ಬೆಳಗಾವಿ: ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಅವರು ಶಿಕ್ಷಣ, ಆರೋಗ್ಯ, ಕೃಷಿ ಕ್ಷೇತ್ರದಲ್ಲಿ ಸಲ್ಲಿಸಿರುವ ಸೇವೆ ಗುರುತಿಸಿ ಕೇಂದ್ರ ಸರ್ಕಾರ ಪದ್ಮಶ್ರೀ ನೀಡುವ ಮೂಲಕ ನಾಡಿಗೆ ಗೌರವ ಸಲ್ಲಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶಂಸಿಸಿದರು. ಬೆಳಗಾವಿ ನಗರದ ಕೆಎಲ್‌ಇ ಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಬುಧವಾರ ಪದ್ಮಶ್ರೀ ಪುರಸ್ಕೃತ ಡಾ.ಪ್ರಭಾಕರ ಕೋರೆ ಅವರನ್ನು ಸತ್ಕರಿಸಿ ಮಾತನಾಡಿದ ಅವರು, ಡಾ.ಕೋರೆ ಸೇವೆ ಅಪಾರ. ಶಿಕ್ಷಣ ಆರೋಗ್ಯ ಕ್ಷೇತ್ರದಲ್ಲಿ ನಾಡಿಗೆ ಅವರು ಅದ್ವಿತೀಯ ಕೊಡುಗೆ …
Read More »ಬೆಳಗಾವಿ: ಸಬ್ರಜಿಸ್ಟ್ರಾರ್ ಸೇರಿ 9 ವಂಚಕರ ಬಂಧನ
ಬೆಳಗಾವಿ: ವೃದ್ಧರು, ಓದಲು ಬಾರದಿರುವವರು, ದಾಖಲೆಗಳ ಅರಿವು ಇಲ್ಲದವರು, ಜಮೀನು ಬಳಸದಿರುವ ಮಾಲೀಕರನ್ನು ಗುರಿಯಾಗಿಸಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಜಮೀನು, ನಿವೇಶನ ಕಬಳಿಸುತ್ತಿದ್ದ ವಂಚಕರ ಜಾಲ ಭೇದಿಸಿ, ಉಪ ನೋಂದಣಾಧಿಕಾರಿ ಸೇರಿ 9 ಜನರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ನಕಲಿ ದಾಖಲೆ ಸೃಷ್ಟಿಸಿ ಭೂಮಿ, ನಿವೇಶನ ಕಬಳಿಸಿರುವ ಕುರಿತು ಹುಕ್ಕೇರಿಯಲ್ಲಿ 2, ಮೂಡಲಗಿಯಲ್ಲಿ 3 ಹಾಗೂ ಯಮಕನಮರಡಿಯಲ್ಲಿ …
Read More »Belagavi: ಮುರಘೇಂದ್ರಗೌಡ ಎಸ್. ಪಾಟೀಲ ಟೋಫಿ ಆರಂಭ
ಬೆಳಗಾವಿ : ಐಪಿಎಲ್‌ನಂತಹ ಮ್ಯಾಚ್‌ಗಳು ಬೆಳಗಾವಿಯಲ್ಲೂ ನಡೆಯುವ ರೀತಿಯಲ್ಲಿ ಇಲ್ಲಿನ ಸ್ಟೇಡಿಯಂ ಅಭಿವೃದ್ಧಿಯಾಗಬೇಕಿದೆ. ಇದಕ್ಕಾಗಿಯೇ ಈಚೆಗೆ ಏಷಿಯನ್ ಕ್ರಿಕೆಟ್ ಕೌನ್ಸಿಲ್ ಸದಸ್ಯ ಆಶೀಷ ಶೇಲಾರರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದೇನೆ. ಬೆಳಗಾವಿಗೆ ಐಪಿಎಲ್ ಮ್ಯಾಚ್‌ಗಳು ಬರುವವರೆಗೂ ನಮ್ಮ ಪ್ರಯತ್ನ ಮುಂದುವರೆಯುತ್ತದೆ ಎಂದು ಎಂದು ಶಾಸಕ ಅಭಯ ಪಾಟೀಲ ಹೇಳಿದರು. ನಗರದ ಸರ್ದಾರ ಮೈದಾನದಲ್ಲಿ ಎಂಪಿ ಫೌಂಡೇಶನ್ ವತಿಯಿಂದ ಆಯೋಜಿಸಿರುವ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಟುಗಳನ್ನು ಒಳಗೊಂಡಿರುವ ‘ಆಲ್ ಇಂಡಿಯಾ ಓಪನ್ ಟೆನಿಸ್ …
Read More »ಹಿರಿಯ ನಾಗರಿಕರೊಂದಿಗೆ ಹೆಬ್ಬಾಳ್ಕರ್ ಜನ್ಮದಿನ ಆಚರಣೆ
ಪಂಚಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ, ಇಡೀ ರಾಜ್ಯದಲ್ಲಿ ಮನೆಮಾತಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು 14,500 ಹಿರಿಯ ನಾಗರಿಕರೊಂದಿಗೆ ತಮ್ಮ ಜನ್ಮದಿನ ಆಚರಿಸಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ವಿಧಾನ ಪರಿಷತ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬೆನಕನಹಳ್ಳಿ ಗ್ರಾಮದ ಗಾರ್ಡ್‌ನ ಕೋರ್ಟ್ ಎದುರಿನ ಮೈದಾನದಲ್ಲಿ …
Read More »ಬೆಳಗಾವಿ:ಪತ್ರಕರ್ತರಿಗೆ ಬಸ್ ಪಾಸ್ ವಿತರಣೆ
ಬೆಳಗಾವಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಜಾರಿಗೆ ತಂದಿರುವ ಯೋಜನೆಯಡಿ ಜಿಲ್ಲೆಯ ಕೆಲ ತಾಲ್ಲೂಕುಗಳ ಪತ್ರಕರ್ತರಿಗೆ ಗುರುವಾರ ಉಚಿತ ಬಸ್ ಪಾಸ್ ವಿತರಿಸಲಾಯಿತು. ನಗರದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾಭವನದಲ್ಲಿ ಗುರುವಾರ ಜರುಗಿದ ಸಮಾರಂಭದಲ್ಲಿ ಇಲಾಖೆ ಉಪನಿರ್ದೇಶಕ ಗುರುನಾಥ ಕಡಬೂರ ಸಾಂಕೇತಿಕವಾಗಿ ಕೆಲ ಪತ್ರಕರ್ತರಿಗೆ ಪಾಸ್ ವಿತರಿಸಿ ಮಾತನಾಡಿ, ತಾಲೂಕು ಮಟ್ಟದ ಅರ್ಹ ಪತ್ರಕರ್ತರು ಅಗತ್ಯ ದಾಖಲೆಗಳೊಂದಿಗೆ ಸರ್ಕಾರದ ಸೇವಾಸಿಂಧು ವೆಬ್ ಸೈಟ್ ಮೂಲಕ ಅರ್ಜಿ ಸಲ್ಲಿಸಿ …
Read More »Belagavi: 6.50 ಲಕ್ಷ ರೂ. ಮೌಲ್ಯದ 18 ಬೈಕ್ ಜಪ್ತಿ
ಬೆಳಗಾವಿ: ನಗರದ ಮಾರ್ಕೆಟ್, ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣದ ಅಡಿಯಲ್ಲಿ ಗುರುವಾರ ಪೊಲೀಸರು 6.50 ಲಕ್ಷ ರೂ. ಮೌಲ್ಯದ 18 ಬೈಕ್ ಜಪ್ತಿ ಮಾಡಿ ನಾಲ್ವರನ್ನು ಬಂಧಿಸಿದ್ದಾರೆ. ತಾಲೂಕಿನ ಕಂಗ್ರಾಳಿಕೆ.ಎಚ್ ಗ್ರಾಮದ ರಜತ ಶಿವಣಗೇಕರ (29), ಬೈಲಹೊಂಗಲ ತಾಲೂಕಿನ ಶಿಗಿಹಳ್ಳಿ ಗ್ರಾಮದ ವಿಠ್ಠಲ ಆರೇರ (38), ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದ ಉಮೇಶ ಬಾಗೇವಾಡಿ (33), ಗುಡಸ ಗ್ರಾಮದ ಮೌಲಾ ಹಲಕರ್ಣಿ (48) ಬಂಧಿತರು. ಕಳೆದ …
Read More »Belagavi: ಗ್ರಾಮೀಣ ಕ್ಷೇತ್ರ ಮಾದರಿಯಾಗಿ ಅಭಿವೃದ್ಧಿ
ಬೆಳಗಾವಿ: ನಾನು ಪ್ರತಿನಿಧಿಸುವ ಗ್ರಾಮೀಣ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸುವ ಸಂಕಲ್ಪ ಮಾಡಿದ್ದು, ಅದರಂತೆಯೇ ಕೆಲಸ ಮಾಡುತ್ತಿರುವೇ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ತಾಲೂಕಿನ ಕಿಣೆಯೇ ಗ್ರಾಮದಲ್ಲಿ ಗುರುವಾರ ಸುಮಾರು 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಹಾಲಕ್ಷ್ಮೀ ಮಂದಿರದ ನೂತನ ಕಟ್ಟಡ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ಕಾಡಾ ಅಧ್ಯಕ್ಷ ಯುವರಾಜ ಕದಂ, ಮಾರುತಿ ಪಾಟೀಲ, ಬಾಳು ದೇಸೂರಕರ, ಮಾರುತಿ ಡುಕ್ರೆ, ಮಧುಕರ ಪಾಟೀಲ, ಹೇಮಂತ …
Read More »ಮದುವೆ ದಿನವೇ ಅಂಗಾಂಗ ದಾನ ; ಅಥಣಿಯಲ್ಲೊಂದು ಸಾಮಾಜಿಕ ಸೇವೆಯ ಮದುವೆ
ಅಥಣಿ : ತಮ್ಮ ಮದುವೆಯ ದಿನವೇ ಅಂಗಾಂಗ ದಾನ ಮಾಡುವ ಮೂಲಕ ಜನರಲ್ಲಿ ದೇಹದಾನದ ಮಹತ್ವ ತಿಳಿಸಿಕೊಡುವ ಮಹತ್ವ ಕೆಲಸವನ್ನು ನವಜೋಡಿ ಮಾಡಿದೆ. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಸಿದ್ದೇಶ್ವರ ದೇವಸ್ಥಾನದ ಸಭಾಂಗಣದಲ್ಲಿ. ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ವಾಗೇಶ ಕಾಡದೇವರಮಠ ಮತ್ತು ಕೋಮಲ ಹಿರೇಮಠ ಇವರ ವಿವಾಹ ಸಮಾರಂಭ ಬುಧವಾರ ಸಂಪ್ರದಾಯದಂತೆ ಜರುಗಿತು. ಈ ವೇಳೆ ವಾಗೇಶ್ ಹಾಗೂ ಕೋಮಲ್ ಇಬ್ಬರೂ ದೇಹದಾನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಸುತ್ತಮುತ್ತಲಿನ …
Read More »ಫೆ.19 ರಂದು ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ: ಬೆಳಗಾವಿಯಲ್ಲಿ ವಿಜಯೇಂದ್ರ ಹೇಳಿಕೆ
ಬೆಳಗಾವಿ: ಫೆಬ್ರವರಿ 19ರಂದು ಬೆಂಗಳೂರಿನ ಅರಮನೆಯ ಮೈದಾನದಲ್ಲಿ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ಸಭೆಯಲ್ಲಿ ಮುಂದಿನ ಕೆಲವು ಸಂಘಟನಾತ್ಮಕ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿವರಿಸಿದರು. ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಅವರು, ಕಾರ್ಯಕಾರಣಿ ಸಭೆಯಲ್ಲಿ ಜಿಪಂ, ತಾಪಂ, ಗ್ರೇಟರ್ ಬೆಂಗಳೂರು, ವಿಧಾನಪರಿಷತ್ ಸ್ಥಾನಗಳ ಚುನಾವಣೆ, ರಾಜ್ಯ ಸರ್ಕಾರದ ವೈಫಲ್ಯ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಚರ್ಚೆ ಮಾಡುತ್ತೇವೆ. ಉದ್ಘಾಟನೆಗೆ ಹಿರಿಯ ಸಚಿವರು …
Read More »ದುರ್ಗಂಧದ ಗೂಡಾದ ಬೆಳಗಾವಿಯ ಹೊಸ ನಗರ ಬಸ್ ನಿಲ್ದಾಣ ಶಚಾಲಯ
ಬೆಳಗಾವಿಯ ಹೊಸ ನಗರ ಬಸ್ ನಿಲ್ದಾಣ ( CBT ) ಉದ್ಘಾಟನೆಯಾಗಿ ಇನ್ನೂ ಎರಡು ತಿಂಗಳು ಕೂಡ ಆಗಿಲ್ಲಾ, ಅಲ್ಲಿಯ ಶೌಚಾಲಯಗಳ ಪರಿಸ್ಥಿತಿ ನೋಡ್ರಿ. ಇಲ್ಲಿ ಎಲ್ಲೆಂದರಲ್ಲಿ ಕಸ, ನೀರು ಕೂಡ ಸರಿಯಾಗಿ ಇಲ್ಲಾ. ಈ ಶೌಚಾಲಯಗಳ ದುಸ್ಥಿತಿ ಕಂಡು ನಿಜಕ್ಕೂ ಬೇಸರವಾಯ್ತು. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಈ ಶೌಚಾಲಯಗಳ ಶುಚಿತ್ವಕ್ಕೆ ಆಧ್ಯತೆ ನೀಡಿ.
Read More »
Laxmi News 24×7