Breaking News

ಬೆಳಗಾವಿ

ಸಂತೋಷ್ ಖಂಡ್ರಿ ಗೋಕಾಕ ನಗರದ ಯುವಕರ ಕಣ್ಮಣಿ ನಿಧನ: ಸಂತಾಪ ಸೂಚಿಸಿದ ಜಾರಕಿಹೊಳಿ ಕುಟುಂಬ

ಗೋಕಾಕ: ಸಂತೋಷ್ ಖಂಡ್ರಿ ಗೋಕಾಕ ನಗರದ ಯುವಕರ ಕಣ್ಮಣಿ ಅನ್ಯಾಯದ ವಿರುದ್ಧ ಸಮರಕ್ಕೆ ಸಿದ್ದವಾಗುವ ಯುವಕ, ಇವರು ಹಾಗೂ ಸಂಗಡಿಗರೊಂದಿಗೆ ಶಬರಿ ಮಲೆ ಯಾತ್ರೆಗೆ ಗೋಕಾಕ ನಿಂದ ತೆರಳಿದ್ದರು, ಕೇರಳದ ಕಣ್ಣೂರು ರೈಲ್ವೇ ನಿಲ್ದಾಣದ ಬಳಿ ರೈಲ್ವೇ ಅಪಘಾತದಲ್ಲಿ ಇವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ, ಗೋಕಾಕ ನಗರದ ಬಿಜೆಪಿ ಕಾರ್ಯಕರ್ತರು, ಹಾಗೂ ಕರವೇ ಸ್ವಾಭಿಮಾನಿ ಬಣದ ಗೋಕಾಕ ತಾಲೂಕಾಧ್ಯಕ್ಷರಾಗಿ ಕೂಡ ಗುರುತಿಸಿ ಕೊಂಡಿದ್ದಾರೆ, ಸಾಹುಕಾರ ಮನೆತನದ ಚಿಕ್ಕವರು ಹಾಗೂ ದೊಡ್ಡವರ …

Read More »

ಕೆಪಿಟಿಸಿಎಲ್‌ ಅಕ್ರಮ ಪರೀಕ್ಷೆ: ಬಂಧಿತರ‌ ಸಂಖ್ಯೆ ಅರ್ಧ ಶತಕ

ಬೆಳಗಾವಿ: ಕೆಪಿಟಿಸಿಎಲ್ ಕಿರಿಯ ಸಹಾಯಕ ಲಿಖಿತ ಪರೀಕ್ಷೆಯಲ್ಲಿ ಇಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್ ತೆಗೆದುಕೊಂಡು ಪರೀಕ್ಷೆ ಬರೆದಿದ್ದ ಮತ್ತೊಬ್ಬ ಅಭ್ಯರ್ಥಿಯನ್ನು ಗುರುವಾರ ಬಂಧಿಸುವ ಮೂಲಕ ಬಂಧಿತರ ಸಂಖ್ಯೆ ಅರ್ಧ ಶತಕವಾಗಿದೆ.   ಕಲ್ಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ದರ್ಗಾಶಿರೂರ ಗ್ರಾಮದ ಶಿವರಾಜ್‌ ಲಕ್ಷ್ಮೀಪುತ್ರ ಪೊಲೀಸ್ ಪಾಟೀಲ್ (28) ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ಈವರೆಗೆ ಒಟ್ಟು 50 ಜನರನ್ನು ಬಂಧಿಸಿದಂತಾಗಿದೆ. 7 ಆಗಸ್ಟ್ 2022ರಂದು ನಡೆದಿದ್ದ ಪರೀಕ್ಷೆ ಬರೆದಿದ್ದರು. ಪರೀಕ್ಷೆ ವೇಳೆ …

Read More »

ಸಿಎಂ ಮನೆ ಮುಂದೆ ಪ್ರತಿಭಟನೆ ಮಾಡಲು ನಿರ್ಧರಿಸಿದ ಪಂಚಮಸಾಲಿ ಸಮಾಜ

ಹಾವೇರಿ: ಪಂಚಮಸಾಲಿ ಸಮುದಾಯಕ್ಕೆ 2A ಬದಲಾಗಿ 2D ಮಿಸಲಾತಿ ನೀಡಿರುವ ಹಿನ್ನಲೆ ನಾಳೆ(ಜ.13) ಶಿಗ್ಗಾಂವಿಯಲ್ಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮನೆ ಮುಂದೆ ಪಂಚಮಸಾಲಿ ಸಮಾಜ ಪ್ರತಿಭಟನೆ ನಡೆಸಲು ನಿರ್ಧರಿಸಿದೆ. ಶಿಗ್ಗಾಂವಿಯ ರಾಣಿ ಚೆನ್ನಮ್ಮ ಸರ್ಕಲ್​ನಿಂದ ಬೆಳಗ್ಗೆ 10 ಗಂಟೆಗೆ ಸಿಎಂ ನಿವಾಸದವರೆಗೂ ಬೃಹತ್ ಪಾದಯಾತ್ರೆ ನಡೆಯಲಿದೆ.   ಪಂಚಮಸಾಲಿ ಸಮಾಜದ ಜಯ ಮೃತ್ಯುಂಜಯ ಸ್ವಾಮೀಜಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ, ವಿಜಯಾನಂದ ಕಾಶಪ್ಪನವರ, ಅರವಿಂದ ಬೆಲ್ಲದ, ಶಾಸಕಿ ಲಕ್ಷ್ಮಿ …

Read More »

ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಬೆಳಗಾವಿಯಲ್ಲಿಯೂ ಧರ್ಮ ದಂಗಲ್‌ ಶುರು

ಬೆಳಗಾವಿ: ವಿಧಾನಸಭೆ ಸಾರ್ವತ್ರಿಕ ಚುನಾವಣೆಗೆ ಇನ್ನು ಕೆಲವೇ ತಿಂಗಳು ಬಾಕಿ ಇರುವಾಗ ಬೆಳಗಾವಿಯಲ್ಲಿಯೂ ಧರ್ಮ ದಂಗಲ್‌ ಶುರುವಾಗಿದ್ದು, ಇಲ್ಲಿಯ ಸಾರಥಿ ನಗರದಲ್ಲಿ ವಸತಿ ನಿವೇಶನಕ್ಕೆ ಅನುಮತಿ ಪಡೆದು ಮಸೀದಿ ನಿರ್ಮಿಸಲಾಗಿದೆ ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಈ ಅನ ಧಿಕೃತ ಮಸೀದಿ ತೆರವಿಗೆ ಪಟ್ಟು ಹಿಡಿದಿವೆ. ಬೆಳಗಾವಿ ಗ್ರಾಮಿಣ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಸಾರಥಿ ನಗರದಲ್ಲಿ ಕರ್ನಾಟಕ ಸರ್ಕಾರದ ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ ಖಾಸಗಿ ಲೇಔಟ್‌ ನಿರ್ಮಿಸಲಾಗಿದೆ. ನಿವೇಶನ ಸಂಖ್ಯೆ …

Read More »

ಬಿಜೆಪಿ ಪಾಪದ ಕೊಳೆ’ ತೊಳೆದ ಸಿದ್ದರಾಮಯ್ಯ, ಡಿಕೆಶಿ

ಬೆಳಗಾವಿ: ಇಲ್ಲಿನ ಕಾಂಗ್ರೆಸ್‌ ರಸ್ತೆಯಲ್ಲಿರುವ ವೀರಸೌಧದ ಆವರಣದಲ್ಲಿ ಬುಧವಾರ, ಕಾಂಗ್ರೆಸ್‌ ‘ಪ್ರಜಾಧ್ವನಿ’ ಯಾತ್ರೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಚಾಲನೆ ನೀಡಿದರು. ‘ಬಿಜೆಪಿ ಪಾಪದ ಕೊಳೆ’ ತೊಳೆಯುವ ಸಂಕೇತವಾಗಿ ಎಲ್ಲ ನಾಯಕರೂ ಪೊರಕೆ ಹಿಡಿದು, ನೀರು ಹಾಕಿ ರಸ್ತೆಯಲ್ಲಿ ಗುಡಿಸಿದರು.   1924ರಲ್ಲಿ ಮಹಾತ್ಮ ಗಾಂಧಿ ಅವರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್‌ ಅಧಿವೇಶನದ ನಡೆದಿತ್ತು. ಗಾಂಧೀಜಿ ಅಧ್ಯಕ್ಷತೆ ವಹಿಸಿಕೊಂಡ ಏಕಮಾತ್ರ ಅಧಿವೇಶನವದು. ಅದರ ನೆನಪಿಗಾಗಿ ವೀರಸೌಧ ನಿರ್ಮಿಸಲಾಗಿದೆ. ಐತಹಾಸಿಕ …

Read More »

ಆರೋಗ್ಯ ತಪಾಸಣೆ ಶಿಬಿರ ಇಂದು

ಅಥಣಿ: ಕೆಎಲ್‌ಇ ಸಂಸ್ಥೆಯ ಎಸ್‌ಎಂಎಸ್ ಮಹಾವಿದ್ಯಾಲಯದಲ್ಲಿ ಜ. 11ರಂದು ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಎಸ್‌ಎಂಎಸ್ ಮಹಾವಿದ್ಯಾಲ ಯದ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಹಂಜಿ ತಿಳಿಸಿದರು. ಇಲ್ಲಿನ ಎಸ್‌ಎಂಎಸ್ ಮಹಾವಿದ್ಯಾಲಯದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರದ ಕರಪತ್ರ ಬಿಡುಗಡೆಗೊಳಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಎಲ್‌ಇ ಸಂಸ್ಥೆಯ ಕಾರ್ಯಧ್ಯಕ್ಷ ಡಾ.ಪ್ರಭಾಕರ ಕೋರೆ ಅವರ ಜನ್ಮ ದಿನದ ಅಮೃತ ಮಹೋತ್ಸವದ ಅಂಗವಾಗಿ ಕೆಎಲ್‌ಇ ವಿಶ್ವವಿದ್ಯಾಲಯ, ಜವಾಹರಲಾಲ್ …

Read More »

ಪ್ರಜಾಧ್ವನಿ’ ಕಾಂಗ್ರೆಸ್ ಬಸ್ ಯಾತ್ರೆಗೆ ಚಾಲನೆ; ರಾಜ್ಯದಲ್ಲಿ ಬದಲಾವಣೆಗೆ ನಾಂದಿ ಹಾಡಿದ್ದೇವೆ ಎಂದ ಡಿ.ಕೆ.ಶಿವಕುಮಾರ್

ಬೆಳಗಾವಿ: ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿರುವ ವಿಪಕ್ಷ ಕಾಂಗ್ರೆಸ್ ಬಸ್ ಯಾತ್ರೆ ಆರಭವಾಗಿದೆ. ಗಡಿ ಜಿಲ್ಲೆ ಬೆಳಗಾವಿಯ ವೀರಸೌಧದಿಂದ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಪಕ್ಷ ನಾಯಕ ಸಿದ್ದರಾಮಯ್ಯ, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಚಾಲನೆ ನಿಡಿದರು.   ಬೆಳಗಾವಿಯ ವೀರಸೌಧದ ಬಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಪ್ರಜಾಧ್ವನಿ ಬಸ್ ಯಾತ್ರೆಗೆ ಚಾಲನೆ ನೀಡಲಯಿತು. ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ …

Read More »

ನೀರಿನ ಸಂಪಿಗೆ ಬಿದ್ದು ನರ್ಸರಿ ಓದುವ ಮಕ್ಕಳಿಬ್ಬರು ಸಾವು

ಬೆಳಗಾವಿ: ನಿರ್ಮಾಣದ ಹಂತದಲ್ಲಿದ್ದ ಕಟ್ಟಡದ ನೀರಿನ ಸಂಗ್ರಹದ ಸಂಪ್ ದಲ್ಲಿ ಬಾಲಕರಿಬ್ಬರು ಬಿದ್ದು ಮೃತಪಟ್ಟಿರುವ ದಾರುಣ ಘಟನೆ ಸವದತ್ತಿಯಲ್ಲಿ ಮಂಗಳವಾರ ನಡೆದಿದೆ. ಮಂಗಳವಾರದಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಸೌದತ್ತಿ ನಗರ ಗುರ್ಲ್ ಹೊಸೂರು ವಾರ್ಡಿನಲ್ಲಿರುವ ನಿರ್ಮಾಣ ಹಂತದಲ್ಲಿರುವ ವಾಲ್ಮೀಕಿ ಭವನದಲ್ಲಿ ಈ ದುರ್ಘಟನೆ ನಡೆದಿದೆ.   ಕಟ್ಟಡದ ನೀರು ಸಂಗ್ರಹ ಮಾಡುವ ಸಂಪಿನಲ್ಲಿ ಪ್ರಗತಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಖಾಸಗಿ ಶಾಲೆಯ ನರ್ಸರಿ ಓದುತ್ತಿರುವ ಶ್ಲೋಕ ಶಂಭುಲಿಂಗಪ್ಪ …

Read More »

ಮೊಟರ್ ಸೈಕಲ್ ಹಿಂದೆ ಕುಳಿತು ಕುತ್ತಿಗೆ ಕೊಯ್ದಿದ್ದ ಖತರ್ನಾಕ್ ಮಹಿಳೆಗೆ 5 ವರ್ಷ ಜೈಲು*

ಬೆಳಗಾವಿ: ತನ್ನ ಮಗನನ್ನು ಕೊಂದಿದ್ದಾರೆಂದು ತಪ್ಪು ತಿಳಿದು ವ್ಯಕ್ತಿಯೊಬ್ಬನ ಕುತ್ತಿಗೆಗೆ ಇರಿದು ಕೊಲೆ ಮಾಡಲು ಯತ್ನಿಸಿದ್ದ ಮಹಿಳೆಗೆ ಬೆಳಗಾವಿಯ 9ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ. ದಂಡ ವಿಧಿಸಿ ಸೋಮವಾರ ತೀರ್ಪು ನೀಡಿದೆ. ಮೂಲತಃ ಬೆಳಗಾವಿ ತಾಲೂಕಿನ ಸೋನಟ್ಟಿಯ ಹಾಲಿ ಕಾಕತಿ ಲಕ್ಷ್ಮೀ ನಗರ ನಿವಾಸಿ ಈರವ್ವಾ ಸಿದ್ದಪ್ಪ ಮುಚ್ಚಂಡಿ ಶಿಕ್ಷೆಗೀಡಾದ ಆರೋಪಿ ಮಹಿಳೆ. ಆರೋಪಿಯ ಪುತ್ರ 2017ರಲ್ಲಿ …

Read More »

ಕಾನೂನಾತ್ಮಕ ಅನುಮತಿ ಪಡೆದು ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿ ನಿರ್ಮಾಣ: ಕವಟಗಿಮಠ

ಚಿಕ್ಕೋಡಿ: ಚಿಕ್ಕೋಡಿ ನಗರದಲ್ಲಿ ನಿರ್ಮಾಣವಾಗುತ್ತಿರುವ ಕಿತ್ತೂರ ರಾಣಿ ಚೆನ್ನಮ್ಮ ಪುತ್ಥಳಿ ನಿರ್ಮಾಣಕ್ಕೆ ಕೆಲವು ರಾಜಕೀಯ ಹಿತಾಸಕ್ತಿಗಳು ವಿರೋಧ ಮಾಡುತ್ತಿರುವುದನ್ನು ಬಿಜೆಪಿ ಖಂಡಿಸುತ್ತದೆ. ಪುತ್ಥಳಿ ನಿರ್ಮಾಣಕ್ಕೆ ಬೇಕಾದ ಅನುಮತಿ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಮತ್ತು ಸಂಬಂಧಿಸಿದ ಸಚಿವರ ಜೊತೆ ಮಾತುಕತೆ ನಡೆಸಲಾಗಿದೆ ಯಾರು ದೃತಿಗೆಡಬಾರದು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಹೇಳಿದರು.   ಚಿಕ್ಕೋಡಿ ನಗರದಲ್ಲಿ ಕಿತ್ತೂರ ರಾಣಿ ಚೆನ್ನಮ್ಮ ಪುತ್ಥಳಿ ನಿರ್ಮಾಣದ ತಡೆಯಾಜ್ಞೆ ಹಿನ್ನಲ್ಲೆಯಲ್ಲಿ ಪುರಸಭೆ ಮುಂಭಾಗದಲ್ಲಿ …

Read More »