Breaking News

ಬೆಳಗಾವಿ

ಬೆಳಗಾವಿ: ಗೋ ಶಾಲೆಗೆ ಭೂಮಿಪೂಜೆ

ಬೆಳಗಾವಿ: ‘ಗೋಗಳ‎ ರಕ್ಷಣೆ ಹಾಗೂ ಪಾಲನೆ ಮಾಡುವುದು‎ ಪುಣ್ಯದ‎ ಕೆಲಸ. ಇದಕ್ಕಾಗ ಗೋ ಶಾಲೆ ತೆರೆದ ಆಸರೆ ಫೌಂಡೇಷನ್ ಕಾರ್ಯ‎ ಶ್ಲಾಘನೀಯ ಈ‎ ಕಾರ್ಯಕ್ಕೆ ಬೇಕಾದ‎ ಸಹಾಯ, ಸಹಕಾರ ಒದಗಿಸಲು ಸದಾ‎ ಸಿದ್ಧ’ ಎಂದು ಸಂಸದೆ ಮಂಗಲಾ ಅಂಗಡಿ ಹೇಳಿದರು.   ಇಲ್ಲಿನ ಆಸರೆ ಫೌಂಡೇಷನ್ ವತಿಯಿಂದ ತಾಲ್ಲೂಕಿನ ಕೆ.ಕೆ.ಕೊಪ್ಪ ಗ್ರಾಮದಲ್ಲಿ ತೆರೆದ ಗೋಶಾಲೆಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ಚಲನ‎ಚಿತ್ರ ನಟ‎, ನಿರ್ಮಾಪಕ ಅಕ್ಷಯ್ ಚಂದ್ರಶೇಖರ್‎ ಮಾತನಾಡಿದರು. ಫೌಂಡೇಷನ್‌ …

Read More »

ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದಲ್ಲಿ

*ಶ್ರೇಷ್ಠ ಫೌಂಡೇಶನ್ ವತಿಯಿಂದ ಅನ್ನಸಂತರ್ಪಣೆ ಕಾರ್ಯಕ್ರಮ ಮೂಡಲಗಿ: ಸೌಭಾಗ್ಯ ಲಕ್ಷ್ಮಿ ಶುಗರ್ಸ್ ಚೇರಮನ್ ರಾದ ಸಂತೋಷ ಜಾರಕಿಹೊಳಿ ಅವರ “ಶ್ರೇಷ್ಠ ಫೌಂಡೇಶನ್” ವತಿಯಿಂದ ಅನ್ನದಾಸೋಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪ್ರತಿ ಶನಿವಾರ ಶ್ರೇಷ್ಠ ಫೌಂಡೇಶನ್ ವತಿಯಿಂದ ವಿವಿಧ ಕಡೆಗಳಲ್ಲಿ ಅನ್ನ ಸಂತರ್ಪಣೆ ಕಾರ್ಯಕ್ರಮವನ್ನು ಸಂತೋಷ ಜಾರಕಿಹೊಳಿ ಅವರು ಹಮ್ಮಿಕೊಂಡಿದ್ದು ಈ ಶನಿವಾರ ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದಲ್ಲಿ ಶ್ರೀ ಹನುಮಂತೆಶ್ವರ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ಹಮ್ಮಿಕೊಂಡಿದ್ದರು.   ಸೌಭಾಗ್ಯ ಲಕ್ಷ್ಮಿ …

Read More »

ಯಲ್ಲಮ್ಮ ದೇವಸ್ಥಾನದ ಹುಂಡಿಯಲ್ಲಿ ₹1.10 ಕೋಟಿ ಮೌಲ್ಯದ ಕಾಣಿಕೆ ಸಂಗ್ರಹ

 (ಬೆಳಗಾವಿ ಜಿಲ್ಲೆ): ಇಲ್ಲಿನ ಯಲ್ಲಮ್ಮನಗುಡ್ಡದಲ್ಲಿ ಬುಧವಾರ ಮತ್ತು ಗುರುವಾರ ಯಲ್ಲಮ್ಮ ದೇವಸ್ಥಾನದ ಹುಂಡಿ ಎಣಿಕೆ ಮಾಡಲಾಗಿದ್ದು, ಒಟ್ಟು ₹1.10 ಕೋಟಿಗೂ ಅಧಿಕ ಮೌಲ್ಯದ ಕಾಣಿಕೆ ಸಂಗ್ರಹವಾಗಿದೆ. 2022ರ ಡಿಸೆಂಬರ್‌ನಲ್ಲಿ ಭಕ್ತರು ಹುಂಡಿಗೆ ಹಾಕಿದ್ದ ₹95 ಲಕ್ಷ ನಗದು, ₹6.66 ಲಕ್ಷ ಮೌಲ್ಯದ 119 ಗ್ರಾಂ ಚಿನ್ನಾಭರಣ ಹಾಗೂ ₹8.73 ಲಕ್ಷ ಮೌಲ್ಯದ 2.962 ಕೆ.ಜಿ ಬೆಳ್ಳಿ ಆಭರಣ ಸಂಗ್ರಹವಾಗಿವೆ. ಇಲ್ಲಿಯವರೆಗೆ ಅರ್ಧದಷ್ಟು ಹುಂಡಿಯನ್ನು ಮಾತ್ರ ಎಣಿಸಲಾಗಿದೆ. ಬಾಕಿ ಉಳಿದ ಎಣಿಕೆ ಮುಂದಿನ …

Read More »

K.P.T.C.L. ಪರೀಕ್ಷಾ ಅಕ್ರಮ: ಮತ್ತೊಬ್ಬ ಆರೋಪಿ ಬಂಧನ

ಬೆಳಗಾವಿ: ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸಿದಂತೆ, ಪೊಲೀಸರು ಗುರುವಾರ ಇನ್ನೊಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರ ಸಂಖ್ಯೆ 51ಕ್ಕೆ ಏರಿದೆ. ಗೋಕಾಕ ತಾಲ್ಲೂಕಿನ ಉಪ್ಪಾರಟ್ಟಿಯ ಹನುಮಂತ ಮಲ್ಲಪ್ಪ ಗುದಿಗೊಪ್ಪ (22) ಬಂಧಿತ. ಈಗಾಗಲೇ ಬಂಧಿತರಾದ ಸಂಜೀವ ಭಂಡಾರಿ, ಬಾಳೇಶ ಕಟ್ಟಿಕಾರ, ಸಿದ್ದಪ್ಪ ಮದಿಹಳ್ಳಿ, ಭೀಮಪ್ಪ ಗುದಿಗೋಪ್ಪ ಅವರೊಂದಿಗೆ ಹನುಮಂತ ಕೂಡ ಸೇರಿದ್ದ. ಇವರೆಲ್ಲರೂ ಕೂಡಿಕೊಂಡು ಏಳು ಅಭ್ಯರ್ಥಿಗಳಿಗೆ ಪರೀಕ್ಷಾ ಕೇಂದ್ರದೊಳಗೆ ಎಲೆಕ್ಟ್ರಾನಿಕ್ ಡಿವೈಸ್ ಮತ್ತು ಮೈಕ್ರೋಚಿಪ್‌ ತಲುಪಿಸಿದ್ದರು …

Read More »

ಬೆಳಗಾವಿಯಲ್ಲಿ ಉದ್ಯೋಗ ಮೇಳ | 38 ಕಂಪನಿ, 3,500 ಯುವಜನರು ಭಾಗಿ

ಬೆಳಗಾವಿ: ‘ಜಗತ್ತಿನಾದ್ಯಂತ ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಶಿಕ್ಷಣ, ಸೇವೆ ಮತ್ತು ಉತ್ಪಾದನಾ ವಲಯದಲ್ಲಿ ವಿಫುಲ ಉದ್ಯೋಗಾವಕಾಶಗಳಿವೆ. ಆಕಾಂಕ್ಷಿಗಳು ಕಾಲಕ್ಕೆ ತಕ್ಕಂತೆ ಕೌಶಲ ಬೆಳೆಸಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸಲಹೆ ನೀಡಿದರು.   ಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಜೀವನೋಪಾಯ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ನಗರದಲ್ಲಿ ಗುರುವಾರ ಆಯೋಜಿಸಿದ್ದ ಉದ್ಯೋಗ ಮೇಳವನ್ನು ಉದ್ಘಾಟಿಸಿ ಅವರು ಮಾತನಾಡಿದರು. ‘ವಿದ್ಯಾರ್ಥಿ ಜೀವನದ ಬಳಿಕ ನಮ್ಮ ಹೆಸರಿನ ಜತೆ …

Read More »

ಕಾರು ಕಳುವು ಮಾಡಿ ಮಾರುತ್ತಿದ್ದ ಆರೋಪಿಗಳ ಬಂಧನ

ಹುಕ್ಕೇರಿ: ಕಾರು ಖರೀದಿಸಿ ಮಾರಾಟ ಮಾಡಿ, ಅದೇ ಕಾರನ್ನು ಕಳ್ಳತನ ಮಾಡಿ ಮತ್ತೆ ಮಾರಾಟ ಮಾಡುತ್ತಿದ್ದ ಪ್ರಕರಣದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ಕಿಂಗ್ ಪಿನ್ ಮಹಾರಾಷ್ಟ್ರದ ಔರಂಗಾಬಾದ್ ನಿವಾಸಿಯಾಗಿದ್ದು ಗಡಹಿಂಗ್ಲಜ್ ನಲ್ಲಿ ಮಹಾರಾಷ್ಟ್ರರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಗುಮಾಸ್ತನಾಗಿ ಕೆಲಸ ಮಾಡುತ್ತಿದ್ದ. ನಂತರದಲ್ಲಿ ಕೆಲಸ ಕಳೆದುಕೊಂಡಿದ್ದ ಈತ ಹಳೆಯ ಕಾರುಗಳನ್ನು ಕೊಳ್ಳುವಿಕೆ ವ್ಯವಹಾರ ಪ್ರಾರಂಭಿಸಿದ್ದ. ಬೇರೆಯವರ ಕಾರುಗಳನ್ನು ತಾನು ನಡೆಸುವುದಾಗಿ ಹೇಳಿ ಅವುಗಳನ್ನು ಪಡೆದ ನಂತರ ನಂಬರ್ ಪ್ಲೇಟ್ ಗಳನ್ನು …

Read More »

ಬೆಳಗಾವಿಯಿಂದ ಸೇವೆ ನೀಡುತ್ತಿದ್ದ 12 ವಿಮಾನಗಳ ಸೇವೆ ಬಂದ್

ಬೆಳಗಾವಿ: ಬೆಳಗಾವಿಯಿಂದ ಸೇವೆ ನೀಡುತ್ತಿದ್ದ ಕೆಲ ವಿಮಾನ ಸೇವೆ ಬಂದ್ ಆಗಿವೆ. ಇದರಿಂದ ಉದ್ಯಮಗಳಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಈ ಕುರಿತು ಸರಕಾರ ಹಾಗೂ ಇಲ್ಲಿನ ಜನಪ್ರತಿನಿಧಿಗಳು ಗಮನ ಹರಿಸುವ ಅವಶ್ಯಕತೆ ಇದೆ ಎಂದು ಬೆಳಗಾವಿ ಚೆಂಬರ್ ಆಫ್ ಕಾಮಸ್೯ ಸಭಾಂಗಣದಲ್ಲಿ ಉದ್ಯಮಿಗಳು ಹಕ್ಕೊತ್ತಾಯ ಮಾಡಿದರು. ಮಂಗಳವಾರ ವಿವಿಧ ಉದ್ಯಮಿಗಳು ನಡೆಸಿದ ಸಭೆಯಲ್ಲಿ ಈ ನಿರ್ಣಯ ತೆಗೆದುಕೊಳ್ಳಲಾಯಿತು. ಚೇಂಬರ್ ಆಫ್ ಕಾಮಸ್೯ನ ಅಧ್ಯಕ್ಷ ಹೇಮೇಂದ್ರ ಪೋರವಾಲ್ ಮಾತನಾಡಿ, ಬೆಳಗಾವಿಯಲ್ಲಿ ಈಗಾಗಲೇ ಸಾಕಷ್ಟು ಬಾರಿ …

Read More »

ಮರಾಠಿ ಭಾಷಿಕ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಿ: ಎಂಇಎಸ್ ನಾಡವಿರೋಧಿ ಘೋಷಣೆ

ಬೆಳಗಾವಿ: ಇಲ್ಲಿನ ಹುತಾತ್ಮ ಚೌಕ್‌ನಲ್ಲಿ ಮಂಗಳವಾರ ನಡೆದ ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ(ಎಂಇಎಸ್‌) ಕಾರ್ಯಕರ್ತರು ಕರ್ನಾಟಕ-ಮಹಾರಾಷ್ಟ್ರ ಗಡಿ ಹೋರಾಟದಲ್ಲಿ ಮಡಿದವರಿಗೆ ಗೌರವ ಸಲ್ಲಿಸಿದರು. ‘ರಾಜ್ಯದಲ್ಲಿ ಮರಾಠಿ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು’ ಎಂದು ಒತ್ತಾಯಿಸಿದ ಕಾರ್ಯಕರ್ತರು, ‘ಬೆಳಗಾವಿ, ಖಾನಾಪುರ, ನಿಪ್ಪಾಣಿ, ಬೀದರ್‌, ಭಾಲ್ಕಿ, ಕಾರವಾರ ಸಹ ಸಂಯುಕ್ತ ಮಹಾರಾಷ್ಟ್ರ ಝಾಲಾಚ್‌ ಪಾಹಿಜೆ’ ಎಂದು ನಾಡವಿರೋಧಿ ಘೋಷಣೆ ಕೂಗಿದರು.   ‘ಹುತಾತ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಲು …

Read More »

ಗಡ್ಕರಿಗೆ ಬೆದರಿಕೆ: ಜೈಲಿನೊಳಗೆ ಮೊಬೈಲ್‌ ಹೋಗಿದ್ದು ಹೇಗೆ? ಇನ್ನೂ ಸಿಗದ ಸುಳಿವು

ಬೆಳಗಾವಿ: ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅವರ ನಾಗ್ಪುರದ ಕಚೇರಿಗೆ ಬೆದರಿಕೆ ಕರೆ ಮಾಡಿದ್ದ ಕೈದಿ ಜಯೇಶ್‌ ಪೂಜಾರಿ ಕೈಗೆ ಮೊಬೈಲ್‌ ಫೋನ್ ಕೊಟ್ಟಿದ್ದು ಯಾರು? ಜೈಲಿನೊಳಗೆ ಮೊಬೈಲ್‌ ಫೋನ್ ಹೋಗಿದ್ದು ಹೇಗೆ? ಎಂಬ ಬಗ್ಗೆ ಅಧಿಕಾರಿಗಳಿಗೆ ಇನ್ನೂ ಸುಳಿವು ಸಿಕ್ಕಿಲ್ಲ.   ಹಿಂಡಲಗಾ ಜೈಲಿನಲ್ಲಿ ಇದ್ದುಕೊಂಡೇ ಶನಿವಾರ ಕರೆ ಮಾಡಿದ್ದ ಕೈದಿ, ತಾನು ಭೂಗತಪಾತಕಿ ದಾವೂದ್‌ ಇಬ್ರಾಹಿಂ ತಂಡದ ಸದಸ್ಯ, ₹100 ಕೋಟಿ ನೀಡುವಂತೆ ಬೆದರಿಕೆ ಒಡ್ಡಿದ್ದ. ಈ ಬಗ್ಗೆ …

Read More »

ಆಕಸ್ಮಿಕ ಬೆಂಕಿ: ಉರಿದ ಲಾರಿ

ಚನ್ನಮ್ಮನ ಕಿತ್ತೂರು: ಸಮೀಪದ ಶಿವ ಪೆಟ್ರೋಲ್ ಪಂಪ್ ಬಳಿ ತಮಿಳನಾಡಿಗೆ ಸೇರಿದ ಲಾರಿಯೊಂದಕ್ಕೆ ಶನಿವಾರ ಸಂಜೆ ಆಕಸ್ಮಿಕ ಬೆಂಕಿ ತಗುಲಿ ಸುಟ್ಟಿದೆ. ಪೊಟ್ರೋಲ್‌ ಪಂಪ್‌ ಸಮೀಪದಲ್ಲೇ ದೊಡ್ಡ ಬೆಂಕಿ ಕಾಣಿಸಿಕೊಂಡಿದ್ದರಿಂದ ಕೆಲಕಾಲ ಭಯದ ವಾತಾವರಣ ಮನೆ ಮಾಡಿತು. ಮುಂಬೈಗೆ ಹೊರಟಿದ್ದ ಲಾರಿ ಚಾಲಕರು ಪಂಪ್‌ ಬಳಿ ವಿಶ್ರಾಂತಿಗಾಗಿ ತಂಗಿದ್ದಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲಾರಿಯಲ್ಲಿದ್ದ ಎಳನೀರು ಕಾಯಿಗಳೂ ಸುಟ್ಟಿವೆ. ಅಗ್ನಿಶಾಮಕ ದಳದವರು ಮತ್ತು ಪೊಲೀಸರು …

Read More »