ಗೋಕಾಕ: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ನಡೆಯುವ ಅಲೆಮಾರಿ/ಅರೆಅಲೆಮಾರಿ ಆಶ್ರಮ ಶಾಲೆಗೆ 2021/22 ಸಾಲಿಗಾಗಿ ಪ್ರವೇಶಕ್ಕಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಶ್ರಮ ಶಾಲೆಗೆ ಅಲೆಮಾರಿ/ಅರೆಅಲೆಮಾರಿ ಜನಾಂಗದ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆಯನ್ನು ನೀಡಲಾಗುವುದು. 1ನೇ ವರ್ಗದಿಂದ 5ನೇ ವರ್ಗದ ವರೆಗೆ ಪ್ರವೇಶಾತಿಗೆ ಅವಕಾಶವಿದ್ದು, ಉಚಿತವಾಗಿ ಊಟ-ವಸತಿ, ಪಠ್ಯ-ಪುಸ್ತಕ ಸೇರಿದಂತೆ ಮೂಲಭೂತ ಸೌಕರ್ಯಗಳು ಇರುತ್ತವೆ. ಸದ್ಯ ಕೋವಿಡ್-19 ಹಿನ್ನಲೆಯಲ್ಲಿ ಸದ್ಯ ದಾಖಲಾತಿ ಮಾತ್ರ ಮಾಡಿಕೊಳ್ಳಲಾಗುವುದು ಹೆಚ್ಚಿನ ಮಾಹಿತಿಗಾಗಿ ಕಚೇರಿಯನ್ನು ಸಂಪರ್ಕಿಸಬೇಕೆಂದು ಹಿಂದುಳಿದ ವರ್ಗಗಳ …
Read More »ಸಂಭಾವ್ಯ ಪ್ರವಾಹ ಭೀತಿಯನ್ನು ಎದುರಿಸಲು ಸಿದ್ಧರಾಗಿ : ಶಾಸಕ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಧಾರಾಕಾರ ಮಳೆಯಿಂದಾಗಿ ಜುಲೈ ಮತ್ತು ಅಗಸ್ಟ್ ತಿಂಗಳಲ್ಲಿ ಪ್ರವಾಹ ಭೀತಿ ಎದುರಾಗಬಹುದು. ಇದನ್ನು ನಿಭಾಯಿಸಲು ಈಗಿಂದಲೇ ಅಗತ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುವಂತೆ ಅರಭಾವಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಶುಕ್ರವಾರದಂದು ಇಲ್ಲಿಯ ತಾಲೂಕಾ ಪಂಚಾಯತ ಸಭಾಗೃಹದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನೆರೆಯ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ನಮಗೂ ಪ್ರವಾಹ …
Read More »ಗೋಕಾಕ ತಾಲೂಕಿನ ಪ್ರವಾಸಿ ಕೇಂದ್ರಗಳ ವೀಕ್ಷಣೆಗೆ ನಿರ್ಭಂದ:
ಗೋಕಾಕ ತಾಲೂಕಿನ ಪ್ರವಾಸಿ ಕೇಂದ್ರಗಳ ವೀಕ್ಷಣೆಗೆ ನಿರ್ಭಂದ: ಕೊವಿಡ್-19 ವೈರಾಣುವಿನ ಹರಡುವಿಕೆಯನ್ನು ನಿಯಂತ್ರಿಸಲು ಹಾಗೂ ಸಾರ್ವಜನಿಕರು ಮತ್ತು ಪ್ರವಾಸಿಗರ ಆರೋಗ್ಯದ ಹಿತ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಗೋಕಾಕ ತಾಲೂಕಿನ ಗೋಕಾಕ ಫಾಲ್ಸ್, ದೂಪದಾಳ ಹಾಗೂ ಗೊಡಚಿನಮಲ್ಕಿ ಪ್ರವಾಸಿ ತಾಣಗಳಿಗೆ ವಾರಾಂತ್ಯ ಶನಿವಾರ, ರವಿವಾರ ಮತ್ತು ಸಾರ್ವಜನಿಕ ರಜೆ ದಿನಗಳಂದು ಸಾರ್ವಜನಿಕ ವೀಕ್ಷಣೆಯನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಬೆಳಗಾವಿ ಇವರು ಆದೇಶ ಹೊರಡಿಸಿದ್ದಾರೆ. ಈ ಸ್ಥಳಗಳಿಗೆ ಮಹಾರಾಷ್ಟ್ರ ರಾಜ್ಯದಿಂದ ಮತ್ತು ರಾಜ್ಯದ …
Read More »ಸೌಭಾಗ್ಯ ಲಕ್ಷ್ಮೀ ಶುಗರ್ಸ ನಿಂದ ಸಕ್ಕರೆ ವಿತರಣೆ ಕಾರ್ಯಕ್ರಮ
ಗೋಕಾಕ: ಸೌಭಾಗ್ಯ ಲಕ್ಷ್ಮೀ ಶುಗರ್ಸ್ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷ ಕೂಡ ನಾವು ರೈತ ಬಾಂಧವರಿಗೆ ತಿಳಿಸುವುದು ಏನೆಂದರೆ ಈ ವರ್ಷ ನಾವು ನಮ್ಮ ಕಾರ್ಖಾನೆಗೆ ಕಬ್ಬು ಕಳುಹಿಸಿದ ಎಲ್ಲಾ ರೈತ ಬಾಂಧವರಿಗೆ ಪ್ರತಿ ಟನ್ ಗೆ ಅರ್ಧ ಕೇಜಿಯಂತೆ ಸಕ್ಕರೆ ವಿತರಿಸುವ ಕಾರ್ಯಕ್ರಮವನ್ನಾ ಯರಗಟ್ಟಿ, ಗೋಕಾಕ, ಹಾಗೂ ಮಮದಾಪೂರ ಈ ರೀತಿ ಮೂರು ವಿಭಾಗಗಳಾಗಿ ವಿಂಗಡಿಸಿ ಈ ಮೂರು ಝೋನ್ ಗಳಲ್ಲಿ ಸಕ್ಕರೆ ವಿತರಣೆ ಕಾರ್ಯಕ್ರಮ ಹಮ್ಮಿಕೊಂಡಿದೆ. …
Read More »ಸಕಲ ಸರ್ಕಾರಿ ಗೌರವಗಳೊಂದಿಗೆ ಬೆಳಗಾವಿ ಯೋಧನ ಅಂತ್ಯಕ್ರಿಯೆ
ಗೋಕಾಕ : ಕಳೆದ ನಾಲ್ಕೈದು ದಿನಗಳ ಹಿಂದೆ ನ್ಯಾಗಾಲ್ಯಾಂಡ್ ಗಡಿ ಪ್ರದೇಶದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಅಪಘಾತದಲ್ಲಿ ಅಸುನೀಗಿದ್ದ ಗೋಕಾಕ ತಾಲ್ಲೂಕಿನ ವೀರಯೋಧನ ಅಂತ್ಯಕ್ರಿಯೆ ಸಕಲ ಸರ್ಕಾರಿ ಗೌರವದೊಂದಿಗೆ ಜರುಗಿತು. ಶಿವಾಪುರ ಗ್ರಾಮದ ಯೋಧ ಮಂಜುನಾಥ ಗೌಡಣ್ಣವರ (38) ಯೋಧ ಅಫಘಾತದಲ್ಲಿ ಸಾವನ್ನಪ್ಪಿದ್ದರು. ಮೃತ ಯೋಧನ ಪಾರ್ಥಿವ ಶರೀರ ಬೆಂಗಳೂರಿನಿಂದ ಇಂದು ಬೆಳಿಗ್ಗೆ 7 ಗಂಟೆಗೆ ಯೋಧನ ಸ್ವಗ್ರಾಮ ಗೋಕಾಕ್ ತಾಲ್ಲೂಕಿನ ಶಿವಾಪುರ ಗ್ರಾಮಕ್ಕೆ ರಸ್ತೆ ಮೂಲಕ ಕರೆತರಲಾಯಿತು. …
Read More »ಎರಡು ವರ್ಷದೊಳಗೆ ಜಿಲ್ಲೆಯಲ್ಲಿಯೇ ಮಾದರಿ ಕಾರ್ಖಾನೆ ಮಾಡಲು ಶಾಸಕ ಬಾಲಚಂದ್ರ ಜಾರಕಿಹೊಳಿ ಪಣ
ಗೋಕಾಕ : ರೈತರ ಕಲ್ಯಾಣಕ್ಕಾಗಿ ಸಹಕಾರ ತತ್ವದಡಿ ಸ್ಥಾಪಿತಗೊಂಡಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆ ಕುರಿತು ಇತ್ತೀಚೆಗೆ ಕೆಲವರು ಸುಳ್ಳು ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಇಂತಹ ವದಂತಿಗಳನ್ನು ಯಾರೂ ನಂಬಬಾರದು. ಕಾರ್ಖಾನೆ ಈಗಲೂ ನಮ್ಮ ಆಡಳಿತದಲ್ಲಿದೆ ಎಂದು ಕಾರ್ಖಾನೆಯ ಮಾರ್ಗದರ್ಶಕರೂ ಆಗಿರುವ ಅರಭಾವಿ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸ್ಪಷ್ಟಪಡಿಸಿದರು. ನಗರದ ಹೊರವಲಯದಲ್ಲಿರುವ ಘಟಪ್ರಭಾ ಸಹಕಾರಿ ಸಕ್ಕರೆ ಕಾರ್ಖಾನೆಯ ಪ್ರಿಯದರ್ಶಿನಿ ಸಮುದಾಯ ಭವನದಲ್ಲಿ ಟ್ರ್ಯಾಕ್ಟರ್ ಮಾಲೀಕರು ಹಾಗೂ …
Read More »ನಾಗಾಲ್ಯಾಂಡ್ ಗಡಿಯಲ್ಲಿ ಬೆಳಗಾವಿ ಯೋಧನ ವೀರಮರಣ..
ಬೆಳಗಾವಿ : ನಾಗಲ್ಯಾಂಡ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜ್ಯದ ಯೋಧ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಗೋಕಾಕ್ ತಾಲೂಕಿನ ಶಿವಾಪುರದ ಯೋಧ ಮಂಜುನಾಥ ಗೌಡನ್ನವರ (38) ಮೃತಪಟ್ಟಿರುವ ಯೋಧ. ಕರ್ತವ್ಯದಲ್ಲಿದ್ದ ಇವರು ಗಸ್ತು ತಿರುಗುತ್ತಿದ್ದಾಗ ವಾಹನ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. 18 ವರ್ಷದಿಂದ ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ನಲ್ಲಿ ನೇಮಕಗೊಂಡು, ನಾಗಲ್ಯಾಂಡ್ ಗಡಿಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಗಸ್ತು ತಿರುಗುತ್ತಿದ್ದಾಗ ಅರಣ್ಯ ಪ್ರದೇಶದಲ್ಲಿ ಅಪಘಾತ ಸಂಭವಿಸಿ ದುರ್ಘಟನೆ ನಡೆದಿದೆ. …
Read More »ಶ್ರೀ ಲಕ್ಷ್ಮಣ ರಾವ್ ಹಾಗೂ ಶ್ರೀಮತಿ ಭೀಮವ್ವ ಜಾರಕಿಹೊಳಿ ದಂಪತಿಗಳ 10ನೆಯ ಪುಣ್ಯ ಸ್ಮರಣೆ : ಸದಾ ಸ್ಮರಣೆಯಲ್ಲಿ ಕುಟುಂಬ..
ಇಂದು ಗೋಕಾಕ ನಗರದ ಜನತೆಗೆ ಒಂದು ವಿಶೇಷ ವಾದ ದಿನ ಇಂದು ಗೋಕಾಕ ಸಾಹುಕಾರರ ತಂದೆ ತಾಯಿಯ ಪುಣ್ಯ ಸ್ಮರಣೆಯ ದಿನ ಇಂದಿಗೆ ಹತ್ತು ವರ್ಷಗಳು ಕಳೆದರೂ ನಿಮ್ಮ ನೆನಪು ,ಮಾತ್ರ ಸದಾ ಸ್ಮರಣೀಯ ಎನ್ನುತೆ ಕುಟುಂಬ. ಹೌದು ಜಾರಕಿಹೊಳಿ ಕುಟುಂಬದ ಹಿರಿಯ ಜೀವಿಗಳ ಪುಣ್ಯ ಸ್ಮರಣೆಯ ದಿನವಿದು ಹತ್ತು ವರ್ಷಗಳು ಕಳೆದರೂ ನೀವು ನಿಮ್ಮ ನೆನಪು ಮಾತ್ರ ನಮ್ಮೆಲ್ಲರ ಹೃದಯದಲ್ಲಿ ಶಾಶ್ವತ ಅಂತಾರೆ ಕುಟುಂಬದ ಜನ. ನಿಮ್ಮ ಆದರ್ಶ …
Read More »ಮೆಳವಂಕಿ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ
ಗೋಕಾಕ : ಸಮಗ್ರ ಅಭಿವೃದ್ಧಿಗಾಗಿ ಕಳೆದ ೧೫ ವರ್ಷಗಳಿಂದ ಕ್ಷೇತ್ರದಲ್ಲಿ ಸಾಕಷ್ಟು ಕಲ್ಯಾಣಪರ ಹಾಗೂ ಪ್ರಗತಿಪರ ಕಾಮಗಾರಿಗಳನ್ನು ಕೈಗೊಂಡು ಜಿಲ್ಲೆಯಲ್ಲಿಯೇ ಮಾದರಿ ಕ್ಷೇತ್ರವನ್ನಾಗಿ ಪರಿವರ್ತಿಸಲು ಶ್ರಮಿಸುತ್ತಿರುವುದಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದರು. ತಾಲೂಕಿನ ಮೆಳವಂಕಿ ಗ್ರಾಮದಲ್ಲಿ ಮಂಗಳವಾರ ಸಂಜೆ ಆರ್ಡಿಪಿಆರ್ ಇಲಾಖೆಯ ೨೫ ಲಕ್ಷ ರೂ. ವೆಚ್ಚದ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ …
Read More »80 ಲಕ್ಷ ರೂ. ವೆಚ್ಚದ ಹೈಸ್ಕೂಲ್ ರಸ್ತೆ ನಿರ್ಮಾಣಕ್ಕಾಗಿ ಚಾಲನೆ ನೀಡಿದ ಅಮರನಾಥ ಜಾರಕಿಹೊಳಿ
ಗೋಕಾಕ: ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ಮತಕ್ಷೇತ್ರದಲ್ಲಿ ಬುಧವಾರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದರು. ಅಮರನಾಥ ಜಾರಕಿಹೊಳಿ ಅವರು ಶಿಂದಿಕುರಬೇಟ ಗ್ರಾಮದ ಹೈಸ್ಕೂಲ್ ರಸ್ತೆ ನಿರ್ಮಾಣಕ್ಕಾಗಿ 80 ಲಕ್ಷ ರೂ. ವೆಚ್ಚದ ಕಾಮಗಾರಿ ಹಾಗೂ ಜೆಎಲ್ ಬಿಸಿ ಯೋಜನೆಯಡಿ 25 ಲಕ್ಷ ರೂ. ವೆಚ್ಚದ ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು. ಪಾಮಲದಿನ್ನಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯಿಂದ 1.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿ …
Read More »