ಬೆಳಗಾವಿ: ದೇಶ ಪ್ರಗತಿ ಸಾಧಿಸಲು ಮಹಿಳೆಯ ಪಾತ್ರ ದೊಡ್ಡದು. ಎರಡನೇ ಮಹಾಯುದ್ಧದ ನಂತರ ಜಪಾನ ಮಹಿಳೆಯರು ಕೈ ಕಟ್ಟಿ ಕುಳಿತಿದ್ದರೇ ಆ ದೇಶ ಇಂದು ಇಷ್ಟು ಪ್ರಗತಿ ಹೊಂದಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ನಮ್ಮ ದೇಶದಲ್ಲೂ ಮಹಿಳೆಯರು ಸ್ವಾವಲಂಬಿಗಳಾಗಿ ಹೆಚ್ಚು ಬೆಳೆಯಬೇಕಿದ್ದು, ಇದಕ್ಕಾಗಿಯೇ ಹೆಣ್ಣು ಮಕ್ಕಳ ಸಂರಕ್ಷಣೆ ಮತ್ತು ಸುರಕ್ಷತೆ ಮಹತ್ವ ನೀಡಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭೂಷಣ ಬೋರಸೆ ಹೇಳಿದರು. ಜಿಲ್ಲಾಡಳಿತ, ಜಿಪಂ, ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ …
Read More »ಫೆ.28ರಂದುಮಹಿಳೆಯರಿಗಾಗಿ ಡಿಜಿಟಲ್ ಮಾರ್ಕೆಟಿಂಗ್
ಬೆಳಗಾವಿ:ಪರಂಪರಾ ಮಹಿಳಾ ವೇದಿಕೆಯಿಂದ ನಗರದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದಲ್ಲಿ ಫೆ.28ರಂದು ಬೆಳಗ್ಗೆ 10ಕ್ಕೆ ಮಹಿಳೆಯರಿಗಾಗಿ ಡಿಜಿಟಲ್ ಮಾರ್ಕೆಟಿಂಗ್ ಕುರಿತು ಕುರಿತು ಒಂದು ದಿನದ ಉಚಿತ ಕಾರ್ಯಾಗಾರ ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಪ್ರಿಯಾ ಪುರಾಣಿಕ ತಿಳಿಸಿದರು. ನಗರದಲ್ಲಿ ಗುರುವಾರ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಮಹಿಳಾ ಉದ್ಯಮಿಗಳಿಗೆ ಡಿಜಿಟಲ್ ಮಾರ್ಕೆಟಿಂಗ್ ನಿರ್ವಹಣೆ ಕುರಿತ ವಿವಿಧ ವಿಷಯಗಳನ್ನು ಕಾರ್ಯಾಗಾರದಲ್ಲಿ ಪರಿಚಯಿಸಲಾಗುವುದು. ತಮ್ಮ ಉತ್ಪನ್ನಗಳನ್ನು ಆನ್‌ಲೈನ್‌ನಲ್ಲಿ ಮಾರಾಟ ಮಾಡುವುದು ಮತ್ತು ಡಿಜಿಟಲ್ …
Read More »ಸೇತುವೆ ಕಾಮಗಾರಿಗೆ ಮೃಣಾಲ್ ಹೆಬ್ಬಾಳಕರ್ ಚಾಲನೆ
ಬೆಳಗಾವಿ : ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಾವಗಾಂವ ಹಾಗೂ ಬೆನಕನಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯ ಸೇತುವೆ ಕಾಮಗಾರಿಗೆ ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳಕರ್ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಸೇರಿ ಗುರುವಾರ ಭೂಮಿ ಪೂಜೆ ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು. ಸುಮಾರು 30 ಲಕ್ಷ ರೂ,ಗಳ ವೆಚ್ಚದಲ್ಲಿ ಸೇತುವೆ ನಿರ್ಮಾಣಗೊಳ್ಳಲಿದೆ, ಜನರ ಬಹುದಿನದ ಬೇಡಿಕೆಯಾಗಿದ್ದ ಈ ಸೇತುವೆ ನಿರ್ಮಾಣದಿಂದ ಸಂಚಾರ ವ್ಯವಸ್ಥೆ ಸುಗಮವಾಗಲಿದ್ದು, ಗ್ರಾಮೀಣ ಭಾಗದ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. …
Read More »ಮಚ್ಚೆ ಗ್ರಾಮದ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಮಸಿ ಬಳಿದ ಕಿಡಿಗೇಡಿಗಳು
ಬೆಳಗಾವಿ: ಮಚ್ಚೆ ಗ್ರಾಮದಲ್ಲಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಗೆ ಗುರುವಾರ ರಾತ್ರಿ ಕಿಡಿಗೇಡಿಗಳು ಮಸಿ ಬಳಿದಿದ್ದಾರೆಂಬ ಆರೋಪ ಕೇಳಿ ಬಂದಿದ್ದು, ಸ್ಥಳದಲ್ಲಿ ಕೆಲಹೊತ್ತು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು ರಾಯಣ್ಣ ಮೂರ್ತಿಗೆ ಮೊದಲು ಕಪ್ಪು ಬಣ್ಣವೇ ಇತ್ತು. ಅದರ ಮೇಲೆಯೇ ಮತ್ತೆ ಕರಿ ಮಸಿ ಸುರಿದಿದ್ದಾರೆಂದು ತಡರಾತ್ರಿ ತಿಳಿದು ಬಂದಿದ್ದು, ಕೆಲಕಾಲ ಯಾರೂ ಇದನ್ನು ಗಮನಿಸಿರಲಿಲ್ಲ. ರಾತ್ರಿ ಗ್ರಾಮದ ಕೆಲವು ಯುವಕರ ಗಮನಕ್ಕೆ ಬಂದಿದೆ. ಕೆಲವೇ ನಿಮಿಷಗಳಲ್ಲಿ ಹಲವರು ಸ್ಥಳದಲ್ಲಿ ಸೇರಿ …
Read More »ಇನ್ನೂ 10 ವರ್ಷ ರಾಜಕೀಯದಲ್ಲಿ ಇರುತ್ತೇನೆ: ಸತೀಶ್ ಜಾರಕಿಹೊಳಿ
ಬೆಂಗಳೂರು: ಉದ್ದಿಮೆ ಜೊತೆಗೆ ರಾಜಕೀಯದಲ್ಲಿ ಇದ್ದುಕೊಂಡು 30 ವರ್ಷದಿಂದ ಸಮಾಜಸೇವೆ ಮಾಡುತ್ತಿದ್ದೇನೆ. ಈ ವೇಳೆ ಹಲವು ಏಳು-ಬೀಳು ಕಂಡಿದ್ದೇನೆ. ಕನಿಷ್ಠ 10 ವರ್ಷ ರಾಜಕೀಯದಲ್ಲಿದ್ದು ನಾಡಿನ ಅಭಿವೃದ್ಧಿಗೆ ಇನ್ನಷ್ಟು ಪೂರಕವಾಗಿ ಕೆಲಸ ಮಾಡುವುದಾಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಬೆಂಗಳೂರು ಪ್ರೆಸ್ಕ್ಲಬ್ನಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರೆಸ್‌ಕ್ಲಬ್ ವರ್ಷದ ವ್ಯಕ್ತಿ’ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು. ಸಿಎಂ ಸಿದ್ದರಾಮಯ್ಯ ಜೊತೆ 25 ವರ್ಷದಿಂದ ರಾಜಕೀಯದಲ್ಲಿದ್ದೇನೆ. ಈ ವೇಳೆ ಶೋಷಿತರಿಗೆ ಸಾಮಾಜಿಕ …
Read More »“ಮಾರ್ಚ್ 11 ರಿಂದ 15 ವರೆಗೆ ನಿಪ್ಪಾಣಿಯಲ್ಲಿ ಅದ್ದೂರಿ ಕೃಷಿ ಉತ್ಸವ”
ನಿಪ್ಪಾಣಿ: ನಗರದ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ಅವರಣರದಲ್ಲಿ ಶ್ರೀ ಬೀರೇಶ್ವರ ಕೋ ಆಫ್ ಕ್ರೆಡಿಟ್ ಸೋಸಾಯಿಟಿ ಲಿ.,ಯಕ್ಸಂಬಾ (ಮಲ್ಟಿ – ಸ್ಟೇಟ್) ಹಾಗೂ ಹಾಲಸಿದ್ದನಾಥ ಸಕ್ಕರೆ ಕಾರ್ಖಾನೆ ನಿಯಮಿತ.,(ಬಹು -ರಾಜ್ಯ) ಸಂಯುಕ್ತಾಶ್ರಯದಲ್ಲಿ ಮಾರ್ಚ 11 ರಿಂದ 15 ವರೆಗೆ 5 ದಿನಗಳ ಕಾಲ ನಡೆಯಲಿರುವ ಬೃಹತ್ “ಕೃಷಿ ಉತ್ಸವ” ಕಾರ್ಯಕ್ರಮದ ಕುರಿತು ಪೂರ್ವಭಾವಿ ಸಭೆಯನ್ನು ಡಿ.ಸಿ.ಸಿ.ಬ್ಯಾಂಕ್ ಅಧ್ಯಕ್ಷರಾದ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಸಭೆ ನಡೆಸಿ,ಸಲಹೆ ಸೂಚನೆಗಳನ್ನು ನೀಡಿದರು. …
Read More »ಲೈಂಗಿಕ ಅಲ್ಪಸಂಖ್ಯಾತರಿಗೆ ಬಜೆಟ್‌ನಲ್ಲಾದರೂ ಅನುದಾನ ಕೊಡಬೇಕು
ಬೆಳಗಾವಿ : ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಮುಂಚೆ ಲೈಂಗಿಕ ಅಲ್ಪಸಂಖ್ಯಾತರಿಗೆ 200 ಕೋಟಿ ರೂ. ಮೀಸಲಿಡುವುದಾಗಿ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿತ್ತು. ಆದರೆ ಅಧಿಕಾರಕ್ಕೆ ಬಂದು ಎರಡೂವರೆ ವರ್ಷವಾದರೂ ತನ್ನ ಮಾತು ಉಳಿಸಿಕೊಳ್ಳುತ್ತಿಲ್ಲ. ಈ ಸಲದ ಬಜೆಟ್‌ನಲ್ಲಾದರೂ ಅನುದಾನ ಕೊಡಬೇಕು. ಇಲ್ಲದಿದ್ದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡಲಾಗುವುದು ಎಂದು ಲಿಂಗತ್ವ ಮತ್ತು ಲೈಂಗಿಕ ಬಹುತ್ವಕ್ಕಾಗಿ ಚಳವಳಿಯ ರಾಜ್ಯ ಸಮಿತಿ ಸದಸ್ಯೆ ಐನಾ ಹೇಳಿದರು. ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣೆ ಪ್ರಚಾರದಲ್ಲಿ …
Read More »ಬೆಳಗಾವಿಯ ಬಿಮ್ಸ ಆಸ್ಪತ್ರೆಯ ಶುಶ್ರೂಷಕರ ಮೇಲಿನ ಹಲ್ಲೆ ಖಂಡಿಸಿ ಸ್ಪಾಫ್ ನರ್ಸ್‌ಗಳ ಪ್ರತಿಭಟಿಸಿದ
ಬೆಳಗಾವಿ : ಜಿಲ್ಲಾ ಆಸ್ಪತ್ರೆ ಶುಶ್ರೂಷಕರೊಬ್ಬರ ಮೇಲೆ ರೋಗಿಯ ಸಂಬಂಧಿಗಳು ಹಲ್ಲೆ ಮಾಡಿದ್ದಾರೆನ್ನಲಾದ ಘಟನೆ ಖಂಡಿಸಿ ಇಲ್ಲಿನ ಬಿಮ್ಸ್ ಆಸ್ಪತ್ರೆಯ ಶುಶ್ರೂಷಕರು ಬುಧವಾರ ಕೆಲಹೊತ್ತು ತಮ್ಮ ಸೇವೆ ಸ್ಥಗಿತಗೊಳಿಸಿ ತುರ್ತು ನಿಗಾ ಘಟಕದ ಎದುರು ಪ್ರತಿಭಿಟಿಸಿದರು. ಮಂಗಳವಾರ ಸಂಜೆ ತನ್ನ ವಾರ್ಡ್ ಬಿಟ್ಟು ಬೇರೊಂದು ವಾರ್ಡ್‌ಗೆ ಬಂದಿದ್ದ ಮಾನಸಿಕ ಅಸ್ವಸ್ಥ ಮಹಿಳೆಯೊಬ್ಬರನ್ನು ಪ್ರಶ್ನಿಸಿದ್ದ ಸ್ಪಾಫ್ ನರ್ಸ್ ಬಸವರಾಜ ಕಬಾಡಗಿ, ಮಹಿಳೆಯ ಕೈ ಹಿಡಿದು ವಾರ್ಡ್‌ಗೆ ಹೋಗುವಂತೆ ಹೇಳಿದ್ದರಂತೆ. ಇದೇ ವಿಷಯಕ್ಕೆ …
Read More »ಹೂವು ಮಾರುಕಟ್ಟೆ ವಿವಾದ ಅಂತ್ಯ
ಬೆಳಗಾವಿ : ಎಪಿಎಂಸಿ ಕಾಯ್ದೆಯಡಿ ಅನುಮತಿ ಇರುವಲ್ಲಿ ಮಾತ್ರವೇ ಹೂವಿನ ಹೊಲಸೇಲ್ ಮಾರುಕಟ್ಟೆ ಮಾಡಲು ಅವಕಾಶವಿದ್ದು, ಅನುಮತಿ ಇಲ್ಲದೆಡೆ ಎಲ್ಲೇ ಮಾರುಕಟ್ಟೆ ಮಾಡಿದರೂ ಅದು ಮಾನ್ಯವಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದರು. ನಗರದಲ್ಲಿ ದಂಡು ಮಂಡಳಿಯಿಂದಲೂ ಹೂವಿನ ಮಾರುಕಟ್ಟೆ ಆರಂಭಿಸಲು ಮುಂದಾಗಿದ್ದರಿಂದ ಎರಡು ಬಣಗಳ ಮಧ್ಯೆ ವಿವಾದ ಉಂಟಾಗಿರುವ ಹಿನ್ನೆಲೆ ಬುಧವಾರ ವ್ಯಾಪಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ದಂಡುಮಂಡಳಿ ವ್ಯಾಪ್ತಿಯಲ್ಲಿ ಕಳೆದ ವಾರ ಖಾಸಗಿ ಹೂವಿನ …
Read More »ಬೆಳಗಾವಿ :ವೈಭವ ನಗರದಲ್ಲಿ ಕುಡಿಯುವ ನೀರಿಗೆ ಸಮಸ್ಯೆ
ಬೆಳಗಾವಿ :ಸದ್ಯ ಬೇಸಿಗೆ ಆರಂಭಗೊಳ್ಳುತ್ತಿದಂತೆಯೇ ನಗರದ ವಿವಿಧ ಬಡಾವಣೆಗಳಲ್ಲಿರುವ ಮನೆಯಂಗಳದ ಕೊಳವೆಬಾವಿಗಳ ಅಂತರಜಲ ಮಟ್ಟ ಕುಸಿದಿದ್ದು, ನಿವಾಸಿಗಳು ಸಾರ್ವಜನಿಕ ನೀರು ಸರಬರಾಜು ವ್ಯವಸ್ಥೆಯನ್ನೇ ಹೆಚ್ಚು ಅವಲಂಬಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಈ ಮಧ್ಯೆ ನಗರಕ್ಕೆ ಹೊಂದಿಕೊಂಡಿರುವ ಅನೇಕ ಬಡಾವಣೆಗಳಲ್ಲಿ ಎರಡು ವಾರಕ್ಕೊಮ್ಮೆ ನೀರು ಬರುತ್ತಿದ್ದು, ಜನ ತತ್ತರಿಸಿ ಹೋಗಿದ್ದಾರೆ. ಇಲ್ಲಿನ ನ್ಯೂ ವೈಭವ ನಗರ ಹಾಗೂ ಶ್ರೀರಾಮ ಕಾಲನಿ ಸುತ್ತಮುತ್ತಲಿನ 11 ಬಡಾವಣೆಗಳಿಗೆ 15 ದಿನಕ್ಕೊಮ್ಮೆ ನೀರು ಬರುತ್ತಿದೆ. ಅದರಲ್ಲೂ ಹದಿನೈದು …
Read More »
Laxmi News 24×7