Breaking News

ಬೆಳಗಾವಿ

ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿ ಬಂಧಿಸಿ೪೫ ಕೆಜಿ ಗಾಂಜಾವನ್ನು ವಶಕ್ಕೆ ಪಡೆದ ಪೊಲೀಸರು

ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದಲ್ಲಿ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ ಆರೋಪಿಯನ್ನು ಬಂಧಿಸಿ ಆತನಿಂದ ೪೫ ಕೆಜಿ ಗಾಂಜಾವನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಬೆಳಗಾವಿ ಸಿಇಎನ್ ಅಪರಾಧ ವಿಭಾಗದ ಪೊಲೀಸರು ಯಶಸ್ವಿಯಾಗಿದ್ದಾರೆ. ರಾಯಬಾಗ ತಾಲೂಕಿನ ನಿಡಗುಂದಿ ಗ್ರಾಮದ ಜಮೀನಿನಲ್ಲಿ ಆರೋಪಿಯೊಬ್ಬ ತನ್ನ ಜಮೀನಿನಲ್ಲಿ ಗಾಂಜಾ ಬೆಳೆದಿದ್ದ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಇಎನ್ ಅಪರಾಧ ವಿಭಾಗದ ಪೊಲೀಸರು ಆರೋಪಿಯನ್ನು ಬಂಧಿಸಿ ಆತನ ಜಮೀನಿನಲ್ಲಿ ಬೆಳೆದಿದ್ದ ೪೫ ಕೆಜಿ ಗಾಂಜಾವನ್ನು ವಶಕ್ಕೆ ಪಡೆದಿದ್ದಾರೆ. …

Read More »

ಬೆಳಗಾವಿ ನಗರದ ಮಾರುಕಟ್ಟೆಯಲ್ಲಿ ಜನಸಾಗರ

ನಾಳೆ ಬೆಳಗಾದರೆ ಸಾಕು ಮನೆ ಮನಮನೆಗೆ ಗಣೇಶನ ಆಗಮನವಾಗುತ್ತದೆ. ಈ ಹಿನ್ನೆಲೆಯಲ್ಲಿ ಎಲ್ಲಾ ಜನತೆ ಗಣೇಶ ಹಬ್ಬದ ಆಚರಣೆಗೆ ಬೇಕಾದ ಎಲ್ಲಾ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ. ಈ ವೇಳೆ ಬೆಳಗಾವಿ ನಗರದ ಮಾರುಕಟ್ಟೆಯಲ್ಲಿ ಜನಸಾಗರ ತುಂಬಿ ತುಳುಕುತ್ತಿತ್ತು ಹೌದು ನಾಳೆ ಬೆಳಗಾಗುವುದಷ್ಟೇ ತಡ, ಮನೆ ಮನೆಗೆ ಗಣೇಶನ ಆಗಮನವಾಗುತ್ತದೆ. ಇನ್ನು ಬೆಳಗಾವಿ ಎಂದರೆ ಕೇಳಬೇಕೆ, ನಗರದಲ್ಲಿ ಗಣೇಶೋತ್ಸವ ಆಚರಣೆಗೆ ತನ್ನದೇ ಆದ ವಿಶೇಷ ಮಹತ್ವವಿದೆ. ಹಾಗಾಗಿ ಗಣೇಶೋತ್ಸವ ಆಚರಣೆಗೆ ಬೇಕಾದ …

Read More »

ಬಸವೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ಗ್ರಾಮದಲ್ಲಿ ಜನಮನ ಸೆಳೆದ‌ ನಿಕಾಲಿ ಜಂಗಿ ಕುಸ್ತಿ

ಚಿಕ್ಕೋಡಿ ತಾಲೂಕಿನ ಇಂಗಳಿ ಗ್ರಾಮದಲ್ಲಿ ಬಸವೇಶ್ವರ ಜಾತ್ರಾಮಹೋತ್ಸವ ಅಂಗವಾಗಿ ನಿಕಾಲಿ ಜಂಗಿ ಕುಸ್ತಿಗಳನ್ನು ಆಯೋಜಿಸಲಾಗಿತ್ತು… ಕಳೆದ 2 ವರ್ಷಗಳಿಂದ ‌ಕೊರೊನಾದಿಂದಾಗಿ ಸರಳವಾಗಿ ನಡೆದಿದ್ದ ಇಂಗಳಿ ಗ್ರಾಮದ ಬಸವೇಶ್ವರ ಜಾತ್ರಾಮಹೋತ್ಸವ ಈ ಬಾರಿ ಅದ್ದೂರಿಯಾಗಿ ಜರುಗಿತು .ಇನ್ನೂ ಜಾತ್ರಾಮಹೋತ್ಸವ ಅಂಗವಾಗಿ ನಿಕಾಲಿ ಜಂಗಿ ಕುಸ್ತಿಗಳನ್ನು ಆಯೋಜಿಸಲಾಗಿತ್ತು.ಇದರಲ್ಲಿ ಕರ್ನಾಟಕ, ಮಹಾರಾಷ್ಟ್ರದ, ಹರಿಯಾಣ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ‌ಹೆಸರಾಂತ ಕುಸ್ತಿಪಟುಗಳು ಭಾಗಿಯಾಗಿದ್ದರು. ಈ ನಿಕಾಲಿ ಜಂಗಿ ಕುಸ್ತಿಗಳನ್ನು ನೋಡಲು ಶಾಸಕ ಗಣೇಶ ಹುಕ್ಕೇರಿ …

Read More »

ರಸ್ತೆಅಗೆದು ಗ್ರಾಮಗಳಿಗೆ ಸಂಚಾರ ಬಂದ್ ಮಾಡಿದ್ದ ಬಿಜೆಪಿ ಮುಖಂಡನ ವಿರುದ್ಧ ಸಾರ್ವಜನಿಕರ ಆಕ್ರೋಶ

ಚಿಕ್ಕೋಡಿ: ತನ್ನ ಜಮೀನಿನಲ್ಲಿ ಕಾಲುವೆ ನೀರು ಬರುತ್ತಿದೆ ಎನ್ನುವ ಕಾರಣಕ್ಕೆ ರಸ್ತೆಯನ್ನು ಅಗೆದು ಎರಡು ಗ್ರಾಮಗಳಿಗೆ ಸಂಚಾರ ಬಂದ್ ಮಾಡಿದ್ದ ಬಿಜೆಪಿ ಮುಖಂಡನೋರ್ವನ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶೇಗುಣಶಿ – ಯಬರಟ್ಟಿ ರಸ್ತೆಯ ಪಕ್ಕದ ತನ್ನ ಗದ್ದೆಯಲ್ಲಿ ನೀರು ನಿಲ್ಲುತ್ತೆ ಎನ್ನುವ ಕಾರಣಕ್ಕೆ ಬಿಜೆಪಿ ಮುಖಂಡ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ತಮ್ಮಣ್ಣ ತೇಲಿ ಎಂಬಾತ ಸರ್ಕಾರದ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ರಸ್ತೆಯನ್ನೆ …

Read More »

ಚಿರತೆ ಹಿಡಿಯುವಲ್ಲಿ ಸರ್ಕಾರ ಯಾವುದೇ ರೀತಿ ವಿಫಲ ಆಗಿಲ್ಲ: ಈರಣ್ಣ ಕಡಾಡಿ

ಬೆಳಗಾವಿಯಲ್ಲಿ ಚಿರತೆ ಪತ್ತೆಗೆ 25ನೇ ದಿನದ ಕಾರ್ಯಾಚರಣೆ ನಡೆಯುತ್ತಿರುವ ಹಿನ್ನೆಲೆ ಗಾಲ್ಫ್ ಕ್ಲಬ್‍ಗೆ ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಭೇಟಿ ನೀಡಿ ಪರಿಶೀಲನೆ ನಡೆಸಿದರು.   ಅರಣ್ಯಾಧಿಕಾರಿಗಳ ಜತೆಗೆ ಚಿರತೆ ಕಾರ್ಯಾಚರಣೆ ಬಗ್ಗೆ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಚರ್ಚೆ ನಡೆಸಿದರು. ಕಾರ್ಯಾಚರಣೆ ಬಗ್ಗೆ ಸಂಪೂರ್ಣ ವಿವರವನ್ನು ಪಡೆದ ಬಳಿಕ ಗಾಲ್ಫ್ ಕ್ಲಬ್‍ನಲ್ಲಿ ರೌಂಡ್ಸ್ ಹೊಡೆದ ಈರಣ್ಣ ಕಡಾಡಿ ಬೋನ್, ಕ್ಯಾಮರಾ ಇಟ್ಟ ಸ್ಥಳಗಳನ್ನು ಪರಿಶೀಲನೆ ನಡೆಸಿದರು.ನಂತರ ಮಾಧ್ಯಮಗಳ ಜೊತೆಗೆ …

Read More »

ಬೆಳಗಾವಿ ನಗರದಲ್ಲಿ ಅದ್ಧೂರಿ ಸಂಗೊಳ್ಳಿ ರಾಯಣ್ಣಾ ಶೋಭಾಯಾತ್ರೆ

ಬೆಳಗಾವಿ ನಗರದಲ್ಲಿ ಕರುನಾಡ ವಿಜಸೇನೆ ಜಿಲ್ಲಾ ಘಟಕ ಬೆಳಗಾವಿ ಜಿಲ್ಲೆ ಹಾಗೂ ರಾಯಣ್ಣನ ಅಭಿಮಾನಿ ಬಳಗದ ವತಿಯಿಂದ ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣನ ಅದ್ಧೂರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಹೌದು ಕರುನಾಡ ವಿಜಯಸೇನೆ ಜಿಲ್ಲಾ ಘಟಕ ಬೆಳಗಾವಿ ಹಾಗೂ ರಾಯಣ್ಣನ ಅಭಿಮಾನಿ ಬಳಗದ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಅದ್ಧೂರಿ ಉತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ರಾಯಣ್ಣ ಉತ್ಸವ ಪ್ರಯುಕ್ತ ಬೃಹತ್ ಶೋಭಾಯಾತ್ರೆಯನ್ನೂ ಕೂಡ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಟ್ರ್ಯಾಕ್ಟರ್‍ನಲ್ಲಿ ಬೃಹತ್ ರಾಯಣ್ಣನ ಮೂರ್ತಿಯನ್ನು …

Read More »

25 ದಿನವಾದರೂ ಸಿಗದ ಚಿರತೆ

ಬೆಳಗಾವಿ ಗಾಲ್ಫ್ ಮೈದಾನದಲ್ಲಿ 25ನೇ ದಿನವೂ ಚಿರತೆಯ ಕಾರ್ಯಾಚರಣೆ ಮುಂದುವರಿದಿದೆ. ಗಾಲ್ಫ್ ಮೈದಾನದ ಉತ್ತರ ಧಿಕ್ಕಿನ ನೀರಿನ ಹೊಂಡದ ಬಳಿ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ. ಹೆಜ್ಜೆ ಗುರುತು ಜಾಡು ಹಿಡಿದು ಶೋಧ ಕಾರ್ಯವನ್ನು ಸಿಸಿಎಫ ಮಂಜುನಾಥ ಚವ್ಹಾಣ, ಡಿಎಫ್ಓ ಡಾ.ಅಂಥೋನಿ, ಎಸಿಎಫ್ ಮಲ್ಲಿನಾಥ ಕುಸನಾಳ ನೇತೃತ್ವದ ತಂಡದಿಂದ ಮಾಡಲಾಗುತ್ತಿದೆ. ಇನ್ನು ಹೆಜ್ಜೆ ಗುರುತು ಪತ್ತೆ ಸ್ಥಳಕ್ಕೆ ಅರವಳಿಕೆ ತಜ್ಞರು ಬಂದಿದ್ದು. ಹನುಮಾನ್, ಜಾಧವ ನಗರ ಸಂಪರ್ಕಿಸುವ ಡಬಲ್ ರಸ್ತೆ …

Read More »

ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜಿನಾಮೆ ನೀಡುತ್ತೇನೆ: ಉಮೇಶ ಕತ್ತಿ

ಚಿರತೆ ಸಿಗದ ಕಾರಣ ಉಮೇಶ ಕತ್ತಿ ರಾಜೀನಾಮೆಗೆ ಒತ್ತಾಯಿಸಿದ ಹಿನ್ನೆಲೆ ವಿಜಯಪುರದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅರಣ್ಯ ಸಚಿವ ಉಮೇಶ ಕತ್ತಿ ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜಿನಾಮೆ ನೀಡುತ್ತೇನೆ ಎಂದಿದ್ದಾರೆ. ವಿಜಯಪುರದಲ್ಲಿ ಇಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ನಾನು ರಾಜೀನಾಮೆ ಕೊಟ್ಟರೆ ಚಿರತೆ ಸಿಗುತ್ತದೆ ಎಂದರೆ ನಾಳೆಯೇ ರಾಜಿನಾಮೆ ನೀಡುತ್ತೇನೆ.ಚಿರತೆ ಸಿಕ್ಕರೆ ನಂದೇನು ತಕರಾರಿಲ್ಲಾ .ಚಿರತೆ ಹಿಡಿಯಲು ಉತ್ತರ ಕರ್ನಾಟಕ ಭಾಗದ ಸ್ಟಾಫ್ ಹಾಕಿದ್ದೇವೆ. ಆನೆಗಳನ್ನು …

Read More »

ಹೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆನಂದ ಪಾಟೀಲ ಸಾವು

ಅಥಣಿ ತಾಲೂಕಿನ ತಂಗಡಿ ಗ್ರಾಮದ ನಿವಾಸಿ ಆನಂದ ಪಾಟೀಲ (೪೮) ಮೃತ ದುರ್ದೈವಿ ಮೃತನ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರ ಪಟ್ಟು. ವಿದ್ಯುತ್ ಲೈನ್ ರಿಪೇರಿ ಮಾಡುವಾಗ ವಿದ್ಯುತ್ ತಗುಲಿ ಹೆಸ್ಕಾಂ ಲೈನ್ ಮೆನ್ ಸಹಾಯಕ ಮೃತಪಟ್ಟಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಶಿನಾಳ ಗ್ರಾಮದಲ್ಲಿ ಘಟನೆ ಅಥಣಿ ತಾಲೂಕಿನ ತಂಗಡಿ ಗ್ರಾಮದ ನಿವಾಸಿ ಆನಂದ ಪಾಟೀಲ (೪೮) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಹೆಸ್ಕಾಂ ಲೈನ್ ಮನ್ …

Read More »

ಶ್ರಾವಣ ಮಾಸ ಪ್ರಯುಕ್ತ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ( ಪಲ್ಲಕ್ಕಿ ) ಹಾಗೂ ಜಾತ್ರಾ ಮಹೋತ್ಸವ

ಗೋಕಾಕ: ಶ್ರಾವಣದ ಮಾಸ ಸದಾ ಹಬ್ಬ ಹರಿದಿನಿ ಭಕ್ತಿ ಗಳಿಂದ ಕೂಡಿದ ಮಾಸ ಇದರ ಪ್ರಯುಕ್ತ ನಾಡಿ ನಾದ್ಯಂತ ಸಡಗರ ಸಂಭ್ರಮ ಗಳು ಜರಗುತ್ತವೆ. ಇದರ ಪ್ರಯುಕ್ತವಾಗಿಶ್ರಾವಣ ಮಾಸ ಸಪ್ತಾಹದ ಮಂಗಳ ಮಹೋತ್ಸವದ ಅಂಗವಾಗಿ ಗೋಕಾಕ ನಗರದ ಕಿಲ್ಲಾದ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಪ್ರಯುಕ್ತ ಪಲ್ಲಕ್ಕಿಯೊಂದಿಗೆ ನಗರ ಪ್ರದಕ್ಷಿಣೆ ಜರುಗಿತು.     ಈ ಕಾರ್ಯಕ್ರಮದಲ್ಲಿ ಕಿಲ್ಲಾದ ಅನೇಕ ಹಿರಿಯರು ಯುವಕರು ಪಾಲ್ಗೊಂಡಿದ್ದರು ಅನೇಕ ಸುಮಂಗಲಿಯರು ಕಳಶದೊಂದಿಗೆ …

Read More »