ಬೆಳಗಾವಿ: ಖಾನಾಪುರದ ಭಾಗ್ಯಲಕ್ಷ್ಮಿ ಸಹಕಾರಿ ಸಕ್ಕರೆ ಕಾರ್ಖಾನೆ ಅವ್ಯವಹಾರ ಆರೋಪದಲ್ಲಿ ರಾಜಕೀಯ ಏನೂ ಇಲ್ಲ. ಈಗ ಚುನಾವಣೆ ಮುಗಿದಿದ್ದು, ನೀವು ದಾಖಲೆ ಸಮೇತ ಬಹಿರಂಗ ಚರ್ಚೆ ಬರುವಂತೆ ಶಾಸಕ ವಿಠ್ಠಲ ಹಲಗೇಕರ್ಗೆ ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಸವಾಲ್ ಹಾಕಿದ್ದಾರೆ. ಖಾನಾಪುರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಾಹಿತಿ ಹಕ್ಕಿನಡಿ ಯಾವುದೇ ದಾಖಲೆ ಕೊಡ್ತಿಲ್ಲ. ಕಳೆದ 6 ವರ್ಷಗಳಿಂದ ಬೆನ್ನು ಬಿದ್ದ ಮೇಲೆ ನಿವೃತ್ತ ನ್ಯಾಯಾಧೀಶ ಎಸ್.ಪಿ.ವಸ್ತ್ರದ ಅವರ ನೇತೃತ್ವದಲ್ಲಿ ತನಿಖೆ …
Read More »ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಸ್ಥಳದಲ್ಲೇ ಸಾವನ್ನಪ್ಪಿದ ಹಾರೂರಿನ ರೈತ
ಖಾನಾಪೂರ ತಾಲೂಕಿನ ಹಾರೂರಿನಲ್ಲಿ ಜಮೀನಿಗೆ ಅಳವಡಿಸಿದ್ದ ವಿದ್ಯುತ್ ತಂತಿ ಬೇಲಿ ಸ್ಪರ್ಶಿಸಿ ಒಬ್ಬ ಸ್ಥಳದಲ್ಲೇ ಸಾವನ್ನಪ್ಪಿದರೆ ಇರ್ನೋರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದಾನೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಬಂದಿದೆ ಏನ್ನೇಂದರೆ ಹೊಲಕ್ಕೆ ಅಳವಡಿಸಿದ್ದ ವಿದ್ಯುತ್ ಬೇಲಿಯ ತಂತಿ ತಗುಲಿ ಈ ಘಟನೆ ನಡೆದಿದೆ. ವಿದ್ಯುತ್ ಸ್ಪರ್ಶಗೊಂಡಿದ್ದ ಸಹೋದರ ರಕ್ಷಿಸಲು ಹೋಗಿ ವಿದ್ಯುತ್ ಸ್ಪರ್ಶಿಸಿದಾಗ ಇನ್ನೋರ್ವ ಪಕ್ಕಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿಗೆ ಕಳುಹಿಸಲಾಗಿದೆ. ಹಾರೂರಿನ ರೈತ ಹಾಗೂ …
Read More »ಅರ್ಚಕನ ಕೆಲಸ ಬಿಡಿಸಿದ್ದಕ್ಕೆ ಮಲಪ್ರಭಾ ನದಿ ತೀರದಲ್ಲಿ ಧರಣಿಗೆ ಕುಳಿತ
ಅರ್ಚಕನ ಕೆಲಸ ಬಿಡಿಸಿದ್ದಕ್ಕೆ ಮಲಪ್ರಭಾ ನದಿ ತೀರದಲ್ಲಿ ಧರಣಿಗೆ ಕುಳಿತ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಹಬ್ಬನಹಟ್ಟಿ ಗ್ರಾಮದಲ್ಲಿ ನಡೆದಿದೆ. ಪೊಲೀಸರು, ಆಡಳಿತ ಮಂಡಳಿ ಹಾಗೂ ಸ್ಥಳೀಯರು ಅರ್ಚಕನನ್ನು ಅಲ್ಲಿಂದಹೊರತೆಗೆಯಲು ಹರಸಾಹಸ ಪಟ್ಟರು. ಹರಿಯಾಣ ಮೂಲದ ಅರ್ಚಕ ದೇವೇಂದ್ರ ಸಿಂಗ್ ಶರ್ಮಾ ಅವರು ನದಿ ಬಳಿ ಧರಣಿಕುಳಿತಿದ್ದು. ಖಾನಾಪುರ ಪೊಲೀಸರು, ಗ್ರಾಮಾಂತರ ಪಿಡಿಒ ಹಾಗೂ ಸ್ಥಳೀಯರು. ನದಿಯ ದಡದಲ್ಲಿ ಕುಳಿತಿದ್ದ ಅರ್ಚಕರನ್ನು ಸ್ಥಳೀಯ ನಾಗರಿಕರು ಹೊರ ಬರುವಂತೆ ಮನವಿ …
Read More »ಖಾನಾಪುರ ಕ್ರಾಸ್ ಆಕ್ರಮ ಬಳಿ ಇಸ್ಪೀಟ್ ಅಡ್ಡೆಯ ಮೇಲೆ ಪೊಲೀಸರ ದಾಳಿ
ಧಾರವಾಡ: ಗರಗ ಪೊಲೀಸ್ ಠಾಣೆಗೆ ಒಳಪಡುವಂತಹ ಖಾನಾಪುರ ಕ್ರಾಸ್ ಬಳಿ ಆಕ್ರಮವಾಗಿ ಇಸ್ಪೀಟ್ ಅಡ್ಡೆ ನಡೆಸುತ್ತಿದ ವೇಳೆಯಲ್ಲಿ ಗರಗ ಠಾಣೆ ಪೊಲೀಸ್ ಕಚ್ಚಿತ ಮಾಹಿತಿ ಪ್ರಕಾರ ದಾಳಿಯನ್ನು ಮಾಡಿ 8 ಜನರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ 8 ಆರೋಪಿಗಳಿಂದ ನಗದು, ಹಾಗೂ ಇಸ್ಪೀಟ್ ಆಡಲು ಬಳಸುತ್ತಿದ್ದ ಎಲೆಗಳನ್ನು ವಶಕ್ಕೆ ಪಡೆದುಕೊಂಡು, ಹಾಗೂ ಸದ್ಯ 8 ಜನರ ಆರೋಪಿಗಳ ಮೇಲೆ ಗರಗ ಪೊಲೀಸ ಠಾಣೆಯಲ್ಲಿ ಪ್ರಕರಣವನ್ನು ದಾಖಲೆ ಮಾಡಿ ಮುಂದಿನ ಕಾನೂನು …
Read More »ಸಾರ್ವಜನಿಕ ಭೇಟಿ ಮಾಡಿ ಸಮಸ್ಯೆ ಆಲಿಸಿ ಪರಿಹಾರ ನೀಡಿದ ಖಾನಾಪೂರ ನಗರ ಸೇವಕ
ಖಾನಾಪೂರದ ವಾರ್ಡ್ ನಂಬರ್ 2 ರ ನಗರ ಸೇವಕ ತೊಹೀದ್ ಚಾಂದಖಾನವರ ಭೇಟಿ ನೀಡಿ ಸಾರ್ವಜನಿಕ ಸಮಸ್ಯೆ ಆಲಿಸಿ ಪರಿಹಾರ ಮಾಡುವ ಭರವಸೆ ಖಾನಾಪೂರ ಪಟ್ಟಣ ಪಂಚಾಯಿತಿಯ ವಾರ್ಡ್ ನಂಬರ್ 2ರ ನಗರ ಸೇವಕ ತೊಹೀದ್ ಚಾಂದಖಾನವರ ಅವರು ಮಿಚ್ಕೀನ್ ಕಂಪೌಂಡ್ ಪರಿಸರದಲ್ಲಿನ ಸಾರ್ವಜನಿಕರಿಗೆ ಭೇಟಿ ನೀಡಿ ಅವರ ಸಮಸ್ಯೆಗಳನ್ನು ಆಲಿಸಿ ಅದಕೆ ಸೂಕ್ತ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದರು. ಮಿಚ್ಕೀನ್ ಕಾಂಪೌಂಡ್ ನಲ್ಲಿನ ರಸ್ತೆಗಳಿಗೆ ಫೇವರ್ಸ ಹಾಕುವುದು …
Read More »ಕೆಎಸ್ಆರ್ಟಿಸಿ, ಬೈಕ್ ನಡುವೆ ಮುಖಾಮುಖಿ ಡಿಕ್ಕಿ: ಒಬ್ಬನ ಸಾವು, ಮೂವರಿಗೆ ಗಂಭೀರ ಗಾಯ
ಬೆಳಗಾವಿ: ಬೈಕ್ ಹಾಗೂ ಕೆಎಸ್ಆರ್ಟಿಸಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನ್ನಪ್ಪಿದ್ದು, ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಖಾನಾಪುರ ತಾಲೂಕಿನ ಗೊಲ್ಲಿಹಳ್ಳಿ ಗ್ರಾಮದ ಬಳಿ ನಡೆದಿದೆ. ಯಲ್ಲಪ್ಪ ವಣ್ಣೂರ್ (25) ಅಪಘಾತದಲ್ಲಿ ಮೃತ ಪಟ್ಟವರು. ಒಂದೇ ಬೈಕ್ನಲ್ಲಿ ಚಲಿಸುತ್ತಿದ್ದ ಪಲ್ಲವಿ ವಣ್ಣೂರ್ (16), ಐಶ್ವರ್ಯಾ ವಣ್ಣೂರ್ (16), ಭೀಮಪ್ಪ ವಣ್ಣೂರ್ (40) ಎಂಬವರು ಗಂಭೀರವಾಗಿ ಗಾಯಗೊಂಡಿದ್ದು, ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿರಸಿಯಿಂದ ಬೆಳಗಾವಿ ಕಡೆಗೆ …
Read More »ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಪಲ್ಟಿ ಓರ್ವ ಸಾವು
ಖಾನಾಪುರ: ತಾಲೂಕಿನ ದೇವಟ್ಟಿಯಿಂದ ಪಾರಿಷ್ವಾಡಕ್ಕೆ ಇಟ್ಟಿಗೆ ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದು ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ದಾವಲ್ ಸಾಬ್ ಫಯಾಜ್ ಮುನವಳ್ಳಿ ಮೃತಪಟ್ಟವರು. ಚಾಲಕ ಮಂಜುನಾಥ ಚಂದ್ರು ಕುಕಡೊಳ್ಳಿ ಹಾಗೂ ಕಾರ್ಮಿಕ ಮಂಜುನಾಥ ಗುರನ್ನವರ ಗಾಯಗೊಂಡವರು. ಚಾಲಕನ ನಿಯಂತ್ರಣ ತಪ್ಪಿದ ವಾಹನ ರಸ್ತೆ ಪಕ್ಕದಲ್ಲಿ ಪಲ್ಟಿಯಾಯಿತು. ಅಪಘಾತದಲ್ಲಿ ವಾಹನದಲ್ಲಿದ್ದ ಇಟ್ಟಿಗೆಗಳು ಸಹ ನಷ್ಟಕ್ಕೀಡಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Read More »ಪೂಜೆ ಸಲ್ಲಿಸಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ ಡಾ.ಅಂಜಲಿ ನಿಂಬಾಳಕರ್
ಖಾನಾಪುರ: ಸ್ಥಳೀಯ ಶಾಸಕಿ ಡಾ.ಅಂಜಲಿ ನಿಂಬಾಳಕರ ಗುರುವಾರ ಪಟ್ಟಣದ ಚೌರಾಶಿದೇವಿ ಮತ್ತು ತಾಲೂಕಿನ ಕಕ್ಕೇರಿ ಗ್ರಾಮದ ಬಿಷ್ಠಾದೇವಿ ದೇವಾಲಯಗಳಲ್ಲಿ ಉಭಯ ಶಕ್ತಿದೇವಿಯರಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಮುಂಬರುವ ಚುನಾವಣೆಯ ಪ್ರಚಾರ ಕಾರ್ಯಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಕಕ್ಕೇರಿ ಗ್ರಾಮದ ಬಿಷ್ಠಾದೇವಿ ಆಲಯದ ಮುಂಭಾಗದಲ್ಲಿ ತಮ್ಮ ಬೆಂಬಲಿಗರು ಮತ್ತು ಕಾಂಗ್ರೆಸ್ ಮುಖಂಡರೊಂದಿಗೆ ಪಕ್ಷದ ಪ್ರಚಾರ ವಾಹನಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, “ತಾಲೂಕಿನ ವಿವಿಧ ಭಾಗಗಳಲ್ಲಿ ಕಳೆದ 5 ವರ್ಷಗಳಿಂದ ಹಲವು …
Read More »ಅಂದರ್- ಬಾಹರ್ ಆಟದಲ್ಲಿ ತೊಡಗಿದ್ದ ಎಂಟು ಜನ ಆರೋಪಿ ಪೊಲೀಸರು ವಶಕ್ಕೆ
ಖಾನಾಪುರ: ತಾಲೂಕಿನ ಪಾರಿಷ್ವಾಡ ಗ್ರಾಮದಲ್ಲಿ ಮಲಪ್ರಭಾ ನದಿ ದಂಡೆಯಲ್ಲಿ ಅಂದರ್- ಬಾಹರ್ ಆಟದಲ್ಲಿ ತೊಡಗಿದ್ದ ಎಂಟು ಜನ ಆರೋಪಿತರನ್ನು ಪೊಲೀಸರು ವಶಕ್ಕೆ ಪಡೆದ್ದಾರೆ. ಖಚಿತ ಮಾಹಿತಿ ಮೇರೆಗೆ ಖಾನಾಪುರ ಪೊಲೀಸ್ ಠಾಣೆ ಪಿಎಸ್ಐ ಪ್ರಕಾಶ ರಾಠೋಡ ಅವರು ಬೈಲಹೊಂಗಲ ಡಿಎಸ್ಪಿ ರವಿ ಡಿ.ನಾಯ್ಕ, ಖಾನಾಪುರ ಪಿಐ ರಾಮಚಂದ್ರ ನಾಯಕ ಅವರ ಮಾರ್ಗದರ್ಶನದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ಮಾಡಿ 8 ಜನರನ್ನು ವಶಕ್ಕೆ ಪಡೆದರು.ಆರೋಪಿತರಿಂದ ಹಣ ಹಾಗೂ ಇಸ್ಪೀಟ್ ಎಲೆಗಳನ್ನು ಜಪ್ತಿ ಮಾಡಿಕೊಂಡಿದ್ದು, ತನಿಖೆ …
Read More »ಕಾಡುಕೋಣ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ತಂಡ ಬಂಧಿಸಿದೆ.
ಖಾನಾಪುರ: ತಾಲೂಕಿನ ನಂದಗಡದಲ್ಲಿ ಕಾಡುಕೋಣ ಬೇಟೆಯಾಡಿ ಮಾಂಸ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಅರಣ್ಯ ಇಲಾಖೆ ತಂಡ ಬಂಧಿಸಿದೆ. ಡೆವಿಡ್ ಫಿಗೇರ್ ಮತ್ತು ಹಸನ್ ಬೇಪಾರಿ ಬಂಧಿತರು. ಇವರಿಂದ 11 ಕೆಜಿ ಕಾಡುಕೋಣದ ಮಾಂಸ, ಕೃತ್ಯಕ್ಕೆ ಬಳಸಿದ ದ್ವಿಚಕ್ರ ವಾಹನ, ೆರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಬೆಳಗಾವಿ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ಚವ್ಹಾಣ ಅವರ …
Read More »