Breaking News

ಬೆಂಗಳೂರು ಗ್ರಾಮಾಂತರ

ನಮ್ಮಲ್ಲಿ‌ ಚಿರತೆಯನ್ನೇ ಕೊಂದು ಒಬ್ಬರು ಹೀರೋ ಆಗಿದ್ದಾರೆ -ಸರ್ಕಾರದ ವಿರುದ್ಧ ಶಿವಲಿಂಗೇಗೌಡ ಲೇವಡಿ

ಬೆಂಗಳೂರು: ಹಳ್ಳಿಗಳಲ್ಲಿ ಕಾಡು ಪ್ರಾಣಿಗಳ‌ ಹಾವಳಿ ವಿಚಾರಕ್ಕೆ ಸಂಬಂಧಿಸಿ ವಿಧಾನಸಭೆ ಕಲಾಪದಲ್ಲಿ ಜೆಡಿಎಸ್​ ಸದಸ್ಯ ಶಿವಲಿಂಗೇಗೌಡ, ರಾಜ್ಯ ಸರ್ಕಾರವನ್ನ ಲೇವಡಿ ಮಾಡಿದರು. ನಮ್ಮಲ್ಲಿ‌ ಚಿರತೆಯನ್ನೇ ಕೊಂದು ಒಬ್ಬ ಹೀರೋ ಆಗಿದ್ದಾರೆ. ಕಾಡು ಪ್ರಾಣಿಗಳನ್ನ ನೀವು‌ ಸರಿಯಾಗಿ ಸಾಕ್ತಿಲ್ಲ. ಅದಕ್ಕೆ ಅವುಗಳು ಊರಿಗೆ ಬರ್ತಿವೆ. ಇದರಿಂದ ಸಾಕು ಪ್ರಾಣಿಗಳು ಉಳಿಯಲ್ಲ. ಕಾಡು ಪ್ರಾಣಿಗಳಿಗೆ, ಆಹಾರ, ನೀರು ಒದಗಿಸಿ ಎಂದು ಆಗ್ರಹಿಸಿದರು. ಶಿವಲಿಂಗೇಗೌಡರ ಪ್ರಶ್ನೆಗೆ ಅರಣ್ಯ ಸಚಿವ ಉಮೇಶ್ ಕತ್ತಿ ಉತ್ತರಿಸಿ, ಹಾಸನ …

Read More »

ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ: ಜೊಲ್ಲೆ

ಬೆಂಗಳೂರು: ರಾಜ್ಯದ ಮುಜರಾಯಿ ದೇವಸ್ಥಾನಗಳಲ್ಲಿ ಖಾಲಿ ಇರುವ ಅರ್ಚಕ, ಸಹಾಯಕ ಅರ್ಚಕ, ಸ್ಥಾನಿಕ, ಪಾಚಕ, ಪರಿಚಾರಕ, ವೇದ ಪಾರಾಯಣ, ಪ್ರಬಂಧ ಪಾರಾಯಣ ಮಾಡುವವರ ಮುತಾಂದ ಹುದ್ದೆಗಳನ್ನು ಆದಷ್ಟು ಶೀಘ್ರದಲ್ಲಿ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆಯವರು ಹೇಳಿದ್ದಾರೆ. ಬುಧವಾರ ಚಾಮರಾಜಪೇಟೆಯ ಹಿಂದೂ ದೇವಾಲಯಗಳ ಅಖಿಲ ಕರ್ನಾಟಕ ಅರ್ಚಕ, ಆಗಮಿಕ, ಉಪಾದೀವಂತರ ಒಕ್ಕೂಟದ ಸದಸ್ಯರು ವಿಕಾಸಸೌಧದಲ್ಲಿ ಸಚಿವ ಡಾ. ಅಶ್ವತ್ಥ್ ನಾರಾಯಣ ನೇತೃತ್ವದಲ್ಲಿ, ಅವರ ಕಚೇರಿಯಲ್ಲಿ …

Read More »

ನಂಬರ್ ಪ್ಲೇಟ್ ಕೆಳಗಡೆ ಕನ್ನಡ ಧ್ವಜದ ಬಣ್ಣದ ಗೆರೆ ಎಳೆದಿದ್ದಕ್ಕಾಗಿ ಬೈಕ್ ಸವಾರನಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ.

ಬೆಂಗಳೂರು –  ನಂಬರ್ ಪ್ಲೇಟ್ ಕೆಳಗಡೆ ಕನ್ನಡ ಧ್ವಜದ ಬಣ್ಣದ ಗೆರೆ ಎಳೆದಿದ್ದಕ್ಕಾಗಿ ಬೈಕ್ ಸವಾರನಿಗೆ ಪೊಲೀಸರು 500 ರೂ. ದಂಡ ವಿಧಿಸಿದ್ದಾರೆ. ಬೆಂಗಳೂರಿನ ಬ್ಯಾಟರಾಯನಪುರ ಠಾಣೆ ಪೊಲೀಸರು ಈ ಸಾಧನೆ ಮಾಡಿದ್ದಾರೆ. ಈ ಸ್ಕೂಟರ್ ನ ನಂಬರ್ ಪ್ಲೇಟ್ ನಲ್ಲಿ ಕನ್ನಡದ ಅಭಿಮಾನಿ ಎಳೆದ ಕನ್ನಡದ ಬಾವುಟದ ಗೆರೆ  ಪೋಲಿಸರ ಕಣ್ಣಿಗೆ ಬಿದ್ದಿದೆ. ಬಾಪೂಜಿ ನಗರದಲ್ಲಿ ಆತನನ್ನು ನಿಲ್ಲಿಸಿದ ಪೊಲೀಸರು 500 ರೂಪಾಯಿ   ದಂಡ ಕಟ್ಟಿಸಿಕೊಂಡರು. ದಂಡದ ಪಾವತಿಯಲ್ಲಿ …

Read More »

ರೀತಿಯ ಸೋಗಲ್ಲಿ ಮೋಸ: ಈತನಿಂದ ಮೋಸ ಹೋದವರೆಷ್ಟೋ?; ಮೊಬೈಲ್​ಫೋನಲ್ಲಿತ್ತು 6 ಯುವತಿಯರ ವಿಡಿಯೋ..

ಬೆಂಗಳೂರು: ಈತ ವೃತ್ತಿಯಿಂದ ಆಟೋ ಚಾಲಕ, ಆದರೆ ಚಾಳಿಯಿಂದ ಪ್ರೀತಿಸುವ ಸೋಗಲ್ಲಿ ಯುವತಿಯರನ್ನು ಮೋಸ ಮಾಡಿ ಬ್ಲ್ಯಾಕ್​ಮೇಲ್​ ಮಾಡುವ ಕಿರಾತಕ. ಮೊದಲಿಗೆ ಪ್ರೀತಿಯ ನೆಪದಲ್ಲಿ ಯುವತಿಯರನ್ನು ಬಲೆಗೆ ಬೀಸಿಕೊಂಡು, ನಂತರ ಮಾಡಬಾರದ್ದನ್ನೆಲ್ಲ ಮಾಡಿ, ವಿಡಿಯೋ ಕೂಡ ಮಾಡಿಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡಿ ಹಣವನ್ನೂ ಕಿತ್ತುಕೊಳ್ಳುತ್ತಿದ್ದ. ಹೀಗೆ ಹುಡುಗಿಯರನ್ನು ವಂಚಿಸುತ್ತಿದ್ದ ರಾಕೇಶದ ಎಂಬಾತನನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. 26 ವರ್ಷದ ಈತ ಪ್ರೀತಿ ಮಾಡುವುದಾಗಿ ಹೇಳಿ ಹುಡುಗಿಯರನ್ನು ಒಲಿಸಿಕೊಂಡು ಬಳಿಕ ಅವರನ್ನು ನಿರ್ಜನ …

Read More »

ಫ್ಲೈಓವರ್​ ಮೇಲೆ ಭೀಕರ ಅಪಘಾತ; ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದ ಇಬ್ಬರು ಸ್ಥಳದಲ್ಲೇ ಸಾವು..

ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ಭೀಕರ ಅಪಘಾತ ಸಂಭವಿಸಿದ್ದು, ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದ ಇಬ್ಬರ ದೇಹಗಳು ಛಿದ್ರಗೊಂಡಿವೆ. ಫ್ಲೈ ಓವರ್ ಮೇಲೆ ಓವರ್ ಟೇಕ್​ ಮಾಡುವ ಭರದಲ್ಲಿ ಈ ಅಪಘಾತ ಸಂಭವಿಸಿದೆ ಎನ್ನಲಾಗಿದ್ದು, ವೇಗವಾಗಿ ಬಂದ ಕಾರು ಡಿವೈಡರ್​ಗೆ ಡಿಕ್ಕಿ ಹೊಡೆದು ದ್ವಿಚಕ್ರ ವಾಹನಕ್ಕೂ ಅಪ್ಪಳಿಸಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಮೇಲ್ಸೇತುವೆಯಿಂದ ಕೆಳಕ್ಕೆ ಬಿದ್ದು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಕಾರು ಕೂಡ ತೀರ ಜಖಂಗೊಂಡಿದ್ದು, ಸ್ಥಳಕ್ಕೆ ಪರಪ್ಪನ …

Read More »

ತಿಂಗಳಿಗೆ ಮೂರು ಲೀಟರ್‌ ಸೀಮೆಎಣ್ಣೆ ವಿತರಣೆ: ಕತ್ತಿ

ಬೆಂಗಳೂರು: ಸಮರ್ಪಕ ವಿದ್ಯುತ್‌ ಸಂಪರ್ಕ ಹೊಂದಿಲ್ಲದ ಗ್ರಾಮೀಣ ಹಾಗೂ ಬುಡಕಟ್ಟು ಪ್ರದೇಶಗಳಲ್ಲಿ ವಾಸಿಸುತ್ತಿರುವ ಪಡಿತರ ಕುಟುಂಬಗಳಿಗೆ ದೀಪ ಉರಿಸುವ ಉದ್ದೇಶಕ್ಕೆ ವಿತರಿಸುತ್ತಿರುವ ಸೀಮೆಎಣ್ಣೆ ಪ್ರಮಾಣವನ್ನು 3 ಲೀಟರ್‌ಗಳಿಗೆ ಹೆಚ್ಚಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಉಮೇಶ ಕತ್ತಿ ತಿಳಿಸಿದರು. ಪರಿಷತ್‌ನಲ್ಲಿ ಬಿಜೆಪಿಯ ಶಾಂತರಾಮ ಸಿದ್ದಿ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಅವರು, ‘ಅಡುಗೆ ಅನಿಲ ಸಂಪರ್ಕ ಹೊಂದಿಲ್ಲದ ಪಡಿತರ ಕುಟುಂಬಗಳಿಗೆ ಅಡುಗೆಗಾಗಿ ತಿಂಗಳಿಗೆ ತಲಾ 3 ಲೀಟರ್‌ …

Read More »

ಅಧಿವೇಶನ ಆರಂಭದ ಮೊದಲ ದಿನವೇ ಹನ್ನೊಂದು ಐಎಎಸ್ ಅಧಿಕಾರಿಗಳ ವರ್ಗಾವಣೆ:ಬಸವರಾಜ ಬೊಮ್ಮಾಯಿ

ಬೆಂಗಳೂರು, ಸೆ. 14: ಆಡಳಿತಕ್ಕೆ ಚುರುಕು ನೀಡಲು ಮುಂದಾಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಮೇಜರ್ ಸರ್ಜರಿ ಮಾಡಿದ್ದಾರೆ. ಅಧಿವೇಶನ ಆರಂಭದ ಮೊದಲ ದಿನವೇ ಹನ್ನೊಂದು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಆಯಕಟ್ಟಿನ ಜಾಗಕ್ಕೆ ದಕ್ಷ ಹಾಗೂ ಅನುಭವವುಳ್ಳ ಅಧಿಕಾರಿಗಳನ್ನು ವರ್ಗಾವಣೆ ಮಾಡುವ ಮೂಲಕ ಆಡಳಿತ ಯಂತ್ರವನ್ನು ಕೈಗೆ ತೆಗೆದುಕೊಳ್ಳುವ ಸರ್ಕಸ್ ಮಾಡಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಗೆ ಆಯುಕ್ತರಾಗಿದ್ದ ಅನ್ಬುಕುಮಾರ್ ಅವರನ್ನು ವರ್ಗಾವಣೆ ಮಾಡಿದ್ದು, ಆ …

Read More »

ಕರ್ನಾಟಕ ಟಿಇಟಿ ಫಲಿತಾಂಶ ಬಿಡುಗಡೆ: 45,074 ಅಭ್ಯರ್ಥಿಗಳಿಗೆ ಅರ್ಹತೆ

ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು, ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ(ಕೆಎಆರ್‌ಟಿಇಟಿ-2021)ಯ ಫಲಿತಾಂಶ ಬಿಡುಗಡೆ ಮಾಡಿದೆ. ವಿವಿಧ ತರಗತಿಗಳ ಬೋಧಕರಿಗೆ ನಡೆಸಲಾಗುವ ಪತ್ರಿಕೆ 1 ಹಾಗೂ 2 ರಲ್ಲಿ ಒಟ್ಟಾರೆಯಾಗಿ 2,31,886 ಅಭ್ಯರ್ಥಿಗಳು ಹಾಜರಾಗಿದ್ದರು. ಈ ಪೈಕಿ 45,074 ಜನರು ಅರ್ಹತೆ ಪಡೆದಿದ್ದು, ಶೇ.19 ಉತ್ತೀರ್ಣತೆ ದಾಖಲಾಗಿದೆ. ಕಳೆದ ವರ್ಷ ಪರೀಕ್ಷೆಗೆ ಹಾಜರಾಗಿದ್ದ 2,02,991 ಅಭ್ಯರ್ಥಿಗಳ ಪೈಕಿ 7,980 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು, ಶೇ.3.93 ಫಲಿತಾಂಶ ದಾಖಲಾಗಿತ್ತು. ಈ ಬಾರಿ ಶೇ.15 ರಷ್ಟು …

Read More »

ದಸರಾ ಬಳಿಕ ಪ್ರಾಥಮಿಕ ತರಗತಿ ಆರಂಭಕ್ಕೆ ಶಿಕ್ಷಣ ಇಲಾಖೆ ಸಿದ್ಧತೆ

ಬೆಂಗಳೂರು: ರಾಜ್ಯದಲ್ಲಿ ಪಿಯುಸಿ, ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆ (6ರಿಂದ 12ನೇ ತರಗತಿ) ವಿದ್ಯಾರ್ಥಿಗಳಿಗೆ ಭೌತಿಕ ತರಗತಿ ಸುಸೂತ್ರವಾಗಿ ನಡೆಯುತ್ತಿರುವ ಹಿನ್ನೆಲೆಯಲ್ಲಿ 1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೂ ದಸರಾ ಬಳಿಕ ಭೌತಿಕ ತರಗತಿ ಆರಂಭಿಸಲು ಸಾರ್ವಜನಿಕ ಶಿಕ್ಷಣ ಇಲಾಖೆ ಸಿದ್ಧತೆ ಆರಂಭಿಸಿದೆ. ಸರಕಾರ ಹಾಗೂ ಕೊರೊನಾ ತಾಂತ್ರಿಕ ತಜ್ಞರ ಸಮಿತಿಯ ಅಭಿಪ್ರಾಯ ಹಾಗೂ ಒಪ್ಪಿಗೆ ಪಡೆದೇ ಭೌತಿಕ ತರಗತಿಗಳನ್ನು ಆರಂಭಿಸಬೇಕು. ಈಗಾಗಲೇ ನಡೆಯುತ್ತಿರುವ ಭೌತಿಕ ತರಗತಿಗಳಿಗೆ ವಿದ್ಯಾರ್ಥಿಗಳು, ಪಾಲಕ, …

Read More »

ಸಾರಿಗೆ ನೌಕರರಿಗೆ ಸಿಹಿ ಸುದ್ದಿ?

ಬೆಂಗಳೂರು: ಸಾರಿಗೆ ಮುಷ್ಕರದಿಂದ ಅಮಾನತು, ವಜಾ, ವರ್ಗಾವಣೆ ಮುಂತಾದವುಗಳಿಂದ ಅತಂತ್ರರಾಗಿರುವ ಸಾವಿರಾರು ನೌಕರರ ಬಗ್ಗೆ ಸಹಾನುಭೂತಿ ತೋರಿರುವ ಸರಕಾರ, ಶೀಘ್ರದಲ್ಲೇ ಈ ಸಂಬಂಧ ಮಹತ್ವದ ನಿರ್ಧಾರ ಕೈಗೊಳ್ಳಲಿದೆ. ಸಾರಿಗೆ ನೌಕರರ ಹಿತಕ್ಕಾಗಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನಾಲ್ಕೂ ಸಾರಿಗೆ ನಿಗಮಗಳ ಹಿರಿಯ ಅಧಿಕಾರಿಗಳೊಂದಿಗೆ ಸಾರಿಗೆ ಸಚಿವ ಬಿ. ಶ್ರೀರಾಮುಲು ಚರ್ಚೆ ನಡೆಸಿ, ಮಾಹಿತಿ ಕಲೆಹಾಕಿದರು. ಈ ಸಂದರ್ಭದಲ್ಲಿ ನೌಕರರ ಅಮಾನತು, ವಜಾ ಬಗ್ಗೆಯೂ ಪ್ರಸ್ತಾಪವಾಗಿದ್ದು, ಮುಖ್ಯಮಂತ್ರಿಗಳು ಎರಡು ದಿನಗಳಲ್ಲಿ ಸೂಕ್ತ …

Read More »