ಬೆಂಗಳೂರು: ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕಾಗಿ ಶಾಸಕರು ಪತ್ರ ಬರೆದಿರೋದು ಬಂಡಾಯದ ಸೂಚನೆ ಅಂತ ಬಿಜೆಪಿ ಮಾಜಿ ಸಚಿವ ರೇಣುಕಾಚಾರ್ಯ ಲೇವಡಿ ಮಾಡಿದ್ದಾರೆ. ಹೊನ್ನಾಳಿಯಲ್ಲಿ ನಡೆಯಲಿರೋ ಕೃಷಿ ಮೇಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಆಹ್ವಾನ ನೀಡಿದರು. ಈ ವೇಳೆ ಶಾಸಕರ ಪತ್ರದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಸಚಿವ ಸ್ಥಾನ ಕೊಡಿ ಅಂತ ಪತ್ರ ಬರೆಯೋ ಪದ್ಧತಿ ಇರಲಿಲ್ಲ. ನಾನು ಅನೇಕ ವರ್ಷಗಳಿಂದ ರಾಜಕೀಯದಲ್ಲಿ ಇದ್ದೇನೆ. 6-7 ಜನ ಸಿಎಂರನ್ನ …
Read More »ಶಿವಮೊಗ್ಗದಲ್ಲಿ ಸಂಕೇತ್ ಹತ್ಯೆ| ಕೋಮು ಗಲಭೆ ಹುಟ್ಟು ಹಾಕಲು ಕೃತ್ಯ ಎಸಗಿದಂತಿದೆ – ಸಿಟಿ ರವಿ
ಬೆಂಗಳೂರು: ಶಿವಮೊಗ್ಗದಲ್ಲಿ ಅನ್ಯ ಕೋಮಿನ ಹುಡುಗರಿಂದ ಸಂಕೇತ್ ಕೊಲೆ (Sanketh Murder) ಪ್ರಕರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು ಎಂದು ಸರ್ಕಾರವನ್ನ ಬಿಜೆಪಿ ನಾಯಕ ಸಿಟಿ ರವಿ (CT Ravi) ಆಗ್ರಹಿಸಿದ್ದಾರೆ. ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು, 10ನೇ ತರಗತಿ ಓದುತ್ತಿದ್ದ ಸಂಕೇತ್ ಎಂಬ ವಿದ್ಯಾರ್ಥಿಯನ್ನು ಯಾವುದೇ ಕಾರಣ ಇಲ್ಲದೇ ಹತ್ಯೆ ಮಾಡಿದ್ದಾರೆ. 10ನೇ ಕ್ಲಾಸ್ ವಿಶೇಷ ತರಗತಿ ಮುಗಿಸಿಕೊಂಡು ಬರುತ್ತಿದ್ದಾಗ ಕೊಂದಿದ್ದಾರೆ. ಭಟ್ಕಳ, ಬಾಗಲಕೋಟೆ ಯಲ್ಲಿ ಇಂತಹ ಗಲಾಟೆಗಳು …
Read More »ಸತೀಶ್ ಜಾರಕಿಹೋಳಿ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೇಳೋದು ತಪ್ಪಲ್ಲ: ಅಶೋಕ್ ಪಟ್ಟಣ್
ಬೆಂಗಳೂರು: ಮೊದಲ ಬಾರಿ ಗೆದ್ದ ಶಾಸಕರು ಸಚಿವ ಸ್ಥಾನ ಕೇಳುವುದು ತಪ್ಪಲ್ಲ. ಆದರೆ ಸಚಿವ ಸ್ಥಾನ ಕೊಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದು ವಿಧಾನಸಭೆ ಮುಖ್ಯ ಸಚೇತಕ ಅಶೋಕ್ ಪಟ್ಟಣ್ ತಿಳಿಸಿದ್ದಾರೆ. ಮೊದಲ ಬಾರಿ ಗೆದ್ದ ಕಾಂಗ್ರೆಸ್ ಶಾಸಕರು ಮಂತ್ರಿ ಸ್ಥಾನಕ್ಕಾಗಿ ಪತ್ರ ಬರೆದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಮೊದಲ ಬಾರಿ ಗೆದ್ದಿರೋರು ಮಂತ್ರಿ ಸ್ಥಾನ ಕೇಳೋದು ತಪ್ಪೇನು ಅಲ್ಲ. ಇದರಲ್ಲಿ ಯಾವುದೇ ಗೊಂದಲ, ಬಂಡಾಯ ಇಲ್ಲ. ಎಲ್ಲರಿಗೂ …
Read More »ಲಂಚ ಪಡೆಯುವಾಗ ಸಿಕ್ಕಿಬಿದ್ದ ಚಂದ್ರು ಲಮಾಣಿ – ಶಾಸಕರ ಉಚ್ಚಾಟನೆಗೆ ಬಿಜೆಪಿ ಚಿಂತನೆ
ಬೆಂಗಳೂರು: ಶಾಸಕ ಡಾ.ಚಂದ್ರು ಲಮಾಣಿ ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿರೋದು ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಕಮಿಷನ್ ವಿರುದ್ಧ ಹೋರಾಟ ನಡೆಸಿ ಕಾಂಗ್ರೆಸ್ ವಿರುದ್ಧ ಕೆಂಡ ಉಗುಳುತ್ತಿದ್ದ ಬಿಜೆಪಿಗೆ ತಮ್ಮದೇ ಪಕ್ಷದ ಶಾಸಕ ಸಿಕ್ಕಿಬಿದ್ದಿರೋದು ಸಹಿಸಲಾಗದ ಮರಣ ಸಂಕಟ ಬಂದಂತಾಗಿದೆ. ಈ ಹಿನ್ನೆಲೆ ಚಂದ್ರು ಲಮಾಣಿ ವಿರುದ್ಧ ಶಿಸ್ತು ಕ್ರಮಕ್ಕೆ ಚಿಂತನೆ ನಡೆಸಿದೆ. ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಟ್ರ್ಯಾಪ್ ಆಗಿದ್ದು, ಈ ಪ್ರಕರಣ ಸಂಬಂಧ ವರಿಷ್ಠರಿಗೆ ರಾಜ್ಯ …
Read More »ಬಾಗಲಕೋಟೆಯಲ್ಲಿ ಪರಿಸ್ಥಿತಿ ಪೂರ್ಣ ನಿಯಂತ್ರಣಕ್ಕೆ ಬಂದಿದೆ: ಡಾ.ಪರಮೇಶ್ವರ್
ಬೆಂಗಳೂರು: ‘ಬಾಗಲಕೋಟೆಯಲ್ಲಿ ಮೆರವಣಿಗೆ ಬಗ್ಗೆ ಸ್ಥಳೀಯವಾಗಿ ನೋಡಿಕೊಂಡು ತೀರ್ಮಾನ ಮಾಡುವಂತೆ ಸೂಚಿಸಿದ್ದೇನೆ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದರು. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಾಗಲಕೋಟೆ ಈಗ ಶಾಂತವಾಗಿದೆ. ಪೊಲೀಸ್ ತಕ್ಷಣ ಕಾರ್ಯಪ್ರವೃತ್ತರಾಗಿದ್ದರಿಂದ ಪರಿಸ್ಥಿತಿ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ. ಮೆರವಣಿಗೆ ಬಗ್ಗೆ ಸ್ಥಳೀಯವಾಗಿ ನೋಡಿಕೊಂಡು ತೀರ್ಮಾನ ಮಾಡುವಂತೆ ಸೂಚಿಸಿದ್ದೇನೆ ಎಂದರು. ಹಿರಿಯ ಎಡಿಜಿಪಿಯನ್ನು ಕಳುಹಿಸಿದ್ದೇನೆ. ಸಾಕಷ್ಟು ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಶಾಂತಿಸಭೆ ನಿರ್ದೇಶನ ನೀಡಲಾಗಿದೆ ಎಂದ ಅವರು, ಘಟನೆಯಲ್ಲಿ ಪೊಲೀಸರಿಗೂ …
Read More »ಬೆಸ್ಕಾಂ |ಮೃತರ ಕುಟುಂಬದವರಿಗೆ ತಲಾ ₹1 ಕೋಟಿ ಪರಿಹಾರ: ಚೆಕ್ ವಿತರಿಸಿದ ಜಾರ್ಜ್
ಬೆಂಗಳೂರು: ಕರ್ತವ್ಯದ ವೇಳೆ ಮೃತಪಟ್ಟಿರುವ ಬೆಸ್ಕಾಂನ ಮೂವರು ಸಿಬ್ಬಂದಿಯ ಕುಟುಂಬವರಿಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಅವರು ತಲಾ ₹1 ಕೋಟಿ ಪರಿಹಾರದ ಚೆಕ್ ಅನ್ನು ಬುಧವಾರ ವಿತರಿಸಿದರು. ವಿದ್ಯುತ್ ಆಘಾತದಲ್ಲಿ ಮೃತಪಟ್ಟ ಗೌರಿಬಿದನೂರು ಉಪ ವಿಭಾಗದ ಸಹಾಯಕ ಪವರ್‌ಮ್ಯಾನ್ ಉದಯ ಕುಮಾರ್ ಅವರ ಪತ್ನಿ ವಿ. ಕೀರ್ತನಾ, ರಸ್ತೆ ಅಪಘಾತಗಳಲ್ಲಿ ಮೃತರಾದ ಗುಡಿಬಂಡೆ ಉಪ ವಿಭಾಗದ ಪವರ್‌ಮ್ಯಾನ್ ಬಿ.ವಿ. ಮಂಜಪ್ಪ ಅವರ ಪತ್ನಿ ದಾಕ್ಷಾಯಿಣಿ ಹಾಗೂ ಚಿಂತಾಮಣಿ ಉಪ …
Read More »ಅನೈತಿಕ ಸಂಬಂಧ ಶಂಕೆ – ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಬರ್ಬರವಾಗಿ ಹತ್ಯೆಗೈದ ಪತಿ
ರಾಮನಗರ: ಕೌಟುಂಬಿಕ ಕಲಹ ಹಾಗೂ ಅನೈತಿಕ ಸಂಬಂಧ ಶಂಕೆ ಹಿನ್ನೆಲೆ ಪತ್ನಿಯ ತಲೆ ಮೇಲೆ ಕಲ್ಲು ಎತ್ತಿಹಾಕಿ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕುಳ್ಳೇಗೌಡನಪಾಳ್ಯದಲ್ಲಿ ನಡೆದಿದೆ. ಸಿಂಚನ(21) ಕೊಲೆಯಾದ ಮಹಿಳೆ, ಪತಿ ರೇಣುಕಯ್ಯ ಎಂಬಾತನೇ ತಲೆಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಪತ್ನಿಯ ಶೀಲ ಶಂಕಿಸಿ ಆಗಾಗೆ ರೇಣುಕಯ್ಯ ಗಲಾಟೆ ಮಾಡ್ತಿದ್ದ. ಅದರಂತೆ ಶುಕ್ರವಾರವೂ ಕೂಡ …
Read More »ಬಿಕ್ಲು ಶಿವ ಕೊಲೆ ಕೇಸಲ್ಲಿ ಶಾಸಕ ಬೈರತಿ ಬಸವರಾಜ್ ಜೈಲಿಗೆ
ಬೆಂಗಳೂರು: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಶಾಸಕ ಬೈರತಿ ಬಸವರಾಜ್‌ರನ್ನು ಫೆ.26ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಜನಪ್ರತಿನಿಧಿಗಳ ಕೋರ್ಟ್ ಆದೇಶ ಹೊರಡಿಸಿದೆ. ಬೈರತಿ ಬಸವರಾಜ್ ರನ್ನು ಬಂಧಿಸಿ ಏಳು ದಿನಗಳ ಕಾಲ ಕಸ್ಟಡಿಗೆ ಪಡೆದಿದ್ದ ಸಿಐಡಿ ಪೊಲೀಸರು, ಇಂದು 42ನೇ ಎಸಿಜೆಎಂ ಕೋರ್ಟ್ ಮುಂದೆ ಹಾಜರುಪಡಿಸಿದ್ದರು. ವಿಚಾರಣೆ ವೇಳೆ ಬೈರತಿ ಬಸವರಾಜ್‌ಗೆ ಹೃದಯ ಸಂಬಂಧಿ ಕಾಯಿಲೆ ಇದೆ. ಹಾಗಾಗಿ ಸೋಮವಾರ ಜಾಮೀನು ಅರ್ಜಿ ವಿಚಾರಣೆ ಇದೆ. ಅಲ್ಲಿ ತನಕ ಜಯದೇವ …
Read More »ವೇದವಿದ್ಯಾ ವಿಹಾರ ಗುರುಕುಲಕ್ಕೆ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ
ರಾಮನಗರ: ಇಲ್ಲಿನ ಬನ್ನಿಕುಪ್ಪೆ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವೇದವಿದ್ಯಾ ವಿಹಾರ ಗುರುಕುಲಕ್ಕೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಶಂಕುಸ್ಥಾಪನೆ ನೆರವೇರಿಸಿದರು. ವೇದ ಉಪನ್ಯಾಸದ ಗುರುಕುಲಕ್ಕೆ ಗುದ್ದಲಿಪೂಜೆ ನೆರವೇರಿಸಿ ಹೋಮ ಕಾರ್ಯಕ್ರಮದಲ್ಲಿ ಭಾಗಿಯಾದ ಸಚಿವರು, ಸ್ಥಳೀಯರಿಗೆ ಗುರುಕುಲದ ವತಿಯಿಂದ ಸೀರೆ ವಿತರಣೆ ಮಾಡಿದ್ರು. ಈ ವೇಳೆ ಕೇಂದ್ರ ಸಚಿವರಿಗೆ ಸಂಸದ ಡಾ.ಮಂಜುನಾಥ್, ಪತ್ನಿ ಅನುಸೂಯ ಮಂಜುನಾಥ್ ಸೇರಿ ಸ್ಥಳೀಯ ಬಿಜೆಪಿ ಮುಖಂಡರು ಸಾಥ್ ನೀಡಿದ್ರು. ಬಳಿಕ ಬೆಂಗಳೂರು ಹೊರವಲಯದ STRR ರಿಂಗ್ ರಸ್ತೆ …
Read More »ವಿಧಾನಸೌಧದಲ್ಲಿ ಮಾಧ್ಯಮಗಳ ನಿರ್ಬಂಧಕ್ಕೆ ವಿರೋಧ – ಮಾಧ್ಯಮ ಪ್ರತಿನಿಧಿಗಳಿಂದ ಮೌನ ಧರಣಿ
ಬೆಂಗಳೂರು: ಭದ್ರತೆಯ ನೆಪವೊಡ್ಡಿ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಭಂಧ ವಿಧಿಸಿರುವ ರಾಜ್ಯ ಸರ್ಕಾರದ ಕ್ರಮವನ್ನ ವಿರೋಧಿಸಿ ಮಾಧ್ಯಮ ಪ್ರತಿನಿಧಿಗಳಿಂದು ಮೌನ ಧರಣಿ ನಡೆಸಿದರು. ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಕುಳಿತು ಮುಖಕ್ಕೆ ಕಪ್ಪು ಮಾಸ್ಕ್ ಧರಿಸಿ ಮೌನ ಧರಣಿ ನಡೆಸಿದರು. ಅಲ್ಲದೇ ಮಾಧ್ಯಮ ಸ್ವಾತಂತ್ರ್ಯ ರಕ್ಷಿಸಲು, ಪ್ರಜಾಸತ್ತಾತ್ಮಕ ಮೌಲ್ಯಗಳನ್ನ ಎತ್ತಿಹಿಡಿಯಲು ಪತ್ರಿಕೋದ್ಯಮ ಸ್ವಾತಂತ್ರ್ಯಕ್ಕೆ ಅಡ್ಡಿಯಾಗುವ ನಿರ್ಬಂಧಗಳನ್ನ ಮರುಪರಿಶೀಲಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು. ಸ್ಥಳಕ್ಕೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ.ವಿ ಪ್ರಭಾಕರ್ (KV …
Read More »
Laxmi News 24×7