Breaking News

ಕಲಬುರ್ಗಿ

ಯಡಿಯೂರಪ್ಪ ಅವರು ಊಟ ಮಾಡಲು ಕಲಬುರಗಿಗೆ ಬಂದು ಹೋಗಿರಬಹುದು. ಇದು ಜನಪ್ರತಿನಿಧಿಗಳ ಸರ್ಕಾರವೇ ಅಲ್:ಸಿದ್ದರಾಮಯ್ಯಲ

ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ ಮಾಡಿದ್ದಾರೆ. ಆದರೆ ಜನಪ್ರತಿನಿಧಿಗಳ ಜೊತೆ ಚರ್ಚಿಸದೇ ಹೋಗಿದ್ದಾರೆ. ಯಡಿಯೂರಪ್ಪ ಅವರು ಊಟ ಮಾಡಲು ಕಲಬುರಗಿಗೆ ಬಂದು ಹೋಗಿರಬಹುದು. ಇದು ಜನಪ್ರತಿನಿಧಿಗಳ ಸರ್ಕಾರವೇ ಅಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಲಬುರಗಿ ಜಿಲ್ಲೆಯಲ್ಲಿ 1 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿ 100 ಕೋಟಿ ರೂಪಾಯಿ ನಷ್ಟವಾಗಿದೆ. ರಾಜ್ಯ ಸರ್ಕಾರದ ಪ್ರಕಾರ ಒಟ್ಟು 700 …

Read More »

ಉತ್ತರ ಕರ್ನಾಟಕ ನೆರೆ ಪ್ರದೇಶದಲ್ಲಿ ಸಿಎಂ ಬಿಎಸ್ ವೈ ವೈಮಾನಿಕ ಸಮೀಕ್ಷೆ

ಕಲಬುರಗಿ: ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಇಂದು ನೆರೆ, ಪ್ರವಾಹ ಪೀಡಿತ ಪ್ರದೇಶಗಳಾದಂತ ಕಲಬುರ್ಗಿ, ವಿಜಯಪುರ, ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಿದರು. ಕಲಬುರ್ಗಿ ಮತ್ತು ವಿಜಯಪುರ ಜಿಲ್ಲೆಗಳ ಪ್ರವಾಹ ಪೀಡಿತ ಪ್ರದೇಶಗಳ ವೈಮಾನಿಕ ಸಮೀಕ್ಷೆ ಕೈಗೊಳ್ಳಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಇಂದು ಜಿಂದಾಲ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನೆರೆ ಪೀಡಿತ ಜಿಲ್ಲೆಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದೇನೆ. ಹಾನಿಯ ಬಗ್ಗೆ ಮಾಹಿತಿ ಪಡೆದು, ಹೆಚ್ಚಿನ …

Read More »

ಕೊರೋನಾ ಮಹಾಮಾರಿಗೆ ಹೋರಾಟಗಾರ ಬಲಿ

ಕಲಬುರಗಿ : ಕೊರೋನಾ ಮಹಾಮಾರಿ ಎಲ್ಲೆಡೆ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಹೋರಾಟಗಾರ ಮಾರುತಿ ಮಾನ್ಪಡೆ (65) ಮಹಾಮಾರಿಗೆ ಬಲಿಯಾಗಿದ್ದಾರೆ ಕಮ್ಯುನಿಸ್ಟ್ ಪಾರ್ಟಿ ಮುಖಂಡರು ಆಗಿದ್ದ ಮಾನ್ಪಡೆ ಕಳೆದ ಎರಡು ವಾರದ ಹಿಂದೆ ಆಸ್ಪತ್ರೆಗೆ ಸೇರಿದ್ದರು. ಚಿಕಿತ್ಸೆ ಫಲಿಸದೆ ಇಂದು ಅವರು ನಿಧನರಾಗಿದ್ದಾರೆ. ಕೊರೋನಾ ಪಾಸಿಟಿವ್ ಹಿನ್ನೆಲೆ ಅಕ್ಟೋಬರ್ 5 ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಮಹಾಮಾರಿ ಕೊರೋನಾದಿಂದ ನಿಧನರಾಗಿದ್ದು ಪತ್ನಿ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ ಇಂದು ಬೆಳಗ್ಗೆ 9.30ಕ್ಕೆ ಮಾರು ಅವರು …

Read More »

ಭೀಮಾ ನದಿ ಪ್ರವಾಹ ಮುಂದುವರೆದಿದೆ.

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯಲ್ಲಿ ಭೀಮಾ ನದಿ ಪ್ರವಾಹ ಮುಂದುವರೆದಿದೆ. ಪ್ರವಾಹದಲ್ಲಿ ಜನರ ಬದುಕೇ ಕೊಚ್ಚಿ ಹೋಗಿದೆ. ಮನೆಗಳ ಹಾನಿಯ ಜೊತೆ ಅಂಗಡಿಗಳಲ್ಲಿಯೂ ಅಪಾರ ಹಾನಿ ಸಂಭವಿಸಿದೆ. ಭೀಮಾ ನದಿ ಪ್ರವಾಹಕ್ಕೆ ಕಲಬುರ್ಗಿ ಜಿಲ್ಲೆ ಜನತೆ ತತ್ತರಿಸಿ ಹೋಗಿದ್ದಾರೆ. ಅಫಜಲಪುರ ತಾಲೂಕಿನಲ್ಲಿ ಪ್ರವಾಹ ಒಂದಷ್ಟು ಇಳಿಮುಖವಾಗಿದೆ. ಆದರೆ ಕಲಬುರ್ಗಿ, ಜೇವರ್ಗಿ, ಶಹಾಬಾದ್ ಹಾಗು ಚಿತ್ತಾಪುರ ತಾಲೂಕುಗಳಲ್ಲಿ ಪ್ರವಾಹ ಮುಂದುವರಿದಿದೆ. ಭಾರಿ ಪ್ರವಾಹದಲ್ಲಿ ಜನರ ಬದುಕೇ ಕೊಚ್ಚಿ ಹೋಗಿದೆ. ಕಲಬುರ್ಗಿ ತಾಲೂಕಿನ ಸರಡಗಿ …

Read More »

ಭೀಮಾ ನದಿ ಪ್ರವಾಹ ಮೂರು ದಿನಗಳಿಂದ ಏರಿಕೆಯಾಗುತ್ತಲೇ ಇದೆ.

ಅಫಜಲಪುರ: ಭೀಮಾ ನದಿ ಪ್ರವಾಹ ಮೂರು ದಿನಗಳಿಂದ ಏರಿಕೆಯಾಗುತ್ತಲೇ ಇದೆ. ತಾಲ್ಲೂಕಿನ ಭೀಮಾ ಬ್ಯಾರೇಜಿನ ಹಿನ್ನೀರಿನಿಂದ ಕರಜಗಿ ಹೋಬಳಿಯ ಸುಮಾರು 20 ಗ್ರಾಮಗಳು ಮೂರಾಬಟ್ಟೆಯಾಗಿವೆ. ಸೊನ್ನ ಬ್ಯಾರೇಜನಿಂದ ಭೀಮಾ ನದಿಗೆ ಶನಿವಾರ 8.50 ಲಕ್ಷ ಕ್ಯುಸೆಕ್‌ ನೀರು ಹರಿಬಿಡುತ್ತಿರುವುದರಿಂದ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಭೀಮಾ ತೀರದ ಮಣ್ಣೂರ, ಹೊಸುರ, ಶೇಷಗೀರಿ, ಉಡಚಣ, ಭೋಸಗಾ, ಅಳ್ಳಗಿ(ಬಿ), ಗೌರ, ಬಂಕಲಗಾ, ಶಿರವಾಳ, ದಿಕ್ಸಂಗಾ, ತೆಲ್ಲುಣಗಿ, ನಂದರಗಿ ಸೇರಿದಂತೆ ಹಲವು ಹಳ್ಳಿಗಳು …

Read More »

ಕಳಪೆ ಕಾಮಗಾರಿ: ಸೇತುವೆ ಮುಳುಗಡೆಯಾಗದಿದ್ರೂ ವಾಹನ ಸಂಚಾರ ಬಂದ್

ಕಲಬುರಗಿ: ಜಿಲ್ಲೆಯ ಜೇವರ್ಗಿ ತಾಲೂಕಿನ ಕಟ್ಟಿಸಂಗಾವಿ ಸೇತುವೆ ಮುಳುಗಡೆಯಾಗದಿದ್ದರೂ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಸೇತುವೆ ಮೇಲೆ ವಾಹನ ಸಂಚಾರ ಬಂದ್ ಮಾಡಲಾಗಿದೆ.    ಅಚ್ಚರಿಯ ಸಂಗತಿಯೆಂದರೆ, ಭೀಮಾ ನದಿಗೆ ಅಡ್ಡಲಾಗಿ ಕಟ್ಟಲಾಗಿದ್ದು 2 ವರ್ಷಗಳ ಹಿಂದಷ್ಟೆ ಉದ್ಘಾಟನೆಯಾಗಿದ್ದ ಸೇತುವೆಯ ಗುಣಮಟ್ಟ ಕಳಪೆಯಾಗಿರುವ ಆರೋಪ ಕೇಳಬಂದಿದೆ. ಹೀಗಾಗಿ, ವಾಹನ ಸಂಚಾರಕ್ಕೆ ಅನುವು ಮಾಡಿಕೊಡುತ್ತಿಲ್ಲವೆಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ. ನಿನ್ನೆಯಿಂದಲೇ ಸೇತುವೆಯ ಮೇಲೆ ವಾಹನ ಸಂಚಾರ ಸ್ಥಗಿತವಾಗಿದ್ದ ಹಿನ್ನೆಲೆಯಲ್ಲಿ ಕಲಬುರಗಿ ಬೆಂಗಳೂರು …

Read More »

ನಾನು ಮನೆ ಬಿಟ್ಟು ಬರಲ್ಲ: 2 ದಿನದಿಂದ ಛಾವಣಿ ಮೇಲೆ ‘ಬಂಡೆ’ಯಂತೆ ಕೂತ ವೃದ್ಧೆ ಕಲ್ಲಮ್ಮ

ಕಲಬುರಗಿ: ಭೀಮಾ ನದಿಗೆ 5.5 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ ಆಗುತ್ತಿರುವ ಹಿನ್ನೆಲೆಯಲ್ಲಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಇದರ ಪರಿಣಾಮವಾಗಿ ಜಿಲ್ಲೆಯ ಫಿರೋಜಾಬಾದ್‌ಗೆ ಪ್ರವಾಹದ ನೀರು ನುಗ್ಗಿದೆ. ಹಾಗಾಗಿ, ನದಿ ಪಾತ್ರದ ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳಲು ಜಿಲ್ಲಾಡಳಿತ ಮುನ್ಸೂಚನೆ ನೀಡುತ್ತಿದೆ. ಜೊತೆಗೆ, ನದಿ ಪಾತ್ರದ ಹಳ್ಳಿಗಳ ಗ್ರಾಮಸ್ಥರಿಗೆ ಕಾಳಜಿ ಕೇಂದ್ರಕ್ಕೆ ತೆರಳಲು ನೋಡಲ್ ಅಧಿಕಾರಿಗಳು ವಿನಂತಿ ಸಹ ಮಾಡುತ್ತಿದ್ದಾರೆ. ಆದರೆ, ಬಂದಿದ್ದು ಬರಲಿ ನಾನು ಇಲ್ಲೇ ಇರುವೆ …

Read More »

ಕರ್ನಾಟಕದ ಜಿಲ್ಲೆಗಳು ಕಲಬುರಗಿ ನಿಲ್ಲದ ಮಳೆ, ಬಾರದ ಜನಪ್ರತಿನಿಧಿ, ಕಲಬುರಗಿ ಜನ ಕಂಗಾಲು

ಕಳೆದ ಮೂರು ದಿನಗಳಿಂದ ಸತತವಾಗಿ ಮತ್ತು ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಲಬುರಗಿ , ಯಾದಗಿರಿ , ಬಾಗಲಕೋಟೆ , ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳ ಬಹಳಷ್ಟು ಪ್ರದೇಶಗಳು ಜಲಾವೃತಗೊಂಡು ನಡುಗಡ್ಡೆಗಳಂತೆ ಗೋಚರಿಸುತ್ತಿವೆ . ಕುಂಭದ್ರೋಣದಿಂದ ಉಳಿದ ಜಿಲ್ಲೆಗಳಿಗಿಂತ ಹೆಚ್ಚು ಪ್ರಭಾವಕ್ಕೊಳಗಾಗಿರುವ ಕಲಬುರಗಿ ಜಿಲ್ಲೆಯಲ್ಲಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ . ಅನೇಕ ಕಡೆ ರಸ್ತೆ ಮತ್ತು ಸೇತುವೆಗಳು ಕೊಚ್ಚಿಹೋಗಿವೆ . ಕಮಲಾಪುರ ಹತ್ತಿರವಿರುವ ಜವಳಗಾ , ಸೇಡಂ ತಾಲುಕಿನಲ್ಲಿರುವ ಸಮಖೇಡ್ ತಾಂಡಾ …

Read More »

ಕಲಬುರಗಿ ಮಹಾಮಳೆ: ಪ್ರವಾಹದಲ್ಲಿ ಸಿಲುಕಿದ್ದ 6 ಶಾಲಾ ಸಿಬ್ಬಂದಿ ರಕ್ಷಣೆ..

ಕಲಬುರಗಿ: ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಇದರಿಂದ ಜನಜೀವನ ಕಷ್ಟ ಪಡುತ್ತಿದೆ. ಪ್ರವಾಹಕ್ಕೆ ಸಿಲುಕಿ ನರಳುತ್ತಿದೆ. ಕಾಗಿಣಾ ನದಿ ಪ್ರವಾಹದಲ್ಲಿ ಸಿಲುಕಿದ್ದ ಶಾಲೆ ಸಿಬ್ಬಂದಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ. ಸೇಡಂ ತಾಲೂಕಿನ ಮಳಖೇಡ್ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 6 ಜನ ಸಿಬ್ಬಂದಿ ಸಿಲುಕಿದ್ದರು. ಅವರನ್ನು NDRF ತಂಡ ರಕ್ಷಿಸಿದೆ. ನಿನ್ನೆ ಬೆಳಗ್ಗೆ ಶಾಲೆಗೆ ಕಾಗಿಣಾ ನದಿಯ ನೀರು ನುಗ್ಗಿ ಸಿಬ್ಬಂದಿ ಪ್ರವಾಹದಲ್ಲಿ ಸಿಲುಕಿ ಪರದಾಡುತ್ತಿದ್ದರು. ವಸತಿ ಶಾಲೆಯಿಂದ …

Read More »

ಕಲ್ಬುರ್ಗಿ ನಗರದಲ್ಲಿ ಭಾರಿ ಮಳೆ

ಕಲಬುರ್ಗಿ: ಇಲ್ಲಿನ ಕುಸನೂರು ರಸ್ತೆಯ ರಾಜಾಜಿ ನಗರದ ನಿವಾಸಿಗಳಾದ ಗುರುರಾಜ ಕುಲಕರ್ಣಿ, ಮೀನಾಕ್ಷಿ, ಚಂದ್ರಕಾಂತ ಅವರ ಕುಟುಂಬಗಳಿಗೆ ಮಂಗಳವಾರದ ರಾತ್ರಿ ಎಂದಿನಂತಿರಲಿಲ್ಲ. ಸಂಜೆಯವರೆಗೂ ಮಳೆಯ ಸುದ್ದಿಯೇ ಇರದಿದ್ದರಿಂದ ನಿರಾಳರಾಗಿ ನಿದ್ದೆಗೆ ಜಾರಿದವರಿಗೆ ಕೆಲವೇ ನಿಮಿಷಗಳಲ್ಲಿ ಪ್ರವಾಹದ ನೀರಿನ ಸದ್ದು ಕೇಳಿಸಿತು. ಎದ್ದು ನೋಡುವಷ್ಟರಲ್ಲಿ ಕುಲಕರ್ಣಿ ಅವರ ಕೆಳಗಿನ ಮನೆಯಲ್ಲಿ ಕ್ರಮೇಣ ನೀರು ತುಂಬಿಕೊಳ್ಳಲಾರಂಭಿಸಿತು. ಎದುಗಿನ ರಸ್ತೆಯಲ್ಲೇ ಹೊಳೆ ಹರಿದು ಬಂತೇನೋ ಎಂಬಷ್ಟು ಮಳೆಯ ರಭಸ ಅವರನ್ನು ಎಬ್ಬಿಸಿತು. ಗಂಗಾಧರ ಕುಲಕರ್ಣಿ ಅವರು …

Read More »