಡಿ ಮತಕ್ಷೇತ್ರದ ಕೆದನೂರ, ಅಗಸಗಿ, ಮನ್ನಿಕೇರಿ ಗ್ರಾಮದಲ್ಲಿ ಬಣವಿಗಳಿಗೆ ಆಕಸ್ಮಿಕ ಬೆಂಕಿ ಬಿದ್ದು, ಹಾನಿಯಾದ 9 ರೈತರ ಕುಟುಂಬಕ್ಕೆ ಸತೀಶ್ ಜಾರಕಿಹೊಳಿ ಫೌಂಡೇಶನ್ ನಿಂದ ತಲಾ 10 ಸಾವಿರ ರೂ. ದಂತೆ ಒಟ್ಟು 90 ಸಾವಿರ ರೂಪಾಯಿ ವಿತರಿಸಲಾಯಿತು. ಇದೇ ವೇಳೆ ಬೆಳಗಾವಿ ದಕ್ಷಿಣ ಮತಕ್ಷೇತ್ರದ ಕಾಸಬಾಗದಿಂದ ಕುಂತಿ ನಗರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ಅಲ್ಲಿನ ಸಾರ್ವಜನಿಕರ ಮನವಿ ಮೇರೆಗೆ 1 ಲಕ್ಷ …
Read More »