ಬೆಳಗಾವಿ: ಚುನಾವಣೆ ಸಂದರ್ಭದಲ್ಲಿ ಅಭ್ಯರ್ಥಿಗಳ ಪ್ರಚಾರಕ್ಕೆ ಬಳಸುವ ಕೆಲವು ಸಾಮಗ್ರಿಗಳ ದರಗಳನ್ನು ತುಸು ಕಡಿಮೆ ಮಾಡಲು, ಗುರುವಾರ ಇಲ್ಲಿ ನಡೆದ ಅಧಿಕಾರಿಗಳು ಹಾಗೂ ವಿವಿಧ ಪಕ್ಷಗಳ ಪ್ರತಿನಿಧಿಗಳ ಸಭೆಯಲ್ಲಿ ನಿರ್ಧರಿಸಲಾಯಿತು. ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಚಾರ ಸಾಮಗ್ರಿಗಳು, ವಾಹನ, ಪೋಸ್ಟರ್, ಮೈಕ್ ಸೇರಿದಂತೆ ವಿವಿಧ ಸಾಮಗ್ರಿಗಳ ಮಾರುಕಟ್ಟೆ ದರವನ್ನು ಪರಿಶೀಲಿಸಲಾಯಿತು. ನೀತಿ ಸಂಹಿತೆ ಜಾರಿ ಆದ ಸಂದರ್ಭದಲ್ಲಿ ಇರುವ ಮಾರುಕಟ್ಟೆ ದರ ಹಾಗೂ ಗುಣಮಟ್ಟ ಅಧರಿಸಿ, …
Read More »ವಿದ್ಯುತ್ ಸಮಸ್ಯೆ ಪರಿಹಾರ ಸಭೆ ರೈತರ ಕುಂದುಕೊರತೆಗಳಿಗೆ ಪರಿಹಾರ
ಬೆಳಗಾವಿ: ಹೆಸ್ಕಾಂ ನಗರ ಉಪವಿಭಾಗ-3 ರ ನೆಹರೂ ನಗರ ಬೆಳಗಾವಿ ಕಚೇರಿಯಲ್ಲಿ ರೈತ ಗ್ರಾಹಕರ ವಿದ್ಯುತ್ ಸಮಸ್ಯೆಗಳನ್ನು ಪರಿಹರಿಸಲು ಫೆ. ಇಂದು ಬೆಳಿಗ್ಗೆ 10.30ಕ್ಕೆ ಸಭೆ ನಡೆಸಲಾಗುವುದು. ರೈತ ಗ್ರಾಹಕರು ತಮ್ಮ ಸಮಸ್ಯೆ ಹಾಗೂ ಕುಂದು ಕೊರತೆಗಳ ಕುರಿತು ಸಭೆಯಲ್ಲಿ ಚರ್ಚಿಸಿ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಎಂದು ಬೆಳಗಾವಿಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Read More »ಕೊನೆಯದಾಗಿ ಸ್ವೀಕರಿಸಿದ್ದ ಕರೆ ಆಧರಿಸಿ ಆರೋಪಿತರನ್ನುಬಂಧಿಸಿದ್ ಪೊಲೀಸರು
ಗೋಕಾಕ: ಇಲ್ಲಿನ ಉದ್ಯಮಿ ರಾಜು ಝಂವರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವೈದ್ಯರು ಸೇರಿದಂತೆ ಮೂವರು ಆರೋಪಿತರನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದಾರೆ. ಪ್ರಥಮ ಆರೋಪಿ ಗೋಕಾಕ ಚನ್ನಮ್ಮನಗರ ನಿವಾಸಿ ಸಚಿನ್ ಶಂಕರ್ ಶಿರಗಾವೆ(36), ಎರಡನೇ ಆರೋಪಿ ಸಿಟಿ ಆಸ್ಪತ್ರೆ ವೈದ್ಯ, ಹುಕ್ಕೇರಿ ತಾಲೂಕು ಶಿರಢಾಣ ಸಮೂಲದ ಡಾ. ಶಿವಾನಂದ ಕಾಡಗೌಡ ಪಾಟೀಲ (28) ಹಾಗೂ ರೆಫ್ರಿಜರೇಟರ್ ರಿಪೇರಿ ಕೆಲಸ ಮಾಡಿಕೊಂಡಿದ್ದ ಶಾಪಥ್ ಇರ್ಷಾದ್ ತ್ರಾಸಗರ(25) ಬಂಧಿತರು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿಂತೆ ಉಂಟಾಗಿದ್ದ …
Read More »ಮಲಪ್ರಭಾ ನದಿ ಕಲುಷಿತ; ಪರಿಶೀಲನೆಗೆ ಸೂಚನೆ:
ಬೆಳಗಾವಿ : ಮಲಪ್ರಭಾ ಮತ್ತು ಘಟಪ್ರಭಾ ನದಿ ತೀರಗಳಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲು ಮೊದಲ ಹಂತವಾಗಿ ಹಳೆಯ ಉಪಯೋಗದಲ್ಲಿ ಇಲ್ಲದಿರುವ ಬ್ರಿಡ್ಜ್, ಬ್ಯಾರೇಜ್ ತೆರವುಗೊಳಿಸಲು ಹಾಗೂ ಅತಿಕ್ರಮಣಗೊಂಡಿರುವ ಜಮೀನುಗಳ ಗಡಿಗಳಿಗೆ ಕಲ್ಲುಗಳನ್ನು ಹಾಕಿಸಲು ಅಂದಾಜು ಪತ್ರಿಕೆಯನ್ನು ಆದ್ಯತೆ ಮೇರೆಗೆ 10 ದಿನದೊಳಗಾಗಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಅವರು ನೀರಾವರಿ ಇಲಾಖೆಯ ಅಭಿಯಂತರರಿಗೆ ಸೂಚನೆ ನೀಡಿದರು. ಮಲಪ್ರಭಾ ಹಾಗೂ ಘಟಪ್ರಭಾ ನದಿ ತೀರಗಳಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವ ಗುರುವಾರ(ಫೆ.16) ನಡೆದ ವಿಭಾಗದ …
Read More »ಜಾಕ್‌ವೆಲ್ ಮುತ್ತಿಗೆ ಯತ್ನ: ಲಘು ಲಾಠಿ ಪ್ರಹಾರ
ಸವದತ್ತಿ: ಬಾಕಿ ವೇತನ ಹಾಗೂ ನೇಮಕಾತಿ ಆದೇಶ ನೀಡಲು ಆಗ್ರಹಿಸಿ ಧಾರವಾಡದ ಜಲಮಂಡಳಿಯ ದಿನಗೂಲಿ ಕಾರ್ಮಿಕರು ಪಟ್ಟಣದಲ್ಲಿ ಬುಧವಾರ ನಡೆಸಿದ ಧರಣಿ ವೇಳೆ, ನೂಕಾಟ- ತಳ್ಳಾಟ ನಡೆದಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿದರು. ಈ ಸಂದರ್ಭದಲ್ಲಿ 12 ಮಂದಿಗೆ ಸಣ್ಣಪುಟ್ಟ ಗಾಯಗಳಾದವು. ಹುಬ್ಬಳಿ- ಧಾರವಾಡ ನಗರಗಳಿಗೆ ನೀರು ಸರಬರಾಜು ಮಾಡುವ ಇಲ್ಲಿನ ಜಾಕ್‌ವೆಲ್ ಬಳಿ ಬೆಳಿಗ್ಗೆಯಿಂದ ಶಾಂತಿಯುತ ಧರಣಿ ನಡೆಸಲಾಯಿತು. ಮಧ್ಯಾಹ್ನದವರೆಗೂ ಅಧಿಕಾರಿಗಳು ಸ್ಥಳಕ್ಕೆ ಬಾರದ ಕಾರಣ, …
Read More »ಬೀದಿ ದೀಪ ಅಳವಡಿಸಿ ಇಂಥ ರೀತಿಯ ಪರಿಸ್ಥಿತಿ ಕಳೆದ ಐದು ವರ್ಷಗಳಿಂದಲೂ ಇದೆ.
ಬೆಳಗಾವಿ: ಇಲ್ಲಿನ ಆದರ್ಶ ನಗರದ ಆದರ್ಶ ಶಾಲೆಯಿಂದ ಹಿಡಿದು ವಡಗಾಂವಿ (ಗ್ರಾಮೀಣ ಪೊಲೀಸ್ ಠಾಣೆ ಹಿಂಭಾಗ) ಮಾರ್ಗದಲ್ಲಿ ವಿದ್ಯುತ್ ಕಂಬಗಳಿವೆ. ಆದರೆ, ವಿದ್ಯುತ್ ದೀಪಗಳೇ ಇಲ್ಲ. ಇದರಿಂದ ಈ ಪ್ರದೇಶ ದಿನವೂ ಕತ್ತಲು ಆವರಿಸಿರುತ್ತದೆ. ಇಂಥ ರೀತಿಯ ಪರಿಸ್ಥಿತಿ ಕಳೆದ ಐದು ವರ್ಷಗಳಿಂದಲೂ ಇದೆ. ಈ ಬಗ್ಗೆ ಹಲವು ಬಾರಿ ಮಹಾನಗರ ಪಾಲಿಕೆಯ ಸಂಬಂಧಿಸಿದ ಅಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೂ ಯಾರೂ ಕಣ್ಣೆತ್ತಿ ನೋಡಿಲ್ಲ. ಸರ್ಕಾರದ ‘ಜನಹಿತ’ ವೆಬ್‌ಸೈಟ್‌ನಲ್ಲೂ …
Read More »ಬೃಹತ್ ಹಳದಿ ಕುಂಕುಮ ಕಾರ್ಯಕ್ರಮ : ಶಾಸಕ ಅನಿಲ ಬೆನಕೆ ಬಾಗಿ
ಬೆಳಗಾವಿ :ಬೆಳಗಾವಿ ನಗರದ ಬಸವಣಕುಡಚಿಯಲ್ಲಿ ಮಂಗಳವಾರದAದು ಶಾಸಕ ಅನಿಲ ಬೆನಕೆ ಅವರ ನೇತೃತ್ವದಲ್ಲಿ ಬೃಹತ್ ಹಳದಿ ಕುಂಕುಮ ಕಾರ್ಯಕ್ರಮಆಯೋಜನೆ ಮಾಡಲಾಗಿತ್ತು.ಬಸವಣಕುಡಚಿಗ್ರಾಮದ ಬಸವಣ್ಣ ಮಂದಿರಆವರಣದಲ್ಲಿಆಯೋಜನೆ ಮಾಡಲಾದಕಾರ್ಯಕ್ರಮದಲ್ಲಿಎರಡು ಸಾವಿರಕ್ಕೂ ಹೆಚ್ಚು ಮಹಿಳೆಯರು ಹಳದಿ ಕುಂಕುಮ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮವನ್ನುದೀಪ ಪ್ರಜ್ವಲನೆ ಮಾಡುವುದರ ಮೂಲಕ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಶಾಸಕ ಅನಿಲ ಬೆನಕೆರವರು ನಾನು ಶಾಸಕನಾಗುವ ಮುಂಚೆಯಿAದಲೂ ಬಸವಣಕುಡಚಿಜನ ನನ್ನ ಮೇಲೆ ತುಂಬಾ ಪ್ರೀತಿ ವಿಶ್ವಾಸವನ್ನುಇಟ್ಟಿದ್ದು, ೨೦೧೮ ರಚುನಾವಣೆಗೆ ನಾನು ಸ್ಪರ್ದೆ …
Read More »ಸರಕಾರದ ವಿರುದ್ಧ ಮಠಾಧೀಶರ ಆರೋಪ ಪಟ್ಟಿ
ಬೆಳಗಾವಿ : ಉತ್ತರ ಕರ್ನಾಟಕ ಭಾಗದ ಜನರಲ್ಲಿ ಪ್ರತ್ಯೇಕತೆಯ ಭಾವನೆ ಬರದಂತೆ ಈಬಾರಿಯ ಬಜೆಟ್ ಮಂಡಿಸಬೇಕು ಎಂದು ಗದಗ ತೋಂಟದಾರ್ಯ ಮಠದ ಸಿದ್ಧರಾಮ ಸ್ವಾಮಿಗಳು ಒತ್ತಾಯಿಸಿದ್ದಾರೆ. ಬೆಳಗಾವಿಯಲ್ಲಿ ಬುಧವಾರ ವಿವಿಧ ಮಠಾಧೀಶರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ಹಲವು ವರ್ಷಗಳಿಂದ ನಾವು ಬೇಡಿಕೆ ಇಡುತ್ತ ಬಂದಿದ್ದೇವೆ. ಆದರೂ ಬೇಡಿಕೆಗಳು ಈಡೇರದೆ ಇರುವುದು ಬೇಸರ ತಂದಿದೆ. 400 ಕೋಟಿ ರೂ. ವೆಚ್ಚ ಮಾಡಿ ನಿರ್ಮಾಣ ಮಾಡಲಾಗಿರುವ ಸುವ್ರಣ ವಿಧಾನಸೌಧ ಏನೇನಬ ಉಪಯೋಗವಿಲ್ಲವಾಗಿದೆ. ಪೂರ್ಣಪ್ರಮಾಣದಲ್ಲಿ ಕಚೇರಿಗಳನ್ನು …
Read More »ಗೋಕಾಕ ಜಲಪಾತದ ಬಳಿ ಇರುವ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವ,ಭವ್ಯ ರಥೋತ್ಸವಕ್ಕೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ ನೀಡಲಿದ್ದಾರೆ.
ಘಟಪ್ರಭಾ: ಸಮೀಪ ಗೋಕಾಕ ಜಲಪಾತದ ಬಳಿ ಇರುವ ಪ್ರಾಚೀನ ಕಾಲದ ಮಹಾಲಿಂಗೇಶ್ವರ ಜಾತ್ರಾ ಮಹೋತ್ಸವಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಇದೇ 17ರಿಂದ 19ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೂ ನಡೆಯಲಿವೆ. ಪದರು ಶಿಲೆಗಳ ಮಧ್ಯೆ ನಿರ್ಮಾಣ ಮಾಡಿದ್ದು ಈ ದೇವಾಲಯದ ವಿಶೇಷ. ನಿಖರವಾಗಿ ಇದರ ಪುರಾತನ ಕಾಲ ತಿಳಿದುಬಂದಿಲ್ಲ. ಆದರೆ, ದೇವಾಲಯವು ತಡಸಲ ಮಹಾಲಿಂಗೇಶ್ವರನೆಂದು (ತಟಾಕೇಶ್ವರ) ಖ್ಯಾತಿ ಪಡೆದಿದೆ. ಹೀಗಾಗಿ, ಅನಾದಿ ಕಾಲದಿಂದಲೂ ಮಹಾಲಿಂಗೇಶ್ವರ ಇಲ್ಲಿ ಪೂಜೆಗೊಳ್ಳುತ್ತಿದ್ದಾರೆ ಎನ್ನುವುದು ವಾಡಿಕೆ. ಅತ್ಯಂತ ನವಿರಾದ …
Read More »ಹಿಡಕಲ್ ಡ್ಯಾಂ ಭೂ ಸ್ವಾಧೀನಾಧಿಕಾರಿ ರೇಷ್ಮಾ ತಾಳಿಕೋಟಿ ಅವರ ಪತಿ ಜಾಫರ್ ಫಿರ್ಜಾದೆ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಬೆಳಗಾವಿ: ಹಿಡಕಲ್ ಡ್ಯಾಂ ಭೂ ಸ್ವಾಧೀನಾಧಿಕಾರಿ ರೇಷ್ಮಾ ತಾಳಿಕೋಟಿ ಅವರ ಪತಿ ಜಾಫರ್ ಫಿರ್ಜಾದೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 40 ವರ್ಷ ವಯಸ್ಸಾಗಿತ್ತು. ರೇಷ್ಮಾ ತಾಳಿಕೋಟೆ ಬೆಂಗಳೂರಿಗೆ ತೆರಳಿದ್ದ ಸಂದರ್ಭದಲ್ಲಿ ಬಳಗಾವಿಯ ಆಜಂ ನಗರದ ಮನೆಯಲ್ಲೇ ನೇಣು ಹಾಕಿಕೊಂಡು ಅವರು ಸೋಮವಾರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಎಎಸ್ ಅಧಿಕಾರಿಯಾಗಿರುವ ರೇಷ್ಮಾ ತಾಳಿಕೋಟೆ ಹುಕ್ಕೇರಿ, ಖಾನಾಪುರ ಸೇರಿದಂತೆ ವಿವಿಧೆಡೆ ತಹಸಿಲ್ದಾರರಾಗಿ ಕಾರ್ಯನಿರ್ವಹಿಸಿದ್ದರು. ಪತಿ ಜಾಫರ್ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಎಫ್ ಡಿಎ ಆಗಿ ಕಾರ್ಯನಿರ್ವಹಿಸುತ್ತಿದ್ದರು. …
Read More »