Breaking News

ಬೈಲ್ ಹೊಂಗಲ್

ದ್ದರಾಮಯ್ಯ ಅವರೇ ನಿಮ್ಮ ಆಟ ಕೊನೆಯಾಗಿದೆ. ರಾಜಕೀಯ ಚೆಲ್ಲಾಟ ಬಿಟ್ಟುಬಿಡಿ. :B.S.Y.

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ‘ಸಿದ್ದರಾಮಯ್ಯ ಅವರೇ ನಿಮ್ಮ ಆಟ ಕೊನೆಯಾಗಿದೆ. ರಾಜಕೀಯ ಚೆಲ್ಲಾಟ ಬಿಟ್ಟುಬಿಡಿ. ನರೇಂದ್ರ ಮೋದಿ ಅವರ ಟೀಕೆ ಮಾಡುವುದನ್ನು ಬಿಟ್ಟು ನಿಮ್ಮ ಪರಿಸ್ಥಿತಿ ಎನಾಗಿದೆ, ಕಾಂಗ್ರೆಸ್‌ ಸ್ಥಿತಿ ಏನಾಗಿದೆ ನೋಡಿಕೊಳ್ಳಿ’ ಎಂದು ಶಾಸಕ ಬಿ.ಎಸ್‌. ಯಡಿಯೂರ‍ಪ್ಪ ಕಿಡಿಕಾರಿದರು. ಪಟ್ಟಣದಲ್ಲಿ ಶನಿವಾರ ನಡೆಸಿದ ರೋಡ್‌ ಶೋನಲ್ಲಿ ಮಾತನಾಡಿದ ಅವರು, ‘ಎಲ್ಲ ಚುನಾವಣೆಗಳಲ್ಲೂ ಜನ ನಿಮ್ಮನ್ನು ಮೂಲೆಗುಂಪು ಮಾಡಿದ್ದಾರೆ. ಹಣ ಬಲ, ತೋಳ ಬಲ, ಜಾತಿಯ ವಿಷಬೀಜ ಬಿತ್ತಿ ಚುನಾವಣೆ …

Read More »

ಮಲ್ಲಮ್ಮನ ಪ್ರತಿಮೆ ಲೋಕಾರ್ಪಣೆ ನಿರ್ಲಕ್ಷ್ಯ, ತೀವ್ರ ಪ್ರತಿಭಟನೆ

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಮಲ್ಲಮ್ಮನ ಬೆಳವಡಿ ಗ್ರಾಮದ ವೃತ್ತದಲ್ಲಿ ಪ್ರತಿಷ್ಠಾಪಿಸಿದ ಅಶ್ವಾರೂಢ ಕಂಚಿನ ಪ್ರತಿಮೆ ಅನಾವರಣ ಸಂಬಂಧವಾಗಿ ಮಂಗಳವಾರ ರಾತ್ರಿ ಗ್ರಾಮದಲ್ಲಿ ತೀವ್ರ ವಾಗ್ವಾದ ನಡೆಯಿತು. ಬೆಳವಡಿ ಮಲ್ಲಮ್ಮನ ಉತ್ಸವ ಮೆರವಣಿಗೆ ಬೆಳಿಗ್ಗೆಯೇ ನಡೆಯಿತು. ಇದಕ್ಕೂ ಮುನ್ನ ಪ್ರತಿಮೆ ಅನಾವರಣ ಕಾರ್ಯಕ್ರಮ ಇತ್ತು. ಆದರೆ, ಜಿಲ್ಲಾ ಉಸ್ತುವಾರಿ ಸಚಿವರೂ ಸೇರಿದಂತೆ ಯಾವೊಬ್ಬ ಜನಪ್ರತಿನಿಧಿ, ಅಧಿಕಾರಿಯೂ ಬರಲಿಲ್ಲ. ಇದರಿಂದ ಅನಾವರಣ ಕಾರ್ಯಕ್ರಮವನ್ನು ಮುಂದಕ್ಕೆ ಹಾಕುತ್ತ ಬರಲಾಯಿತು. ರಾತ್ರಿ 8ರ ನಂತರ ಸಂಸದೆ …

Read More »

ಕಿಡಿಗೇಡಿಗಳಿಂದ ಶಾಲಾ ಕೊಠಡಿಗೆ ಬೆಂಕಿ

ಬೈಲಹೊಂಗಲ: ಪಟ್ಟಣದ ಹೊಸೂರ ರಸ್ತೆಯ ಶತಮಾನ ಪೂರೈಸಿದ ಪುರಸಭೆ ಶೂರ ಸಂಗೊಳ್ಳಿ ರಾಯಣ್ಣ ಪ್ರೌಢಶಾಲೆಯಲ್ಲಿ ರವಿವಾರ ಮಧ್ಯಾಹ್ನ ಕಿಡಿಗೇಡಿಗಳಿಂದ ಶಾಲಾ ಕೊಠಡಿಗೆ ಬೆಂಕಿ ತಗುಲಿದ ಪರಿಣಾಮ ದಗದಗ ಹೊತ್ತಿ ಉರಿದ ಘಟನೆ ಜರುಗಿದೆ. ಸುಡು ಬಿಸಿಲಿನಲ್ಲಿ ಶಾಲಾ ಕೊಠಡಿಗೆ ಬೆಂಕಿ ತಗುಲಿದ ಪರಿಣಾಮ ಬಾಗಿಲು ಇಲ್ಲದ ಕೊಠಡಿಯಲ್ಲಿದ್ದ ಹಳೆ ಡೆಸ್ಕ್, ಹಳೆಯ ಕಾಗದ ಪತ್ರಗಳು ಬೆಂಕಿಗೆ ಆಹುತಿಯಾಗಿದೆ ಎನ್ನಲಾಗಿದೆ. ಸುಡು ಬಿಸಿಲಿನಲ್ಲಿ ಬೆಂಕಿಯ ಕೆನ್ನಾಲಿಗೆ ಜ್ವಾಲಾ ಮುಖಿಯಂತೆ ಕಂಡಿತು. ಕಿಡಗೇಡಿಗಳು ಹೊತ್ತಿಸಿದ …

Read More »

ಹಾರೂಗೊಪ್ಪ: ಚನ್ನಬಸವೇಶ್ವರ ರಥೋತ್ಸವ

ಬೈಲಹೊಂಗಲ: ಸಮೀಪದ ಹಾರೂಗೊಪ್ಪ ಗ್ರಾಮದ ಉಳವಿ ಚನ್ನಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾರಥೋತ್ಸವ ಭಾನುವಾರ ಸಂಜೆ ವಿಜೃಂಭಣೆಯಿಂದ ನೆರವೇರಿತು. ನವಿಲಿನ ಕಳಶ ಹೊತ್ತು ಆಕರ್ಷಕ ರಥವನ್ನು ಭಕ್ತರು ಹುಮ್ಮಸ್ಸಿನಿಂದ ಎಳೆದರು.   ಭಕ್ತರು ಹರಹರ ಮಹಾದೇವ, ಉಳವಿ ಚನ್ನಬಸವೇಶ್ವರ ಮಹರಾಜಕೀ ಜೈ ಎನ್ನುತ್ತ ರಥ ಎಳೆದರು. ಸುತ್ತಲಿನ ಗ್ರಾಮಗಳಿಂದ ಬಂದ ಜನ ಹೂವು, ಹಣ್ಣು, ಕಾರೀಕ್‌ಗಳನ್ನು ರಥಕ್ಕ ಎಸೆದರು. ದೇವಸ್ಥಾನದಲ್ಲಿ ಉಳವಿ ಚನ್ನಬಸವೇಶ್ವರ, ನಂದಿ ಮೂರ್ತಿಗಳಿಗೆ ವಿಶೇಷ ಪೂಜೆ, ಮಹಾಭಿಷೇಕ, …

Read More »

ಮಕ್ಕಳಲ್ಲಿ ದೇಶಾಭಿಮಾನ ಮೂಡಿಸಿ’

ಬೈಲಹೊಂಗಲ: ‘ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣನ ತ್ಯಾಗ, ಬಲಿದಾನ, ರಾಷ್ಟ್ರಪ್ರೇಮದ ಕುರಿತು ಮಕ್ಕಳಿಗೆ ತಿಳಿಸಿ, ಅವರಲ್ಲಿ ದೇಶಾಭಿಮಾನ ಬೆಳೆಸಬೇಕು’ ಎಂದು ಶಾಸಕ ಮಹಾಂತೇಶ ಕೌಜಲಗಿ ಹೇಳಿದರು. ಪಟ್ಟಣದ ಕಿತ್ತೂರು ಚನ್ನಮ್ಮನ ಸಮಾಧಿ ಸ್ಥಳದಲ್ಲಿ ಶನಿವಾರ ವೀರಜ್ಯೋತಿ ವಾಹನಕ್ಕೆ ಪೂಜೆ ಸಲ್ಲಿಸುವ ಮೂಲಕ ಸ್ವಾಗತಿಸಿ ಅವರು ಮಾತನಾಡಿದರು.   ‘ಇದೇ ಮೊದಲ ಬಾರಿಗೆ ರಾಜ್ಯದಾದ್ಯಂತ ಸಂಚರಿಸಿದ ಜ್ಯೋತಿ ವಾಹನಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಬರುವ ದಿನಗಳಲ್ಲಿ ಕಿತ್ತೂರು ಉತ್ಸವ ರಾಷ್ಟ್ರ ಮಟ್ಟದಲ್ಲಿ …

Read More »

ಸಾವಿನಲ್ಲೂ ಸಾರ್ಥಕತೆ: ಇಬ್ಬರು ಅಂಧರ ಬಾಳಿಗೆ ಬೆಳಕಾದ ರುದ್ರಮ್ಮ ಹೊಂಗಲ್

ಬೈಲಹೊಂಗಲ ತಾಲೂಕಿನ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ಹಿರಿಯ ಜೀವಿ ರುದ್ರಮ್ಮ ಬಸವಣೆಪ್ಪ ಹೊಂಗಲ(ಕುದರಿ) ತಮ್ಮ ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಒಕ್ಕುಂದ ಗ್ರಾಮದ 93 ವರ್ಷದ ರುದ್ರಮ್ಮ ಹೊಂಗಲ ಅವರು ವಯೋಸಹಜ ಕಾಯಿಲೆಯಿಂದ ಮಂಗಳವಾರ ರಾತ್ರಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ. ಬಳಿಕ ಅವರ ಕುಟುಂಬಸ್ಥರ ನಿರ್ಧಾರದಂತೆ‌ ಬೆಳಗಾವಿ ಕೆಎಲ್ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನೇತ್ರ ಭಂಡಾರಕ್ಕೆ ಬೈಲಹೊಂಗಲದ ಡಾ.ರಾಮಣ್ಣವರ ಚಾರಿಟೇಬಲ್ ಟ್ರಸ್ಟ್ ಮುಖಾಂತರ ನೇತ್ರಗಳನ್ನು ದಾನ …

Read More »

ಇಂಚಲ ಗ್ರಾಮದ ಪ್ರಸಿದ್ಧ ಅಂಬಾ ಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಷ್ಟಮಿ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು.

ಬೈಲಹೊಂಗಲ (ಬೆಳಗಾವಿ ಜಿಲ್ಲೆ): ನವರಾತ್ರಿ ಮಹೋತ್ಸವ ಅಂಗವಾಗಿ ಸಮೀಪದ ಇಂಚಲ ಗ್ರಾಮದ ಪ್ರಸಿದ್ಧ ಅಂಬಾ ಪರಮೇಶ್ವರಿ ದೇವಸ್ಥಾನದಲ್ಲಿ ದುರ್ಗಾಷ್ಟಮಿ ಕಾರ್ಯಕ್ರಮಗಳು ವೈಭವದಿಂದ ನೆರವೇರಿದವು. ಹಲವಾರು ಮಹಿಳೆಯರು ಉಡಿ ತುಂಬುವ ಸಂಪ್ರದಾಯದಲ್ಲಿ ಪಾಲ್ಗೊಂಡರು.   ಇಂಚಲ ಶಿವಯೋಗೀಶ್ವರ ಸಾಧು ಸಂಸ್ಥಾನಮಠದ ಪೀಠಾಧಿಪತಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ದೇವಸ್ಥಾನ ಆಡಳಿತ ಮಂಡಳಿ, ಸಕಲ ವ್ಯವಸ್ಥೆ ಕಲ್ಪಿಸಿದರು. ಪರಮೇಶ್ವರಿ ಮೂರ್ತಿಗೆ ವಿಶೇಷ ಅಲಂಕಾರ, ಪೂಜೆ ನೆರವೇರಿಸಲಾಯಿತು. ಮಹಿಳೆಯರು ಆರತಿ ತಟ್ಟೆ ಹಿಡಿದು, ಕುಂಕುಮ, …

Read More »

ಟಿಕ್‍ಟಾಕ್, ಯೂಟೂಬ್ ಸ್ಟಾರ್ ರುಕ್ಮವ್ವ ಅಜ್ಜಿ ಇನ್ನಿಲ್ಲ

ತಮ್ಮ ಅಮೋಘ ಅಭಿನಯದ ಮೂಲಕ ಟಿಕ್‍ಟಾಕ್ ಮತ್ತು ಯೂಟೂಬ್ ಸ್ಟಾರ್ ಆಗಿ ಮನೆ ಮಾತಾಗಿದ್ದ ಬೈಲಹೊಂಗಲ ತಾಲೂಕಿನ ತಿರುಳ್ಗನ್ನಡನಾಡು ಒಕ್ಕುಂದ ಗ್ರಾಮದ ಅಜ್ಜಿ ರುಕ್ಮವ್ವ ಗೋವಿಂದಪ್ಪ ಲೋಕರಿ ವಯೋಸಹಜ ಕಾಯಿಲೆಯಿಂದ ಸೋಮವಾರ ಬೆಳಿಗ್ಗೆ ಮೃತರಾಗಿದ್ದಾರೆ. ಹೌದು ಟಿಕ್‍ಟಾಕ್‍ನಲ್ಲಿ ತಮ್ಮ ವಿಭಿನ್ನ ಕಾಮಿಡಿ ವಿಡಿಯೋ ಮೂಲಕ ಈ ರುಕ್ಮವ್ವ ಅಜ್ಜಿ ಲಕ್ಷಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದರು. ಅಲ್ಲದೇ ಹಲವು ವಾಹಿನಿಗಳ ಕಾಮಿಡಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಇಳಿ ವಯಸ್ಸಿಲ್ಲಿಯೂ ತಮ್ಮಲ್ಲಿನ ಕಲೆಯನ್ನು …

Read More »

ಬೈಲಹೊಂಗಲ: ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ

ಬೈಲಹೊಂಗಲ: ಮಲಪ್ರಭಾ ಏತ ನೀರಾವರಿಗಾಗಿ ಭೂ ಸ್ವಾಧೀನಗೊಂಡ ಪ್ರದೇಶವನ್ನು 50 ವರ್ಷಗಳ ನಂತರ 2022 ರಲ್ಲಿ ದಾಖಲಿಸಿರುವ ತಹಶೀಲ್ದಾರ್ ಕ್ರಮವನ್ನು ರದ್ದುಪಡಿಸುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿ ಕಚೇರಿ ಎದುರು ರೈತರು ಸೋಮವಾರ ಪ್ರತಿಭಟನೆ ನಡೆಸಿದರು.   ಹೊಸೂರು ಮಡಿವಾಳೇಶ್ವರ ಮಠದ ಗಂಗಾಧರ ಮಹಾಸ್ವಾಮೀಜಿ, ವೇದಮೂರ್ತಿ ಮಾಹಾಂತಯ್ಯ ಆರಾದ್ರಿಮಠ ಶಾಸ್ತ್ರಿಗಳು, ಪಟ್ಟಣದ ಬೆಳಗಾವಿ ರಸ್ತೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ ಪುತ್ಥಳಿಗೆ ಮಾಲಾರ್ಪಣೆ ಮಾಡುವುದರ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು. ಚನ್ನಮ್ಮ ವೃತ್ತದಿಂದ ಇಂಚಲ …

Read More »

ಇಂಚಿಂಚಿಗೂ ಸಮಸ್ಯೆ ಮೂಲಸೌಕರ್ಯ ಮತ್ತು ಸ್ವಚ್ಛತೆಯಲ್ಲಿ ಇನ್ನೂ ಹಿಂದೆ ಬಿದ್ದಿದೆ ಇಂಚಲ ಗ್ರಾಮ

ಬೈಲಹೊಂಗಲ: ಶೈಕ್ಷಣಿಕ, ಆಧ್ಯಾತ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನದೆಯಾದ ಕೊಡುಗೆ ನೀಡುವಲ್ಲಿ ಜಿಲ್ಲೆಯಲ್ಲಿ ಹೆಸರು ಮಾಡಿದ ಊರು ಇಂಚಲ. ಆದರೆ, ಮೂಲಸೌಕರ್ಯ ಮತ್ತು ಸ್ವಚ್ಛತೆಯಲ್ಲಿ ಇನ್ನೂ ಹಿಂದೆ ಬಿದ್ದಿದೆ. ಈ ಗ್ರಾಮದಲ್ಲಿ 10 ಸಾವಿರ ಜನಸಂಖ್ಯೆ ಇದೆ. 300ಕ್ಕೂ ಅಧಿಕ ಶಿಕ್ಷಕರು ಸರ್ಕಾರಿ, ಅನುದಾನಿತ ಶಾಲೆಗಳಲ್ಲಿ ಸೇವೆಯಲ್ಲಿದ್ದಾರೆ. ತಾಲ್ಲೂಕಿನಲ್ಲಿ ಅತಿ ಹೆಚ್ಚು ಶಿಕ್ಷಕರನ್ನು ಹೊಂದಿದ ಗ್ರಾಮ ಎಂಬ ಖ್ಯಾತಿ ದಶಕಗಳಿಂದಲೂ ಈ ಊರಿಗೆ ಇದೆ. ಶಿಕ್ಷಣ ಮಾತ್ರವಲ್ಲದೇ ಸರ್ಕಾರದ ಎಲ್ಲ …

Read More »