Breaking News

ಅಂತರಾಷ್ಟ್ರೀಯ

ಅಕ್ರಮವಾಗಿ ಮಣ್ಣುಮುಕ್ಕ ಹಾವು ಸಾಗಿಸುತ್ತಿದ್ದ ಐವರನ್ನು ಬಂಧಿಸಿ ಅರಣ್ಯಾಧಿಕಾರಿಗಳು ಅವರಿಂದ ಮೂರು ಅಡಿ ಉದ್ದದ ಎರಡು ತಲೆಯ

ಮೈಸೂರು: ಅಕ್ರಮವಾಗಿ ಮಣ್ಣುಮುಕ್ಕ ಹಾವು ಸಾಗಿಸುತ್ತಿದ್ದ ಐವರನ್ನು ಬಂಧಿಸಿ ಅರಣ್ಯಾಧಿಕಾರಿಗಳು ಅವರಿಂದ ಮೂರು ಅಡಿ ಉದ್ದದ ಎರಡು ತಲೆಯ ಹಾವನ್ನು ರಕ್ಷಿಸಿದ್ದಾರೆ. ದೊಡ್ಡಯ್ಯ (45), ಹೇಮಂತ್(19), ಯೋಗೇಶ್(24), ರವಿ(35), ಭರಮೇಗೌಡ(23) ಬಂಧಿತರು. ಆರ್‌ಎಫ್‌ಒ ವಿವೇಕ್ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನಿಂದ ಮೈಸೂರಿಗೆ ಅಕ್ರಮವಾಗಿ ಮಣ್ಣುಮುಕ್ಕ ಹಾವನ್ನು ಮಾರಾಟ ಮಾಡಲು ಕಾರಿನಲ್ಲಿ ಬರುತ್ತಿದ್ದವರನ್ನು ಮೈಸೂರಿನ ಸಿದ್ದಲಿಂಗಪುರ ಬಳಿ ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಹಾಗೂ ಹಾವನ್ನು ರಕ್ಷಣೆ ಮಾಡಿದ್ದಾರೆ.

Read More »

ಪುಲ್ವಾಮಾ ದಾಳಿ ನಮ್ಮ ಸಮುದಾಯದ ಯಶಸ್ಸು ಎಂದ ಪಾಕ್ ಸಚಿವ

ಇಸ್ಲಾಮಾಬಾದ್: ನೆರೆಯ ದುಷ್ಟ ಪಾಕಿಸ್ತಾನ 20 ತಿಂಗಳ ತಾನು ಎಸಗಿದ ಘೋರಕೃತ್ಯವನ್ನ ಒಪ್ಪಿಕೊಂಡಿದೆ. ಪುಲ್ವಾಮಾ ದಾಳಿಯ ತಮ್ಮ ಸಮುದಾಯ ಯಶಸ್ಸು ಎಂದು ಪಾಕಿಸ್ತಾನ ಸಚಿವ ಫವಾದ್ ಖಾನ್ ಸಂಸತ್ ನಲ್ಲಿಯೇ ಹೇಳಿಕೆ ನೀಡಿದ್ದಾರೆ. ಇಂದು ಮುಸ್ಲಿಂ ಲೀಗ್ ಎನ್ ಪಕ್ಷದ ನೇತಾರ ಅಯಾಜ್ ಸಾದಿಕ್ ಪ್ರಶ್ನೆಗೆ ಫವಾದ್ ಖಾನ್ ಉತ್ತರಿಸುತ್ತಿದ್ದರು. ಭಾರತ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವಶಕ್ಕೆ ಪಡೆದ ವೇಳೆ ವಿದೇಶಾಂಗ ಸಚಿವ ಖುರೇಷಿ ಭಯಗೊಂಡಿದ್ದರು. ಆರ್ಮಿ ಚೀಫ್ …

Read More »

ಬ್ರಿಟಿಷ್ ರಾಯಲ್ ಫ್ಯಾಮಿಲಿಯಿಂದ ಮನೆ ಕೆಲಸದವರ ಹುಡುಕಾಟ- 18.5 ಲಕ್ಷ ರೂ. ಸಂಬಳ

ಲಂಡನ್: ಬ್ರಿಟಿಷ್ ರಾಯಲ್ ಫ್ಯಾಮಿಲಿ ಮನೆ ಕೆಲಸದವರಿಗಾಗಿ ಹುಡುಕಾಟ ನಡೆಸುತ್ತಿದ್ದು, ಬರೋಬ್ಬರಿ 18.5 ಲಕ್ಷ ರೂ. ಆರಂಭಿಕ ಸಂಬಳ ನೀಡುವುದಾಗಿ ಘೋಷಿಸಿದೆ. ರಾಜ ಮನೆತನದ ಅಧಿಕೃತ ವೆಬ್‍ಸೈಟ್ ರಾಯಲ್ ಹೌಸ್‍ಹೋಲ್ಡ್‍ನಲ್ಲಿ ಈ ಕುರಿತು ಪ್ರಕಟಿಸಿದ್ದು, ಇದು 2ನೇ ಹಂತದ ಅಪ್ರಂಟಿಸ್‍ಶಿಪ್(ತರಬೇತಿ ಅವಧಿ) ಕೆಲಸವಾಗಿದೆ. ಆಯ್ದ ಅಭ್ಯರ್ಥಿಗಳು ಮಾತ್ರ ವಿಂಡ್ಸರ್ ಕ್ಯಾಸ್ಟಲ್‍ನಲ್ಲಿ ವಾಸಿಸಬೇಕಾಗಿರುತ್ತದೆ ಎಂದು ತಿಳಿಸಲಾಗಿದೆ. ಈಗಾಗಲೇ ಹೇಳಿದ ಹಾಗೆ ಇದೊಂದು ಎರಡನೇ ಹಂತದ ಅಪ್ರೆಂಟಿಸ್‍ಶಿಪ್ ಕೆಲಸವಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಇಂಗ್ಲೆಂಡ್‍ನ …

Read More »

ರವೀಂದ್ರ ಜಡೇಜಾ ಅವರ ಸ್ಫೋಟಕ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟ್‌ಗಳ ರೋಚಕ ಜಯ

ದುಬೈ: ಆಲ್‌ರೌಂಡರ್‌ ರವೀಂದ್ರ ಜಡೇಜಾ ಅವರ ಸ್ಫೋಟಕ ಆಟದಿಂದ ಕೋಲ್ಕತ್ತಾ ನೈಟ್‌ ರೈಡರ್ಸ್‌ ವಿರುದ್ಧ ಚೆನ್ನೈ ಸೂಪರ್‌ ಕಿಂಗ್ಸ್‌ 5 ವಿಕೆಟ್‌ಗಳ ರೋಚಕ ಜಯ ಸಾಧಿಸಿದೆ. ಗೆಲ್ಲಲು 173 ರನ್‌ಗಳ ಸವಾಲನ್ನು ಪಡೆದ ಚೆನ್ನೈ ಅಂತಿಮವಾಗಿ 20 ಓವರ್‌ಗಳಲ್ಲಿ 178 ರನ್‌ ಹೊಡೆಯಿತು. ಈ ಪಂದ್ಯವನ್ನು ಕೋಲ್ಕತ್ತಾ ಸೋತಿರುವ ಕಾರಣ ಪ್ಲೇ ಆಫ್‌ ಹಾದಿ ಕಠಿಣವಾಗಿದ್ದು ಉಳಿದ ತಂಡಗಳ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ. ಚೆನ್ನೈ ಗೆದ್ದಿದ್ದು ಹೇಗೆ? 17. 2 …

Read More »

ಡಿ.1ರವರೆಗೆ ಮತ್ತೆ ಲಾಕ್‍ಡೌನ್..!

ಜರ್ಮನಿ,ಅ.29- ವಿಶ್ವವನ್ನೇ ಕಂಗೆಡಿಸಿರುವ ಮಹಾಮಾರಿ ಕೊರೊನಾ ಕೆಲವು ದೇಶಗಳಲ್ಲಿ ನಿಯಂತ್ರಣದಲ್ಲಿದ್ದರೂ ಇನ್ನು ಕೆಲವು ದೇಶಗಳಲ್ಲಿ ತನ್ನ ಅಬ್ಬರವನ್ನು ಮುಂದುವರೆಸಿದ್ದು ಆತಂಕಕಾರಿಯಾಗಿದೆ. ಕೊರೊನಾ ಮಹಾಮಾರಿಯನ್ನು ತಡೆಯಲು ಆಯಾ ದೇಶಗಳಲ್ಲಿ ಅಗತ್ಯವಾದ ಕ್ರಮಗಳನ್ನು ಕೈಗೊಂಡಿದ್ದರೂ ಇದರ ಕಾಟ ಕಡಿಮೆಯಾಗದಿರುವುದರಿಂದ ಕೆಲವು ದೇಶಗಳಲ್ಲಿ ಮತ್ತೆ ಲಾಕ್‍ಡೌನ್ ಏರಿಕೆ ಮಾಡಲು ಸರ್ಕಾರಗಳು ಮುಂದಾಗಿವೆ. ಜರ್ಮನಿ ಹಾಗೂ ಫ್ರಾನ್ಸ್ ಗಳಲ್ಲಿ ಕೊರೊನಾ ಮಹಾಮಾರಿಯ ಕಾಟ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇರುವುದರಿಂದ ಆ ದೇಶಗಳಲ್ಲಿ 2ನೇ ಲಾಕ್‍ಡೌನ್ ಮಾಡಲು …

Read More »

ನಕಲಿ ಸಹಿ ಬಳಸಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಆರೋಪದಡಿ ಸುಧೀರ್ ಅಂಗೂರ್, ಶೈಲಜಾ ಸೇರಿ 10 ಜನರ ವಿರುದ್ಧ FIR ದಾಖಲಾಗಿದೆ.

ಆನೇಕಲ್: ನಕಲಿ ಸಹಿ ಬಳಸಿ ವಿದ್ಯಾರ್ಥಿಗಳಿಂದ ಹಣ ವಸೂಲಿ ಆರೋಪದಡಿ ಸುಧೀರ್ ಅಂಗೂರ್, ಶೈಲಜಾ ಸೇರಿ 10 ಜನರ ವಿರುದ್ಧ FIR ದಾಖಲಾಗಿದೆ. ಕಾಲೇಜ್ ಶುಲ್ಕ, ಟ್ಯೂಷನ್ ಫೀ, ಹಾಸ್ಟೆಲ್ ಫೀ ಎಂದು ಮಧುಕರ್ ಅವರ ನಕಲಿ ಸಹಿ ಬಳಸಿಕೊಂಡು ವಿದ್ಯಾರ್ಥಿಗಳ ಬಳಿ ಹಣ ವಸೂಲಿ ಮಾಡಿ ದುರುಪಯೋಗ ಮಾಡಿದ್ದಾರೆ ಎಂದು ಅಲಯನ್ಸ್ ವಿವಿ ಸಂಸ್ಥಾಪಕ ಮಧುಕರ್ ಅಂಗೂರ್‌ ದೂರು ದಾಖಲಿಸಿದ್ದರು. ದೂರು ಆಧರಿಸಿ ಸುಧೀರ್ ಅಂಗೂರ್, ಶೈಲಜಾ ಸೇರಿ …

Read More »

ರಾತ್ರೋರಾತ್ರಿ ಎಡಿಜಿಪಿ ಶ್ರೇಣಿಯ IPS ಅಧಿಕಾರಿ ಡಾ.ಪಿ. ರವೀಂದ್ರನಾಥ್ ಕಂಟ್ರೋಲ್ ರೂಂಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು: ರಾತ್ರೋರಾತ್ರಿ ಎಡಿಜಿಪಿ ಶ್ರೇಣಿಯ IPS ಅಧಿಕಾರಿ ಡಾ.ಪಿ. ರವೀಂದ್ರನಾಥ್ ಕಂಟ್ರೋಲ್ ರೂಂಗೆ ತೆರಳಿ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ರಾತ್ರಿ 10.30ಕ್ಕೆ ಕಂಟ್ರೋಲ್ ರೂಂಗೆ ತೆರಳಿ ಅಲ್ಲಿದ್ದ ಸಿಬ್ಬಂದಿ ಕೈಗೆ ರವೀಂದ್ರನಾಥ್ ರಾಜಿನಾಮೆ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಅಸಮಾಧಾನ ಭುಗಿಲೆದ್ದಿರುವುದು ಗೋಚರವಾಗುತ್ತಿದೆ. ಸೀನಿಯಾರಿಟಿ ಇಲ್ಲದಿದ್ದರೂ ಸುನಿಲ್ ಕುಮಾರ್‌ಗೆ ಎಡಿಜಿಪಿ ಶ್ರೇಣಿಯಿಂದ ಡಿಜಿಪಿ ಶ್ರೇಣಿಗೆ ಬಡ್ತಿ ನೀಡಿರುವುದಕ್ಕೆ ರವೀಂದ್ರನಾಥ್ ಅಸಮಧಾನಗೊಂಡು ಈ ರೀತಿ ನಿರ್ಧಾರ …

Read More »

ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಮಲ್ಪೆ ಮೀನುಗಾರಿಕಾ ಬಂದರಲ್ಲಿ ಮೀನು ಹೆಕ್ಕುತ್ತಿದ್ದ 17 ಮಕ್ಕಳು ಇಲಾಖೆ ರಕ್ಷಿಸಿದೆ.

ಉಡುಪಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣಾ ಘಟಕ ಕಾರ್ಮಿಕ ಇಲಾಖೆ ಜಂಟಿ ಕಾರ್ಯಾಚರಣೆ ನಡೆಸಿ ಒಟ್ಟು 17 ಬಾಲ ಕಾರ್ಮಿಕರನ್ನು ರಕ್ಷಿಸಿದ್ದಾರೆ. ಮಲ್ಪೆ ಮೀನುಗಾರಿಕಾ ಬಂದರಲ್ಲಿ ಮೀನು ಹೆಕ್ಕುತ್ತಿದ್ದ 17 ಮಕ್ಕಳು ಇಲಾಖೆ ರಕ್ಷಿಸಿದೆ. ರಕ್ಷಿಸಲ್ಪಟ್ಟ ಬಾಲಕಾರ್ಮಿಕರೆಲ್ಲ ಕೊಪ್ಪಳ, ಬಳ್ಳಾರಿ ಮೂಲದವರು. ಈ ಜಂಟಿ ಕಾರ್ಯಾಚರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸಾಥ್ ನೀಡಿದೆ. ಹಾಗೂ ಮಕ್ಕಳ ಸಹಾಯವಾಣಿ ನಾಗರಿಕ ಸೇವಾ ಟ್ರಸ್ಟ್ ಕಾರ್ಯಕರ್ತರು ರಕ್ಷಣೆಗೆ …

Read More »

ವಿಶ್ವ ಸೇರಿದಂತೆ ಇಡೀ ಭಾರತದ ಗಮನ ಸೆಳೆದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ನನ್ನು ಬಿಡುಗಡೆ ಮಾಡುತ್ತಿರುವುದು

ದೆಹಲಿ: ವಿಶ್ವ ಸೇರಿದಂತೆ ಇಡೀ ಭಾರತದ ಗಮನ ಸೆಳೆದಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್​ನನ್ನು ಬಿಡುಗಡೆ ಮಾಡುತ್ತಿರುವುದು ಶಾಂತಿಗಾಗಿ ಎಂದು ಹೇಳಿದ್ದ ಪಾಕಿಸ್ತಾನದ ನಿಜ ರೂಪ ಬಯಲಾಗಿದೆ. ಅಭಿನಂದನ್​ ಬಿಡುಗಡೆಗೆ ಕಾರಣ ಬಯಲಾಗಿದೆ. ಭಾರತದ ಆ ಬಂದು ಮಾತಿಗೆ ಹೆದರಿ ಪಾಪಿ ಪಾಕಿಸ್ತಾನ ಬಾಲು ಮುದುಡಿಕೊಂಡಿತ್ತು. ಅಭಿನಂದನ್​ ಬಿಡುಗಡೆ ಮಾಡದಿದ್ರೆ ಭಾರತದಿಂದ ದಾಳಿ ಆಗುವ ಆತಂಕಕ್ಕೆ ಪಾಕ್​ ಸೇನೆ ಮುಖ್ಯಸ್ಥ ಖಮರ್ ಬಜ್ವಾ ಕಾಲುಗಳು ನಡುಗುತ್ತಿತ್ತು. 2019ರ ಪಾಕ್​ ಸರ್ವಪಕ್ಷ …

Read More »

ಮತ್ತೊಂದ್ಕಡೆ 2ನೇ‌ ಹಂತದ ಚುನಾವಣೆಗೂ ರಾಜಕೀಯ ಪಕ್ಷಗಳ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಚುನಾವಣಾ ಕಾವು ಮತ್ತಷ್ಟು ಏರಿದೆ.

ದೆಹಲಿ : ಕೊರೊನಾ ಬಿಕ್ಕಟ್ಟಿನ ನಡುವೆ ಬಿಹಾರ ಮೊದಲ ಹಂತದ ಮತದಾನ ಯಶಸ್ವಿಯಾಗಿದೆ. 1066 ಅಭ್ಯರ್ಥಿಗಳ ಭವಿಷ್ಯ ಇವಿಎಂನಲ್ಲಿ ಭದ್ರವಾಗಿದೆ. ಮತ್ತೊಂದ್ಕಡೆ 2ನೇ‌ ಹಂತದ ಚುನಾವಣೆಗೂ ರಾಜಕೀಯ ಪಕ್ಷಗಳ ನಾಯಕರು ಪ್ರಚಾರ ಆರಂಭಿಸಿದ್ದಾರೆ. ಚುನಾವಣಾ ಕಾವು ಮತ್ತಷ್ಟು ಏರಿದೆ. ರಾಷ್ಟ್ರ ರಾಜಕಾರಣದಲ್ಲಿ ಕುತೂಹಲ ಕೆರಳಿಸಿರುವ ಬಿಹಾರ ವಿಧಾನಸಭೆಯ ಮೊದಲ ಹಂತದ ಚುನಾವಣೆಗೆ ಬಿರುಸಿನ ಮತದಾನ ನಡೆದಿದೆ.‌ ಕೆಲ ಮತಗಟ್ಟೆಗಳಲ್ಲಿ ಮತಯಂತ್ರಗಳಲ್ಲಿ ಕಂಡುಬಂದ ದೋಷದಿಂದಾಗಿ ವೋಟಿಂಗ್ ತಡವಾಗಿ ಆರಂಭವಾಗಿತ್ತು. ಇಂತಹ ಸಣ್ಣಪುಟ್ಟ ಘಟನೆಗಳನ್ನು …

Read More »