ಬೆಂಗಳೂರು: ಜನ ಕೊರೊನಾ ಸಂಕಷ್ಟದಲ್ಲಿರುವಾಗ ಬಿಜೆಪಿಗೆ ನಾಯಕತ್ವದ ಚಿಂತೆ. ರೋಮ್ ಪಟ್ಟಣ ಹೊತ್ತಿ ಉರಿಯುತ್ತಿದ್ದಾಗ, ದೊರೆ ನೀರೋ ಪಿಟೀಲು ನುಡಿಸುತ್ತಿದ್ದನಂತೆ. ಅದೇ ರೀತಿ ರಾಜ್ಯ ಸಾಂಕ್ರಾಮಿಕ ಮತ್ತು ಲಾಕ್‍ಡೌನ್ ನಿಂದ ನಲುಗುತ್ತಿರುವಾಗ, ಸರ್ಕಾರ ಜನರ ಸಂಕಷ್ಟ ಪರಿಹರಿಸುವುದನ್ನು ಬಿಟ್ಟು ನಾಯಕತ್ವ ಬದಲಾವಣೆಯ ಕಸರತ್ತಿನಲ್ಲಿ ನಿರತವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಟೀಕಿಸಿದ್ದಾರೆ. ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ಉದ್ದೇಶಿಸಿ ಅವರು, ರಾಜ್ಯದಲ್ಲಿ ಮುಂಗಾರು ಉತ್ತಮವಾಗಿದೆ. ಆದರೆ ರೈತರಿಗೆ ಸೂಕ್ತ ಪ್ರಮಾಣದಲ್ಲಿ ಬಿತ್ತನೆ …
Read More »ಸಂತೋಷ್ ಹೆಗ್ಡೆಗೂ ಸೈಬರ್ ವಂಚಕರ ಕರೆ: ಪ್ರಕರಣ ದಾಖಲು
ಬೆಂಗಳೂರು: ದಿನೇ ದಿನೇ ಸೈಬರ್ ವಂಚನೆ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಇದರ ನಡುವೆ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರಿಗೂ ವಂಚಿಸಲು ಯತ್ನಿಸಿರುವುದು ಬೆಳಕಿಗೆ ಬಂದಿದೆ. ದೂರವಾಣಿ ಕರೆ ಮಾಡಿ ಕ್ರೆಡಿಟ್ ಕಾರ್ಡ್ ಮಾಹಿತಿ ಪಡೆದು ವಂಚನೆ ಮಾಡಲು ದುಷ್ಕರ್ಮಿಗಳು ಯತ್ನಿಸಿದ್ದಾರೆ. ಈ ಸಂಬಂಧ ಸ್ವತಃ ಸಂತೋಷ್ ಹೆಗ್ಡೆ ಅವರು ದೂರು ನೀಡಿದ್ದಾರೆ. ದೂರು ಏನು?: ಜೂ.14ರ ಸಂಜೆ 6 ಗಂಟೆಗೆ ಸಂತೋಷ್ ಹೆಗ್ಡೆ ಅವರ ಮೊಬೈಲ್‍ಗೆ ಕರೆ …
Read More »ಜುಲೈ ತಿಂಗಳಾಂತ್ಯಕ್ಕೆ ಬೆಂಗಳೂರು ನಗರಕ್ಕೆ ಹೊಸ ಕಮೀಷನರ್ ನೇಮಕ?
ಬೆಂಗಳೂರು,: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಕೂಗು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಅದೇ ರೀತಿ ರಾಜಧಾನಿ ಬೆಂಗಳೂರಿನ ಪೊಲೀಸ್ ಆಯುಕ್ತರು ಕೂಡ ಬದಲಾಗುವ ಮಾಹಿತಿ ಚರ್ಚೆಗೆ ನಾಂದಿ ಹಾಡಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗಾಗಿ ಪೈಪೋಟಿ ಶುರುವಾಗಿದೆ. ನೂತನ ನಗರ ಪೊಲೀಸ್ ಆಯುಕ್ತರು ಯಾರಾಗಲಿದ್ದಾರೆ ಎಂಬುದು ಕುತೂಹಲ ಕೆರಳಿಸಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರ ಎರಡನೇ ಸಲ ಸದ್ದು ಮಾಡುತ್ತಿದೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ರಾಜ್ಯಕ್ಕೆ …
Read More »ಬಿ.ಎಸ್.ಯಡಿಯೂರಪ್ಪ ಅವರು ನಿವೃತ್ತಿ ಪಡೆಯುವ ಸಮಯ ಬಂದಿದೆ: ಬಸವ ಜಯಮೃತ್ಯುಂಜಯ ಸ್ವಾಮೀಜಿ
ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರು ನಿವೃತ್ತಿ ಪಡೆಯುವ ಸಮಯ ಬಂದಿದೆ ಎಂದು ಕೂಡಲಸಂಗಮ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿಗಳು ಹೇಳಿದ್ದಾರೆ. ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಆಗ್ರಹಿಸಿ ಈ ಹಿಂದೆ ಶ್ರೀಗಳು ಪಾದಯಾತ್ರೆ ಹಾಗೂ ಪ್ರತಿಭಟನೆ ನಡೆಸಿದ್ದರು. ಕೇಂದ್ರ ನಾಯಕತ್ವ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಕಿಳಿಸಿದರೆ, ಪಕ್ಷವನ್ನು ಹೃದಯಾಳದಿಂದ ಸ್ವಾಗತಿಸುತ್ತೇವೆ. ಯಡಿಯೂರಪ್ಪ ಅವರ ವಯಸ್ಸಿನಿಂದಾಗಿ ಹಲವರಿಗೆ ಅಧಿಕಾರ ತಪ್ಪಿ ಹೋಗುತ್ತಿದೆ. ಹೀಗಾಗಿ ಅವರು ನಿವೃತ್ತಿ ಪಡೆದುಕೊಳ್ಳಲು ಸಮಯ ಬಂದಿದೆ ಎಂದು …
Read More »ನಾಯಕತ್ವ ಬದಲಾವಣೆ ಧ್ವನಿ ಎತ್ತಿ ಉಸ್ತುವಾರಿ ಬಂದ್ರೂ ಭೇಟಿಯಾಗದ ಯತ್ನಾಳ್
ಬೆಂಗಳೂರು: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಭೇಟಿಗೆ ನಾನು ಅವಕಾಶ ಕೇಳಿಲ್ಲ ಎಂದು ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿರುವ ಅರುಣ್ ಸಿಂಗ್ ಬಿಜೆಪಿ ಕಚೇರಿಯಲ್ಲಿ ಪಕ್ಷದ ಶಾಸಕರು, ಸಚಿವರು, ನಾಯಕರ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ. ಅನೇಕರು ಅವರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯ ಹೇಳಿದ್ದು, ಬಸವನಗೌಡ ಪಾಟೀಲ್ ಯತ್ನಾಳ್ ಅವರು ಮಾತ್ರ ಅರುಣ್ ಸಿಂಗ್ ಭೇಟಿಗೆ ಸಮಯವನ್ನು ಕೇಳಿಲ್ಲ. ನಾಯಕತ್ವ ಬದಲಾವಣೆ …
Read More »ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾರ ಪರವೂ ಅಲ್ಲ, ಯಾರ ವಿರೋಧವೂ ಅಲ್ಲ: ಅನಿಲ್ ಬೆನಕೆ
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾರ ಪರವೂ ಅಲ್ಲ, ಯಾರ ವಿರೋಧವೂ ಅಲ್ಲ ಎಂದು ಹೇಳುವ ಮೂಲಕ ಶಾಸಕ ಅನಿಲ್ ಬೆನಕೆ ಅಚ್ಚರಿ ಮೂಡಿಸಿದ್ದಾರೆ. ಇಷ್ಟು ದಿನಗಳ ಕಾಲ ಯಡಿಯೂರಪ್ಪರೇ ನಮ್ಮ ನಾಯಕ ಎಂತಿದ್ದ ಅನಿಲ್ ಬೆನಕೆ ಇದೀಗ ಸಡನ್ ಯೂ ಟರ್ನ್ ಹೊಡೆದಿದ್ದಾರೆ. ಬೆಳಗಾವಿಯಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು, ಹೈಕಮಾಂಡ್ ಯಾವ ನಾಯಕನ ಹೆಸರನ್ನ ಸೂಚಿಸುತ್ತೋ ಅವರ ಪರವಾಗಿ ನಾನು ಕೆಲಸ ಮಾಡುತ್ತೇನೆ. ಅದು ಯಡಿಯೂರಪ್ಪರೇ …
Read More »‘ಮೋದಿ, ಮೋದಿ’ ಎಂದರೆ ಬಡವರ ಬದುಕು ಬೂದಿಯಾಗೋದು ಖಚಿತ: ಸಿದ್ದರಾಮಯ್ಯ
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರಾಗಲೀ, ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರಾಗಲೀ ಸಂಕಷ್ಟ ಕಾಲದಲ್ಲಿ ಬಡವರ ನೆರವಿಗೆ ನಿಲ್ಲುತ್ತಿಲ್ಲ. ಮುಂದಿನ ಚುನಾವಣೆಯಲ್ಲಿಯೂ ‘ಮೋದಿ ಮೋದಿ’ ಎಂದೇನಾದರೂ ಹೇಳಿದರೆ ಬಡವರ ಬದುಕು ಬೂದಿಯಾಗುವುದು ಖಚಿತ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಬೆಂಗಳೂರಿನ ಜಯನಗರ ವಿಧಾನಸಭೆ ಕ್ಷೇತ್ರದ ಶಾಲಿನಿ ಆಟದ ಮೈದಾನದಲ್ಲಿ ಇಂದು ಶಾಸಕಿ ಸೌಮ್ಯ ರೆಡ್ಡಿಯವರು ಆಯೋಜಿಸಿದ್ದ ಕೊರೊನಾ ವಾರಿಯರ್ಸ್, ಪೌರ ಕಾರ್ಮಿಕರಿಗೆ …
Read More »ಯಡಿಯೂರಪ್ಪ ಪರವಾಗಿರುವವರು ಸೀಕ್ರೆಟ್ ಭೇಟಿ ಮಾಡುವ ಸಾಧ್ಯತೆ ? ಇದರಲ್ಲಿ ಬೆಳಗಾವಿಯ 6 ಶಾಸಕರು?
ಬೆಂಗಳೂರು – ಬಿಜೆಪಿ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ ಸಿಂಗ್ ಅವರನ್ನು ವಯಕ್ತಿಕವಾಗಿ ಭೇಟಿ ಮಾಡಲು 28 ಬಿಜೆಪಿ ಶಾಸಕರು ಅವಕಾಶ ಕೇಳಿದ್ದಾರೆ. ಬೆಳಗ್ಗೆ 9 ಗಂಟೆಯಿಂದ ಕುಮಾರಕೃಪಾ ಗೆಸ್ಟ್ ಹೌಸ್ ನಲ್ಲಿ ಶಾಸಕರ ಜೊತೆಗೆ ಅರುಣ ಸಿಂಗ್ ವಯಕ್ತಿಕವಾಗಿ ಮಾತನಾಡಲಿದ್ದಾರೆ. ಬೆಳಗಾವಿಯ ಇಬ್ಬರು ಶಾಸಕರು ಸೇರಿದಂತೆ ಸುಮಾರು 28 ಶಾಸಕರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತನಾಡಲು ಅವಕಾಶ ಕೇಳಿದ್ದಾರೆ. ಹರತಾಳು ಹಾಲಪ್ಪ, ಸಿದ್ದು …
Read More »ಬ್ರಾಹ್ಮಣರ ವಿರುದ್ಧ ಅವಹೇಳನ ಆರೋಪ: ವಿಚಾರಣೆಗೆ ಹಾಜರಾದ ನಟ ಚೇತನ್
ಬೆಂಗಳೂರು: ಬ್ರಾಹ್ಮಣರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ತಮ್ಮ ವಿರುದ್ಧ ಕೇಸ್ ದಾಖಲಾಗಿರೋ ಹಿನ್ನೆಲೆ, ಇಂದು ನಟ ಚೇತನ್ ವಿಚಾರಣೆಗೆ ಹಾಜರಾಗಿದ್ದಾರೆ. ಪ್ರಕರಣ ಸಂಬಂಧ ಬಸವನಗುಡಿ ಪೊಲೀಸ್ರು ಚೇತನ್ಗೆ ನೋಟೀಸ್ ನೀಡಿದ್ದರು. ಹೀಗಾಗಿ ತಮ್ಮ ಸ್ನೇಹಿತರು ಹಾಗೂ ವಕೀಲರ ಜೊತೆ ಚೇತನ್ ಇಂದು ಬಸವನಗುಡಿ ಇನ್ಸ್ಪೆಕ್ಟರ್ ಆರ್. ರಮೇಶ್ ಎದುರು ವಿಚಾರಣೆಗೆ ಹಾಜರಾಗಿದ್ದಾರೆ. ಬ್ರಾಹ್ಮಣ ಸಮುದಾಯದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆಂದು ವಿಪ್ರ ಯುವ ವೇದಿಕೆಯ ಪವನ್ …
Read More »ಬಿಎಸ್ ವೈ, ವಿಜಯೇಂದ್ರ ಸೇರಿ 6 ಜನರ ವಿರುದ್ಧ EDಗೆ ದೂರು: ಏನಿದು ಕೋಟಿ ಹಣ -ವಾಟ್ಸಪ್ ವಿವಾದ?
ಬೆಂಗಳೂರು: ಮುಖ್ಯಮಂತ್ರಿ ಬದಲಾವಣೆ ಚರ್ಚೆ, ಪಕ್ಷದೊಳಗಿನ ಬಿಕ್ಕಟ್ಟು, ಕೋವಿಡ್ ನಿರ್ವಹಣೆ ನಡುವೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಅಕ್ರಮ ಹಣ ವರ್ಗಾವಣೆ, ಅಧಿಕಾರು ದುರುಪಯೋಗ ಆರೋಪಕ್ಕೆ ಸಂಬಂಧಿಸಿ ಯಡಿಯೂರಪ್ಪ, ಪುತ್ರ ವಿಜಯೇಂದ್ರ ಸೇರಿ ಆರು ಜನರ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಗೆ ದೂರು ನೀಡಲಾಗಿದೆ. ಟಿ.ಜೆ.ಅಬ್ರಾಹಂ ಎನ್ನುವವರು ದೂರು ನೀಡಿದ್ದು, ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ ಅಡಿಯಲ್ಲಿ ದೂರು ದಾಖಲಿಸಿಕೊಳ್ಳುವಂತೆ ಮನವಿ …
Read More »